Skip to main content

"ನನ್ನವನು - ಉತ್ತರಿಸಲಾರದ ಪ್ರಶ್ನೆ"

ಬರೆದಿದ್ದುApril 20, 2012
12ಅನಿಸಿಕೆಗಳು

ವಳು ಯೋಚಿಸಲಾರಂಭಿಸಿದಳು...ಈ ಯೋಚನೆ ಹೊಸದಲ್ಲ.. ಇದಕ್ಕೊಂದು ಬರಹರೂಪ ಕೊಡೋಣ ಎನಿಸಿದ್ದೇ ತಡ ಕೈಗೆ ತನ್ನ ದಿನಚರಿ ಪುಸ್ತಕವನ್ನು ತೆಗೆದುಕೊಂಡುಬರೆಯಲಾರಂಭಿಸಿದಳು..." ಅವನದೇಕೋ ತುಂಬಾ ಇಷ್ಟವಾಗ್ತಾನೆ... ಇದು ಪ್ರೀತಿಯಾ?? ಹೌದು ಅಂತು ಮನಸ್ಸು.. ಇಲ್ಲ ಅಂತು ಅಹಂ!ಹಾಗಿದ್ರೆ ಅವನು ಮುನಿಸಿಕೊಂಡಾಗ ಅದೇಕೆ ಕಸಿವಿಸಿ ಆಗುತ್ತೆ?? ಅವನು ಬೈದಾಗಲೆಲ್ಲಾ ಅದೇಕೆ ಮುಖಸಪ್ಪೆ ಆಗಿಬಿಡ್ತದೆ? ಅವನು ಊಟ ಮಾಡೋಲ್ಲ, ಮಾತಾಡೋಲ್ಲ ಅಂದಾಗೇಕೆ ಕೂತಲ್ಲಿ ಕೂರಲಾಗದ,ಏಕಾಗ್ರತೆ ಬಾರದ ಚಡಪಡಿಕೆ??? ಅವನು 'ನನ್ನ ಹುಡುಗಿ' ಅಂದಾಗೇಕೆ ಮನಸ್ಸು ನವಿಲಿನಂತೆಗರಿಗೆದರಿ ಕುಣಿಯಲಾರಂಭಿಸುತ್ತದೆ??? ಅವನು 'ನನ್ನ ಮನಸ್ಸು ಸರಿಯಿಲ್ಲ, ನಾಳೆ ಮಾತಾಡ್ತೇನೆ'ಅಂದಾಗೇಕೆ, "ಛೇ!! ಏನಾಗಿರಬಹುದು? ಯಾರದ್ರೂ ಬೈದ್ರಾ? ಆರೋಗ್ಯ ಹಾಳಾಯ್ತಾ? ಹಳೇನೆನಪುಗಳಿಂದ ಕಿರಿಕಿರಿ ಆಗಿರಬಹುದಾ?" ಎಂಬ ಊಹಾಪೋಹಗಳ ಮೆರವಣಿಗೆಯಲ್ಲಿ ಹೊರಡುತ್ತೆನನ್ನ ಮನಸ್ಸು.......................??? ಇಡೀ ದಿನ ಅವನೊಡನಿರಬೇಕು; ಮಾತಾಡಬೇಕು; ಅವನನ್ನ ಖುಷಿಯಾಗಿರುವಂತೆನೋಡಿಕೊಳ್ಳಬೇಕು, ಚಿಕ್ಕ ಪುಟ್ಟ ಸಂತಸದ ಕ್ಷಣಗಳನ್ನು ಅವನೊಡನೆ ಹಂಚಿಕೊಳ್ಳಬೇಕು;ಮನಸ್ಸು ಬೇಸರಗೊಂಡಾಗ ಡಿಪ್ರೆಸ್ಡ್ ಆದಾಗ ಅವನೆದೆ ಮೇಲೆ ಮುಖವಿರಿಸಿ ಬಿಕ್ಕಿ ಬಿಕ್ಕಿಅಳಬೇಕು; ಯಾರೂ ನೀಡಿರದಷ್ಟು ಪ್ರೀತಿ ನೀಡಬೇಕು; ಇಡೀ ಬದುಕು ಅವನಿಗಾಗಿಮೀಸಲಿಡಬೇಕು... ಈ ಎಲ್ಲಾ ಭಾವನೆಗಳಿಗೆ, ಹಂಬಲಗಳಿಗೆ ಅರ್ಥವೆನು...????ಇವು ಹುಚ್ಚು ಬಯಕೆಗಳಾ ಅಥವಾ ಪ್ರೀತಿಯ ಕನವರಿಕೇನಾ? ವಾಸ್ತವ ಕಣ್ಣೆದುರು ಬಂದಾಗ, ಸಣ್ಣ-ಪುಟ್ಟ ಜಗಳಗಳಿಗೂ ಆತ ಸಿಢಾರನೇ ರೇಗಿಕೈಗೆ ಸಿಕ್ಕಿದ್ದನ್ನು ನೆಲಕ್ಕೊಗೆದು ನನ್ನ ಮೇಲಿನ ಕೋಪ ಸೆಡವನ್ನುಹೊರ ಹಾಕುವಾಗ ಮನಅಂಜುವುದೇಕೆ? ಅವನ ಮನಸ್ಸು ಸರಿಯಿಲ್ಲದಾಗ, ಅವನು ಮೂಢಿಯಾದಾಗಲೆಲ್ಲಾನನ್ನ ಮನಸ್ಸು ಅಭದ್ರತೆಯಿಂದ ನರಳುವುದೇಕೆ? ಹಾಗಾದ್ರೆ, ಅವನ ಪ್ರೀತಿ, ಹುಚ್ಚು ಕನಸುಗಳಿಗೆಲ್ಲಾಮಣೆ ಹಾಕಿ ಸಿಂಗರಿಸುವ ಮನಸು ಅವನ ಈ ಭಾವನೆಗಳ ವೈಪರೀತ್ಯಗಳನ್ನೇಕೆ ಸಹಿಸಿಕೊಂಡುನಗುವುದನ್ನು ಕಲಿಯಲು ತಡ ಮಾಡುತ್ತಿದೆ?? ಗಳಿಗೆಗೊಮ್ಮೆ ಬದಲಾಗುವ ಆತನ ಮೂಡ್ ನನ್ನಮೇಲೆ ಆತನಿಗಿರುವ ಪ್ರೀತಿಯನ್ನು ಬದಲಿಸಿಬಿಟ್ಟರೆ? ಆತನಿಗೆ ನಾನು, ನನ್ನ ಅಗತ್ಯತೆ,ಇರುವಿಕೆ ಬೇಡವೆನಿಸಿಬಿಟ್ಟರೆ??? ಆತನಿಲ್ಲದೇ ನಾನು ಬದುಕಬಲ್ಲೆನಾ??ಖಂಡಿತಾ ಅಸಾಧ್ಯ. ಒಮ್ಮೊಮ್ಮೆ ಆತನೊಡನೆ ಹರಟೆ ಹೊಡಿಯುವಾಗ ಮನಸ್ಸಿಡೀ ಹಗುರ ಹಗುರ... ೫ ರಹರೆಯದ ಮಗುವಂತಾಗುವ ಮನಸ್ಸು ಆತನ ಒರಟು ಅಂಗೈಯಲ್ಲಿ ಭದ್ರತಾ ಭಾವನೆಯಸುಖ ಅನುಭವಿಸುತ್ತಾ, ಆತನನ್ನು ಜಗ್ಗಿ ಜಗ್ಗಿ ಎಳೆಯುತ್ತಾ ಓಡತೊಡಗುತ್ತೆ... ಆತನರಸಿಕತನದ ಮಾತುಗಳಿಗೆ ೧೬ ರ ಹರೆಯದ ಷೋಡಶಿಯಂತೆ ಕೆಂಪು ಕೆಂದಾವರೆಯಾಗಿ,ನೆಲ ನೋಡುತ್ತಾ ನಾಚಿ ನೀರಾಗುತ್ತೆ; ಆತನ ಭವಿಷ್ಯದ ಕನಸುಗಳು, ಹಿಂದಿನ ಸಾಧನೆಯಮಜಲುಗಳ ಕುರಿತು ಕೇಳುವಾಗ ಮನ ಪ್ರೌಢೆಯಂತೆ ಹೆಮ್ಮೆ ಪಡುತ್ತೆ... ಆತ ಅನಾರೋಗ್ಯಹುಟ್ಟುಹಬ್ಬದ ದಿನವೂ ನಾ ಒಂಟಿ ಎಂದು ನಿಟ್ಟುಸಿರು ಬಿಡುವಾಗ ಮನ ತಾಯಿಯಂತೆಆತನನ್ನು ಮಡಿಲಲ್ಲಿರಿಸಿ ಸಾಂತ್ವನ ಹೇಳಬೇಕೆಂದುಕೊಳ್ಳುತ್ತೆ.. ಆದ್ರೆ ಒಂದೊಮ್ಮೆ ಆತನಿಗೆ ಕೋಪಹತ್ತಿತೋ, ಮುಗೀತು ಕಥೆ! ಉದ್ಯೋಗಕ್ಕಾಗಿ ಸಂದರ್ಶನವನ್ನೆದುರಿಸುವ ಅಭ್ಯರ್ಥಿಯಂತಾಗುವಮನಸ್ಸು, ಆತನ ಕೆಲ ಬಿರು ನುಡಿಗಳಿಗೆ, ಕೊಂಕುಗಳಿಗೆ, ವ್ಯಂಗ್ಯಗಳಿಗೆ ಸಿಲುಕಿನಲುಗುತ್ತದೆ.. ಮಾತುಗಳು ಮೌನಕ್ಕಿಂತಲೂ ಅಸಹನೀಯ ಎನಿಸತೊಡಗುತ್ತೆ. ...ಸುಳ್ಯಾಕೆ ಹೇಳೋದು.. ನಿಜ್ಜವಾಗ್ಲೂ ಮನಸ್ಸು ಪೂರ್ತಿಯಾಗಿ ಮುದುಡಿಹೋಗುತ್ತೆ.ಒಮ್ಮೊಮ್ಮೆ ಹಿಂದ್ಯಾವಾಗಲೋ ಆಡಿದ ಮಾತುಗಳನ್ನಾತ cross examination ಮಾಡುವadvocate ಥರ ನೆನಪಿಸಿ, ಮುಖಭಂಗ ಮಾಡಿ ಸಂತಸಗೊಂಡಾಗ, ಅಷ್ಟೊತ್ತೂಅನುಭವಿಸಿ ಊದಿಕೊಂಡ ಸಂತಸದ ಪುಗ್ಗೆ ಠುಸ್ಸ್!!!!!!!!!!!!!!!!!!!!!!!!!!!!!!! ಕೋಪಕ್ಕೆ ಮನಸ್ಸನ್ನ ಬಲಿಪಶುವಾಗಿಸಿ ಒತ್ತಾಯದಿಂದ ಆತನಿಗೆ "ಸಾಕಿನ್ನು ಈ ಪ್ರೀತಿ, ನಾಹೊರಟೆ ನಿನ್ನ ಬದುಕಿಂದ ಹೊರಗೆ" ಅಂತ ಮೆಸೇಜ್ ಕಳುಹಿಸಿದ ಮೇಲೂ ನಿರುಮ್ಮಳವಾಗದಮನಸ್ಸು, ನಿನ್ನ ಈಗೋ ಗಾಗಿ, ಕೋಪಕ್ಕಾಗಿ, ನಾನ್ಯಾಕೆ ಬಲಿಪಶು ಆಗ್ಲಿ? ಎಂದು ಚೀರಿಡುತ್ತದೆ,ನನ್ನ ಅಸ್ತಿತ್ವಕ್ಕೆ ಬೆಲೆನೇ ಇಲ್ವಾ ಎಂದು ಕೇಳುವ ಪ್ರೀತಿ ಅದೆಲ್ಲಿಂದಲೋ ಧುತ್ತೆಂದುಪ್ರತ್ಯಕ್ಷವಾಗಿ ತನ್ನ ಇರುವಿಕೆಯನ್ನು ನನ್ನ ಪ್ರತಿ ಮಾತು, ಮೌನ, ಮೆಸೇಜ್ ಹಾಗೂಮುನಿಸಿನಲ್ಲೂ ತೋರಿಸಿಬಿಡುತ್ತೆ!! ಅಲ್ಲಿಗೇ ಮುಗಿಯುವ ಜಗಳದ ಅಧ್ಯಾಯ,ಮೊದಲಿಗಿಂತಲೂ ದುಪ್ಪಟ್ಟು ಪ್ರೀತಿಯನ್ನೊಳಗೊಂಡ ಸುಂದರವಾದ ಮತ್ತೊಂದುಅಧ್ಯಾಯದ ಆರಂಭಕ್ಕೆ ಮುನ್ನುಡಿ ಬರೆದು ತಾನು ಆ ಕ್ಷಣಕ್ಕೆ ಮರೆಯಾಗಿಬಿಡುತ್ತದೆ.ನನ್ನವನ ಬಿಸಿ ಪ್ರೀತಿಯಲ್ಲಿ ಕರಗಿಬಿಡುತ್ತದೆ ನನ್ನ ಹುಚ್ಚು ಮನಸ್ಸು....... " ಬರೆದು ಮುಗಿಸಿ ಅವಳೆದ್ದಾಗ ಗಡಿಯಾರ ರಾತ್ರಿಯ ೧ ಗಂಟೆ ತೋರಿಸುತ್ತಿತ್ತು.. ಪಾಪಅವಳಿಗೇನು ಗೊತ್ತಿತ್ತು, ತನ್ನೀ ಪ್ರೀತಿಯ ಹುಡುಗ ತನ್ನನ್ನು ಒಂಟಿಯನ್ನಾಗಿಸಿಹೋಗುತ್ತಾನೆ ಅಂತ... ಇದೆಲ್ಲಾ ಬರೆದ ಕೆಲವೇ ದಿನಗಳೊಳಗೆ ಕಾರಣವೇಹೇಳದೆ ಮಾತು ಬಿಟ್ಟು, ಅವಳನ್ನು ತನ್ನ ಬದುಕಿಂದಲೇ ದೂರ ಮಾಡಿದ್ದಅವಳ... ಅಂದ್ರೆ, ಅವಳು ತನ್ನವನೆಂದುಕೊಂಡಿದ್ದ ಆ ಹುಡುಗ.....ಮೊಗ್ಗರಳಿ ಹೂವಾಗುವ ಮುನ್ನವೇ ಕಮರಿ ಬಿಡುವ ಇಂಥಾ ಪ್ರೀತಿಗಳದೆಷ್ಟೋ...?

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

venkatb83 ಸೋಮ, 04/23/2012 - 18:22

  " ಅವನದೇಕೋ ತುಂಬಾ ಇಷ್ಟವಾಗ್ತಾನೆ... ಇದು ಪ್ರೀತಿಯಾ?? ಹೌದು ಅಂತು ಮನಸ್ಸು.. ಇಲ್ಲ ಅಂತು ಅಹಂ!  :())ಇವು ಹುಚ್ಚು ಬಯಕೆಗಳಾ ಅಥವಾ ಪ್ರೀತಿಯ ಕನವರಿಕೇನಾ? :()))  ಮೊಗ್ಗರಳಿ ಹೂವಾಗುವ ಮುನ್ನವೇ ಕಮರಿ ಬಿಡುವ ಇಂಥಾ ಪ್ರೀತಿಗಳದೆಷ್ಟೋ...? >>>  ನಿಜ ಕೆಲಹೊಮ್ಮೆ ಮಾತು ಹಲವೊಮ್ಮೆ ಹಾಗೆ ಆಗಿದೆ, ಆದರೆ ಆಗಿದ್ದು ಒಳ್ಳೆಯದಕ್ಕೆ ಅಂತ ಅಂದುಕೊಂಡು  ಜೀವನ ಬಂಡಿ ತಳ್ಳಬೇಕು...   ==================================================================== ಜ್ಯೋತಿ ಅವ್ರೆ-ಪುಟ್ಟ ಬರಹ- ಆಪ್ತ ಅನ್ನಿಸಿತು...  ಬರಹ ನನಗೆ ಬಹು ಹಿಡಿಸಿತು...
ಶುಭವಾಗಲಿ.

Jyothi Subrahmanya ಮಂಗಳ, 04/24/2012 - 18:43

ಧನ್ಯವಾದಗಳು ಅನಿಸಿಕೆಗೆ... Smile

Jyothi Subrahmanya ಮಂಗಳ, 04/24/2012 - 18:43

ಧನ್ಯವಾದಗಳು ಅನಿಸಿಕೆಗೆ... Smile

Pattar ಮಂಗಳ, 04/24/2012 - 17:17

ನೀವು ಬರೆದ ಈ ಬರಹದಲ್ಲಿ "ಅವಳು" ಎ೦ಬ ಪಾತ್ರಕ್ಕೆ ನಿಮ್ಮನ್ನು ನೀವೆ ಅರ್ಪಿಸಿಕೊ೦ಡಿದ್ದೀರಿ.....ಇದು ಉತ್ತರಿಸಲಾಗದ ಪ್ರಶ್ನೆಯ೦ತೂ ಅಲ್ಲ, ನಿಮಗಷ್ಟೆ ಇದು ಉತ್ತರಿಸಬಹುದಾದ ಪ್ರಶ್ನೆ ಇರಬಹುದು ಅ೦ತ ನನ್ನ ಅನಿಸಿಕೆ.ಅದಕ್ಕೆ ಇದರಲ್ಲಿ ಭಾವನಾತ್ಮಕ ಪ್ರಶ್ನಾಭಾವಗಳಿಗೆ ಬೆಲೆಕೊಡದೇ ಆ ನಿಮ್ಮ ಉತ್ತರಿಸಲಾಗದ ಪ್ರಶ್ನೆಗೆ ಉತ್ತಮವಾಗಿ ಯೋಚಿಸಿ ನಿಮಗೆ ನೀವೇಉತ್ತರಿಸಿಕೊಳ್ಳಿ....

Jyothi Subrahmanya ಮಂಗಳ, 04/24/2012 - 18:45

ಕಥೆ ಎಂದರೇ ಹಾಗೇ ಅಲ್ವೇ... ಕಥೆಯ ಪಾತ್ರಕ್ಕೆ ನಮ್ಮನ್ನು ನಾವೇ ಅರ್ಪಿಸಿಕೊಂಡಾಗಮಾತ್ರವೇ ಅದರ ಭಾವನೆಗಳ ಸಂಘರ್ಷ, ಒಳತುಮುಲಗಳನ್ನ ಬಿಡಿಸಿಡಲಿಕ್ಕೆ ಸಾಧ್ಯ.ನಿಮ್ಮ ಅನಿಸಿಕೆಗೆ ಧನ್ಯವಾದಗಳು ಪತ್ತಾರ್ ರವರೇ...  ಜ್ಯೋತಿ.

Mangala ಗುರು, 04/26/2012 - 15:07

Soooooooooooooperb!!!!!
 
ನಿಜವಾಗ್ಲೂ ತುಂಬಾ ಉತ್ತಮವಾದ ಬರಹ ಜ್ಯೊತಿ...
ಪ್ರತಿಯೊಬ್ಬ 'ಅವಳ' ಕನಸು ಇದೇ ಆಗಿರುತ್ತದೆ ಎಂಬುದು ನನ್ನ ಅಭಿಪ್ರಾಯ, ಪ್ರತಿಯೊಬ್ಬ ಹುಡುಗಿಯು ಇದೇ ತರದ ಭಾವನೆಗಳ ಗೊಂದಲದಲ್ಲಿ ಇರುತ್ತಾಳೆ. ನಿಮ್ಮ ಬರಹ ನನಗೆ ತುಂಬಾ ಹಿಡಿಸಿತು.
 
ದನ್ಯವಾದಗಳು.

Jyothi Subrahmanya ಗುರು, 04/26/2012 - 15:37

ಧನ್ಯವಾದಗಳು ಮಂಗಳಾ ನಿಮ್ಮ ಅನಿಸಿಕೆಗೆ ಮತ್ತು ಮೆಚ್ಚುಗೆಗೆ... ಃ)  ಜ್ಯೋತಿ.

praveen.kulkarni ಶುಕ್ರ, 04/27/2012 - 17:09

ನಿಮ್ಮ ಬರಹ ತುಂಬಾ ಆಪ್ತವೆನಿಸಿತು.ಹುಡುಗಿಯರ ಮನದ ಭಾವನೆಗಳನ್ನು ತುಂಬಾ ಚೆನ್ನಾಗಿ ಬಿಂಬಿಸಿದ್ದಿರಿ.
" ಒಮ್ಮೊಮ್ಮೆ ಆತನೊಡನೆ ಹರಟೆ ಹೊಡಿಯುವಾಗ ಮನಸ್ಸಿಡೀ ಹಗುರ ಹಗುರ... ೫ ರ ಹರೆಯದ ಮಗುವಂತಾಗುವ ಮನಸ್ಸು ಆತನ ಒರಟು ಅಂಗೈಯಲ್ಲಿ ಭದ್ರತಾ ಭಾವನೆಯ ಸುಖ ಅನುಭವಿಸುತ್ತಾ, ಆತನನ್ನು ಜಗ್ಗಿ ಜಗ್ಗಿ ಎಳೆಯುತ್ತಾ ಓಡತೊಡಗುತ್ತೆ... ಆತನ ರಸಿಕತನದ ಮಾತುಗಳಿಗೆ ೧೬ ರ ಹರೆಯದ ಷೋಡಶಿಯಂತೆ ಕೆಂಪು ಕೆಂದಾವರೆಯಾಗಿ, ನೆಲ ನೋಡುತ್ತಾ ನಾಚಿ ನೀರಾಗುತ್ತೆ; ಆತನ ಭವಿಷ್ಯದ ಕನಸುಗಳು, ಹಿಂದಿನ ಸಾಧನೆಯ ಮಜಲುಗಳ ಕುರಿತು ಕೇಳುವಾಗ ಮನ ಪ್ರೌಢೆಯಂತೆ ಹೆಮ್ಮೆ ಪಡುತ್ತೆ... ಆತ ಅನಾರೋಗ್ಯ ಹುಟ್ಟುಹಬ್ಬದ ದಿನವೂ ನಾ ಒಂಟಿ ಎಂದು ನಿಟ್ಟುಸಿರು ಬಿಡುವಾಗ ಮನ ತಾಯಿಯಂತೆ ಆತನನ್ನು ಮಡಿಲಲ್ಲಿರಿಸಿ ಸಾಂತ್ವನ ಹೇಳಬೇಕೆಂದುಕೊಳ್ಳುತ್ತೆ.. ಆದ್ರೆ ಒಂದೊಮ್ಮೆ ಆತನಿಗೆ ಕೋಪ ಹತ್ತಿತೋ, ಮುಗೀತು ಕಥೆ! ಉದ್ಯೋಗಕ್ಕಾಗಿ ಸಂದರ್ಶನವನ್ನೆದುರಿಸುವ ಅಭ್ಯರ್ಥಿಯಂತಾಗುವ ಮನಸ್ಸು, ಆತನ ಕೆಲ ಬಿರು ನುಡಿಗಳಿಗೆ, ಕೊಂಕುಗಳಿಗೆ, ವ್ಯಂಗ್ಯಗಳಿಗೆ ಸಿಲುಕಿ ನಲುಗುತ್ತದೆ.. ಮಾತುಗಳು ಮೌನಕ್ಕಿಂತಲೂ ಅಸಹನೀಯ ಎನಿಸತೊಡಗುತ್ತೆ. ... ಸುಳ್ಯಾಕೆ ಹೇಳೋದು.. ನಿಜ್ಜವಾಗ್ಲೂ ಮನಸ್ಸು ಪೂರ್ತಿಯಾಗಿ ಮುದುಡಿಹೋಗುತ್ತೆ. ಒಮ್ಮೊಮ್ಮೆ ಹಿಂದ್ಯಾವಾಗಲೋ ಆಡಿದ ಮಾತುಗಳನ್ನಾತ cross examination ಮಾಡುವ advocate ಥರ ನೆನಪಿಸಿ, ಮುಖಭಂಗ ಮಾಡಿ ಸಂತಸಗೊಂಡಾಗ, ಅಷ್ಟೊತ್ತೂ ಅನುಭವಿಸಿ ಊದಿಕೊಂಡ ಸಂತಸದ ಪುಗ್ಗೆ ಠುಸ್ಸ್!!!!!!!!!!!!!!!!!!!!!!!!!!!!!!!"   ತುಂಬಾ ಹಿಡಿಸಿದ ಹಾಗು ಕಾಡುವ ಸಾಲುಗಳಿವು....ನಮನಗಳು

praveen.kulkarni ಶುಕ್ರ, 04/27/2012 - 17:19

Jyothi Subrahmanya ಶುಕ್ರ, 04/27/2012 - 18:49

ಧನ್ಯವಾದಗಳು ನಿಮ್ಮ ಅನಿಸಿಕೆ ಹಾಗೂ ಮೆಚ್ಚುಗೆಗೆ... ಜ್ಯೋತಿ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 12/26/2012 - 12:52

ಧನ್ಯವಾದಗಳು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.