Skip to main content

“Better You Attend Next Class “

ಬರೆದಿದ್ದುMarch 16, 2012
2ಅನಿಸಿಕೆಗಳು

 
ನನ್ನ College ಬಗ್ಗೆ ಹೇಳ್ಬೇಕು ಅನ್ನಿಸ್ತಾ ಇದೆ.. ಅದಕ್ಕೆ ಈ ಲೇಖನ..
ನನ್ನ ಕಾಲೇಜು ತುಂಬಾ ಹಿಂದುಳಿದ, ಮುಂದುವರಿದ, ಎರಡೂ ಅಲ್ಲದ, ಕೂತ್ಕೊಳ್ಳೋಕೆ ಬೆಂಚು, ಬರ್ಯೋಕೆ black board, ಪಾಠ ಮಾಡೋಕೊಬ್ರು Lecturer ಗೆ ಕೊರತೆ ಇಲ್ಲದಂತ ಕಾಲೇಜ್. ಕಾಲೇಜಿನ ಒಳಗಡೆ ಒಂದು ಕ್ಯಾಂಟೀನು.. Lecturers ಕಣ್ಣು ತಪ್ಪಿಸಿ ಒಳಗಡೆಯೇ ಸಿಗರೇಟು ಮಾರಾಟ ಮಾಡುತ್ತಿದ್ದ ಭಂಡ ಧೈರ್ಯದ ಅಡಿಕೆ ಭಟ್ರು…10 ರೂಪಾಯಿ ಕೊಟ್ರೆ Internals ಗಿಂತ ಮುಂಚೇನೇ Question paper ತಂದು ಕೊಡುತ್ತಿದ್ದ Lab attender ಗೋಪಾಲ.. (ಯಾರ್ಗೂ ಹೇಳ್ಳಲ್ಲ ಅಣ್ಣ ಅಂತ ಹೇಳಿದ ಮೇಲೂ ಇಲ್ಲಿ ಗುಟ್ಟು ಬಯಲು ಮಾಡಿದ್ದಕ್ಕೆ, ಗೋಪಾಲಣ್ಣನ ಕ್ಷಮೆ ಬೇಡುತ್ತ.. )ಇವೆಲ್ಲ ನಮ್ಮ ಕಾಲೇಜಿನ ಹುಡುಗರ ಪ್ರಮುಖ ಆಕರ್ಷಣೆ ..
ಅದು ನಾನು Diploma ಕಾಲೇಜ್ ಸೇರಿದ ಮೊದಲ ದಿನದ ಮಾತು.. ಹರಿಹರದಲ್ಲಿ ಡಿಪ್ಲೋಮಾ ಕಾಲೇಜು ಇಲ್ಲದ ಕಾರಣ, ದಾವಣಗೆರೆಯ ಈ ಕಾಲೇಜಿಗೆ ಸೇರಿಯಾಗಿತ್ತು. ಬಸ್ ಪಾಸು ಇನ್ನೂ ಮಾಡಿಸಿರಲಿಲ್ಲ.. ಅದಕ್ಕೆ 7 ರೂಪಾಯಿಯ ಟಿಕೆಟ್ಟಿಗೆ 10 ರೂಪಾಯೀ ಕೊಟ್ಟು ಟಿಕೆಟ್ ತಗೊಂಡೆ. ಕಂಡಕ್ಟರ್ ಚಿಲ್ಲರೆ ಇಲ್ಲದ ಕಾರಣ ಟಿಕೆಟ್ ಹಿಂದೆ 3 ಅಂತ ಬರೆದು ಕೊಟ್ಟ.. ಬಸ್ ಇಳಿಯುವಾಗ ಚಿಲ್ಲರೆ ಮರೀದೆ ಇದ್ದಿದ್ರೆ ಈ ಕಥೆಯೇ ಸೃಷ್ಟಿ ಆಗ್ತಿರ್ಲಿಲ್ಲ..
ಬಸ್ಸು ನನ್ನನ್ನು ಇಳಿಸಿ ಮುಂದೆ ಹೋದ ಮೇಲೆ , ಟಿಕೆಟ್ಟಿನ ಹಿಂದೆ ಬರೆದಿದ್ದ 3 ರುಪಾಯಿ ನೆನಪಾಯ್ತು.. :) ” ಛೆ.. ಸಿಟಿ ಬಸ್ ಹಿಡಿದು ಕಾಲೇಜ್ ತಲುಪೋಕೆ ಇದ್ದಿದ್ದೆ ಆ 3 ರುಪಾಯಿ .. ಮರೆತು ಬಿಟ್ಟೆನೆ .. ” ಜೇಬು ತಡಕಾಡಿ ನೋಡ್ಕೊಂಡೆ 2 ರುಪಾಯಿ ಇತ್ತು.. ಸಿಟಿ ಬಸ್ ಹತ್ತಿ ಕಾಲೇಜಿಗೆ ಹೋಗ್ಬೇಕು. ಇಲ್ಲ ಅಂದ್ರೆ 3 ಕಿಲೋ ಮೀಟರು ನಡೆದು ಹೋಗಬೇಕು.. time ನೋಡ್ಕೊಂಡೆ .. ಆಗ್ಲೇ 7.45 .. 8 ಗಂಟೆಗೆ ಕಾಲೇಜ್ ನಲ್ಲಿರಬೇಕು.ನಡೆದು ತಲುಪುವುದಕ್ಕಂತು ಸಾಧ್ಯವಿರಲಿಲ್ಲ. ಬಸ್ ನಿಲ್ದಾಣದ ಹತ್ತಿರವಿದ್ದ ನನ್ನ ಸಂಬಂದಿಯೊಬ್ಬರ ಮನೆಗೆ ಹೋಗಿ ಸೈಕಲ್ ಇಸ್ಕೊಂಡು ಕಾಲೇಜಿಗೆ ಹೊರಟೆ …
ತುಂಬಾ ಅವಸರದಲ್ಲಿದ್ದರಿಂದ , ಶಕ್ತಿ ಮೀರಿ ಪೆಡಲ್ ತುಳಿತಿದ್ದೆ. ನನ್ನ ತಾತನೂ ಆ ತರ ಸೈಕಲ್ ಉಪಯೋಗಿಸಿರ್ಲಿಕ್ಕಿಲ್ಲ .. ಅಷ್ಟು ಹಳೆಯ ಸೈಕಲ್ಲು.. ನನ್ನ ಒತ್ತಡ ತಡೀಲಾರ್ದೆ ಚೈನು ” ಕಟ್ ” ಅಂತ ಕಟ್ತಾಯ್ತು…. ನಾನು footpath ಮೇಲೆ, ಸೈಕಲ್ಲು ರೋಡ್ ಮೇಲೆ ಅಕ್ಷರಶಃ ಮಲಗಿದಂತೆ ಬಿದ್ದಿದ್ದೆವು.. ಬಿದ್ದ ರಭಸಕ್ಕೆ , ನನ್ನ ಮೊಣಕೈ ಕಿತ್ತು, ರಕ್ತ ಚಿಮ್ಮುತ್ತಿತ್ತು.. ಜೇಬಿನಿಂದ ಕರ್ಚೀಫು ತೆಗೆದು, ಗಾಯದ ಸುತ್ತಾ ಸುತ್ತಿದೆ.. ನಾನು ಸುತ್ತಿದ ಕರ್ಚೀಫ್ ಆದ್ರೂ ಎಂಥದ್ದು ಗೊತ್ತಾ..? ಅದರ ಮೇಲೆ ಪಟ್ಟೆ, ಪಟ್ಟೆ ಹುಲಿಯ ಚಿತ್ರವಿತ್ತು. ಗಾಯದ ರಕ್ತ ಹುಲಿಯ ಬಾಯಿಗೆ ಮೆತ್ತಿಕೊಂಡು, ಕರ್ಚೀಫ್ ಮೇಲೆ ಬೇಟೆಯಾಡಿ ಬಂದ ಹುಲಿಯ ಚಿತ್ರ ಚಿತ್ತಾರಗೊಂಡಿತ್ತು.
ಅಂತೂ ಇಂತೂ ಕಾಲೇಜ್ ತಲುಪಿ ಕ್ಲಾಸ್ ರೂಂಗೆ ಬಂದೆ. ಅದಾಗಲೇ ಮೊದಲನೇ Period ಕುಲಕರ್ಣಿ ಸರ್ ತಗೊಂಡಿದ್ರು.. ನಾನು ಬಾಗಿಲು ತಟ್ಟಿ ” May i come in Sir ” ಅಂತ ಏದುಸಿರು ಬಿಡುತ್ತಾ ಕೇಳಿದೆ. ” Better you attend next class” ಅಂದ್ರು. ನನ್ನ english ಅವಾಗ ಅಷ್ಟಕ್ಕಷ್ಟೇ .. ಅವರು ಹೇಳಿದ್ದು ಅರ್ಥ ಆಗಿರ್ಲಿಲ್ಲ. ಮತ್ತೆ “ಸಾರ್….” ಅಂದೆ. ಸಿಟ್ಟಿಗೆಳುತ್ತಿದಂತೆ ಕಾಣುತ್ತಿದ್ದ ಸಾರು, ” Go and stand on the last bench” ಅಂದ್ರು. Highschool ನಿಂದಲೂ ಇಂತ ಮಾತುಗಳನ್ನ ಕೇಳಿದ ಅನುಭವ ಇದ್ದಿದ್ದರಿಂದ, ಈ ಮಾತು ಬೇಗ ಅರ್ಥವಾಯ್ತು. Last bench ಗೆ ಹೋಗಿ ನಿಂತ್ಕೊಂಡೆ.
last bench ನಲ್ಲಿ ಪಾಪದ ಹುಡುಗ Akhil ಕೂತಿದ್ದ. ನಾಲ್ಕೂವರೆ ಅಡಿ ಎತ್ತರದ ಹುಡುಗ akhil ನನ್ನನ್ನು ನೋಡಿ ಗಾಬರಿಗೊಂಡಿದ್ದ. ಮೊಣಕೈಗೆ ಕಟ್ಟಿದ್ದ ಪಟ್ಟೆ , ಪಟ್ಟೆ ಹುಲಿಯ ಕರ್ಚೀಫ್ ನೋಡಿ, ನನ್ನನ್ನು ರೌಡಿ ಅಂತಲೇ declare ಮಾಡಿದ್ದ. ( ಕೊನೆ ವರ್ಷದಲ್ಲಿದ್ದಾಗ , ಅಖಿಲ್ ಈ ಗುಟ್ಟನ್ನ ಬಿಟ್ಟು ಕೊಟ್ಟಿದ್ದ.. ಈಗ ಅಖಿಲ್ ಹತ್ತಿರತ್ತಿರ 6 ಅಡಿ ಬೆಳೆದು ನಿಂತಿದ್ದಾನೆ, ಹೇಗಂತ ಅವನನ್ನೇ ಕೇಳ್ಬೇಕು). ನಾನು ಬರೋದಕ್ಕಿಂತ ಮುಂಚೇನೇ attendence ಹಾಕಿ ಮುಗಿಸಿದ್ದರಿಂದ, ನಾನು ಕ್ಲಾಸ್ ಗೆ ಬಂದೂ ಬಾರದಿದ್ದಂತೆ.. ಕುಲಕರ್ಣಿಯವರ ಬಗ್ಗೆ, ಮತ್ತವರ ಕೋಪದ ಬಗ್ಗೆ ಮೊದಲೇ ಕೇಳಿ ತಿಳಿದಿದ್ದರಿಂದ ” ಸಾರ್ attendence ಕೊಡಿ ” ಅಂತ ಕೇಳೋ ಧೈರ್ಯ ಬರ್ಲಿಲ್ಲ.
ಈ ರೀತಿ ಮೊದಲ ದಿನದ, ಮೊದಲ period ನಲ್ಲೆ, ಒಂದು bad impression, ಮತ್ತು worst experience ನನ್ನದಾಗಿತ್ತು…
ಉಳಿದದ್ದು ಮುಂದಿನ ಸಂಚಿಕೆಯಲ್ಲಿ ಬರೆದೇನು..

ಲೇಖಕರು

ಹರಿಹರಪ್ರಿಯ

" ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ. ನಗುವ ಕೆಳುತ ನಗುವುದತಿಶಯದ ಧರ್ಮ. ನಗುವ, ನಗಿಸುವ, ನಗಿಸಿ ನಗುತ ಬಾಳುವ ವರವ ಮಿಗೆ ನೆನು ಬೆಡಿಕೊಳೊ ಮ೦ಕು ತಿಮ್ಮ..

ನಮಸ್ಕಾರ ಕಣ್ರಿ ..
ನನ್ನ ಹೆಸರು ವಿಜಯ್. ದಾವಣಗೆರೆಯ ಹತ್ರ ,ಹರಿಹರ ಅ೦ತ ಒ೦ದು ಊರಿದೆ ಗೊತ್ತಾ..? ಅದೆ ಕಣ್ರಿ ನನ್ನೊರು..bangaloreನ softare companyಯೊ೦ದರಲ್ಲಿ ಏನೊ ಒ೦ದು ಕೆಲ್ಸ ಮಾಡ್ಕೊ೦ದು ಇದಿನಿ.. ಬರವಣಿಗೆ was my ಹವ್ಯಾಸ. But ಇಲ್ಲಿಗೆ ಬ೦ದ್ ಎಲ್ಲ ಒಳ್ಲ್ಲೆ ಕೆಲ್ಸ ಮಾದೊದನ್ನ ಬಿಟ್ತಿದಿನಿ.. ಇನ್ನು ಮು೦ದೆ ಮತ್ತೆ ಬರೀಬೆಕು ಅನ್ನಿಸ್ತಿದೆ. ..

ಆವಾಗಾವಾಗಾ ಬರ್ತಾ ಇರಿ.. ಮಾತಾಡೊಣ..

ಅನಿಸಿಕೆಗಳು

Jyothi Subrahmanya ಶನಿ, 03/17/2012 - 10:18

ವಿಜಯ್ ಯವರೇ, ಚೆನ್ನಾಗಿದೆ ಲೇಖನ.  ಅದ್ರಲ್ಲೂ ಆ ಕರ್ಚೀಫ್ ಕಥೆ ಸೂಪರ್!!!! ಃ) ಹುಲಿ ಚಿತ್ರ, ರಕ್ತದಿಂದಾಗಿ ಬೇಟೆಯಾಡಿ ಬಂದಂತೆ ಅದು ಕಂಡ ರೀತಿಅದನ್ನ ನೀವು ವಿವರಿಸಿದ ರೀತಿ ನಗು ತರಿಸುವಂತಿದೆ.  ಇಂಥಾ ನೆನಪುಗಳಿಂದಲೇ ಅಲ್ವೇ ಕಾಲೇಜ್ ಜೀವನ ಮರೆಯಲಾಗದ್ದುಅನಿಸಿಕೊಳ್ಳುದು??? ಃ) ಹೀಗೇ ನಿಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಿರಿ.... ಧನ್ಯವಾದಗಳೊಂದಿಗೆ, ಜ್ಯೋತಿ.

ಹರಿಹರಪ್ರಿಯ ಧ, 03/28/2012 - 23:29

ಧನ್ಯವಾದಳು ಜ್ಯೋತಿಯವರೇ.. ಶೀಗ್ರದಲ್ಲೇ ಬರಲಿವೆ ಮತ್ತಷ್ಟು ರಸವತ್ತಾದ ಅನುಭವಗಳು ನಮ್ಮ " ವಿಸ್ಮಯನಗರಿಯಲ್ಲಿ.."

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.