Skip to main content

ನನ್ನ ಪ್ರಪಂಚ, ನನ್ನಿಷ್ಟ - ಆತನ ಕಥೆ

ಬರೆದಿದ್ದುMay 2, 2012
5ಅನಿಸಿಕೆಗಳು

ಅವನೊಬ್ಬ ಇದ್ದ... ಹೊರಲೋಕಕ್ಕೆ ಆತ ಸಾಧಾರಣ ವ್ಯಕ್ತಿ ಅಥವಾ ಕೆಲ ಜನಕ್ಕೆ ಆತ ವಿಶಿಷ್ಟವಾದ ವ್ಯಕ್ತಿ.  ಆದರೆ ತನ್ನೊಳಗೆಆತ ಒಂದು ಪ್ರಪಂಚವನ್ನೇ ನಿರ್ಮಿಸಿಕೊಂಡಿದ್ದ.  ಆತನ ಪ್ರಪಂಚದಲ್ಲಿ ಆತನ ಮಾತೇ ಕೊನೆ.. ಆತ ಹೇಳಿದ್ದೇ ಸರಿ..ಆತನ ಮಾತನ್ನು ಇಷ್ಟ ಪಡದವರು, ಆತನ ಅಭಿಪ್ರಾಯಗಳಿಗೆ ಬೆಲೆ ನೀಡದವರಿಗೆ ಆತನ ಜೀವನದಲ್ಲಿ ಯಾವುದೇ ಸ್ಥಾನವಿಲ್ಲ.. ಗಳಿಗೆಗೊಮ್ಮೆ ತನ್ನ ಪ್ರಪಂಚದಲ್ಲಿ ತನ್ನ ಭಾವನೆಗಳನ್ನ, ನಿರ್ಧಾರಗಳನ್ನ ಅದು ಬೇರೆಯವ್ರ ಜೀವನದೊಂದಿಗೆತಳಕು ಹಾಕಿಕೊಂಡಿದ್ದರೂ ಸರಿಯೇ!, ಬದಲಾಯಿಸುತ್ತಾ, ತನ್ನದೇ ಅಹಂಗೆ ತಲೆ ಬಾಗುತ್ತಾ ಬದುಕುತ್ತಿದ್ದ ಅವ.ಹಾಗೊಮ್ಮೆ ತನ್ನದೇ ತಿಕ್ಕಲು ನಿರ್ಧಾರಗಳಿಂದ ಇತರರಿಗೆ ಅಥವಾ ತನಗೇ ನೋವಾದರೂ, ಮನಸ್ಸಿಗೆ ಘಾಸಿಯಾದರೂಆತನ ಮೀನಿನಂತಹ ಮನ ಚಡಪಡಿಸಿ ಕೊರಗುತ್ತಿತ್ತು.. ತನ್ನ ಜೀವನದಲ್ಲಿ ತನಗೇನು ಬೇಕು, ಏನು ಬೇಡ, ಯಾರೊಡನೆತಾನು ಸುಖವಾಗಿರಬಲ್ಲೆ, ಯಾರು ತನ್ನ ಆಪ್ತರು ಇಂತಹ ವಿಷ್ಯಗಳಲ್ಲೂ ಆತನ ಗೊಂದಲ, ಚಡಪಡಿಕೆಗೆಕೊನೆಮೊದಲಿರಲಿಲ್ಲ.. ಇತರರೊಂದಿಗೆ ಮಾತನಾಡುವುದಕ್ಕಿಂತಲೂ ತನ್ನದೇ ಮನದೊಡನೆ ಮಾತಾಡುತ್ತಿದ್ದ ನಮ್ಮ ಈ ಕಥಾನಾಯಕ! ಹಾಗೆಯೇ ಅದೇಕೋ ಕೊಂಚ ಕೋಪ ಹೆಚ್ಚೇ ಬರುತ್ತಿತ್ತು.ತನಗೆ ತಾನೇ ಪೆಟ್ಟು ಕಮ್ಮಿ (ದಕ್ಷಿಣ ಕನ್ನಡದ ಕಡೆ ಹೀಗೆಂದ್ರೆ ಹುಚ್ಚು/ಮಾನಸಿಕ ಅಸ್ವಸ್ಥತೆ ಎಂಬ ಅರ್ಥವಿದೆ)ಎಂದುಕೊಳ್ಳುತ್ತಿದ್ದ ಆತ.  ಆದ್ರೆ ಕೆಟ್ಟ ಮನುಷ್ಯನಂತೂ ಆಗಿರಲಿಲ್ಲ.  ಬೇರೆಯವರಿಗೆ ಸಹಾಯ ಹಸ್ತಚಾಚುವುದರಲ್ಲಿ, ಅವರ ಕಷ್ಟಗಳಿಗೆ ದನಿಯಾಗುವುದರಲ್ಲಿ ನಿಸ್ಸೀಮ.  ಯಾವುದೇ ಗುಂಪನ್ನು ಮುನ್ನಡೆಸುವಲ್ಲಿ ಎತ್ತಿದ ಕೈ.ಸಭೆ ಸಮಾರಂಭಗಳಲ್ಲಂತೂ ಇವನದೇ ಓಡಾಟ, ಸುಧಾರಿಕೆ.  ಹೀಗಿದ್ದೂ ಆತನಿಗೆ ತಾನು ಒಂಟಿ ಅನಿಸ್ತಾ ಇತ್ತುಆದ್ರೆ ಏನು ಮಾಡ್ತೀರಾ ಅವನ ಮನ ಅದನ್ನೊಪ್ಪಿಕೊಳ್ಳಲು ಹಿಂದೇಟು ಹಾಕುತ್ತಿತ್ತು ಹಾಗೂ "ಒಂಟಿತನವೇ ತನಗೆಸುಖ ಕೊಡುತ್ತಿದೆ, ತಾನೀ ಒಂಟಿತನವನ್ನ ಯಾರ ಆಸರೆಯೂ ಇಲ್ಲದೆ ನಿಭಾಯಿಸಬಲ್ಲೆ" ಎಂಬ ಹುಚ್ಚುತನ.. ನಾನು/ತಾನು ಎಂಬುದು ಆತನಿಗೆ ಬಹು ಪ್ರಿಯವಾದ ಶಬ್ದ... !!!! ಎಲ್ಲಾದಕ್ಕೂ ತನ್ನನ್ನು ಮಾತ್ರ ನಂಬುವ, ಅವಲಂಬಿಸುವ, ತನ್ನದೇಲೋಕದಲ್ಲಿದ್ದ ಆ ಮಹರಾಯ... ಇಂತಿಪ್ಪ ನಮ್ಮೀ ಕಥಾನಾಯಕ ಒಂದು ದಿನ ಪ್ರೀತಿಯೆಂಬ ನವಿರಾದ ಭಾವನೆಯ ಕಡೆ ವಾಲತೊಡಗಿದ..ಅಥವಾತಾನೂ ಪ್ರೀತಿಸುತ್ತಿದ್ದೇನೆ ಅಂತ ಭ್ರಮಿಸತೊಡಗಿದ....!!!?????                                                                                     (ಮುಂದುವರಿಯುವುದು)

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

venkatb83 ಧ, 05/02/2012 - 19:39

  ಜ್ಯೋತಿ ಅವ್ರೆ ಮೊದಲ ಕಥಾ ಸರಣಿ..ಹಿಡ್ಸಿತುಹಾಗ್ಯೆ ಮುಂದಿನ ಭಾಗಗಳ ಕುರಿತು ಕುತೂಹಲಿಗನಾಗಿರುವೆ....!! ಯಾಕೋ ಇದು ವಸಿ ನನ್ನ ಮನೋ ಸ್ಥಿತಿಯನ್ನು ಬಿಂಬಿಸಿದೆ ಅನ್ನಿಸಿತು!..ಅಥವಾ ಓದಿದ ಕೆಲವರಿಗೆ ಆ ಭಾವನೆ ಬರಲೂಬಹುದು...:()))
ಶುಭವಾಗಲಿ...

Jyothi Subrahmanya ಗುರು, 05/03/2012 - 15:31

ಧನ್ಯವಾದಗಳು ಮೆಚ್ಚುಗೆಗೆ ವೆಂಕಟ್.. ಇದು ಕಥೆ ಅಷ್ಟೆ.. ಃ)  ಓದುಗ ಯಾವಾಗ ಓದುವವಿಷಯದಲ್ಲಿ ತಲ್ಲೀನನಾಗುತ್ತಾನೋ ಆಗ ಅದು ತನ್ನ ಜೀವನದ ಕಥೆ/ಸಂಬಂಧಿಸಿದ ಘಟನೆಅಂತ ಅನ್ನಿಸೋದು ಸಹಜ.. ಃ) ನಿಮ್ಮ ಹಾರೈಕೆಗೆ ಧನ್ಯವಾದಗಳು.. ಜ್ಯೋತಿ.

shubha shetty (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 05/03/2012 - 13:21

ಹಾಯ್ ಜ್ಯೋತಿ,ಕತೆಯ ಮೊದಲ ಕಂತು ಚೆನ್ನಾಗಿದೆ.ನಮ್ಮ ಕಥಾನಾಯಕನ ಮುಂದಿನ  ( ಪ್ರೇಮ )ಕಥೆ ತಿಳಿದು ಕೊಳ್ಳಲು ಕಾತರಳಾಗಿದ್ದೇನೆ...

Jyothi Subrahmanya ಗುರು, 05/03/2012 - 15:28

ಧನ್ಯವಾದಗಳು ಶುಭಾ...

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 05/05/2012 - 16:58

ಹೌದು ವೆ೦ಕಟ್ ರವರೆ....ಮು೦ದಿನ ಭಾಗ ಯಾವಾಗ????

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.