Skip to main content

ಬೆಂಕಿಯ ಜ್ವಾಲೆಯಲ್ಲಿ....

ಇಂದ Achyutkumar .
ಬರೆದಿದ್ದುMay 27, 2013
noಅನಿಸಿಕೆ

ದಹಿಸಿತು ಕಾನನ..!
     ಸನಿಹವಾಗುತ್ತಲಿದೆ ಅಭಯ ಅರಣ್ಯದ ಕೊನೆಗಾಲ

* ಅಚ್ಯುತಕುಮಾರ ಯಲ್ಲಾಪುರ

   ಅರವತ್ತು ವರ್ಷಗಳ ನಂತರ ದಾಂಡೇಲಿ ಭಾಗದಲ್ಲಿ ಬಿದುರು ಬಾಡಿದೆ. ಬಾಡುವ ಮುನ್ನ
ಬಿದಿರು ಹೂಗಳನ್ನು ಹೊರಚಲ್ಲಿ ಅಕ್ಕಿಯನ್ನು ಕಾಡಿಗೆ ಬಿತ್ತಿ "ಅಗ್ನಿಬಾರ"ವನ್ನು
ತಂದೊಡ್ಡಿದೆ. ಬಾಡಿದ ಬಿದಿರಿಗೆ ಕಾಳ್ಗಿಚ್ಚು ಅಂಟಿದೆ. ಬಿದಿರು ಅಕ್ಕಿ ಬಿಟ್ಟರೆ
ಕ್ಷಾಮ ಬರುತ್ತದೆ ಎಂಬ ಮಾತು ವಿಬಿನ್ನ ರೀತಿಯಲ್ಲಿ ನಿಜವಾಗಿದೆ. ನೀರಿಗೆ
ಬರವಿಲ್ಲದಿದ್ದರೂ ಅಗ್ನಿಯ ಶಾಖ ಸಸ್ಯ ಸಂಕೂಲ, ಮೂಖ ಜೀವಿ ಹಾಗೂ ಜಾನುವಾರುಗಳಿಗೆ
ಬರಗಾಲಕ್ಕಿಂತಲೂ ಅಧಿಕ ಸಂಕಷ್ಟ ಸೃಷ್ಠಿ ಮಾಡಿದೆ. ಅಭಯಾರಣ್ಯವೆಂಬ ಸುಂದರ ಕಾಡು
ಅಗ್ನಿಶಿಲೆಯ ಕೆಂಡಗಳಿಂದ ಕೆಂಪು ಹೊಗೆಯನ್ನು ಸೂಸಿ ಕಾನನವನ್ನು ಕೆಂಗಟ್ಟಿಸಿದೆ.
   ದಾಂಡೇಲಿ ಭಾಗದ ಜೊಯ್ಡಾ, ಹೆಬ್ಬಾಳ, ಗದ್ದೆಮನೆ, ಅಣಶಿ, ಚಿಲುಮಿ, ಶಿವಪುರ,
ಕರಿಯಾದಿ, ಚಂಚಗಡ, ಬೆಡ್ಸಗದ್ದೆ, ಶಿವಳ್ಳಿ, ಅವಲರ್ಿ ನೇತೃಗಿ ಸೇರಿದಂತೆ ಸುತ್ತಲಿನ
ನೂರೈವತ್ತಕ್ಕೂ ಹೆಕ್ಟೆರ್ನಷ್ಟು ಅಭಯಾರಣ್ಯದಲ್ಲಿ ಅಗ್ನಿಯ ರೌದ್ರಾವತಾರ
ಮುಂದುವರೆದಿದೆ. ವರುಣನ ಮಾತಿಗೂ ಬೆಲೆ ನೀಡದ ಅಗ್ನಿ ತನ್ನ ಸುಳಿಯಲ್ಲಿ
ಸಿಕ್ಕಿದ್ದನೆಲ್ಲ ಬೋಗಿಸಿಕೊಳ್ಳುತ್ತಲಿದೆ. ಸಾಕ್ಷಿ ಹೇಳಬೇಕಿದ್ದ ಬೆಂಕಿಯೇ
ಬೂದಿಯಾಗುತ್ತಲಿದೆ. ಅಭಯಾರಣ್ಯವೆಂಬ ಕಾಯ್ದಿಟ್ಟ ಅರಣ್ಯ ಪ್ರದೇಶ ಭಸ್ಮವಾಗುತ್ತಲಿದೆ.
ಒಣಗಿದ ಬಿದಿರಿಗೆ ಅಗ್ನಿ ಜ್ವಾಲೆ ಬೆಸೆದು ಹತ್ತಿ ಈಗಾಗಲೇ ಐದು ಅಮವಾಸ್ಯೆ ಕಳೆದರೂ
ಜ್ವಾಲೆ ಆರದೇ ದಗದಗನೆ ಉರಿಯುತ್ತಲೇ ಇದೆ. ವನ್ಯಜೀವಿಗಳು ಜೀವಂತ ದಹನವಾಗಿವೆ.
ಅರೆಬೆಂದ ಪ್ರಾಣಿ ಮಾಂಸದಿಂದ ದುವರ್ಾಸನೆ ಬೀರುತ್ತಲಿದೆ. ಅಪರೂಪ ಹಾಗೂ ಅಮೂಲ್ಯವಾದ
ಮರಗಳು ಬೇರಿನಿಂದಲೇ ಸುಟ್ಟು ಬೂದಿಯಾಕಾರದಲ್ಲಿ ಕಾಣುತ್ತಲಿವೆ.
  ಮರದಿಂದ ಮರಕ್ಕೆ ನೆಗೆಯುತ್ತಲಿದ್ದ ಮಂಗನ ಮೈ ಸುಟ್ಟಿದೆ. ಕೋಗಿಲೆಯೊಂದು ಮೊಟ್ಟೆ
ಮರಿ ಗೂಡನ್ನು ಅಗ್ನಿಗೆ ಆಹುತಿ ನೀಡಿ ಅಲೆಮಾರಿಯಾಗಿದೆ. ನವಿಲು ತನ್ನ ಗರಿಯನ್ನು
ದಹಿಸಿ ತನ್ನ ಸೌಂದರ್ಯವನ್ನೆ ಕಳೆದು ಕೊಂಡರೆ, ಹೆಸರು ಹೇಳಲಾಗದ ಮರಪಕ್ಷಿ ತನ್ನ
ಪರಿವಾರವನ್ನು ಕಳೆದುಕೊಂಡು ಆಕ್ರಂದಿಸುತ್ತಲಿದೆ. ಹಾವು ಸುಟ್ಟ ಜಾಗದಲ್ಲಿ ಹಾವಿನ
ಆಕಾರದಲ್ಲಿಯಲ್ಲಿಯೇ ಭಸ್ಮ ನಿಂತಿದೆ. ಗಾಳಿಯ ನರ್ತನಕ್ಕೆ ಆ ಭಸ್ಮ ಕೂಡ ಆಗಮ್ಮೆ
ಈಗೊಮ್ಮೆ ಕೆಂಡ ಕಾರುತ್ತದೆ. ಬಿದಿರಿಗೆ ಅಂಟಿದ ಗೆದ್ದಿಲು ಶಾಖಕ್ಕೆ ಸನಿಹದಲ್ಲಿ ಕ್ಷಣ
ಮಾತ್ರದಲ್ಲಿಯೇ ಜೀವ ತೆತ್ತರೆ ಬಿದಿರಿನ ಮಾಳಿಗೆಯಲ್ಲಿ ವಾಸಿಸುತ್ತಲಿದ್ದ ಗುಬ್ಬಚ್ಚಿ
ವಿಲವಿಲನೆ ಒದ್ದಾಡಿ ಒಲ್ಲದ ಮನಸಿನಿಂದಲೇ ಪ್ರಾಣಪಕ್ಷಿಯನ್ನು ಬಿಳ್ಕೊಟ್ಟಿದೆ.
ಮುಂಗಾರಿನ ಸ್ವಾಗತಕ್ಕೆ ಹಸಿರಲೆಯಿಂದ ಕೂಡಿರ ಬೇಕಿದ್ದ ಉಳಿದ ಮರಗಳ ಎಲೆಗಳು ಒಣಗಿವೆ.
ಸ್ಥಳೀಯ ಜಾನುವಾರುಗಳಿಗೆ ದಾಹ ತೀರದಾಗಿದೆ. ಮುಳ್ಳಂದಿಯಂತಹ ವನ್ಯಜೀವಿಗಳೇ
ದಿಕ್ಕೆಟ್ಟು ತಿರುಗಾಡುತ್ತಲಿವೆ. ಜ್ವಾಲೆಗೆ ತಪ್ಪಿಸಿಕೊಳ್ಳಲಿಕ್ಕಾಗದ ಮೊಲ,
ಅಳಿಲುಗಳಂತಹ ಸಬ್ಯ ಕಾಡಜೀವಿಗಳ ಕರುಳಮಾಂಸ ಬೇಯುತ್ತಲಿದೆ. ನೀರ ಬಯಸಿದ ಕೆಲ ಜೀವಿ
ಕಾಳಿ ಹಿನ್ನಿರಿನತ್ತಲೂ ತಲೆ ಹಾಕಿದೆ. ಸೂಕ್ಷ್ಮಜೀವಿಗಳೆಲ್ಲವೂ ಸುಟ್ಟು
ಕರಕಲಾಗಿದ್ದರೆ ಬೃಹತ್ ಜೀವಿಗಳು ಆಹಾರವಿಲ್ಲದೇ ಕೆಂಗಟ್ಟಿವೆ. ಇನ್ನು ಕೆಲ ಜೀವರಾಶಿ
ಕಿವಿ, ಕೂದಲು, ಬಾಲವನ್ನು ಬೂದಿಯನ್ನಾಗಿಸಿಕೊಂಡು ಅಂಗವಿಕಲವಾಗಿವೆ.
  ದಾಂಡೇಲಿ ಭಾಗವೆಂದರೆ ಅದು ದಟ್ಟ ಕಾನನ. ಇಲ್ಲಿನ ಅರಣ್ಯವೆಂದರೆ ಹುಲಿ, ಆನೆ,
ಕರಡಿಗಳು ಸದಾ ಸಂಚರಿಸುವಂತಹುದು ಎನ್ನುವ ಸತ್ಯ ಸುಳ್ಳಾಗುತ್ತಲಿದೆ. ಕಾಡಿನ ವೈರಿ
ಅಗ್ನಿಪಡೆಗೆ ಇವು ಹೆದರಿವೆ. 1996ರಲ್ಲಿ ಈ ಭಾಗದದಲ್ಲಿ ಈ ಕಾಡುಗಳಲ್ಲಿ ಅಗ್ನಿ
ಆಟವಾಡಿತ್ತಾದರೂ ಇಷ್ಟೊಂದು ಹಾನಿ ಮಾಡಿರಲಿಲ್ಲ. ಬಿದಿರು ಕಡಿದು ಕದ್ದು ಸಾಗಿಸಿದ
ಅಪರಾದ ಮುಚ್ಚಲು ಸಿಬ್ಬಂದಿಗಳೇ ಮಾಡಿದ ಮಹಾಅಪರಾದ ಅದಾಗಿದ್ದರಿಂದ ಜವಾಬ್ದಾರಿಯುತವಾಗಿ
(?) ಅಂದು ಅರಣ್ಯ ನಾಶ ಮಾಡಿದ್ದರು. ಆದರೆ ಇಂದು ಅರಣ್ಯದ ಉಸಿರೇ ಹಾರಿ ಹೋಗುತ್ತಲಿದೆ.
ಅಗ್ನಿ ಆರಿಸಲು ಅವಷ್ಯವಿರುವ ಮೂಲಭೂತ ಸೌಕರ್ಯವೂ ಇಲ್ಲವಾಗಿದೆ.

ಲೇಖಕರು

Achyutkumar .

{NENapu}

nenapu

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.