ಅಮ್ಮನೆ೦ದೊಡೆ.........
ಬದುಕ ಪಯಣದಲಿ ನನ್ನ ದಾರಿ
ಸಾಗಿತ್ತು ಸರಸರನೆ ಒಲುಮೆ ದೋರಿ
ಕಷ್ಟ ಕಾರ್ಪಣ್ಯ ನನ್ನೊಂದಿಗಿತ್ತು
ಅಮ್ಮನೆಂದೊಡೆ ಸುಖ ಜಾರಿ ಮಡಿಲಲ್ಲಿ ಬಿತ್ತು
ನಾ ನಡೆವ ಹಾದಿಯಲಿ ಕಲ್ಲು-ಮುಳ್ಳುಗಳಿತ್ತು
ಭಯವೆಂಬ ಸರ್ಪವು ಮನಸಾವರಿಸಿತ್ತು
ಕಳೆಗುಂದಿ,ಎದೆಗುಂದಿ ನಾನಲ್ಲೇ ನಿಂದು
ಅಮ್ಮನೆಂದೊಡೆ ಧೈರ್ಯ ತುಂಬಿತ್ತು ಬಂದು
ನಾ ಎದ್ದರು ನಗುವು ಬಿದ್ದರು ನಗುವು
ನನ್ನ ನೋಡಿ ಅಪಹಾಸ್ಯ ಮಾಡಿತ್ತು ಮಗುವು
ಆ ನಗೆಯ ಸದ್ದಿನೋಳು ಎನ್ನ ಅಳುವು ಇಣುಕಿ
ಅಮ್ಮನೆಂದೊಡೆ ತಾಳ್ಮೆ ಬಂದಿತ್ತು ಬಳುಕಿ
ಅಮ್ಮನ ಬಿಟ್ಟು ಜಗದಲಿ ಎಲ್ಲವು ಸುಳ್ಳು
ಇದು ಸುಳ್ಳಾದರೆ ಒಪ್ಪುವೆ ನನ ಮಾತು ಜೊಳ್ಳು
ಸಾಲುಗಳು
- 352 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ