ಶ್ರೀಕೃಷ್ಣ ನಗುತಿದ್ದ
ಮಾಸಗಳೇ ಉರುಳಿದರೂ ನೀ ಮಾತ್ರ ಬರಲಿಲ್ಲ
ಪುನಃ ನೋಡುವ ಭಾಗ್ಯ ಕಂಗಳಿಗೆ ಸಿಗಲಿಲ್ಲ
ನಿನ್ನ ಮುರಳೀ ನಾದ ಕೇಳಿದಂತಾಗಿರಲು
ಧಾವಿಸಿದರೆ ಹೊರಗೆ, ಶೂನ್ಯ ಯಮುನಾತೀರ
ಅಳುತಿಹಳು ಯಮುನೆಯೂ, ಮರಳಿ ಬಾರೆಯಾ ಕೃಷ್ಣಾ
ಪ್ರಿಯನ ದನಿ ಕೇಳಿಸಿತು, ನಾನಿರುವೆ ಬಳಿಯಲ್ಲೇ
ಇಣುಕು ನೀನೊಮ್ಮೆ ನಿನ್ನೆದೆಯ ಗುಡಿಯಲ್ಲೇ
ಮುಸುಕಿದ ಮಾಯೆ ಸರಿದು ಒಳಗಣ್ಣ ತೆರೆದಾಗ
ನನ್ನೊಳಗೇ ಶ್ರೀಕೃಷ್ಣ ಮುಗುಳು ನಗೆ ನಗುತಿದ್ದ
ಸಾಲುಗಳು
- 246 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ