
ಹೊಸ ವಿಸ್ಮಯ ನಗರಿಗೆ ಸ್ವಾಗತಿಸುತ್ತಾ
ನಮಸ್ಕಾರಗಳು ವಿಸ್ಮಯ ನಗರಿಯ ಪ್ರಜೆಗಳಿಗೆ ಹಾಗೂ ಅನಾಮಿಕ ಬಂಧುಗಳಿಗೆ. ಇಂದಿಗೆ ಈ ವೆಬ್ ಸೈಟ್ ಪ್ರಾರಂಭವಾಗಿ ಸರಿ ಸುಮಾರು ಹತ್ತು ವರ್ಷ ಏಳು ತಿಂಗಳು. ಹತ್ತನೇ ವರ್ಷದ ಸಂಭ್ರಮದಲ್ಲಿರುವ ವಿಸ್ಮಯ ತಾಣ ಬದಲಾಗಿದೆ. ಹೊಸ ರೂಪ, ವಿನ್ಯಾಸದೊಂದಿಗೆ ನಿಮ್ಮ ಮುಂದೆ ಇಡುತ್ತಿದ್ದೇನೆ.
ಕಳೆದ ಹತ್ತು ವರ್ಷದ ಎಲ್ಲ ಲೇಖನಗಳನ್ನು ಅಷ್ಟೇ ಜೋಪಾನವಾಗಿ ಹೊಸ ಅವತರಣಿಕೆಯಲ್ಲಿ ಇಡಲಾಗಿದೆ.
ವಿಸ್ಮಯ ನಗರಿಯ ಗುರಿ
ಈ ತಾಣದ ಗುರಿ ಒಂದೇ ಕನ್ನಡದಲ್ಲಿ ಬರೆಯುವವರಿಗೆ ಹಾಗೂ ಓದುವವರಿಗೆ ಒಂದು ವೇದಿಕೆ ಏರ್ಪಡಿಸುವದು. ಕಥೆ, ಕವನ, ಪ್ರವಾಸಿ ಕಥನ, ಸಿನಿಮಾ, ಪುಸ್ತಕ ವಿಮರ್ಶೆ ಹೀಗೆ ಹಲವು ವಿಷಯಗಳ ಬಗ್ಗೆ ಲೇಖನಗಳನ್ನು ಪ್ರಕಟಿಸಲು ಅವಕಾಶ ಇಲ್ಲಿದೆ.
ಧನ್ಯವಾದಗಳು
ಈ ಕನ್ನಡದ ಸುಂದರ ತಾಣ ಬಳಸಿ ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ಧನ್ಯವಾದ ಹೇಳಬಯಸುತ್ತೇನೆ.ಯಾವುದೇ ಸಲಹೆ, ಕುಂದು ಕೊರತೆಗಳಿಗೆ ಸ್ವಾಗತ. ಈ ಲೇಖನಕ್ಕೆ ಕಾಮೆಂಟ್ ಹಾಕಿ. ಅಥವಾ ನಮ್ಮ ಸಂಪರ್ಕ ತವ ಫೇಸ್ ಬುಕ್ ಪುಟ ಸಹ ಬಳಸಬಹುದು.
ಎಂದಿನಂತೆ ನಿಮ್ಮ ಬೆಂಬಲ ಕೋರುವ
ನಿಮ್ಮ ವಿಶ್ವಾಸಿ
-- ವಿಸ್ಮಯ ನಗರಿಯ ಮೇಲಧಿಕಾರಿ
ಸಾಲುಗಳು
- 359 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ