ಎಲ್ಲೋ ಎಡವಿದೆ..!!
ನೋವು-ನಲಿವಿನ ಗುಣಾಕಾರ
ಭಾಗಾಕಾರಗಳ ಅನಂತ ಗಣಿತದ ಸ್ತರ
-ದಲ್ಲಿ ಎಲ್ಲೋ ತಪ್ಪಿಹೋಗಿದೆ!!
ನೋವು ಗುಣಾಕಾರವಾಗಿದೆ!?
ನಲಿವು ಭಾಗಾಕಾರವಾಗಿದೆ?!
ಚಿಂತೆ ಸಂಕಲನವಾದರೆ,ಮನಸ್ಸೇ ವ್ಯವಕಲನ!!
ಬಹುಶಃ ಈ ಲೆಕ್ಕಾಚಾರವೇ ಗೋಜಲುಗೊಂಡಿದೆ॥
ಮಾಡಿದ್ದೇ ಒಂದು ಉತ್ತರವೇ ಶೂನ್ಯ!
ನನ್ನ ಉತ್ತರಗಳಿಗೂ ಈ ಉತ್ತರಗಳಿಗೂ ಹೋಲಿಕೆಯೇ ಮೌನ!!
ಒಂದು ಸ್ವಲ್ಪ ಹೊತ್ತು ಮನಮನದೊಳಗೆ ಮಮ್ಮಲಧ್ಯಾನ॥
ಕೇಳಲೆಂತು ಹೇಳಲೆಂತು??
ಯಾವ ಲೆಕ್ಕ ಮಾಸ್ತರರ ಬಳಿ ಹೋಗಲಿ..
ಉತ್ತರ ತಪ್ಪೆಂದು??
ಹೇಗೆ ಕಲಿಯಲಿ ಈ ಗಣಿತವ ಆದಶ್ಟು ಬೇಗ!?
ಸಾಬೀತು ಪಡಿಸಲು ಲೆಕ್ಕ ಸರಿಯೆಂದು!!
ಸಾಲುಗಳು
- 360 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ