Skip to main content

ದಿನಕ್ಕೊಂದು ಹಿತನುಡಿಗಳು.

ಬರೆದಿದ್ದುMarch 25, 2008
noಅನಿಸಿಕೆ

[b]ಕೋಪಿಸಿಕೊಳ್ಳಬೇಡ.[/b]

ಏನೇನೋ ಆಸೆಗಳು. ಆ ಆಸೆಗಳಿಗೆ ಅಡ್ಡಿಯಾದಾಗ ಅಡ್ಡಿಯ ಮೇಲೆ ಕೋಪ. ಆ ಅಡ್ಡಿಯನ್ನು ನಿವಾರಿಸಿಕೊಳ್ಳುವುದೊಂದೇ ಗುರಿ. ಬೇರೇನೂ ತೋಚುವುದಿಲ್ಲ, ಬುದ್ದಿ ಕೆಲಸ ಮಾಡುವುದಿಲ್ಲ. ಆಗ ಮೂಗನ್ನು ಕೊಯ್ದುಕೊಳ್ಳುತ್ತೇವೆ. ಈ ಕೋಪವು ಸ್ಥಿರವಲ್ಲ, ಸ್ವಲ್ಪ ಹೊತ್ತಿನಲ್ಲಿಯೇ ಇಳಿಯುತ್ತದೆ. ಬುದ್ದಿಯು ಮತ್ತೆ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಆದರೆ, ಕೊಯ್ದುಕೊಂಡ ಮೂಗು ಮತ್ತೆ ಚಿಗುರುವುದಿಲ್ಲ!! ಆಸೆಗಳಿರುವುದು ತಪ್ಪಲ್ಲ. ಆದರೆ, ಆಸೆಯು ಅರ್ಥಪೂರ್ಣವಾಗಿರಬೇಕು. ದುಷ್ಟ ಆಸೆಗಳಿಗೆ ಅಡ್ಡಿ ಬಂದರೆ ಆಸೆಯನ್ನು ಬಿಡಬೇಕೇ ಹೊರತು ಅಡ್ಡಿಯ ಮೇಲೆ ಕೋಪಿಸಿಕೊಳ್ಳುವುದಲ್ಲ! ಸರಿಯಾದ ಆಸೆಗೆ ಅಡ್ಡಿಮಾಡುವವರು ಮೂರ್ಖರು! ಮೂರ್ಖರಿಗೆ ತಿಳಿವಳಿಕೆ ನೀಡಬೇಕೇ ಹೊರತು ಕೋಪಿಸಿಕೊಂಡರೆ ಏನು ಪ್ರಯೋಜನ? ನಮ್ಮ ಜ್ನ್ಯಾನ, ತಾಳ್ಮೆಗಳಿಗೆ ಇದೊಂದು ಪರೀಕ್ಷೆ. ಒಟ್ಟಿನಲ್ಲಿ ಕೋಪಕ್ಕೆ ಅವಕಾಶವಿಲ್ಲ..!

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.