Skip to main content

ಮೌನಿ ಎಂದರೆ ಯಾರು...?

ಇಂದ vishwanudi
ಬರೆದಿದ್ದುFebruary 7, 2013
5ಅನಿಸಿಕೆಗಳು

ಮೌನಿ ಎಂದರೆ ಯಾರು...?

ಉಸಿರಿನ ಬಿರುಗಾಳಿಯ ಶಬ್ದವನು

ಹೃದಯದ ಬಡಿತದ ಕ್ರೂರ ಭಯವನು.....

ನರ ನಾಡಿಗಳಲಿ ಉಕ್ಕಿ ಹರಿಯುತಿರುವ

ರಕುತದ ರಭಸದ ಚೀತ್ಕಾರವನು

ಸಹಿಸಿಯೂ ಮಾತನಾಡದವನೆ.......?

 

ಅವಮಾನದ ನೆನಪುಗಳ

ಚಿತ್ರ ವಿಚಿತ್ರ ಕಕ೯ಶ ನಾದಗಳನು....

ವಿರಹದ ನೋವುಗಳ

ಆತ್ಮ ಹಿಂಸೆಯ ವಿಕಾರ ತರಂಗಗಳನು

ಸಹಿಸಿಯೂ ಮುಗುಳ್ನಗುವವನೆ.......?

 

ಇತ್ತ ನಗಲಾರದ, ಅತ್ತ ಅಳಲಾರದ

ಇತ್ತ ಸಾಯಲಾರದೆ.... ಅತ್ತ ಬಾಳಲಾರದೆ.....

ತನ್ನೊಡನೆ ತಾನೆ ಹೋರಾಡಿ...

ತನ್ನಿಂದ ತಾನೆ ಸೋಲುವವನೆ.....?

 

ಜಗತ್ತಿಗೆ ತನ್ನ ತಾನೆ ತೆರೆದುಕೊೞದೆ...

ತನ್ನೊಳಗಿನ ಜಗತ್ತಿಗೆ ತನ್ನನ್ನೆ ತೋರಿಸಲಾಗದೆ....

ಜನರ ಸಂತಸಗಳಿಗೆ ಅಸೂಹೆಗೊಂಡು...

ಜನರಿಗೆ ಸಂತಸ ನೀಡಲಾರದವನೆ.....?

ನಿಜ ಹೇಳಿ

          ಮೌನಿ ಎಂದರೆ ಯಾರು........?

ಲೇಖಕರು

vishwanudi

ಮೂಲತಃ ಗಂಡು ಮೆಟ್ಟಿದ ನಾಡು ಬೆಳಗಾವಿ ಜಿಲ್ಲೆಯ ಹುಕ್ಕೆರಿಯವನು, ಸಧ್ಯ ಐಟಿ ಮೆತ್ತಿದ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರಲ್ಲಿ ಅಭಿಯಂತರನಾಗಿ ಕೆಲಸ ಮಾಡುತ್ತಿದ್ದೇನೆ, ಚಿಕ್ಕಂದಿನಿಂದ ಮಾತೆ ಮಾತೃಭೂಮಿ ಮಾತೃಭಾಷೆಯ ಮೇಲೆ ಅತಿಯಾದ ಅಭಿಮಾನ, ಗೌರವ. ನಾನು ಬೇರೆಯವರಿಗೋಸ್ಕರ ಬರೆಯುವುದಿಲ್ಲ , ನಾನು ನನಗಾಗಿ ಬರೆಯುತ್ತೇನೆ. ನನ್ನಲ್ಲಿ ಉದ್ಭವಿಸುವ ಪ್ರಶ್ನೆಗಳು ಕಾಗದದ ಮೇಲೆ ಚಿತ್ರಿಸುತ್ತೇನೆ. "ಮೌನ" ನನ್ನನ್ನು ಅತಿಯಾಗಿ ಕಾಡಿದ, ಕಾಡುತ್ತಿರುವ ಪ್ರಶ್ನೆ.....
ನಾನು ಬಹಳಷ್ಟು ಓದುತ್ತೇನೆ. ಭೈರಪ್ಪ, ಗಣೇಶಯ್ಯ , ವಸುಧೇಂದ್ರ , ತೇಜಸ್ವಿ ಕಾದಂಬರಿಗಳು ; ಪ್ರತಾಪ್ ಸಿಂಹ, ವಿಶ್ವೇಶ್ವರ ಭಟ್ , ಚಕ್ರವರ್ತಿ ಸೂಲಿಬೇಲೆಯವರ ಅಂಕಣಗಳನ್ನು ಓದುವುದು ಖುಷಿ ಕೊಡುತ್ತದೆ. ಛಾಯಾಚಿತ್ರಗಳನ್ನು ಸೆರೆ ಹಿಡಿಯುವುದು ನನ್ನ ಮತ್ತೊಂದು ಹವ್ಯಾಸ. ಆದರೆ ಇನ್ನು ಪಳಗಬೇಕಿದೆ.

ಅನಿಸಿಕೆಗಳು

Shivanand Rangapur ಗುರು, 02/21/2013 - 18:40

ನನಗೆ ಇದು ತುಂಬಾ ಹಿಡಿಸಿದೆ..............

vishwanudi ಗುರು, 02/21/2013 - 19:34

ಧನ್ಯವಾದಗಳು.......ಃ)

 

ಹರಿಪ್ರಸಾದ್ ಮಂಗಳ, 04/09/2013 - 21:03

ಕವನ ತುಂಬಾ ಚೆನ್ನಾಗಿದೆ

vishwanudi ಶುಕ್ರ, 04/12/2013 - 15:02

ಧನ್ಯವಾದಗಳು....ಃ)

praveen b m ಮಂಗಳ, 07/02/2013 - 21:59

k Modalu nenna kopana kadime madiko............

ಮೊದಲು ನೀನ್ನ್ ಕೊಪಾನಾ ಕದೀಮೆ ಮಾದೀಕೊ......

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.