Skip to main content

ಬದಲಾವಣೆ

ಇಂದ Narasimha Rao
ಬರೆದಿದ್ದುOctober 5, 2012
1ಅನಿಸಿಕೆ

 

ಪ್ರತಿ ದಿನ ನಾನು ಓಡಾಡುತ್ತಿದ್ದ ದಾರಿಯಲ್ಲಿ ಸುಮಾರು 30 ವರ್ಷ ಹರೆಯದ ಹುಡುಗನೂಬ್ಬ ಓಂದು ಗೋಣಿಚೀಲ ಹಾಸಿ ಚಪ್ಪಲಿ ಹೂಲಿಯುವ ಮತ್ತು ಶೂ ಪಾಲಿಶ್ ಮಾಡುವ ಸಾಮಾನುಗಳನ್ನು ಜೋಡಿಸಿಕೂಂಡು ರಸ್ತೆ ಬದಿಯಲ್ಲಿ ಪ್ರತ್ಯಕ್ಷನಾಗಿದ್ದ. ಅವನನ್ನು ನೋಡಿದರೆ ಇನ್ನೂ ಮದುವೆಯಾಗಿಲ್ಲ ಅನ್ನಿಸುತ್ತಿತ್ತು. ಇಷ್ಟು ವಯಸ್ಸಾದ ಮೇಲೆಯು ಕೆಲಸವಿಲ್ಲದೆ ಇರುವನಲ್ಲ, ಇವನು ಮದುವೆಗೆ ನಾಲಾಯಕ್ಕಾದ ಹುಡುಗ ಅಂದುಕೂಂಡೆ. ಹಾಗೇಯೇ ದಾರಿಯಲ್ಲಿ ನೆಡೆದು ಹೋಗುವಾಗ ಅವನ ದಿನದ ಸಂಪಾದನೆ ಎಷ್ಟಾಗಬಹುದು ಎಂದು ಲೆಕ್ಕ ಹಾಕತೂಡಗಿದೆ. ನನ್ನ ಲೆಕ್ಕ ಮುಗಿದಾವ ಅವನು ಬೇರೆ ಕೆಲಸ ಮಾಡುವುದೇ ಒಳಿತಿತ್ತು ಅನ್ನಿಸಿತು, ಈ ಹರಯದ ವಯಸ್ಸಿನಲ್ಲಿ ಇಂತಹ ಸೋಮಾರಿಗಳು ಮಾಡುವ ಕೆಲಸಕ್ಕೆ ಏಕೆ ತೂಡಗಿದನೋ ಎಂದುಕೂಂಡೆ.  ಬಹುಷé ಇಂತಹವರಿಗೆಲ್ಲ ಸರಿಯಾದ ದಾರಿ ತೋರುವವರು ಇರುವುದಿಲ್ಲ ಎಂದು ಸುಮ್ಮನಾದೆ.


ಇತ್ತೀಚೆಗೆ ನಾವುಗಳೆಲ್ಲ ಹೆಚ್ಚು ಬ್ರಾಂಡೆಡ್ ಚಪ್ಪಲಿ / ಶೂ ಹಾಕುವುದನ್ನು ಇಷ್ಟಪಡುತ್ತೇವೆ. ಅದರ ಗುಣಮಟ್ಟಕ್ಕಿಂತಲೂ ಅದರ ಮೇಲಿನ ಹೆಸರೇ ಮುಖ ಬೆಲೆಯನ್ನು ಹೆಚ್ಚಿಸುತ್ತದೆ. ಅವೆಲ್ಲವು ಹೆಚ್ಚು ದಿನ ಬಾಳಿಕೆ ಬರುತ್ತದೆ, ಹಾಗಾಗಿ ನಾವು ಚಪ್ಪಲಿ ಹೂಲಿಯುವವರ ಬಳಿ ಹೋಗುವುದು ಕಡಿಮೆ. ನಾವು ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಆಗಾಗ ಹರಿದ ಚಪ್ಪಲಿಗಳನ್ನು ಊರಿನ ಬಸ್ ನಿಲ್ದಾಣಕ್ಕೆ ಹೋಗಿ ಹೂಲಿಸಿಕೂಂಡು ಬರುವುದೇ ಒಂದು ಕೆಲಸವಾಗಿತ್ತು. ಇತ್ತೀಚಿನ ದಿನಗಳಲ್ಲಿ ಅದು ಬೆಂಗಳೂರಿನಂತಹ ನಗರದಲ್ಲಿ ಹರಿದ ಚಪ್ಪಲಿಯನ್ನು ಬಿಸಾಕಿ ಹೂಸ ಚಪ್ಪಲಿ ಕೂಳ್ಳುವವರೇ ಹೆಚ್ಚು. ನಾವುಗಳು ಇಂತಹವರನ್ನು ಮನದಲ್ಲಿಟ್ಟುಕೂಂಡಾದರು ಇನ್ನು ಮುಂದೆ "ಬ್ರಾಂಡೆಡ್" ಬಿಟ್ಟು "ಲೋಕಲ್" ಆಗಬೇಕು ಅನಿಸದಿರದು.


ಒಂದು ತಿಂಗಳು ಕಳೆವುದರಲ್ಲಿ ಅವನ ಮುಂದೆ ಒಂದಷ್ಟು ಜೊತೆ ಚಪ್ಪಲಿಗಳು, ಶೂ ಲೇಸ್, ಸೋಲ್ ಮಂತಾದವುಗಳು ಸೇರಿದ್ದವು. ಪರವಾಗಿಲ್ಲ ಬ್ಯುಸಿನೆಸ್! ಚೆನ್ನಾಗಿ ನೆಡೆಯುತ್ತಿರಬಹುದು ಎಂದೆನಿಸಿ ಸಂತೋಷವಾಯಿತು. ಆದರೆ ನಾನು ಓಡಾಡುವ ಸಂಧರ್ಭದಲ್ಲೆಲ್ಲ ಅವನು ಸುಮ್ಮನೆ ದಾರಿಯಲ್ಲಿ ಹೋಗುವರ ಕಾಲು ನೋಡುತ್ತ ಕುಳಿತಿರುತ್ತಿದ್ದ. ಮತ್ತéಷ್ಟು ದಿನಗಳು ಕಳೆದ ಬಳಿಕ ಅವನ ಪಕ್ಕದಲ್ಲಿ ಒಂದು ಪಾನಿಪುರಿ ಅಂಗಡಿ ಬಂದು ನಿಂತ್ತಿತ್ತು. ಪಾನಿಪುರಿ ತಿನ್ನುವವರ ಸಂಖ್ಯೆಯೇನು ಬೆಂಗಳೂರಿನಲ್ಲಿ ಕಡಿಮೆ ಇಲ್ಲ, ಯಾವುದೇ ಮೂಲೆಯಲ್ಲಿ ಗಾಡಿ ನಿಲ್ಲಿಸಿದ್ದರು, ಬೆಳಿಗ್ಗೆ ಅಲ್ಲಿ ಹೋಗಿ ನಿಲ್ಲಲು ಅಸಹ್ಯ ಪಡುವ ಜನರು ರಾತ್ರಿ ಹೋಗಿ ತಿಂದು ಬರುತ್ತಾರೆ.


ಒಂದು ವಾರ ಕಳೆಯುವುದೂರಳಗೆ ಅವನ ಸ್ನೇಹವನ್ನು ಮಾಡಿ ಬಿಡುವಿನ ಸಮಯದಲ್ಲಿ ಪಾನಿಪುರಿ ಹಾಕುವುದನ್ನು ಕಲಿತ. ಪರವಾಗಿಲ್ಲ ದಿನಕ್ಕೆ ಅಲ್ಪವಾದರೂ ಸಂಪಾದನೆ ಖಚಿತ ಅನ್ನಿಸಿತು. ಮತ್ತೂಂದಷ್ಟು ದಿನ ಕಳೆಯಲು ಬೆಳಗಿನ ಸಮಯದಲ್ಲಿ ಪಕ್ಕದ ರಸ್ತೆಯ ಅಂಗಡಿಯೂಂದರಿಂದ ಟೈರ್ ತಂದು ಅದರ ಮೇಲಿನ ಗೆರೆಯನ್ನು ಮತ್ತೆ ಗೀಚ ತೂಡಗಿದ್ದ. ಅವನಲ್ಲಿರುವ ಕೆಲಸ ಮಾಡುವ ಹಂಬಲ ಕಂಡು ಸಂತೋಷವಾಯಿತು. ಇಂದಿನಿಂದ ಇವನಿಗೆ ಹುಡುಗಿಯನ್ನು ನೋಡಲು ಆರಂಭಿಸಬಹುದು ಅನ್ನಿಸಿತು, ಎಷ್ಟೂ ಹೆಣ್ಣು ಮಕ್ಕಳಿಗೆ ಹಣ, ಆಸ್ತಿ ಇರುವ ಗಂಡನಿದ್ದರು ಅವರಿಗೆ ಕೆಲಸ ಮಾಡುವ ಇಚ್ಛೆ ಇರುವುದಿಲ್ಲ. ಇವನಿಗೆ ಕೆಲಸ ಮಾಡಬೇಕೆಂಬ ಹಂಬಲವಿರುವುದು ಒಳ್ಳೆಯ ಲಕ್ಷಣ ಅಲ್ಲವೇ?


"ಕೂತು ಉಣ್ಣುವವನಿಗೆ ಕುಡಿಕೆ ಹೂನ್ನು ಸಾಲದು" ಎಂಬ ಗಾದೆಯಂತೆ ಇದ್ದ ಹಣ, ಆಸ್ತಿಯೆಲ್ಲ ಕರಗಿ ನೀರಾಗಲು ಹೆಚ್ಚು ದಿನಗಳು ಬೇಕಾಗುವುದಿಲ್ಲ. "ಮನಸ್ಸಿದ್ದರೆ ಮಾರ್ಗ" ಎಂಬ ಗಾದೆಯನ್ನು ನಂಬಿ ಸಂಪಾದನೆ ಮಾಡುವ ವಯಸ್ಸಿನಲ್ಲಿ ಕೆಲಸ ಮಾಡಿ ಮನೆಯವರಿಗೆ ಸಹಾಯ ಮಾಡುವ ಮನಸ್ಸಿದ್ದರೆ ಸಾಕು ಜೀವನದಲ್ಲಿ ಮುಂದೆ ಬರಲು. ಈ ಬದಲಾವಣೆ ಕಂಡು ಮನಸ್ಸಿಗೆ ಸಂತೋಷವಾಯಿತು. "ಬದಲಾವಣೆ ಜಗದ ನಿಯಮ" ಎಂಬುದು ಎಲ್ಲರಿಗೂ ತಿಳಿದ ವಿಷಯ ಆದರೆ ಅದು "ಒಳ್ಳೆಯ ಬದಲಾವಣೆ" ಆಗಬೇಕೇಂಬುದೆ ನನ್ನ ಆಶಯ..

 

ನ. ರಾವ್

ಬೆಸಗರಹಳ್ಳಿ

 

ಲೇಖಕರು

Narasimha Rao

ಅಂತಹ ವಿಶೇಷವೇನು ಇಲ್ಲ

ಅನಿಸಿಕೆಗಳು

ಸುಮನ ಕುರುಡಿ ಶುಕ್ರ, 10/05/2012 - 19:18

ಬರಹ ತುಂಬಾ ಚೆನ್ನಾಗಿ ಬಂದಿದೆ. ಕೆಲಸದಲ್ಲಿ ಮೇಲು ಅಥವ ಕೀಳು ಎಂಬುದಿಲ್ಲ. ಕೆಲಸ ಮಾಡುವುದು ಉತ್ತಮ. ಅವನಲ್ಲಿ ಹೊಸ ಕೆಲಸ ಕಲಿತು ಅದರಿಂದ ಸಂಪಾದನೆ ಮಾಡ ಬಹುದು ಎಂಬ ಹುಮ್ಮಸ್ಸು ಶ್ಲಾಘನೀಯ. ಇಂದಿನ ಜನರಲ್ಲಿ ಅಂದರೆ ನಾವು ಓದಿದವರು, ಆ ಹುಡುಗನನ್ನು ನೋಡಿ ಕಲಿಯಬೇಕಾದ್ದು ಬಹಳ ಇದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.