ಕಾಲವೇ .. ನೀನವನೆನ್ನ ಬಾಳಿಗೆ ತಂದೆ
ಮೊದಲ ನೋಟದಿ ಅವನ ಮನದಿ ತುಂಬಿಸಿಕೊಂಡೆ
ನನ್ನ ಹೃದಯಕೆ ಅವನ ಹೊಳೆವ ಕಂಗಳ ಧ್ಯಾನ
ಮಾತಾಗಲೇ ಇಲ್ಲ ನನ್ನ ಒಳಗಿನ ಮೌನ
ಅವನಿದ್ದ ಒಂದು ಕ್ಷಣ ನಾನೆಷ್ಟೇ ಬೇಡಿದರೂ
ಕಾಲ ನಿಲ್ಲಲೂ ಇಲ್ಲ, ಹಿಂದೆ ತಿರುಗಲೂ ಇಲ್ಲ
ತಿರುಗುತಿರು ಕಾಲವೇ ನಿನ್ನ ಪಾಡಿಗೆ ಮುಂದೆ
ಕಸಿಯಲಾರೆ ಅವನ ನನ್ನ ನೆನಪುಗಳಿಂದ
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ