Skip to main content

ಕಾಡಬೇಡ ಓ ನನಪೇ ....!

ಇಂದ Nagaraj BN
ಬರೆದಿದ್ದುJuly 22, 2014
noಅನಿಸಿಕೆ

ಉಮ್ಮಳಿಸುತಿದೆ ಎದೆಯಾಳದಿಂದ
ಬದುಕು ಕೊಟ್ಟ ನೆನಪೊಂದು
ತಡೆಯೊಡ್ಡುತ್ತಿದ್ದೇನೆ ಬಲವಂತವಾಗಿ
ಹೊರ ಬಂದು ನೀ ಸೃಷ್ಟಿಸಬೇಡ
ಅಲ್ಲೋಲ ಕಲ್ಲೋಲವೆಂದು...!!
ಕಣ್ಣಾಲಿಗಳು ಕೆಂಪಾಗಿಹುದು
ಬಿರು ಬಿಸಿಲ ಬೇಗೆಗೆ
ಕೆನ್ನೆಗಳು ತೋಯ್ದಿಹುದು
ಬಿಟ್ಟು ಬಿಡದೆ ಹರಿದ ಕಂಬನಿಗೆ...!!
ಅಂತರಂಗದ ಹೊಯ್ದಾಟ
ಬಹಿರಂಗದ ತಾಕಲಾಟ
ಉಚ್ವಾಶ-ನಿಚ್ವಾಶದ ಮೇಲಾಟ
ಎದ್ದೇಳಿಸದಾಗಿದೆ ಗರಿ ಬಿಚ್ಚಿದ ಮನವ...!!
ವಿಶ್ವಾಸದ ಎಳೆ ತುಂಡರಿಸಿ
ಸುಳಿ ಸುಳಿಯಾಗಿ ಬೀಸೋ
ಸುಳಿರ್ಗಾಳಿಯ ತೆಕ್ಕೆಗೆ ಸಿಲುಕಿ
ಸಾಗುತಿದೆ ದೂರ ದೂರಕೆ
ಕಣ್ಣಂಚಿನ ಒಲವ ಬಿಟ್ಟು
ಕಾಣದಾ ಊರಿಗೆ..........!!
ಉಮ್ಮಳಿಸಬೇಡ ಓ ನೆನಪೇ
ತಿದ್ದಿ.. ತೀಡಿ, ಕೈ ಹಿಡಿದು ಮುನ್ನಡೆಸು
ನಗುವಿರ ಮೊಗದಲ್ಲಿ, ಹೂ ನಗೆಯ ಅರಳಿಸು
ಬದುಕಿಕೊಳ್ಳಲಿ ಜೀವ
ನಿನ್ನದೇ ನೆನಪಿನಲಿ...!!
-ನಾಗರಾಜ ಬಿ.ಎನ್.(9481052378)

ಲೇಖಕರು

Nagaraj BN

ಕದವಿರದ ಕನಸು... ನಿದ್ದೆಗೆಡೆಸುವ ನಗ್ನ ಸತ್ಯಗಳು!

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.