ಹಾಸ್ಯ santa banta
ಸಂತಾ ಮತ್ತು ಬಂತಾ ಇಬ್ಬರೂ ಜಿಗರಿ ಗೆಳೆಯರು. ಸಿವಿಲ್ ಇಂಜಿನಿಯರಿಂಗ್ ಕಲಿತು ಇಬ್ಬರೂ ಒಂದೇ ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಒಂದೇ ಕಟ್ಟಡದ ನಿರ್ಮಾಣದಲ್ಲಿ ಇಬ್ಬರೂ ನಿರತರಾಗಿದ್ದರು.
ಒಂದು ದಿನ, ಸಂತಾ ಇದ್ದಕ್ಕಿದ್ದಂತೆ ಕಿರುಚಿಕೊಳ್ಳಲು ಆರಂಭಿಸಿದ. ಅದೇ ಸಮಯದಲ್ಲಿ ಸುಸ್ಸು ಮಾಡಲು ಹೋಗಿದ್ದ ಬಂತಾ, ಸಂತಾನ ಬೊಂಬಡಾ ಕೇಳಿ ಓಡೋಡಿ ಬಂದ. ಸಂತಾನ ಕಿವಿಯಲ್ಲಿ ರಕ್ತಬರುತ್ತಿತ್ತು. ಹತ್ತಿರಕ್ಕೆ ಹೋಗಿ ನೋಡಿದಾಗ ಒಂದು ಕಿವಿ ಕತ್ತರಿಸಿಯೇ ಹೋಗಿತ್ತು.
ಬಂತಾ : ಬಾಪ್ ರೆ ಬಾಪ್, ಏನಾಯ್ತು ಸಂತಾ? ಕಿವಿ ಎಲ್ಲಿ ಕಾಣಿಸ್ತಿಲ್ಲ?
ಸಂತಾ : ಟೇಬಲ್ ಮೇಲೆ ಬಗ್ಗಿ ಕಟ್ಟಡದ ಬ್ಲೂ ಪ್ರಿಂಟ್ ನೋಡ್ತಿದ್ದೆ. ಸಡನ್ನಾಗಿ ಗೋಡೆಯ ಮೇಲಿಂದ ಇಟ್ಟಿಗೆ ಬಿದ್ದು ಕಿವಿ ಕತ್ತರಿಸಿಬಿಟ್ಟಿತು.
ಬಂತಾ : ಹೆದರಬೇಡ ಸಂತಾ, ಇಲ್ಲೋ ಎಲ್ಲೋ ಬಿದ್ದಿರಬೇಕು. ಹುಡುಕ್ತೀನಿ ತಾಳು. ಹಾ ಸಿಕ್ತು ನೋಡು, ಇದೇ ನಿನ್ನ ಕಿವಿ. ಪರ್ಫೆಕ್ಟ್ ಮ್ಯಾಚಿಂಗ್. ನಡಿ ಡಾಕ್ಟರ್ ಬಳಿ ಹೋಗೋಣ. ಜೋಡಿಸಿ ಹೊಲಿಸಿದರಾಯಿತು.
ಬಂತಾ ಕೊಟ್ಟ ಕಿವಿಯನ್ನು ಸಂತಾ ಸಿಟ್ಟಿನಿಂದ ದೂರ ಬಿಸಾಕುತ್ತಾನೆ. ಮತ್ತೆ ಹುಡುಕಾಡಲು ಪ್ರಾರಂಭಿಸುತ್ತಾನೆ.
ಬಂತಾ : ಎಷ್ಟು ಕಷ್ಟಪಟ್ಟು ಸಿಕ್ಕಿದ್ದ ಕಿವಿಯನ್ನು ಯಾಕೋ ಎಸೆದೆ ಸಂತಾ?
ಸಂತಾ : ಅದು ನನ್ನ ಕಿವಿ ಅಲ್ಲವೇ ಅಲ್ಲ. ಯಾಕಂದ್ರೆ ನಾನು ಕಿವಿಯ ಹಿಂದೆ ಪೆನ್ಸಿಲ್ ಇಟ್ಟಿದ್ದೆ!
ಸಾಲುಗಳು
- 597 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ