ನನ್ನೂರು ಹೊಕ್ರಾಣಿಯಲ್ಲಿ ಭರ್ಜರಿ ಶಿಖಾರಿ : ಕಾಡು ಹಂದಿ v /s ನಾಡ ಮಂದಿ!
ಬಹುತೇಕ ಹಳ್ಳಿಗಳಲ್ಲಿ - ಊರ ಹತ್ತಿರದಲ್ಲಿ ಕಾಡು ಪ್ರದೇಶ ಇರುವ ಪ್ರದೇಶಗಳಲ್ಲಿ ಈ ಶಿಖಾರಿ -ಭೇಟೆ -ಮಾಮೂಲಿ ವಿಷ್ಯ- ಅದು ವಾರದ ಕೊನೆಯಲ್ಲಿ -ಹಬ್ಬ (ನಮ್ಮ ಕಡೆ ಬಣ್ಣದ ಹಬ್ಬ-ಹೋಳಿ ದಿನ)ಗಳ ಸಂದರ್ಭದಲ್ಲಿ ಸಾಮಾನ್ಯ.
ನಾವ್ ಚಿಕ್ಕವರಾಗಿದ್ದಾಗ ನಮ್ಮ ಊರಲ್ಲಿ (ಹೊಕ್ರಾಣಿ- ಆಗ ಸುಮಾರು ಒಂದು ೫೦೦-೬೦೦ ಜನ ವಸತಿ ಇದ್ದ ಹಳ್ಳಿ) ನಮ್ಮ ಸುತ್ತ ಮುತ್ತಲಿನ ಜನ- ನಮ್ಮ ಸಂಬಂಧಿಗಳು ಸೇರಿ ಉದ್ದುದ್ದನೆಯ ಕೋಲು-ಕತ್ತಿ -ಇತ್ಯಾದಿ ಆಯುಧ ಹಿಡಿದು ಬುತ್ತಿ ಕಟ್ಟಿಕೊಂಡು ಸೆರೆ(ಆಗ ಹೆಂಡ)ಯ ಕುಡಿಕೆ ಸಮೇತ ಊರ ಸುತ್ತ ಮುತ್ತಲಿನ ಕಾಂಗ್ರೆಸ್ಸು ಜಾಲಿ ಗಿಡ ಬೆಳೆದ ಕಾಡು ರೀತಿಯ ಪ್ರದೇಶಗಳಲ್ಲಿ ಅವರವರ ಬಲಿಷ್ಠ ನಾಟಿ ನಾಯಿಗಳ ಸಮೇತ ಜೋರಾಗಿ ಅರಚುತ್ತ ಕಿರುಚುತ್ತ ನುಗ್ಗಿ ಕೈಗೆ ಸಿಕ್ಕ ಕಣ್ಣಿಗೆ ಕಾಣಿಸಿದ ಮೊಲ-ಕಾಡು ಹಂದಿ-ಜಿಂಕೆಗಳನ್ನ ಶಿಖಾರಿ ಮಾಡಿ ಯುದ್ಧ ಗೆದ್ದ ಹುಮ್ಮಸ್ಸಿನಲ್ಲಿ ಹೆಗಲ ಆಮೇಲೆ ಹಾಕಿಕೊಂಡು ಬಂದು ಒಂದು ಕಡೆ ಹಾಕಿ-ಎಲ್ಲ ಚರ್ಮ ಸುಲಿದು- ಬೆಂಕಿಗೆ ಸುಟ್ಟು ಅದನ್ನು ಎಲ್ಲರಿಗೂ ಹಂಚಿ ಸೆರೆ ಕುಡಿಯುತ್ತ ತಿನ್ನುತ್ತಿದ್ದುದು ನಾ ನೋಡಿರುವೆ..
ಆದರೆ ಈ ಜಿಂಕೆ-ಮೊಲ-ಕಾಡು ಹಂದಿ ಮಾಂಸದ ಬಗ್ಗೆ ಬಹುಶಃ ಅವರು ಅದನ್ನು ಹಾಗೆ ಬಯಲಲಿ ನಮ್ಮೆದುರು ಕೊಯ್ದು ಚರ್ಮ ಸುಲಿದು ನೇತು ಹಾಕುವಾಗ ಸುರಿಯುತ್ತಿದ್ದ ರಕ್ತ ಕಾರಣವಾಗಿ ಜಿಗುಪ್ಸೆ ಅಸಹ್ಯ ಭಾವನೆ ಬಂದು- ಅವುಗಳನ್ನು ಯಾವತ್ತೂ ತಿನ್ನಲಿಲ್ಲ...!!
ಕೆಲವು ಸಾರಿ ಈ ನಾಯಿಗಳು ತಾವೇ ಬೇಟೆಯನ್ನು ಹಿಡಿದು ಈ ಜನ ಹೋಗುವ ಮೊದಲೇ ಅವುಗಳನ್ನು ಸ್ವಾಹಾ ಮಾಡಿ ಏನೂ ಅರಿಯದ ಮಳ್ಲರ ಹಾಗೆ ಇರುತ್ತಿದ್ದುದು ಉಂಟು-!! ಆದರೆ ಅಲ್ಲಲ್ಲಿ ಸುರಿದ ರಕ್ತ- ನಾಯಿಗಳ ಬಾಯಿಗೆ ಅಂಟುವ ರಕ್ತದ ಕಾರಣ ಈ ತರಹದ ನಾಯಿಗಳನ್ನು ಬಿಟ್ಟು ವಿಶ್ವಾಸಾರ್ಹ ನಾಯಿಗಳನ್ನು ಕರೆದೊಯ್ದು -ಆ ನಾಯಿಗಳು ಮೊದಲು ಆ ಪ್ರಾಣಿಗಳ ಮೇಲೆ ಎರಗಿ ಗಾಯಗೊಳಿಸಿ ಗಲಿಬಿಲಿಗೊಳಿಸಿ ಎತ್ತೆತ್ತಲೋ ಧಿಗಿಲಾಗಿ ಧಿಕ್ಕೆಟ್ಟು ಓಡುವ ಹಾಗೆ - ಹಾಗೆ ನೇರವಾಗಿ ಈ ಶಿಖಾರಿಗಳ ಕೈಗೆ -ಕೋಲಿಗೆ -ಕತ್ತಿಗೆ ಸಿಗುವ ಹಾಗೆ ಮಾಡುತ್ತಿದ್ದವು..

ಒಮ್ಮೆ ನಮ್ಮೂರ ಹಳ್ಳಿಯಲ್ಲಿ ಅದೊಮ್ಮೆ ಊರಿನ ಜನ ಗುಂಪಾಗಿ ಸೇರಿ ಬೇಜಾನ್ ಗುಸುಗುಸು ಪಿಸುಪಿಸು ಮಾತಾಡುತ್ತಿದ್ದುದು ಕೇಳಿಸಿತು-ಏನಾರ ಗಲಾಟೆಯೇ -ಗದ್ದಲವೇ? ಅರ್ಥವಾಗದೆ ನೋಡುವಾಗ ಅದನ್ನು ಕೇಳಿಸಿಕೊಂಡು ಬಂದಿದ್ದ ಪಕ್ಕದ ಮನೆಯವರು ಹೇಳಿದ್ದು- ತುಂಬಿ ನಿಂತ ಬೆಳೆಗಳನ್ನು ಮಧ್ಯ ರಾತ್ರಿ ಆಗಮಿಸಿ ತಿಂದು ತುಳಿದಾಡಿ ಪೋಲು ಮಾಡಿ ಹೋಗುತ್ತಿದ್ದ ಕಾಡು ಹಂದಿಗಳು-ಈಗೀಗ ಸಂಜೆ-ಹಗಲಲ್ಲೇ ಏನೂ ಯಾರ ಭಯವಿಲ್ಲದೆ ಬೆಳೆ ತಿನ್ನುತ್ತ ಪೋಲು ಮಾಡುತ್ತಿವೆ ಅವುಗಳನ್ನು ನಿಯಂತ್ರಿಸಲೇ ಬೇಕು-ಅದಕಾಗಿ ವಾರ ಪೂರ್ತಿ ಬೇಟೆ ಆಡುವ ಎಂದು ಅಲ್ಲಿ ಸೇರಿದ್ದ ಜನ ಮಾತಾಡಿ -ಅದರಂತೆ ಒಂದು ದಿನ ಗೊತ್ತು ಮಾಡಿ ಅದಕ್ಕೆ ಮೊದಲು ಎಲ್ಲಾ ವಸಿ ತುಕ್ಕು ಹಿಡಿದಿದ್ದ ಆಯುಧಗಳನ್ನು ಸಾಣೆಗೆ ಹಿಡಿದು ನಾಳೆಯ ಭೇಟೆಗೆ ತಯಾರಿ ಮಾಡಿ ಆಗಿತ್ತು..
ಅವತ್ತು ಊರಲ್ಲಿ ಹಬ್ಬದ ಸಂಭ್ರಮ-ನೋಡುವವರಿಗೆ ಇವರು ಹೊರಟಿದ್ದು ಭೇಟೆಗೋ?
ಸಮರ ಭೂಮಿಗೋ? ಎಂಬ ಭಾವ..!!
ಈ ಶಿಖಾರಿ ಮಾಡುವವರನ್ನು ವೀರ ಧೀರರನ್ನು ಯುದ್ಧ ಭೂಮಿಗಳಿಗೆ ಪೂಜೆ ಮಾಡಿ ಆರತಿ ಎತ್ತಿ -ತಿಲಕ ಇಟ್ಟು ಕಳಿಸುವುದು ನೋಡಿದಾಗ ನನ್ನೂ ಮುಂದೊಮ್ಮೆ ಆ ಭಾಗ್ಯಕ್ಕೆ -ಆ ಸತ್ಕಾರಕ್ಕೆ ಒಳಗಾಗಬೇಕು ಎನ್ನಿಸಿದ್ದು ಸುಳ್ಳಲ್ಲ..!
ಸರಿ ಎಲ್ಲರೂ ತಮ್ಮ ತಮ್ ಆಯುಧ- ತಿಂಡಿ ತೀರ್ಥ-ಬೀಡಿ ತಂಬಾಕು ಎಲೆ ಪೊಟ್ಟಣಗಳನ್ನು ಎತ್ತಿಕೊಂಡು ತಮ್ಮ ತಮ್ಮ ಬಲಿಷ್ಠ ನಂಬಿಗಸ್ಥ ನಾಯಿಗಳ ಸಮೇತ ಭೇಟೆಗೆ ಹೊರಟರು-ಅವರು ಊರಿನ ಸಮೀಪದ ಹಳ್ಳ(ನಮ್ಮ ಹಳ್ಳಿ ಪರಿಭಾಷೆಯಲ್ಲಿ ನೀರು ಹರಿವ ತೊರೆ-ಜಾಗ)ದ ವರೆಗೆ ಬಿಡಲು ಹೋದ ಬಂಧು ಬಳಗ -ವಯಸ್ಸಾದವರು ಹೇಳಿದ ಮಾತು- ಹುಷಾರು ಕಣಪ್ಪ -ಆ ಹಂದಿಗಳು ಬಹಳೇ ಚಾಲಾಕು-ಸದ್ದಿಲ್ಲದೇ ಧುತ್ತನೆ ಪೊದೆಗಳಿಂದ ಎರಗಿ ಕೊಂಬಿಂದ ತಿವಿದು ಸಾಯಿಸುವವು..ಇಲ್ಲದ ಧಿಮಾಕು ತೋರ ಹೋಗ್ಬೇಡಿ ಎನ್ನುವರು...!!
ಆ ಹಿಂದೆ ನಡೆದ ಈ ತರಹದ ಕಹಿ ಘಟನೆಗಳನ್ನು ನೆನಪಿಸುವರು.
ಹೀಗೆ ಎಲ್ಲರೂ ಬೀಳ್ಕೊಟ್ಟು-ಕೈ ಬೀಸಿ ಅವರು ತರುವ ಹಂದಿ-ಮೊಲ ಜಿಂಕೆ ಮಾಂಸಕ್ಕಾಗಿ -ಶಿಖಾರಿ ಮಾಡುವಾಗ ನಡೆದ-ಸ್ವಾರಸ್ಯಕರ ಪ್ರಸಂಗಗಳನ್ನು ಕೇಳುತ್ತ ಖುಷಿ ಪಡಲು ನಾವೆಲ್ಲಾ ಕಾಯುವಾಗ ಮಾರನೆ ದಿನ ಬೆಳಗ್ಗೆ ಬಂತು ಒಂದು ಕೆಟ್ಟ ಸುದ್ಧಿ....!!
ಅದು: ಹುಮಸ್ಸಿನಲ್ಲಿ -ತರಾತುರಿಯಿಂದ ಭೇಟೆಯ ರೀತಿ ನೀತಿ-ಅರಿಯದೆ ಅಹಂಕಾರದಲ್ಲಿ ಉದ್ದನೆಯ ಕತ್ತಿ ಎತ್ತಿ ಆ ಕಾಡು ಹಂದಿಗೆ ತಿವಿಯಲು ಹೋದ ಹಳ್ಳಿಯ ಯುವಕನೊಬ್ಬನ ತೊಡೆಗೆ ಹಂದಿ ತಿವಿದ ರಭಸಕ್ಕೆ ಅವನ ಮಾಸ ಖಂಡಗಳು ಆಚೆ ಬಂದು ವಿಪರೀತ ರಕ್ತ ಸ್ರಾವ ಆಗಿ ಆಸ್ಪತ್ರೆಗೆ ಸೇರಿಸಲು ಕರೆದೊಯ್ದರು...
ಹಲವು ದಿನಗಳ ಸುಶ್ರೂಷೆ -ಕೆಲ ಆಪರೇಶನ್ ನಂತರ ಅವನು ಚೇತರಿಸ್ಕೊಂಡ ..
ಈ ಘಟನೆ ಕಾರಣ ತಮ್ಮ ಆ ಶಿಖಾರಿಯನ್ನು ಕೊಂಚ ತಡೆ ಹಿಡಿದಿದ್ದ ಜನ ಆಮೇಲೆ ಹಳ್ಳಿಯ ಸುತ್ತ ಮುತ್ತಲಿನ ಗಿಡ ಗಂಟಿ ಬೆಳೆದಿದ್ದ ಪ್ರದೇಶದಲ್ಲಿ ದಂಡಯಾತ್ರೆ -ವಿಜಯ ಯಾತ್ರೆ ನಡೆಸಿ ಹಲವು ಮೊಲ-ಜಿಂಕೆ-ಕಾಡು ಹಂದಿಗಳನ್ನು ಸಂಹಾರ ಮಾಡಿ- ಅವುಗಳನ್ನು ತಮ್ಮ ಹೆಗಲ ಮೇಲೆ ಹಾಕಿ ಕೊಂಡು ಬರುವಾಗ ಅದು ನೋಡಲು ಹೋಗಿದ್ದ ನಮಗೆ ಇವರೆಲ್ಲ ಯಾವುದೋ ಆದಿ ಮಾನವರು-ಕಾಡು ಮನುಷ್ಯರ ತರಹ ಕಾಣಿಸಿದ್ದು ಸುಳ್ಳಲ್ಲ....!!
ಅವರವರು ಸಾಕಿದ ನಾಟಿ ನಾಯಿಗಳು ಆ ಶಿಖಾರಿಯಲ್ಲಿ ಮಾಡಿದ ತೋರಿದ ಸಾಹಸ ಜಾಣ್ಮೆಯನ್ನು ಅತಿ ರಂಜಿತವಾಗಿ ಹೇಳುತಿದ್ದವರು ಅದನ್ನು ಕೇಳಿದವರು ತಾವ್ ಆ ಭೇಟೆಗೆ ಶಿಖಾರಿಗೆ ಹೋಗಲು ಆಗದ್ದಕ್ಕೆ ಪೇಚಾಡುವ ಹಾಗೆ ಮಾಡುತಿದ್ದರು...

ಈ ತರಹದ ಬಹುತೇಕ ಶಿಖಾರಿಗಳಲ್ಲಿ ಭಾಗವಹಿಸಿ ಒಂಥರಾ ಲೀಡರ್ ಬಿರುದು -ಗೌರವ ಸಂಪಾದಿಸಿದ್ದು ನಮ್ ಓಣಿಯ ನಮ್ಮೆಲ್ಲರ ಪ್ರೀತಿಯ ನಾಯಿ-ರಾಮ..
ಬಲು ಚೂಟಿ -ಗಟ್ಟಿಗ -ಯಾರನ್ನೂ ಕಚ್ಚಿ -ಹಿಂದೆ ಅಟ್ಟಿಸಿಕೊಂಡು ಹೋಗಿ ತೊಂದರೆ ಕೊಡದವನು-ಚಿಕ್ಕ ಮಕ್ಕಳಿಗೆ ಹಿರಿ ಕಿರಿಯರಿಗೆ ಅಚ್ಚು ಮೆಚ್ಚಿನ ಶ್ವಾನ -ಅದರ ಕಿವಿ ಹಿಡಿದು ತಿರುವಿ ಎಳೆದರೂ -ಹೊಡೆದರೂ -ತಳ್ಳಿದರೂ -ಅದರ ಮೇಲೆಯೇ ಕುಳಿತರೂ ಸುಮ್ಮನಿರುವ ಜೀವಿ-ಹೀಗಾಗಿ ಎಲ್ಲರಿಗೂ ಅಚ್ಚು ಮೆಚ್ಚು-ಆ ಶ್ವಾನವನ್ನು ಭೇಟೆಗೆ ಅದೊಮ್ಮೆ ಕರೆದೊಯ್ದಾಗ ಅದು ತೋರಿದ ಜಾಣ್ಮೆ-ಸಾಹಸ ಅದಕ್ಕೆ ಈ ಭೇಟೆ ಶಿಖಾರಿಯಲ್ಲಿ ವಿಶೇಷ ಸ್ಥಾನ ಮಾನ ಕೊಟ್ಟಿತು...
ಆ ಸಂದರ್ಭ:
ಈ ರಾಮ ಹೆಸರಿನ ಶ್ವಾನ ಶಿಖಾರಿಯಲಿ ಭಾಗವಹಿಸಿ ಜನರ ಮುಂದೆ ಮುಂದೆ ಹೋಗುವಾಗ ಸದ್ದಿಲದೆ ಮರೆಯಾಗುತ್ತಿದ್ದ ಕಾಡು ಹಂದಿ ಒಂದನ್ನು ನೋಡಿ ಅದರ ಮೇಲೆ ಎರಗಿ ಆ ಕಾಡು ಹಂದಿ ಬೆನ್ನ ಮೇಲೆ ಕುಳಿತು ಕಾಡು ಹಂದಿಯ ತಲೆಯ ಹಿಂದಿನ ಭಾಗಕ್ಕೆ ತನ್ ಬಲಿಷ್ಠ ಹಲ್ಲುಗಳಿಂದ ಗಟ್ಟಿಯಾಗಿ ಕಚ್ಚಿ ಕುಳಿತಿತ್ತು-ಆ ಹಂದಿ ಅಲ್ಲಲಿ ಓಡಿ ಮರಗಳಿಗೆ ತಿವಿದು-ಮಣ್ಣಲಿ ಒದ್ದಾಡಿ -ಎಗರಿ ಹಾರಿ ಏನೆಲ್ಲಾ ಸಾಹಸ ಮಾಡಿದರೂ ಈ ರಾಮನ ಬಿಗಿಪಟ್ಟು ಸಡಿಲ ಆಗದೆ- ನಿತ್ರಾಣವಾಗಿ ಒಂದು ಕಡೆ ನಿಂತಾಗ -ಈ ಜನರೆಲ್ಲಾ ಆ ಕಾಡು ಹಂದಿಗೆ ಸುತ್ತುವರೆದು ತಮ್ಮ ಈಟಿ-ಭಲ್ಲೆ ಬರ್ಜಿ-ಕತ್ತಿ ಕೋಲುಗಳಿಂದ ಘಾಸಿಗೊಳಿಸಿ-ಅದನ್ನು ಸಾಯಿಸಿ ಆ ದೊಡ್ಡ ಹಂದಿಯೊಂದೆ ಸಾಕು ಎಂದು ಮರಳಿ ಊರಿಗೆ ಬಂದು ಈ ರಾಮ ಹೆಸರಿನ ಶ್ವಾನದ ಪರಾಕ್ರಮ , ಧೈರ್ಯ, ಸಾಹಸದ ಬಗ್ಗೆ ಹೇಳಿ-ಅದಕ್ಕೆಭರ್ಜರಿ ಹಂದಿ ಮಾಂಸ ಹಾಕಿದ್ದರು-
ಎಂದಿನಂತೆ ಅದರದು ಅದೇ ಸ್ಥಿತ ಪ್ರಜ್ನತೆ -ಆದರೆ ಅಂದಿನಿಂದ ಅದನ್ನು ನಾವು ಹಿಂಸಿಸುವುದು ಬಿಟ್ಟು-ಅದಕ್ಕೆ ಒಳ್ಳೆಯ ಸ್ನೇಹಿತರಾದೆವು..ವಿಶೇಷ ಗೌರವ ಕೊಟ್ಟೆವು-ಅದೊಮ್ಮೆ ಆ ನಾಯಿಯನ್ನು ಅದರ ಜನ ಪ್ರಿಯತೆ ಸಹಿಸದೆ ವಿರೋಧಿ ಒಬ್ಬ ನಿಷ್ಕಾರುಣಿ ಆಗಿ ಅನ್ನದಲ್ಲಿ ವಿಷ ಇಕ್ಕಿ ಸಾಯಿಸಿದ..ಹೀಗೆ ಭೇಟೆ-ಶಿಖಾರಿಯ ಒಂದು ಭಾಗವಾಗಿ ವಿಶೇಷ ಗೌರವ ಆದ್ರ ಅಭಿಮಾನ ಗಳಿಸಿದ್ದ ನಮ್ ಪ್ರೀತಿಯ ಶ್ವಾನ ಅಕಾಲ ಮೃತ್ಯುವಿಗೆ ಈಡಾಯ್ತು - ಈಗಲೂ ಆ ತರಹದ ಒಂದು ಶ್ವಾನ ನಮಗೆ ಸಿಕ್ಕಿಲ್ಲ- ಸಿಗಲಿದೆ ಎಂಬ ವಿಶ್ವಾಸವಿದೆ..
ಹಂದಿ ಭೇಟೆಯ/ ಹಂದಿ ಕುರಿತ ಕೆಲ ಸ್ವಾರಸ್ಯಕರ ಪ್ರಸಂಗಗಳು:
-
ಶಿಖಾರಿ ಬೇಟೆ ಆಡಿ -ನಾಲಗೆ ರುಚಿ ಸಹಿಸಲು ಆಗದೆ -ಅಲ್ಲಿಯೇ ಬೆಂಕಿ ಹಾಕಿ ಖಾರ ಉಪ್ಪು ಹಚ್ಚಿ ಕಾಯಿಸಿ ಬೇಯಿಸಿ ತಿಂದು ಬರುವವರೂ ಇದ್ದರು...
-
ಹಾಗೆ ಎಲ್ಲರೂ ಸಾಮೂಹಿಕವಾಗಿ ಒಗ್ಗಟ್ಟಿನ ಪ್ರಯತ್ನ ಮಾಡಿ ಸಂಹಾರ ಮಾಡಿದ ಪ್ರಾಣಿಗಳನ್ನು ಒಟ್ಟಿಗೆ ಹಾಕಿ ಪಾಲು ಮಾಡಿ ಹಂಚುತ್ತಿದ್ದುದು ವಾಡಿಕೆ-ಆದರೆ ಕೆಲವೊಮ್ಮೆ ಕೆಲ ಬಕಾಸುರರು ತಮ್ಮ ನಾಲಗೆ ರುಚಿ ಸಹಿಸಿಕೊಳ್ಳಲು ಆಗದೆ -ಕೆಲ ಪ್ರಾಣಿಗಳನ್ನು ಗುಟ್ಟಾಗಿ ಬೇರೆಯವರಿಗೆ (ಗುಂಪಿನಲ್ಲಿನ ಇತರ ಸದಸ್ಯರಿಗೆ) ಗೊತ್ತಾಗದ ಹಾಗೆ ಬೇಯಿಸಿ ಕಾಯಿಸಿ ತಿಂದು ತೇಗುತ್ತಿದ್ದುದೂ ಉಂಟು...
-
ಹಾಗೆಯೇ ಆ ಪ್ರಾಣಿಗಳಲ್ಲಿ ಕೆಲವನ್ನು ಅಲ್ಲಲಿ ಬಚ್ಚಿಟ್ಟು ಮಾರನೆ ದಿನ ಇಲ್ಲವೇ ಅದೇ ರಾತ್ರಿ ಪರ ಊರಿಗ್ ಹೊಯ್ದು ಕಳತನದಲಿ ಅರ್ಧ ಮರ್ಧ್ಹ ರೇಟಿಗೆ ಮಾರಿಕೊಂಡವರು-ಆ ವಿಷ್ಯ ಗೊತ್ತಾಗಿ ಊರಲಿ ರಂಪಾಟ ಆಗಿ ಹೊಡೆದಾಟಗಳೂ ಆಗಿದ್ದು ಅಡಕೆಗೆ ಹೋದ ಮಾನ ಗಾದೆ- ಹಂದಿಗೆ ಹೋದ ಮಾನ ಆಗಿ ಬದಲಾಗಿದ್ದು ಉಂಟು.......
-
ಆಮೇಲೆ ಈ ಕಾಡು ಹಂದಿಗಳು ನಿಜವಾಗಿಯೂ ಹೇಗೆ ಇರುವುವು ಎಂದು ಅವುಗಳನ್ನು ಕಣ್ಣಾರೆ ಖುದ್ದಾಗಿ ಅವು ಬದುಕಿರುವಾಗಲೇ ನೋಡಬೇಕು ಎನ್ನುವ ನನ್ನ ಆಶೆ ಇವತ್ತಿಗೂ ನೆರವೇರಲಿಲ್ಲ...!!
-
ಆಗಾಗ ಬಯಲಿಗೆ ಹೋದಾಗ (ಹೆಸರಿಗೆ ಬಯಲು-ಆದರೆ ಕಾಂಗ್ರೆಸ್ಸ್ ಜಾಲಿ ಬೆಳೆದ ಕಾಡು ರೀತಿ ಪ್ರದೇಶ)ಒಂದಕ್ಕೆ ಎರಡಕ್ಕೆ ಹೋದಾಗ ಸರ್ರ ಪರ ಟಪ್ ಟುಪ್ ಸದ್ದಿಗೂ ಕಾಡು ಹಂದಿಯೇ ಬಂದಿರಬೇಕು ಎಂದು ಮೈ ಕೈ ರೋಮಗಳು ನೆಟ್ಟಗಾಗಿ ಎದ್ದೋ ಬಿದ್ದೋ ಎಂದು ಓಡಿ ಬಂದಿದ್ದು ನೆನಪಿದೆ..!!
-
ಕೆಲವೊಮ್ಮೆ ಕಾಡು ಹಂದಿಗಳು ಊರ ಸಮೀಪದ ಬೆಳೆಗಳಿಗೆ ಆಕ್ರಮಿಸಿ ಮೆಲ್ಲಗೆ ಊರಲ್ಲಿ ಓಣಿಗಳಲ್ಲಿ ಸಾಗಿ ಅಲ್ಲಿ ಮಲಗಿದ್ದವರ ಮೇಲೆ ಎರಗಿ ಕೊಮ್ಬಿಂದ ತಿವಿದು ಗಾಯ ಗೊಳಿಸಿ ಪರಾರಿ ಆಗಿದ್ದು ಉಂಟು..
ನಮ್ಮೂರಲ್ಲಿ ಹಿರಿಯರು ಹೇಳುತ್ತಿದ್ದುದು-ಈ ಕಾಡು ಹಂದಿಗಳು ಸಾಮಾನ್ಯವಲ್ಲ-ಅಪಾರ ಶಕ್ತಿ ಯುಕ್ತಿ ಅವುಗಳಿಗೆ ಇರುವುದು-ಅವುಗಳಿಗೆ ಗಾಯ ಆದರೂ ತಪ್ಪಿಸಿಕೊಂಡು ಓಡುವವು -ತಮ್ಮ ಗಾಯ ಆದ ಪ್ರದೇಶವನ್ನು ಕೆಸರಿನಲ್ಲಿ ಒದ್ದಾಡಿ ಅವುಗಳಿಗೆ ಮಣ್ಣು ಹತ್ತಿ ಅದೇ ಔಷಧಿಯಾಗಿ ಆ ಗಾಯ ಮಾಯವಾಗುವುದು ಮಾಗುವುದು ಎಂದು....ಇದು ಎಷ್ಟರ ಮಟ್ಟಿಗೆ ನಿಜವೋ ಅರಿಯೆ-ಆದರೆ ಮಣ್ಣಲ್ಲಿ ಔಷಧೀಯ ಗುಣಗಳು ಇವೆ ಎಂದು ಮುಂದೆ ಬಂತು...
ವಿಷ್ಣು ವರಾಹ ವೇಷ ಧರಿಸಿ ರಕ್ಕಸನನ್ನು ಕೊಂದದ್ದು -ಅದನ್ನು ಹೇಳುವಾಗ ಕಾಡು ಹಂದಿಯನ್ನು ನೆನಪಿಸಿಕೊಂಡು ಭಯ ಪಡುತ್ತಿದ್ದೆವು...!!
ಮೊದಲಿಗೆ ರೆನೋಸ್ ಎಂದು ಕರೆವ ಘೇಂಡಾ ಮೃಗವನ್ನೇ ನಾವೆಲ್ಲಾ ಕಾಡು ಹಂದಿ ಎಂದು ತಿಳಿದದ್ದು--ಆಮೇಲೆ ಭೇಟೆ ಶಿಖಾರಿ ಮಾಡಿ ತಂದ ಆ ಕಾಡು ಹಂದಿಗಳನ್ನು ನೋಡಿದಾಗ -ನಾವ್ ಇಮ್ಯಾಜೆನ್ ಮಾಡಿದ್ದೂ ಈ ಯಕಶ್ಚಿತ್ ಪ್ರಾಣಿಯ ಎನ್ನಿಸಿತು...!!
ಕಾಡು ಹಂದಿಯನ್ನ ಕಣ್ಣಾರೆ ನೋಡಲು (ಅದು ಬದುಕಿದ್ದಾಗ )ಆಗದೆ ಇದ್ದ ನನಗೆ ಆ ಹಂದಿ ಹೇಗಿರುತ್ತೆ ಅಂತ ತೋರಿಸಿದ್ದು -
ಯೋಗರಾಜ್ ಭಟ್ಟರು....!!
ಅವರು ಯಾರು ಅಂದಿರಾ?
ಅವರೇ ಕನ್ನಡ ನಿರ್ದೇಶಕ -ಮುಂಗಾರು ಮಳೆ ಸುರಿಸಿ - ಗಾಳಿ ಪಟ ಹಾರಿಸಿದವರು-ಗಾಳಿ ಪಟ ಸಿನೆಮಾದಲ್ಲಿ ಅವರಿ ತೋರಿಸಿದ ಆ ಗ್ರಾಪಿಕ್ಸ್ ಹಂದಿಯನ್ನು ನೈಜ ಹಂದಿ ಎಂದು ಭಾವಿಸಿದ್ದೆ (ಪರಮಾತ್ಮದಲ್ಲಿ ಗ್ರಾಪಿಕ್ಸ್ ಮೀನು-ಹಿಮಾಲಯ..!!)..
ಅದೆಲ್ಲ ಗ್ರಾಪಿಕ್ಸ್ ಎಂದು ಅರಿವಾದದ್ದು ತೀರ ಇತ್ತೀಚಿಗೆ!!
ಈಗಲೂ ನೈಜ-ಸಜೀವ ಕಾಡು ಹಂದಿಯನ್ನು ಕಣ್ಣಾರೆ ನೋಡುವ ಆಶೆ-
ಆದರೆ ಜೂನಲ್ಲಿ ಅಲ್ಲ.... ಬಯಲಲ್ಲಿ..! ಅದು ಯಾವಾಗ್ ಈಡೇರುವುದೋ ...!!
ಸಾಲುಗಳು
- 1119 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ