ಅವ{Low}ಕನ
ಆಟ ಆಡುವ ಸಮಯ ಇರಲಿಲ್ಲ ಗೆಳೆಯರು
ಪಾಟ ಓದುವ ಸಮಯ ಇರಲಿಲ್ಲ ಪುಸ್ತಕ
ಆದರೂ ಏನೇನೊ ಕನಸು.
ಕನಸಲ್ಲಿ ಅರಮನೆ!!
ಅದಕೆ ನಾನೇ ರಾಜ.
ಮುಗ್ಧ ಸಾಮ್ರಾಜ್ಯದಲಿ ಆಳುತ್ತಾ ನಡೆದೆ.
ಕೆಸರುಗದ್ದೆ: ಅದರಲಿಷ್ಟು ಕಪ್ಪೆ ಮರಿ.
ಚಿಲಿಪಿಲಿಯ ಗುಬ್ಬಿ ಗೂಡೆನ್ನ ಮನೆ ಮಾಡಿನಲಿ.
ಸ್ವಚ್ಛ ಸಾಮ್ರಾಜ್ಯದಲಂದು ಭತ್ತದ ಆ ಗದ್ದೆಗಳು!
ಎಂದೂ ಬತ್ತದ ತಿಳಿ ಒಸರು ಎಲ್ಲೆಲ್ಲು.
ಬಾಲ್ಯ ಕಳೆದಾಗೊಮ್ಮೆ
ಮೀಸೆ ಚಿಗುರಿದ ಹೆಮ್ಮೆ
ಆದರೂ ಈ ಸಾಮ್ರಾಜ್ಯದ ಅತಿ ಮುಗ್ಧ ನಾನೆಂಬ ಅರಿವಿರದೆ ಆಳಿದೆ.
ಕೋಟೆ ಕೊತ್ತಲ ಕಟ್ಟಿ
ಮದ್ದಾನೆಗಳ ಮೆಟ್ಟಿ
ಒಡಲೊಳಗೇ ಗೂಡುಕಟ್ಟಿ
ಭವ್ಯ ಭಾರತವೆಂಬ ಮೊಟ್ಟೆ ಇಟ್ಟೆ
ಜನಗಣಮನದ ಗೀತೆಯಲೆ ಕಾವು ಕೊಟ್ಟೆ
ಮರಿಗಳಾಗಲೆ ಇಲ್ಲ!
ಮೊಟ್ಟೆ ಬಿರಿಯಲೇ ಇಲ್ಲ!! ಗೂಡಿಂದ ಹೊರಬಂದು
ಸುತ್ತ 'ಅವಲೋಕಿಸಿದೆ
ಎಲ್ಲಿ ಒಸರು?
ಎಲ್ಲಿ ಗದ್ದೆ?
ಕೆಸರಿದ್ದರಲ್ಲವೆ ಒಸರು?!
ಎಂದೂ ಬತ್ತದ ಗದ್ದೆ
ಬತ್ತಿ ಒಣಗಿದೆ ಇಲ್ಲಿ
ಕಂಗು ರಬ್ಬರು ಗುಂಡಿ,
ಕಾಸು ಅರಳುವ ಮರಗಳು!!
ನಾಶವಾಗಿದೆ ಕಾಡು
ಒಣಗಿ ಹೋಗಿದೆ ತೋಡು
ಮತ್ತೆ ಕನಸಲಿ ಜಾರುತ್ತ
ತೆವಲುತ್ತಾ ಮುನ್ನಡೆದೆ
ವಯಮಾನ ಜಾರಿತ್ತು
ಕಣ್ಣು ಮಂಜಾಗಿತ್ತು
ದೈತ್ಯ ಚೇತನ ಕುಂದಿ, ಕೈಗೆ ಊರುಗೋಲು ಬಂದಿತ್ತು.
ಮತ್ತೆ ರಸ್ತಯ ಉದ್ದಕ್ಕು ಹುಡುಕಿದೆ.
ಎಲ್ಲಿ ನನ್ನ ಆ ಮೊಟ್ಟೆ?
ನಾನೆಲ್ಲಿ ಮರೆತಿಟ್ಟೆ!?
ಎಲ್ಲಿ ಸುಂದರ ಮರಿ?
ಎಲ್ಲಿ ಕನಸಿನ ಭಾರತ?
ಇದು ಕಾಸಿನ ಭಾರತ!!?
ಏನೂ ಕಾಣದು!
ಏನೂ ಕೇಳದು!!
ಮರೆತು ಎಲ್ಲೋ ಇಟ್ಟ ಕನ್ನಡಕ,
ಕನಸಿನಷ್ಟೇ ನಿಗೂಢ
ಸಾಲುಗಳು
- 283 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ