Skip to main content

ಹಣ -ಭಾಗ2

ಬರೆದಿದ್ದುApril 25, 2015
noಅನಿಸಿಕೆ

ಡಿಜಿಟಲ್ ಮನಿ ಚಲಾವಣೆಗೆ ನನ್ನ ಕಲ್ಪನೆಯ ಸಾಧನ...
ಒಂದು ಮೊಬಯಿಲ್ ಮಾದರಿಯ ಸಾಧನ.
ಇದಕ್ಕೆ ನಾನು MM ಎಂಬ ಸರಳ ಹೆಸರು ಕೊಟ್ಟೆ.
ಅದರಲ್ಲಿ A, B, C, D, E, F ಎಂಬ ಬಟನ್ ಗಳೂ 0 ಯಿಂದ 9ರ ತನಕದ ಅಂಕೆಗಳೂ ಇರುತ್ತವೆ.
ಆಧಾರ್ ಕಾರ್ಡ್ ಸಂಖ್ಯೆಯೇ ನಿಮ್ಮ MM(ಮನಿ ಮಿಷನ್)ನ ಸಿಮ್ ನಂಬರ್.
ಈಗ ನೀವು ನಿಯರೆಸ್ಟ್ ಬ್ಯಾಂಕಿನಲ್ಲಿ 10,000 ರುಪಾಯಿ ತುಂಬಿ ಒಂದು ಕಾರ್ಡ್ ಪಡೆಯುತ್ತೀರಿ. ಅದರಲ್ಲಿರುವ ಡಿಜಿಟಲ್ ನಂಬರ್ ತುಂಬಿ ಅದನ್ನು RBI ಪ್ರವರ್ತಿತ ನಂಬರಿಗೆ ರಿಕ್ವಸ್ಟ್ ಕಲಿಸಿ ರಿಚಾರ್ಜ್ ಮಾಡಿಸಿಕೊಳ್ಳುತ್ತೀರಿ. ಈಗ ನೀವು ನನ್ನ MMಗೆ 500 ರುಪಾಯಿ ಕಲಿಸಬೇಕಾಗಿದೆ. ಆಗ ನೀವು ನಿಮ್ಮ ಸೆಕ್ಯೂರಿಟಿ ಇನ್ಬಾಕ್ಸ್ ಓಪನ್ ಮಾಡಿ 500 ಅಂತ ಟೈಪಿಸಿ. ನನ್ನ MMನಂಬರ್ಗೆ F(Forward) ಮಾಡ್ತೀರಿ.
ನನಗೆ ನೀವು ಪರಿಚಿತರಾದರೆ ನಾನು ಈ ಹಣವನ್ನು A(accept) ಮಾಡ್ತೇನೆ.
ಅಕ್ಸೆಪ್ಟ್ ಮಾಡಿದ ಹಣವನ್ನು B(Bank) ನನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಬಹುದು.
C (cash) ಮಾಡಿಕೊಂಡು ನನ್ನ ದೈನಂದಿನ ಖರ್ಚಿಗೆ ಉಪಯೋಗಿಸಬಹುದು.
ನನಗೆ ನಿಮ್ಮ ಪರಿಚಯ ಇಲ್ಲದಿದ್ದಲ್ಲಿ D(Doubt) ಆಯ್ಕೆ ಮಾಡಿ ಆ ದುಡ್ಡನ್ನು ಪೆಂಡಿಂಗ್ ಮಾಡಬಹುದು.
ನಿಮ್ಮ ಮೇಲೆ ತುಂಬಾ ಡೌಟಿದ್ದರೆ E (enquiry) ಎಂಬ ಆದೇಶವನ್ನು rbi ಗೆ ಕೊಡಬಹುದು.
ಆದರೆ ಗೆಳೆಯರೇ ಈ ರೀತಿಯ ವ್ಯವಸ್ಥೆಯಿಂದ ಅಪಾಯವೂ ಇದ್ದೀತು. ಆ ಬಗ್ಗೆ ನನಗೆ ದಯವಿಟ್ಟು ತಿಳಿಸ್ತೀರಲ್ಲ?

ಲೇಖಕರು

JAYARAM NAVAGRAMA

ಮ್ಯಾಂವ್sss

ನಾನು ಮೂಡಬಿದ್ರಿ ಸಮೀಪದ ಪುಚ್ಚಮೊಗರಿನಲ್ಲಿ 1966 ರಿಂದ 1968 ಈ ಇಸವಿಯ ಮಧ್ಯೆ ಜನಿಸಿರುವ ಬಗ್ಗೆ ದಟ್ಟ ವದಂತಿ ಇದೆ!
ನನ್ನ ತಂದೆ ಮತ್ತು ತಾಯಿ ಇಬ್ಬರೂ ಬಿಲ್ಲವರು.
ನನಗೆ ಈಗ ಸುಮಾರು 48 ವರ್ಷ ಆಗಿರಬಹುದು.
ಒಂದನೇ ತರಗತಿಯಿಂದ 7ನೇ ತರಗತಿ ತನಕ ನಮ್ಮ ಪುಚ್ಚಮೊಗರು ಗ್ರಾಮದ ನಿತ್ಯಾನಂದ ಎಯ್ಡೆಡ್ ಎಲಿಮೆಂಟರಿ ಶಾಲೆ
8 ಮತ್ತು 9ನೇ ತರಗತಿಯನ್ನು ಸರಕಾರಿ ಪ್ರೌಢಶಾಲೆ ಕೊನ್ನೆಪದವು. ಇಲ್ಲಿ ಕಲಿತೆನು.
ನಾನು ಎಂಟನೇ ತರಗತಿಯಲ್ಲಿರುವಾಗ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆ ಆಯಿತು. ಆಗ ಚಿತ್ರದುರ್ಗದ ಸುಜಾತ ಟೀಚರ್ ಬಾಯ್ತುಂಬಾ ಅತ್ತಿದ್ದರು.
ಹತ್ತು ವರುಷಗಳ ಕೆಳಗೆ ನನ್ನ ಊರನ್ನು ತ್ಯಜಿಸಿ
ಸತಿಸುತರ ಪ್ರೀತ್ಯರ್ಥಂ ನವಗ್ರಾಮಾಗಮನ ಮಾಡಿ
ನಾಯಿಯಂತೆ ವರ್ಕ್ ಮಾಡುತ್ತಾ ಜಾಯಿಂಟ್ ಪೆಯಿನ್ ಬ್ಯಾಕ್ ಪೆಯಿನ್ ಸ್ಕಿನ್ ಪ್ರಾಬ್ಲೆಮ್ ಇತ್ಯಾದಿ ಪ್ರಶಸ್ತಿ ಪಡೆಯುತ್ತಾ
ಫೇಸ್ಬುಕ್ ವಿಸ್ಮಯನಗರಿ ಗಳಲ್ಲಿ ಮಿಂಚುತ್ತಾ ಅಥವಾ ಹಾಗೆಂದು ಭ್ರಮಿಸುತ್ತಾ!
ಶ್ರೀಯುತ ಮೋಧೀಜಿಯವರ ಆಡಳಿತ ವೈಖರಿ ಏನೆಂದು ಅರಿಯಲಾರದೆ ಅರ್ಥೈಸಲಾರದೆ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡು ...
ತುಂಬಾ ದಿನದಿಂದ ಆಲೋಚಿಸುತ್ತಾ ಇರುವ ಕನ್ನಡದ ಕಂದ ನಾನು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.