ರಸಿಕ
ರಸಿಕ ರೆಂದರೆ ಯಾರೆಂದು ಬಲ್ಲೆಯಾ ನೀ ಚೆಲುವೆ
ಇಲ್ಲವೆಂದಾದರೆ ನಿನಗೆ ನಾ ತಿಳಿಸಿಕೊಡುವೆ.
ಹೆಣ್ಣಿನಾ ಮನದಲ್ಲಿ ಕನಸ ತುಂಬುವವನು
ಕಣ್ಣಂಚಿನಲಿ ಮಿಂಚ ಕಂಡೆ ತಾನೆನ್ನುವನು
ಥಳುಕು ಮಾತುಗಳಿಂದ ಗಾಳವನು ಹಾಕುತ
ಬಳುಕದಾ ನಡುವನ್ನು ಬಳ್ಳಿಗೆ ಹೋಲಿಸುತ
ನಿನ ಅಂದವ ಬೇರೆಲ್ಲೂ ಕಂಡಿಲ್ಲವೆಂದು
ನೀನೇನೆ ಬಯಸಿದರು ಕೊಡಿಸುವೆನು ಅದನೆಂದು
ತುಟಿಯಂಚಿನಾ ನಗೆಯು ಬಲು ಮೋಹಕವು ಎಂದು
ಮೈಕಾಂತಿ ಚಂದನದ ಕಂಪು ಸೂಸುತಿದೆಯೆಂದು
ಹೆಣ್ಣನು ವರ್ಣಿಸುತಾ ಕವನಗಳ ಹೆಣೆದು
ಎಂದು ನಾ ಬಿಡೆನು ನಿನ ಸಂಗ ವೆಂದು
ಸರಿ ಸಾಟಿಯು ಎನಗೆ ಯಾರಿಲ್ಲವೆಂದು
ಕಸದಿಂದ ರಸವನ್ನು ತೆಗೆವವನು ತಾನೆಂದು
ಮರುಳು ಮಾತುಗಳಾಡಿ ಮನ ಸೂರೆಗೊಂಡು
ಒಲ್ಲೆ ಒಲ್ಲೆಂದರೂ ತಾ ಬೆಂಬಿದದೆ ಹಿಂಬಿದ್ದು
ಮನವೊಲಿಸಿ ಕೊಳಲು ಹಿಂದೆ ಓಡಾಡಿ
ಮೈಯ್ಯ ನರ ನಾಡಿಗಳು ಮಿಡಿವಂತೆ ಮಾಡಿ
ಕಾಡುವನು ಹೆಣ್ಣನ್ನು ಪರದಾಡುವಂತೆ ಬೇಡಿ.
ಮಿಲನಕೆ ಕಾತರಿಸಿ ತಾನೇ ಮುಂದಾಗಿ
ಸಲಿಗೆಯಲಿ ಒಲಿವಂತೆ ಮಾಡುವನೆ ರಸಿಕ
ಅಪ್ಪಿ ಮುದ್ದಾಡಿ ನಕ್ಕು ನಲಿದಾಡಿ ಮನಕೆ
ಸಂತಸವ ನೀಡುವವನೆ ನಿಜವಾದ ರಸಿಕ....!
ಸಾಲುಗಳು
- Add new comment
- 956 views
ಅನಿಸಿಕೆಗಳು
Really nice. all boys have to
Really nice. all boys have to read this.