Skip to main content

ಅದಕ್ಕೂ ಬೇಕೂ ಸಾರ್....!

ಬರೆದಿದ್ದುFebruary 24, 2012
8ಅನಿಸಿಕೆಗಳು

ಪ್ರಿಯ ಓದುಗರೇ, ಹಿಂದೆ ಎಂದೋ ಒಮ್ಮೆ ಮಿತ್ರರೊಬ್ಬರು ಹೇಳಿದ್ದ ಹಾಸ್ಯಕರ ಪ್ರಸಂಗವೊಂದು ನೆನೆಪಿಗೆ ಬಂತು ಅದನ್ನು ತಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ.

ಮೆಂಟಲ್ ಆಸ್ಪತ್ರೆ ಡಾಕ್ಟ್ರು ಅವರ ರೋಗಿಗಳನ್ನ ಟ್ರೀಟ್ಮೆಂಟ್ ಆದ ನಂತರ ಡಿಸ್ಚಾರ್ಜ್ ಮಾಡೋ ಮುಂಚೆ ಪೂರ್ತಿ ಗುಣವಾಗಿದೆಯಾ, ಅವರು ಸರಿ ಹೋಗಿದ್ದಾರೋ ಇಲ್ವೋ ಅಂತಾ ಒಂದು ಸಣ್ಣ ಪರೀಕ್ಷೆ ಮಾಡ್ತಾ ಇದ್ರು.
ಅದೇ ರೀತಿ ಒಬ್ಬ ರೋಗೀನ ಟೆಸ್ಟ್ ಮಾಡುವಾಗ ನಡೆದ ಸಂಬಾಷಣೆ ರೀತಿ ಇದೆ:
ಡಾಕ್ಟ್ರು: ಟೇಬಲ್ ಮೇಲಿನ ಪೇಪರ್ ವೇಟ್ ತೋರಿಸ್ತಾ ಕೇಳಿದ್ರು ಇದೇನಪ್ಪಾ...?
ರೋಗಿ : ಊಂ... ಅದು ಗಾಜಿನ ಉಂಡೆ
ಡಾಕ್ಟ್ರು: ಸರೀ, ಟೇಬಲ್ ಮೇಲಿನ ಟ್ರೇ ತೋರಿಸ್ತಾ ಕೇಳಿದ್ರು ಇದೇನು...?
ರೋಗಿ : ... ಅದೂ ಟ್ರೇ...!
ಡಾಕ್ಟ್ರು: ಗುಡ್, ಪೆನ್ ತೋರಿಸ್ತಾ ಕೇಳಿದ್ರು ಇದೇನೂ...?
ರೋಗಿ : ಅದೂ ಪೆನ್ನು...!
ಡಾಕ್ಟ್ರು: ವೆರಿಗುಡ್, ವೆರಿಗುಡ್ ಅಂತ ಹೇಳಿ ಇನ್ನೂ ಏನೇನೋ ತೋರಿಸಿ ಕೇಳಿದ್ರು ಎಲ್ಲಾ ಸರಿಯಾಗೇ ಹೇಳಿದ, ಅದಕ್ಕೇ ಮತ್ತೆ ಕೇಳ್ದ್ರು ಡಾಕ್ಟ್ರು..
ಸರೀ ಇದೆಲ್ಲಾ ನೀನು ಸರಿಯಾಗೇ ಹೇಳ್ತಿದ್ದೀಯಾ ಅದು ಹೇಗೆ ನಿನಗೆ ಗೊತ್ತಾಯ್ತೂ...? ಅಂತಾ.
ಅದಕ್ಕೆ ರೋಗಿ: ಮೇಲೆ ಕೆಳಗೆ ಆಕಡೆ ಈಕಡೆ ನೋಡ್ತಾ, ಊಂ..., ..., ಅದೂ.. ಅದೂ.... ಅಂತಾ ಗುನುಗುತ್ತಾ
ಕೊನೆಗೆ ಅವನ ನಿತಂಬದ ಕಡೆ ಬೆರಳು ತೋರಿಸುತ್ತಾ ಹೇಳ್ದ....
ಅದಕ್ಕೂ ಬೇಕು ಡಾಕ್ಟ್ರೇ.....  ... .... ... .... "ತಲೇ......!" ಅಂತ.
ಅಹ್ಹಹ್ಹಾ.... ನೀವೇನಾದ್ರೂ ಆ ಡಾಕ್ಟ್ರ ಜಾಗದಲ್ಲಿದ್ದಿದ್ರೆ ತಲೆ ಎಲ್ಲಿದೆ ತಿ... ಎಲ್ಲಿದೆ ಎಂದು ತಿಳಿಯದ ಆತನನ್ನು ನೋಡಿ ನಿಮ್ಮ ಸ್ಥಿತಿ ಏನಾಗಿರಬೇಕು....!

ಲೇಖಕರು

ತ್ರಿನೇತ್ರ

ನಾವಿರೋದೇ ಹೀಗೆ...!

ನಾನು ಹುಟ್ಟು ಕನ್ನಡಿಗ ಓದಿ ಬೆಳೆದಿದ್ದು ಬೆಂಗಳೂರಿನಿಂದ ಮೈಸೂರಿನವರೆಗೂ ವಿವಿಧ ಊರುಗಳಲ್ಲಿ. ವೃತ್ತಿಗಾಗಿ ಅಲೆದದ್ದು ಬೆಂಗಳೂರಿನಿಂದ ಕೊಡಗಿನವರೆಗೆ ನಂತರ ರಾಷ್ಟ್ರದ ರಾಜಧಾನಿ ದೆಹಲಿ ಹಾಗೊ ಅದರ ಸುತ್ತಲಿನ ಹರ್ಯಾಣಾ ಗಳಲ್ಲಿ ೨೧ ವರ್ಷ ಸೇವೆ ಸಲ್ಲಿಸಿ ಮತ್ತೆ ತಾಯ್ನಾಡಿನ ರಾಜಧಾನಿ ಬೆಂಗಳೂರಿಗೆ ಬಂದು ನೆಲೆಸಿರುವೆ. ಆದರೂ ಕನ್ನಡ ಮರೆತಿಲ್ಲ ಮರೆಯುವಂತಿಲ್ಲ. ಕನ್ನಡದ ಯಾವುದೇ ಲೇಖನ ಕಥೆ ಕವಿತೆ ಇತ್ಯಾದಿ ಓದುವುದು ಹಿಂದಿನ ಅಭ್ಯಾಸ. ಸಮಯ ಸಿಕ್ಕಾಗ ಏನಾದರೂ ಚಿಕ್ಕ ಪುಟ್ಟದ್ದು ಬರೆವುದು ಇತ್ತೀಚಿಗೆ ಬೆಳೆಸಿಕೊಂಡ ಹವ್ಯಾಸ ಹಾಗಾಗಿ ಈ ವಿಸ್ಮಯನಗರಿಗೆ ಪ್ರವೇಶ...!

ಅನಿಸಿಕೆಗಳು

ವಿನಯ ಕುಮಾರ್. ಎಸ್ ಶುಕ್ರ, 03/09/2012 - 17:45

super

ತ್ರಿನೇತ್ರ ಮಂಗಳ, 03/20/2012 - 12:27

ಧನ್ಯವಾದಗಳು ವಿನಯ್ ಕುಮಾರ್ ಅವರೇ...! ದಯಮಾಡಿ ಇದನ್ನೇ ಕನ್ನಡದಲ್ಲಿ ಬರೆಯಲು ಪ್ರಯತ್ನಿಸುವಿರಾ...? ಇಂದು ಒಂದು ಕನ್ನಡ ಶಬ್ಧ ಪ್ರಯೋಗ ಅಥವಾ ಬರೆಯಲು ಕಲಿತರೆ ಮುಂದೆ  ತಾನಾಗೇ ಕನ್ನಡ ವೃದ್ಧಿಸುತ್ತದೆ ಬೆಳೆಯುತ್ತದೆ. ಆ ಕನ್ನಡ ವೃಕ್ಷ ಬೆಳೆದು ಯಾವ ಬಿರುಗಾಳಿಯೂ ಅಲುಗಿಸಲಾಗದ ಹೆಮ್ಮರವಾಗಲು ಆ ಒಂದು ನೀರಹನಿ ಮಾತ್ರಾ ನಾವು ಎರೆಯಬಹುದಲ್ಲವೇ....? ತಮ್ಮ ವಿಶ್ವಾಸಿ -ತ್ರಿನೇತ್ರ.

praveen kumar (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 03/31/2012 - 15:57

ನನಗೆ ಇಸ್ಟ ಆಗ್ಲಿಲ್ಲ

praveen kumar (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 03/31/2012 - 15:57

ನನಗೆ ಇಸ್ಟ ಆಗ್ಲಿಲ್ಲ

ತ್ರಿನೇತ್ರ ಶುಕ್ರ, 04/13/2012 - 15:12

ತಮ್ಮ ಅನಿಸಿಕೆಗೆ ಧನ್ಯವಾದಗಳು. ಆದರೆ ಯಾವ ಕಾರಣದಿಂದ / ರೀತಿಯಲ್ಲಿ ಇಷ್ಟವಾಗಲಿಲ್ಲ ಎಂದು ತಿಳಿಸಿದ್ದಿದ್ದರೆ ಇನ್ನು ಮುಂದೆ ಇಂತಹಾ ಲೇಖನ ಬರೆಯುವಾಗ ಸಾಧ್ಯವಾದಷ್ಟೂ ಎಚ್ಚರ ವಹಿಸಲು ನನಗೆ ಇನ್ನೂ ಅನುಕೂಲವಾಗುತ್ತಿತ್ತು. -ತ್ರಿನೇತ್ರ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 05/04/2012 - 13:12

good

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 05/04/2012 - 13:12

good

channagirigdayanand ಶುಕ್ರ, 05/04/2012 - 20:43

ಸ್ವಲ್ಪ ತರಲೆಯಾಗಿದೆ. ಆದ್ರೆ ಒ ಕೆ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.