Skip to main content

ದಿನಕ್ಕೊಂದು ಹಿತನುಡಿಗಳು..

ಬರೆದಿದ್ದುMarch 24, 2008
2ಅನಿಸಿಕೆಗಳು

ಒಳ್ಳೆಯ ಹಿತನುಡಿಗಳನ್ನು ಯಾರು ತಿಳಿಸುತ್ತಾರೊ.. ಅಥವ ನಾವು ತಿಳಿದುಕೊಳ್ಳುತ್ತೇವೆಯೋ... ಅಲ್ಲಿ ನಮ್ಮ ಬುದ್ದಿಗೆ ಸೂರ್ಯನ ಕಿರಣದಷ್ಥಾದರು.. ಬೆಳಕು ಬಂದೀತು..[quote]

ನಾನು ಓದಿದ ಒಂದೊಂದು ಹಿತನುಡಿಗಳನ್ನು ದಿನಕ್ಕೊಂದು ಪ್ರಕಟಿಸುವ ಅಭಿಲಾಷೆಯಿದೆ.. ದಯವಿಟ್ಟು ಸ್ವೀಕರಿಸಿ..

[b]ಒಬ್ಬನೇ ತಿನ್ನುವವನು ಶುದ್ಧ ಪಾಪಿಯೆನಿಸುತ್ತಾನೆ..[/b]

ತಿನ್ನುವುದು ತಪ್ಪಲ್ಲ. ಬದುಕಿರುವವರೆಲ್ಲರೂ, ಬದುಕ ಬಯಸುವವರೆಲ್ಲರೂ ತಿನ್ನಲೇಬೇಕು. ಆದರೆ, ಏಕೆ ತಿನ್ನಬೇಕು? (ಕಳೆದು ಹೋದ ಶಕ್ತಿಯನ್ನು ಪಡೆಯಲು); ಯಾವಾಗ ತಿನ್ನಬೇಕು? (ಹಸಿವಾದಾಗ ತಿನ್ನಬೇಕು); ಏನು ತಿನ್ನಬೇಕು? (ಜ್ನ್ಯಾನ, ಶಕ್ತಿಗಳನ್ನು ನೀಡುವ ಸಾತ್ವಕ ಆಹಾರವನ್ನು); ಎಷ್ಟು ತಿನ್ನಬೇಕು? (ಅರ್ಧ ಹೊಟ್ಟೆ ಆಹಾರ, ಕಾಲು ಹೊಟ್ಟೆ ನೀರು, ಕಾಲು ಹೊಟ್ಟೆ ಗಾಳಿ); ಹೇಗೆ ತಿನ್ನಬೇಕು? (ಚೆನ್ನಾಗಿ ಅಗಿದು); ಈ ಪ್ರಶ್ನೆಗಳಿಗೆ ಉತ್ತರ ತಿಳಿದು ತಿನ್ನಬೇಕು. ತಿನ್ನುವ ಮುಂಚೆ, ನೀಡಿದ ಭಗವಂತನನ್ನು, ದುಡಿದ ರೈತನನ್ನು ಕೃತಜ್ನ್ಯತೆಯಿಂದ ಸ್ಮರಿಸಿ, [b][i]ಇತರರೊಡನೆ ಹಂಚಿಕೊಂಡು [/i][/b]ತಿನ್ನಬೇಕು. ಮರೆತು ಚೀಲ ತುಂಬಿದರೆ ಅದು ಪಾಪ. ರೋಗ-ರುಜಿನಗಳು ನಿಶ್ಚಿತ..

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

ವಿ.ಎಂ.ಶ್ರೀನಿವಾಸ ಸೋಮ, 03/24/2008 - 21:57

ತುಂಬಾ ಸೊಗಸಾಗಿ ಇದೆ ನಿಮ್ಮ ದಿನಕ್ಕೊಂದು ನುಡಿ.
ಇ ದು ಹೀಗೆ ಸಾಗಲಿ ನಿರಂತರ.

ಸೀನು.

ಪಾರ್ವತಿ.ಜಿ.ಆರ್ ಮಂಗಳ, 03/25/2008 - 13:06

ತುಂಬಾ ಚೆನ್ನಾಗಿದೆ, ನಿಮ್ಮ ಈ ಹೊಸ ಕಾರ್ಯಕ್ಕೆ ನಮ್ಮ ಶುಭಕಾಮನೆಗಳು, ( All the Best),

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.