
ಬಾ ಗೆಳತಿ ˌಮಳೆ ಬಂತು !
ಈ ಜಡಿಮಳೆಗೆ ಜ್ವರ ಬಂಂದೀತು ಜೋಕೆ !
ಆ ಹಸಿರು ಪಾಚಿಗೆ ಕಾಲು ಜಾರೀತು ಜಾಗ್ರತೆ !!
ಬಾ ನನ್ನ ಕೈ ಹಿಡಿದು ನಡೆಯೆ ಗೆಳತಿ...
ನಿನ್ನ ಬೀಳಿಸಿ—ಏಳಿಸುವ ಸಂಂಭ್ರಮ ಮಳೆಗೆ
ಬಿದ್ದು—ಎದ್ದು ಮೈ ಮನ ನಡುಗದಿರಲಿ ಚಳಿಗೆ
ಬಾ ನನ್ನ ಕೈ ಹಿಡಿದು ನಡೆಯೆ ಗೆಳತಿ...
ಮೋಡಗಳೆಲ್ಲ ಅತ್ತಂಂತಾಗಿ ಬಾನೆಲ್ಲ ಸಿಂಂಚನ ಮೂಡಿ
ಮಳೆ ಬಂಂತು ಅಂಂಗಳದಲ್ಲೆಲ್ಲಾ ನೋಡಬಾರೆ ಓಡೋಡಿ
ಒಳಗೆಲ್ಲಿ ಕುಳಿತಿರುವೆˌಬಾರೆ ದೋಣಿ ತೇಲಿಸುವ...
ಆಗೋಲ್ಲವೆಂಂದರೆ ಪರವಾಗಿಲ್ಲ! ಬಾ ಕೇಳೋಣ ಏಕಿಲ್ಲ ಈ ವರ್ಷ ವರುಷವೆಲ್ಲಾ...
ಅಬ್ಬಾ ಮಳೆ ಬಿಟ್ಟಿತು! ಸೂರ್ಯ ಹೊರಗೆ ಬಂಂದ
ಒದ್ದೆ ಬಟ್ಟೆಯೂ ಹೊರ ಬಂಂತು ಬಿಸಿಲಿಗೆ
ಅಯ್ಯೋ ಕೊಡೆ ಮರೆತು ಬಿಟ್ಟಿದ್ದೆ !
ಮತ್ತೆ ಕರಿ ಮೋಡ ಕಟ್ಟಿದೆ !
ಬೇಗ ಬಾರೆ ಹೋಗೋಣ ಒಳಗೆ !!!
ಸಾಲುಗಳು
- 606 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ