ಇನ್ನೆರಡು ಹೊಸ ವಿಸ್ಮಯ ತಾಣಗಳು!! - ವಿಸ್ಮಯ ಢಂಗುರ ಹಾಗೂ ಕೀಲಿಮಣೆ
ನಮಸ್ಕಾರ ಆತ್ಮೀಯ ವಿಸ್ಮಯ ಪ್ರಜೆಗಳೇ ಹಾಗೂ ಅನಾಮಿಕ ಓದುಗರೇ,
ಇಂದು ಅಂತರ್ಜಾಲದಲ್ಲಿ ಕನ್ನಡ ಬಳಸಲು ವಿಸ್ಮಯ ನಗರಿಯ ಜೊತೆಗೆ ಇನ್ನೆರಡು ಹೊಸ ಕಾರಣಗಳಿವೆ. ಇನ್ನೆರಡು ಕನ್ನಡ ತಾಣಗಳನ್ನು ಸಹೃದಯಿಗಳಾದ ನಿಮಗೆ ಅರ್ಪಿಸುತ್ತಿದ್ದೇನೆ.
ವಿಸ್ಮಯ ನಗರಿಗೆ ನೀಡಿದಂತೆ ಈ ತಾಣಗಳಿಗೂ ಬೆಂಬಲ ಸಿಕ್ಕೀತು ಎಂಬುದು ನನ್ನ ನಂಬಿಕೆ.
ವಿಸ್ಮಯ ಕೀಲಿಮಣೆ - ಕನ್ನಡ ಟೈಪಿಂಗ್ ತಾಣ - www.vismayakeelimane.com
[img_assist|nid=22042|title=ವಿಸ್ಮಯ ಕೀಲಿಮಣೆ|desc=|link=none|align=center|width=640|height=272]
ವಿಸ್ಮಯ ಢಂಗುರ - ಕನ್ನಡ ಕ್ಲಾಸಿಫೈಡ್ ತಾಣ - www.vismayadangura.com
[img_assist|nid=22043|title=ವಿಸ್ಮಯ ಢಂಗುರ|desc=|link=none|align=center|width=640|height=338]
ವಿಸ್ಮಯ ಢಂಗುರ ಕನ್ನಡ ಕ್ಲಾಸಿಫೈಡ್ ತಾಣವಾಗಿದೆ. ಇಲ್ಲಿ ನೀವು ವಸ್ತು, ಜಾಗ, ಮನೆ ಮಾರಾಟ / ಬಾಡಿಗೆ ಬಗ್ಗೆ ಜಾಹಿರಾತು ನೀಡಬಹುದು. ಅಷ್ಟೇ ಅಲ್ಲ ನೀವು ಯಾವುದಾದರೂ ವ್ಯಾಪಾರ ನಡೆಸುತ್ತಿದ್ದರೆ ನಿಮ್ಮ ಜಾಹೀರಾತು ಸಹ ನೀಡಬಹುದು. ಇನ್ಯಾಕೆ ತಡ ಇಂದೇ ಜಾಹೀರಾತು ನೀಡಿ. ಕೆಲವು ಜಾಹೀರಾತು ಉಚಿತವಾಗಿದ್ದು ಕೆಲವಕ್ಕೆ ಚಿಕ್ಕ ಫೀ ಇದೆ. ಆದರೆ ಆ ಫೀ ನಿಮಗೆ ಹೊರೆ ಆಗದು ಎಂಬುದು ನನ್ನ ಅನಿಸಿಕೆ.
ಈ ತಾಣಗಳು ಇನ್ನೂ ಆರಂಭಿಕ ಹಂತದಲ್ಲಿವೆ. ಇದು ನಿಮ್ಮ ಗಮನದಲ್ಲಿರಲಿ. ತಪ್ಪುಗಳಿರಬಹುದು. ತಿಳಿಸಿದರೆ ಸರಿಪಡಿಸುತ್ತೇನೆ. ಇಂದೇ ಈ ಎರಡು ತಾಣಗಳಿಗೆ ಭೇಟಿ ಕೊಡಿ.
ನಿಮ್ಮ ಅನಿಸಿಕೆ, ಸಲಹೆ ಗಳಿಗೆ ಹಾರ್ಧಿಕ ಸ್ವಾಗತ.
ಸಾಲುಗಳು
- Add new comment
- 2243 views
ಅನಿಸಿಕೆಗಳು
ತುಂಬಾ ಸಂತೋಷ ಆಯಿತು ಈ ಸುದ್ದಿ
ತುಂಬಾ ಸಂತೋಷ ಆಯಿತು ಈ ಸುದ್ದಿ ಕೇಳಿ ರಾಜೇಶ್ ಅವರೇ.ನಿಮ್ಮ ದಿನನಿತ್ಯದ ಜಂಜಾಟದ ಹೊರತಾಗಿ ವಿಸ್ಮಯನಗರಿಗೆ ನೀವು ಸಲ್ಲಿಸುತ್ತಿರುವ ಸೇವೆ ಅಭಿನಂದನಾರ್ಹ.ವಿಸ್ಮಯ ಕೀಲಿಮಣೆ - ಕನ್ನಡ ಟೈಪಿಂಗ್ ತಾಣ,ವಿಸ್ಮಯ ಢಂಗುರ - ಕನ್ನಡ ಕ್ಲಾಸಿಫೈಡ್ ತಾಣಗಳನ್ನ ನೀವು ಆರಂಭಿಸಿ.ನಾವು ಅರ್ಪಿಸಿಕೊಳ್ಳುತ್ತೇವೆ.ಆ ನಂಬಿಕೆ ನಮ್ಮ ಮೇಲೆ ಇರಲಿ.
ಆತ್ಮೀಯ,
ಪ್ರವೀಣ್.ಎಸ್.ಕುಲಕರ್ಣಿ
ಧನ್ಯವಾದಗಳು ಪ್ರವೀಣ್ ಅವರೇ, ಈ
ಧನ್ಯವಾದಗಳು ಪ್ರವೀಣ್ ಅವರೇ, ಈ ಎರಡು ತಾಣಗಳು ಈಗ ಬಳಕೆಗೆ ಲಭ್ಯವಿದೆ. ಈ ಮುಂದಿನ ಕೊಂಡಿಗಳಿಗೆ ಭೇಟಿ ಕೊಡಿ.www.vismayakeelimane.comwww.vismayadangura.comನಿಮ್ಮ ಸಲಹೆಗೆ ಸ್ವಾಗತ.
ವಿಸ್ಮಯ ನಗರಿಯ ಅಭಿವೃದ್ಧಿಯ
ವಿಸ್ಮಯ ನಗರಿಯ ಅಭಿವೃದ್ಧಿಯ ಹಾದಿಯಲ್ಲಿ ಮತ್ತೊಂದು ಮೈಲಿಗಲ್ಲನ್ನು ದಾಟಿದ್ದಕ್ಕೆ ತಮಗೆ ಹಾರ್ಧಿಕ ಶುಭಾಷಯಗಳು...! ಈ ಕ್ಲಾಸಿಫೈಡ್ ತಾಣದಲ್ಲಿ ಪ್ರಕಟಿಸುವ ಜಾಹಿರಾತುಗಳಿಗೆ ಸೂಕ್ತ ಶುಲ್ಕ ವಿದಿಸುತ್ತೀರೆಂದು ನಂಬಿದ್ದೇನೆ. ಹಾಗಿದ್ದಲ್ಲಿ ತಮ್ಮ ಈ ತಾಣದ ಖರ್ಚು ವೆಚ್ಚದ ಸ್ವಲ್ಪ ಭಾಗವಾದರೂ ಭರಿಸಿದಂತಾಗಬಹುದಲ್ಲವೇ...? ಹಾಗಿಲ್ಲದೇ ಉಚಿತ ಸೇವೆಯಾದರೆ ಬಹುಷಃ ಮುಂದಿನ ದಿನಗಳಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ನಿಮ್ಮ ಜೇಬಿಗೇ ಕತ್ತರಿ ಬೀಳಬಹುದು. ಹಾಗಾಗದಿರಲೆಂದು ಆಶಿಸುವೆ. ನಿಮ್ಮ ಈ ತಾಣದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸಂಪೂರ್ಣ ಸಹಕಾರ ಇದ್ದೇ ಇರುತ್ತದೆ. ಶುಭವಾಗಲಿ. -ತ್ರಿನೇತ್ರ
ಧನ್ಯವಾದಗಳು ಶಿವ
ಧನ್ಯವಾದಗಳು ಶಿವ ಅವರೇ,
ಕ್ಲಾಸಿಫೈಡ್ ತಾಣದಲ್ಲಿ ಬಿಸಿನೆಸ್ ಗೆ ಅಥವಾ ವ್ಯಾಪಾರಿ ಸೇವೆಗೆ ಸಂಬಂಧಪಟ್ಟ ಜಾಹೀರಾತುಗಳಿಗೆ ಮಾತ್ರ ವಾರ್ಷಿಕ ಶುಲ್ಕವಿದೆ. ಇತರ ವೈಯಕ್ತಿಕ ಜಾಹೀರಾತುಗಳು ಉಚಿತ.
ನನಗೂ ಹೊರೆಯಾಗಬಾರದು ಹಾಗೂ ಜನರಿಗೂ ಕಷ್ಟವಾಗಬಾರದು. :)
ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು.
ರಾಜೇಶ್
ರಾಜೇಶ್ ಅವ್ರೆ ವಿಸ್ಮಯನಗರಿಯಲ್ಲಿ ಓದುಗರಿಗೆ ಕನ್ನಡ ಕೀಲಿ ಮಣೆ ಮತ್ತು ಜಾಹೀರಾತುದಾರರಿಗೆ ಮತ್ತು ಜಾಹೀರಾತು ಹುಡುಕುವವರಿಗಾಗಿ ಡಂಗುರ ಶುರ್ ಮಾಡಿ ಒಳ್ಳೆಯ ಕೆಲ್ಸಾ ಮಾಡಿದ್ದೀರ..ನಿಮ್ಮ ಆ ಎರಡು ಪ್ರಯತ್ನಗಳಿಗೆ ಯಶಸ್ಸು ಸಿಗಲಿದೆ ..
ಶುಭವಾಗಲಿ...
ನಿಮ್ಮ ನಲ್ನುಡಿಗೆ ಧನ್ಯವಾದಗಳು
ನಿಮ್ಮ ನಲ್ನುಡಿಗೆ ಧನ್ಯವಾದಗಳು ವೆಂಕಟ್ ಅವರೇ... :)
ರಾಜೇಶ ಹೆಗಡೆ ಅವರಿಗೆ ಧನ್ಯವಾದಗಳು
ರಾಜೇಶ ಹೆಗಡೆ ಅವರಿಗೆ ಧನ್ಯವಾದಗಳು ಮತ್ತು ಶುಭಾಶಯಗಳು,ಕನ್ನಡದಲ್ಲಿ ಇಂತಹ ತಾಣ (ಢಂಗುರ) ಇದೇ ಮೊದಲು. ಕನ್ನಡಿಗರು ಇದನ್ನು ಹೆಚ್ಚು ಹೆಚ್ಚು ಉಪಯೋಗಿಸಿಕೊಳ್ಳಬೇಕು. ನಿಮಗೆ ಶುಭವಾಗಲಿ.
ರಾಜೇಶ್ ಹೆಗಡೆರವರಿಗೆ ನನ್ನ ಹೃದಯ
ರಾಜೇಶ್ ಹೆಗಡೆರವರಿಗೆ ನನ್ನ ಹೃದಯ ಪೂರ್ವಕ ವಂದನೆಗಳು ನಿಮ್ಮ ಈ ಸೇವೆಯಿಂದ ಕನ್ನಡ ಜೀವಂತವಾಗುವುದೆಂದು ನಾನು ಭಾವಿಸಿದ್ದೆನೆ . ನಿಮ್ಮ ಈ ಸೇವೆಯಿಂದ ಅಳಿವಿನ ಅಂಜಿನಲ್ಲಿರುವ ಕನ್ನಡ ಉಳಿಯುವಂತಾಗಿದೆ. ದನ್ಯವಾದಗಳು ನಿಮ್ಮ ಸೇವ ನಿರಂತರವಾಗಿರಲಿ ಎಂದು ಹಾರೈಸುವ ನಿಮ್ಮ ಕನ್ನಡಿಗ
ಜೈ ಕರ್ನಾಟಕ ಮಾತೆ .
ಪ್ರೀತಿಯ ರಾಜೇಶ್, ನೀವು ಒಂದೆರೆ
ಪ್ರೀತಿಯ ರಾಜೇಶ್, ನೀವು ಒಂದೆರೆಡು ತಿಂಗಳು ಮೌನವಾಗಿದ್ದೀರೆಂದರೆ ಏನೋ ಸಾಹಸದಲ್ಲಿ ತೊಡಗಿರುತ್ತೀರೆಂದು ಮತ್ತೆ ನಿರೂಪಣೆಯಾಯಿತು.ಕನ್ನಡವನ್ನು ಅಂತರ್ಜಾಲ ಲೋಕದಲ್ಲಿ ಶ್ರೀಮಂತಗೊಳಿಸುತ್ತಿರುವ ನಿಮ್ಮ ಪ್ರಯತ್ನಕ್ಕೆ ಅಭಾರಿ. ಕನ್ನಡ ಪ್ರೇಮ ನಿಮ್ಮನ್ನು ಪೊರೆಯಲಿ, ನಿಮ್ಮ ಎಲ್ಲಾ ಪ್ರಯತ್ನಕ್ಕೆ ಜಯವಾಗಲಿ ಶುಭಾಕಾಂಕ್ಷೆಗಳೊಂದಿಗೆಬಾಲಚಂದ್ರ
ಗ್ರೇಟ್..!! ನಿಮ್ಮ ಸಾಹಸ
ಗ್ರೇಟ್..!! ನಿಮ್ಮ ಸಾಹಸ ಮೆಚ್ಚದಿದ್ದ್ರೆ ಬೇರೇನೂ ಇಲ್ಲ. ನೀವು ಇನ್ಫಿ ನಾಣಿಯ ಕಚೇರಿಯಲ್ಲಿ ಕೆಲಸ ಮಾಡುವುದು ಅಂದರೆ ನಂಬಲಾಗುವುದಿಲ್ಲ...ಅದೆಂತಾ..ಉತ್ಸಾಹ..ಶ್ರಧ್ಧೆ ... ನಿಮ್ಮದು.. ಮಾರಾಯರೆ..... ಸೆಲ್ಯೂಟ್ ನಿಮಗೆ
ಹಾಗೆ...ಈ ವಿಸ್ಮಯ ಢಂಗುರದ ಢಂಗುರ ಕೂಡ ಆಗುವ ಅಗತ್ಯವಿದೆ. ಅದಕ್ಕೆ ನಮ್ಮ ಸಹಕಾರವಿದೆ.
ನಮಸ್ತೇ ರಾಜೇಶ್ ಸಾರ್. ಕನ್ನಡ
ನಮಸ್ತೇ ರಾಜೇಶ್ ಸಾರ್. ಕನ್ನಡ ಸೇವೆಗೆ ಇಷ್ಟೊಂದು ಶ್ರದ್ದೆ ತೋರಿಸೋ ನಿಮ್ಮತನಕ್ಕೆ ನನ್ನ ನಮನಗಳು..!! ಈಗಿನ ಕಾಲಘಟ್ಟದಲ್ಲಿ, ಸಮಯ ಹೊಂದಿಸಿಕೊಂಡು , ಈ ತರಹದ ಸಮಾಜಸೇವೆ ಮಾಡುವುದು ಎಷ್ಟು ಕಷ್ಟ ಅಂತ ಎಲ್ಲರಿಗೂ ಗೊತ್ತಿದೆ. ನಾವೆಲ್ಲ ಇಲ್ಲಿಗೆ ಬಂದು ಯಾವ ಕಾಲವಾಗಿತ್ತೋ ಏನೋ..!! ಆದರೂ ತಾವು ಮಾತ್ರ ಯಾವುದಕ್ಕೂ ಚಿಂತಿತರಾಗದೆ, ಈ ಕನ್ನಡನುಡಿ ಸೇವೆ ಗೆ ಸಲ್ಲಿಸುತ್ತಿರುವ ಸೇವೆ ಮನನೀಯ. ನಿಮಗೆ ಒಳ್ಳೆಯದಾಗಲಿ.