Skip to main content

ಸೆಲ್ಕಾನ್ ಎ೬೭ ಸ್ಮಾರ್ಟ್ ಫೋನ್ ವಿಮರ್ಶೆ

ಬರೆದಿದ್ದುMay 26, 2013
noಅನಿಸಿಕೆ

ಮೊಬೈಲ್ ಬಳಕೆದಾರರಲ್ಲಿ ಸ್ಮಾರ್ಟಫೋನ್ ಟ್ರೆಂಡ್ ಇತ್ತೀಚೆಗೆ ಜಾಸ್ತಿ ಆಗಿದೆ. ಆರಂಭಿಕ ದರ್ಜೆಯ ಸೆಲ್ಕಾನ್ ಎ೬೭ ಸ್ಮಾರ್ಟಫೋನ್ ಅನ್ನು ನಾನಿಲ್ಲಿ ವಿಮರ್ಶೆ ಮಾಡಲಿದ್ದೇನೆ. ನೆನಪಿಡಿ ನೀವು ಐಫೋನ್, ಗ್ಯಾಲಕ್ಸಿ ಎಸ್೪ ಮಟ್ಟವನ್ನು ಇಲ್ಲಿ ಅಪೇಕ್ಷಿಸುವಂತಿಲ್ಲ. ಈ ಫೋನ್ ಏನಿದ್ದರೂ ದುಬಾರಿ ಅಥವಾ ಮಿಡಿಯಂ ಬೆಲೆಯ ಸ್ಮಾರ್ಟಫೋನ್ ಅನ್ನು ಖರೀದಿಸಲು ಆಗದಿದ್ದವರಿಗೆ. ಬೆಲೆ ಕಡಿಮೆ ಹಾಗೂ ಹಾರ್ಡವೇರ್ ಸಹ ಬೆಲೆಗೆ ತಕ್ಕದ್ದು.

ಈಗ ಇದರ ಬೆಲೆ ಸುಮಾರು ೫೬೦೦ ಇದೆ. ೧ಗಿಗಾ ಹರ್ಟ್ಝ್ ಡ್ಯುಯಲ್ ಕೋರ್ ಪ್ರಾಸೆಸರ್, ಡ್ಯುಯಲ್ ಸಿಮ್, ೩.೫ ಇಂಚಿನ ಕೆಪಾಸಿಟಿವ್ ಟಚ್ ಸ್ಕ್ರೀನ್, ಅಂಡ್ರಾಯಿಡ್ ೪.೦ (ಐಸ್ ಕ್ರೀಮ್ ಸ್ಯಾಂಡ್ ವಿಚ್) ಓಎಸ್, ೨ಮೆಗಾ ಪಿಕ್ಸೆಲ್ ಕ್ಯಾಮೆರಾ, ಮುಂದೆ ವಿಜಿಎ ಕ್ಯಾಮೆರಾ, ವೈ ಫೈ, ಮೆಮರಿ ಕಾರ್ಡ್ ಸೌಲಭ್ಯ ಇದೆ.

ಇದನ್ನು ಕೈಯಲ್ಲಿ ಹಿಡಿದಾಗ ಇದರ ಬಾಡಿ ರಬ್ಬರಿನ ಅನುಭವ ಕೊಡುತ್ತದೆ. ಮೇಲೆ ೩.೫ ಆಡಿಯೋ ಜಾಕ್, ಅನ್ ಲಾಕ್/ಆಫ್ ಬಟನ್, ಮೈಕ್ರೋ ಯುಎಸ್ ಬಿ ಇದ್ದರೆ ಹಿಂದೆ ೨ಎಂಪಿ ಕ್ಯಾಮೆರಾ ಹಾಗೂ ಲೌಡ್ ಸ್ಪಿಕರ್ ಇದೆ. ಬಲ ಭಾಗದಲ್ಲಿ ವಾಲ್ಯೂಮ್ ಬಟನ್ ಇದೆ. ಮುಂದೆ ೩೨೦*೪೮೦ ರೆಸಾಲ್ಯೂಶನ್ ಡಿಸ್ಪ್ಲೇ ಹಾಗೂ ವಿಜಿಎ ಕ್ಯಾಮೆರಾ ಇದೆ. ಮುಂದೆ ಕೆಳಗೆ ನಾಲ್ಕು ಬಟನ್ ಗಳು ಇವೆ.

ಡಿಸ್ಪ್ಲೇ ರೆಸಾಲ್ಯೂಶನ್ ಕಡಿಮೆ ಅಷ್ಟೇ ಅಲ್ಲ ಎಲ್ ಸಿಡಿ ಯನ್ನು ಓರೆಯಾಗಿ ನೋಡಿದಾಗ ಸರಿಯಾಗಿ ಕಾಣುವದಿಲ್ಲ. ಪೂರ್ತಿ ಕಪ್ಪು ಬಣ್ಣ ಇದ್ದಾಗ  ಓರೆಯಾದರೂ ಬೂದಿ ಬಣ್ಣದ ಹಾಗೆ ಕಾಣುತ್ತದೆ. ಅಮೋಲ್ಡ್ ಡಿಸ್ಪ್ಲೇ ಯ ಮೋಡಿ ಇಲ್ಲಿಲ್ಲ. ಆದರೆ ಬಳಕೆಗೆ ಏನೂ ತೊಂದರೆ ಆಗದು. ಉತ್ಕೃಷ್ಟ ಅನುಭವಕ್ಕೆ ಸ್ವಲ್ಪ ಕೊರತೆ ಇದೆ.

ಸ್ಮಾರ್ಟಫೋನನ್ನು ಆಪರೇಟ್ ಮಾಡಿದಾಗ ಎಲ್ಲಾ ಕೆಲಸಗಳು ಚಕ್ಕಂತ ಆಗುತ್ತಿದ್ದವು. ಡ್ಯುಯಲ್ ಕೋರ್ ಪ್ರಾಸೆಸರ್ ಗ್ರಾಫಿಕ್ಸ್ ಹಾಗೂ ಅಪ್ಲಿಕೇಶನ್ ಗಳನ್ನು ವೇಗವಾಗಿ ಹ್ಯಾಂಡಲ್ ಮಾಡಿತು.ಇದು ಈ ಫೋನಿನ ಪ್ಲಸ್ ಪಾಯಿಂಟ್. ಆದರೂ ಇದರ ಮೆಮರಿ ಕಡಿಮೆ ಇದೆ. ನಾನು ಹೆಚ್ಚು ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿ ಹೆಚ್ಚಿನ ಪ್ರಾಸೆಸಿಂಗ್ ಬೇಡುವಂತಹ ಗೇಮ್ಸ್ ಟ್ರೈ ಮಾಡಿಲ್ಲ.

೨ಮೆಗಾ ಪಿಕ್ಸೆಲ್ ಕ್ಯಾಮರಾ ಚಿತ್ರದ ಗುಣಮಟ್ಟ ಸಾದಾರಣ. ಮುಂದಿನ ವಿಜಿಎ ಕ್ಯಾಮರಾ ಗುಣಮಟ್ಟ ಸಹ ಚೆನ್ನಾಗಿಲ್ಲ. ಅದರಲ್ಲಿ ವಿಡಿಯೋ ಸ್ಲೋ ಮೋಶನ್ ಅಲ್ಲಿ ರೆಕಾರ್ಡ್ ಆಗುತ್ತದೆ. ಬೆಳಕು ಕಡಿಮೆ ಇದ್ದರೆ ವಿಡಿಯೋ ಸರಿ ಆಗಿ ಬರುವದಿಲ್ಲ. ಸ್ಕೈಪ್ ಮೊದಲಾದ ವಿಡಿಯೋ ಚ್ಯಾಟಿಂಗ್ ಬಳಸುವವರಾದರೆ ಈ ಫೋನ್ ನ ಸಾದಾರಣ ವಿಜಿಎ ಕ್ಯಾಮರಾ ಉತ್ತಮ ಅನುಭವ ನೀಡದು.

ಈ ಫೋನಿನಲ್ಲಿ ಜಿಪಿಎಸ್ ಸೌಲಭ್ಯ ಇಲ್ಲ. ಅಂದರೆ ನೀವು ಮ್ಯಾಪ್ ಸಪೋರ್ಟ್ ಬಯಸುತ್ತಿದ್ದರೆ ಈ ಫೋನು ನಿಮಗಲ್ಲ.

೧೫೦ಎಂಎಚ್ ಸಾಮರ್ಥ್ಯದ ಬ್ಯಾಟರಿ ಇರುವ ಈ ಮೊಬೈಲನ್ನು ಸರಿಯಾಗಿ ಬಳಸಿದರೆ ಹೆಚ್ಚೆಂದರೆ ಒಂದು ದಿನ ಬರಬಹುದು. ಅಂದರೆ ಎಲ್ಲಿಯಾದರೂ ಹೋಗುವದಿದ್ದರೆ ನೀವು ಚಾರ್ಜರ್ ಅನ್ನು ಒಯ್ಯುವದು ಒಳಿತು.

ಲೌಡ್ ಸ್ಪೀಕರ್ ಗುಣಮಟ್ಟ ಕೂಡಾ ಗ್ರೇಟ್ ಅಲ್ಲದಿದ್ದರೂ ಒಕೆ. ಇಯರ್ ಫೋನ್ ಅಲ್ಲೂ ಕೂಡಾ ಹಾಡು ಚೆನ್ನಾಗಿ ಕೇಳಿಸುತ್ತದೆ.

ಸುಮಾರು ೭ ಲಕ್ಷಕ್ಕೂ ಹೆಚ್ಚು ಅಪ್ಲಿಕೇಶನ್ ಗಳು ಅಂಡ್ರಾಯಿಡ್ ಗೆ ಇದೆ. ಎಂಗ್ರಿ ಬರ್ಡ್ಸ್ (ಸಿಟ್ಟುಗೊಂಡ ಹಕ್ಕಿಗಳು), ಫ್ರುಟ್ ನಿಂಜಾ ಇತ್ಯಾದಿ ಗೇಮ್ ಗಳು ಲಭ್ಯವಿದೆ. ಆದರೆ ಕನ್ನಡ ಯುನಿಕೋಡ್ ಫಾಂಟುಗಳು ಕೆಲಸ ಮಾಡುತ್ತಿಲ್ಲ. ಕನ್ನಡ ತಾಣ ಹಾಗೇ ನೋಡಲು ಸಾಧ್ಯವಿಲ್ಲ.ಅದಕ್ಕೆ ಬಹುಶಃ ಸೆಟ್ಟಿಂಗ್ ಇರಬಹುದು.

ಪ್ಲಸ್ ಪಾಯಿಂಟುಗಳು


  • ಕಡಿಮೆ ಬೆಲೆ

  • ದೊಡ್ಡ ಸ್ಕ್ರೀನ್

  • ಉತ್ತಮ ವೇಗ

  • ಇತ್ತೀಚಿನ ಉತ್ತಮ ಆಪರೇಟಿಂಗ್ ಸಿಸ್ಟೆಮ್

ಮೈನಸ್ ಪಾಯಿಂಟುಗಳು


  • ಕಡಿಮೆ ಗುಣಮಟ್ಟದ ಸ್ಕ್ರೀನ್ (ಕಡಿಮೆ ರಿಸಾಲ್ಯೂಶನ್ ಹಾಗೂ ಕಪ್ಪು ಬಣ್ಣ ಸ್ಕ್ರೀನ್ ಸ್ವಲ್ಪವೇ ಓರೆ ಆದಾಗ ಬೂದಿ ಬಣ್ಣದಲ್ಲಿ ಮೂಡುವದು)

  • ಕಡಿಮೆ ಗುಣಮಟ್ಟದ ಹಿಂದಿನ ಹಾಗೂ ಮುಂದಿನ ಕ್ಯಾಮೆರಾ

  • ಕಡಿಮೆ ಮೆಮರಿ

  • ಕನ್ನಡ ತಾಣಗಳನ್ನು ತೆರೆದರೆ ಕಾಣಿಸುವದಿಲ್ಲ.

  • ಜಿಪಿಎಸ್ ಸೌಲಭ್ಯ ಇಲ್ಲ

  • ಸಾದಾರಣ ಬಾಡಿ ಗುಣಮಟ್ಟ

ಒಟ್ಟಿನಲ್ಲಿ ಹೇಳುವದಾದರೆ ಅಂಡ್ರಾಯಿಡ್ ಅಲ್ಲಿ ಕಡಿಮೆ ದರದಲ್ಲಿ ಸ್ಮಾರ್ಟಫೋನು ಬಯಸುತ್ತಿದ್ದರೆ ಈ ಫೋನು ಖರೀದಿಸಬಹುದು. ಆದರೆ ನೆನಪಿಡಿ ಅಂಡ್ರಾಯಿಡ್ ಅಲ್ಲಿ ನಿಮಗೆ ನೂರಾರು ಅಲ್ಲ ಸಾವಿರಾರು ಆಯ್ಕೆಗಳಿವೆ. ಸ್ಯಾಮಸಂಗ್ ಗ್ಯಾಲಕ್ಸಿ ಸೀರಿಸ್ ಸಹ ನೋಡುವದನ್ನು ಮರೆಯದಿರಿ. ಸದ್ಯಕ್ಕೆ ಅದು ಅಂಡ್ರಾಯಿಡ್ ಫೋನುಗಳ ರಾಜ. ಹಾಗೇ ಬೇರೆ ರೀತಿಯಲ್ಲಿ ಉತ್ತಮ ಅನುಭವ ಕೊಡುವ ಐಫೋನು, ನೋಕಿಯಾ ಲುಮಿಯಾ, ಆಶಾ ಸಿರೀಸ್ ಫೋನುಗಳಿವೆ.

ಎಲ್ಲವನ್ನೂ ಒಮ್ಮೆ ನೋಡಿ ನಿಮ್ಮ ಬಜೆಟ್ ಅಲ್ಲಿ ಬರುವದನ್ನು ನಿರ್ಧರಿಸಿ. ನೀವೂ ಸ್ಮಾರ್ಟಫೋನನ್ನು ಬಳಸುತ್ತಿದ್ದೀರಾ? ನಿಮ್ಮ ಅನುಭವ ತಿಳಿಸಿ.

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.