ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಗೆ ಇದೆಂಥಾ ಅವಮಾನ....?
ದೇಶದ ಇತಿಹಾಸವನ್ನೆ ತಿರುಚಿದವರು.... ಭವಿಷ್ಯವನ್ನೆನು ಕಟ್ಟಬಲ್ಲರು..?ಕಾಂಗ್ರೆಸ್ ಬಕ್ಕ ಬೋರಲು ಬಿದ್ದಿದೆ.. ಇಷ್ಟು ಕಾಲ ದೇಶದ ಜನರನ್ನು ಯಾಮಾರಿಸಿ ಅನುಭವಿಸಿದ್ದ ಅಧಿಕಾರದ ಸೌಧ ಕುಸಿದು ಬಿದ್ದಿದೆ. ನಮಗೆಲ್ಲಾ ಎಂಥಾ ಅಪಮಾನ.. ? ದೇಶ ಕಂಡ ಅಪ್ರತಿಮ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ರ ಕುಟುಂಬದ ಮೇಲೆ ಸತತ ಇಪ್ಪತ್ತು ವರ್ಷಗಳ ಕಾಲ ನೆಹರು ಪಡೆ ಇರಿಸಿದ್ದ ಕಣ್ಗಾವಲು..! ಯಾಕೆ...? ಅವರೇನು ಭಯೋದ್ಪಾದಕರೆ...? ನಮ್ಮ ದೇಶದ ಚಿಕ್ಕ ಮಗುವಿಗೂ ಗೊತ್ತು ಸುಭಾಷ್ ಚಂದ್ರ ಬೋಸ್ ಅಪ್ಪಟ ದೇಶ ಪ್ರೇಮಿ ಅಂತಾ...! ಆದರೆ ನೆಹರು..? ಕಾಂಗ್ರೆಸ್..?
ಈಗ ಬಯಲಾಗ್ತಿದೆ ನೋಡಿ ನೆಹರು ಅವರ ಬಣ್ಣ.. ಅದಿಕ್ಕೆ ಅಲ್ವಾ ಕಾಂಗ್ರೆಸ್ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಮುಗುಮ್ಮಾಗಿ ಇದ್ದಿದ್ದು..! ಸತ್ಯ ಯಾವತ್ತಿದ್ರು ಹೊರಗೆ ಬಂದೆ ಬರುತ್ತೆ..! ಆದ್ರೆ ಈ ಸತ್ಯ ತೀರ ತಡವಾಗಿ ಬಯಲಾಗ್ತಿದೆ ಅಷ್ಟೆ..! ಸ್ವಾತಂತ್ರ್ಯಕ್ಕಾಗಿ ಹೋರಾಡಿದವರೆಷ್ಟೊ..ಬಲಿದಾನಗೈದವರೆಷ್ಟೊ..? ಆದರೆ ಅದರ ಫಲವನ್ನು ಜಬರ್ದಸ್ತಾಗಿ ಅನುಭವಿಸಿದ್ದು ಮಾತ್ರ ನೆಹರು ಕುಟುಂಬ..! ಸ್ವಾತಂತ್ರ್ಯ ಪೂರ್ವದಲ್ಲಿ ಮೋತಿಲಾಲ ನೆಹರು ಅವರ ಕುಟಿಲ ವ್ಯವಹಾರ ನೀತಿಯಿಂದಾಗಿ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪಕ್ಕದಲ್ಲಿ ಬಂದು ಕುಳಿತಿದ್ದು ಜವಾಹರಲಾಲ್ ನೆಹರು. ದುರ್ದೈವ ಅಂದರೆ ಗಾಂಧೀಜಿಯವರು ಕೂಡ ನೆಹರುಗೆ ಮನ್ನಣೆ ನೀಡಿದರು. ಅಸಲಿಗೆ ಆ ಸ್ಥಾನಕ್ಕೆ ಯೋಗ್ಯತೆ ಇದ್ದಿದ್ದು ಸುಭಾಷ್ ಚಂದ್ರ ಬೋಸ್ ಅವರಿಗೆ ಮಾತ್ರ..! ಅದು ಖುದ್ದು ನೆಹರು ಅವರಿಗೂ ಗೊತ್ತಿತ್ತು. ಸುಭಾಷ್ ಚಂದ್ರ ಬೋಸ್ ಇದ್ದಲ್ಲಿ ತಮ್ಮ ಬೇಳೆ ಕಾಳು ಬೇಯೊಲ್ಲ ಅನ್ನುವ ಆತಂಕದಲ್ಲಿದ್ದ ನೆಹರು ಮಸಲತ್ತಿನಿಂದ ಸುಭಾಷ್ ಚಂದ್ರ ಬೋಸ್ ಅವರನ್ನು ಕಾಂಗ್ರೆಸ್ ನಿಂದ ಹೊರಗೆ ಹಾಕಿದರು.. ನಂತರ ಸುಭಾಷ್ ಚಂದ್ರ ಬೋಸ್ ಅವರು ಎಲ್ಲಾ ಚೌಕಟ್ಟನ್ನು ಮೀರಿ ಅಪ್ರತಿಮ ಸಾಹಸಿಯಾಗಿ ಬೆಳೆದಿದ್ದು ಇತಿಹಾಸ.
ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು 1947 ರಲ್ಲಿ. ನಿಮಗೊಂದು ವಿಷಯ ಗೊತ್ತಾ..? ಭಾರತಕ್ಕೆ ಸ್ವಾತಂತ್ರ್ಯ 1923 ರಲ್ಲೆ ಬರಬೇಕಿತ್ತು... ಆಗ ಪ್ರಚಂಡ ಹೋರಾಟಗಾರರಾಗಿದ್ದ ಭಗತ್ ಸಿಂಗ್.ಚಂದ್ರಶೇಖರ್ ಅಜಾದ್ ಇನ್ನೂ ಮುಂತಾದ ಅನೇಕ ವೀರರು ತಮ್ಮ ಹೋರಾಟದ ರಣಕಹಳೆಯನ್ನು ತೀವ್ರಗೋಳಿಸಿಬಿಟ್ಟಿದ್ದರು...ಆಂಗ್ಲರಿಗೆ ಇನ್ನೊಂದೆ ಒಂದು ದಿನವೂ ಕೂಡ ಭಾರತದಲ್ಲಿ ಇರಲಾಗದಷ್ಟು ಭಯ ಉಂಟಾಗಿತ್ತು..! ಆ ಸಮಯದಲ್ಲೆ ಯಾಕೊ ಎನೋ ಗಾಂಧೀಜಿಯವರು ಹಿಂಸೆಯಿಂದ ಸ್ವಾತಂತ್ರ್ಯ ಗಳಿಸಿಕೊಳ್ಳೊದು ಬೇಕಿಲ್ಲ ಅಂತ ಹಿಂದೆ ಸರಿದು ಬಿಟ್ಟರು.. ಅವರು ತಮ್ಮದೆ ಆದ ಅಹಿಂಸಾ ಚಳುವಳಿಯನ್ನು ಪ್ರಾರಂಭಿಸಿದರು... ಇದು ನಮ್ಮ ದೇಶದ ಭವಿಷ್ಯದ ಮೇಲೆ ಭಾರಿ ದುಷ್ಪರಿಣಾಮ ಬೀರಿತು.. ಗಾಂಧೀಜಿಯವರ ಅಹಿಂಸಾ ಚಳುವಳಿ ನೆಹರು ಅಂತಹ ಅವಕಾಶವಾದಿಗೆ ವರದಾನವಾಯಿತು... ಸುಭಾಷ್ ಚಂದ್ರ ಬೋಸ್ ಅವರಂತಹ ಅಪ್ರತಿಮ ಹೋರಾಟಗಾರರನ್ನು ಹತ್ತಿಕ್ಕಿತು..! ಇದರ ಪರಿಣಾಮ ಮುಂದೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗುವುದು 24 ವರ್ಷಗಳಷ್ಟು ತಡವಾಯಿತು. ನೆಹರು ಅವರಂತಹ ಅವಕಾಶವಾದಿಗೆ ಪ್ರಧಾನಿ ಪಟ್ಟ ಸಿಕ್ಕಿತು..ಅದಲ್ಲದೆ ನಂತರವೂ ನಮ್ಮ ದೇಶ ನೆಹರು ಕುಟುಂಬದ ಕಪಿಮುಷ್ಟಿಯಲ್ಲಿ ನರಳಿದ್ದು ಇತಿಹಾಸದ ಕಟುಸತ್ಯ..!
ಇವತ್ತಿಗೂ ಕೂಡ ಶಾಲಾ ಪುಸ್ತಕಗಳಲ್ಲಿ ನೆಹರು ಕುಟುಂಬದ ಕತೆಗಳೆ ಇದೆಯೆ ಹೊರತಾಗಿ ನೈಜ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ...ಎಲ್ಲೊ ಒಂದು ಕಡೆ ಭಗತ್ ಸಿಂಗ್.ಚಂದ್ರಶೇಖರ್ ಅಜಾದ್,ಸುಭಾಷ್ ಚಂದ್ರ ಬೋಸ್ ಬಗ್ಗೆ ಅಲ್ಪ ಸ್ವಲ್ಪ ಮಾಹಿತಿ ಇದೆ...ಅಷ್ಟು ಬಿಟ್ಟರೆ ಗಾಂಧೀಜಿಯವರು ಮಾತ್ರ ಇದಕ್ಕೆ ಅಪವಾದ..!
ಮೊನ್ನೆ ಮೊನ್ನೆ ತಾನೆ ನರೇಂದ್ರ ಮೋದಿಯವರ ಸರ್ಕಾರ ಕೂಡ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬದಿಸಿದ ಯಾವುದೆ ಮಾಹಿತಿಯನ್ನು ಬಯಲು ಮಾಡಲು ಸಾಧ್ಯವಿಲ್ಲ ಅಂತ ಕೈ ಚೆಲ್ಲಿತ್ತಲ್ಲ... ಯಾಕೆ ಗೊತ್ತಾ..? ಅದಕ್ಕೆಲ್ಲಾ ಸ್ವಾತಂತ್ರ್ಯ ಪಡೆಯುವಾಗ ಸ್ವಾರ್ಥದಿಂದ ನೆಹರು ಅವರು ಬ್ರಿಟಿಷ್ ಸರ್ಕಾರದೊಂದಿಗೆ ಮಾಡಿಕೊಂಡಿದ್ದ ಒಪ್ಪಂದಗಳೇ ಕಾರಣ...! ಸತ್ಯ ಯಾವತ್ತಿದ್ದರೂ ಹೊರಗೆ ಬರಲೇಬೇಕು..ಇವತ್ತಲ್ಲ ನಾಳೆಯಾದ್ರು ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂದಿಸಿದ ರಹಸ್ಯಗಳೆಲ್ಲಾ ಹೊರಗೆ ಬಂದೆ ಬರುತ್ತದೆ ಆದರೆ ಅದು ಹೊರಗೆ ಬರುವಷ್ಟರಲ್ಲಿ ದೇಶಕ್ಕೆ ದೇಶವೇ ಹೈರಾಣಾಗಿ ಹೋಗಿದ್ದು ಮಾತ್ರ ನಮ್ಮೆಲ್ಲರ ದುರ್ದೈವವೇ ಸರಿ..!
ಸಾಲುಗಳು
- 1347 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ