ಪ್ರೀತಿ ಮಾಡಿ ಕೈ ಕೊಡೊ ಹುಡುಗಿರೆಲ್ಲ
೧) ಪ್ರೀತಿ ಕಂಡಾಗ ಕಣ್ಣಲ್ಲಿ ಕರೆದು ಕಣ್ಣಾಡಿಸಿದಾಗ ಮನದಲ್ಲಿ ನೆನೆದು ಕಂಡರೂ ಕಂಡಿರಿದ ಹಾಗೆ ನರ್ತಿಸುವ ಹುಡುಗಿಯ ವರ್ತನೆಯೇ ಪ್ರೀತಿ ಮುಳ್ಳು ಅವನು ಕಲ್ ... ೨) ಒಂದು ದಿನ ನನ್ನ ಹುಡುಗಿಯನ್ನ ಕೇಳಿದೆ ನೀ ನನ್ನ ನಿಜವಾಗಲು ಪ್ರೀತಿ ಮಾಡುತ್ತಿಯ ಎಂದು ?? ಆಗ ಹುಡುಗಿ ನಗ್ತಾ ಹೇಳಿದಳು ಯಾವತ್ತೂ ಅಗಲ್ಲ ಎಲ್ಲಾ ಹುಡುಗಿಯರು ನಿಜವಾಗಲು ಪ್ರೀತಿ ಮಾಡಿದರೆ ಪ್ರೀತಿಗೆ ಬೇಲೆನೇ ಇರಲ್ಲ ೩) ಕಷ್ಟನ ಯಾರೂ ಬೇಕು ಅನ್ನಲ್ಲ ದುಡ್ಡು ಕೊಟ್ಟರೆ ಯಾರೂ ಸಾಕು ಅನ್ನಲ್ಲ ಜೀವನನ ಯಾರೂ ಗೆಲ್ಲಕಾಗೋಲ್ಲ ಪ್ರೀತಿಯ ಹುಡುಗನಿಗೆ ಮೊಸ ಮಾಡದೇ ಯಾವ ಹುಡುಗಿನು ಬದುಕಾಗೋಲ್ಲ ೪) ಪ್ರೀತಿ ಮಾಡಿ ಕೈ ಕೊಡೊ ಹುಡುಗಿರೆಲ್ಲ, ಕೊನೆಯಲ್ಲಿ ಹುಡುಗನಿಗೆ ಹೇಳುವ ಒ೦ದು ಮಾತು ಯಾವುದು ಗೊತ್ತಾ... ನನಗಿ೦ತ ಚೆನ್ನಾಗಿರೊ ಹುಡುಗಿನೆ ನಿನಗೆ ಸಿಗುತ್ತಾಳೆ೦ದು, ೫) ಈ ಹುಡುಗರು ಹುಡುಗಿಯರ ಬಗ್ಗೆ ಯೋಚನೆ ಮಾಡ್ತಾರೊ ಬಿಡ್ತಾರೋ ಗೊತ್ತಿಲ್ಲ, ಆದರೆ ಹುಡುಗಿಯರು ಹಾಗಲ್ಲ, ಕನ್ನಡಿ ಮುಂದೆ ನಿಂತಾಗ, ಓದುವಾಗ, ಬರೆಯುವಾಗ ಊಟ ಮಾಡುವಾಗ ಎಲ್ಲಾ ಸಮಯದಲ್ಲೂ ನೆನಪು ಮಾಡಿಕೊಳ್ಳತ್ತಾರೆ. ನನಗಂತೂ ನನ್ನ ಪ್ರೀತಿಸುವ ಹುಡುಗರು ಸದಾ ನನ್ನ ಜೊತೆಯೇ ಇರುತ್ತರೆ ಎಂದು. ೬) ಹುಡುಗ: ನಾನು ಮದುವೆಯಾಗಿ ಸುಖವಾಗಿರೋಣ ಅಂತಿದ್ದೀನಿ ಎಂದನು . ಹುಡುಗಿ: ಓಹೋ, ಆಮೇಲೆ ನೀನು ತುಂಬಾ ತಮಾಷೆಯಾಗಿ ಮಾತಾಡ್ತಿಯ ಏಂದಳು ೭) ಮದುವೆ ಆಗಲಿಕ್ಕೆ ಹುಡುಗಿನ್ನ ನೋಡೋದಂದ್ರೆ ಮೊಬೈಲ್ ಖರೀದಿ ಮಾಡಿದಂಗೆ.ಯಾವುದೇ ಡೀಲರ್ ಹತ್ರ ಹೋದರು , ಯಾವುದೇ ಬ್ರೋಕರ್ ಹತ್ರ ಹೋದ್ರೂ,ಯಾವುದೇ ಸೈಟು ಓಪನ್ ಮಾಡಿದ್ರು , ನೂರಾರು ತರಹದ ಬ್ರಾಂಡುಗಳು,ಸಾವಿರಾರು ತರದ ಮಾಡೆಲ್ಲು.ಸುತ್ತಾ ಮುತ್ತಾ ನೂರಾರಿದ್ರು ಅದರಲ್ಲೇನೋ ಖುಷಿಯಿಲ್ಲ ೮) ಹರಿವ ಹಾವು, ಹರಳುವ ಹೂವು, ಹರೆಯದ ಹುಡಿಗಿಯ ಮನಸ್ಸು ಎಲ್ಲ ಒಂದೇ ಹೆತ್ತವರ ಕಣ್ಣೀರು ಕಡೆಗಣಿಸಿ ಇವಳೇ ನನ್ನ ಜೀವವೆಂದು ಬಂದೆ ಜೀವಕೆ ಜೀವ ಜೋಡಿಸಿ ಜೀವನದ ಕೋಟೆ ಕತ್ತಲೆ ಎಂದೇ ಕೋಟೆಗೆ ಕೊಳ್ಳಿ ಇಟ್ಟು, ಇನ್ನೊಬ್ಬನ ಜೊತೆ ಹಸೆ ಮಣೆ ಏರಿ ನನ್ನ ನೀ ಕೊಂದೆ ೯) ಅಳು ಬರಿಸಿದವಳಿಗೆ ಕಪ್ಪು ಹುಡುಗನ ಬೆಪ್ಪು. ಹುಡುಗನ ಪ್ರೀತಿಯಲಿ ತಪ್ಪು ಹುಡುಕ ಬೇಡ. ನಿನ್ನೆಡೆಗೆ ತುಡಿವ ಮನದ... ಮಿಡಿತದಿ ಕಪಟವೆಣಿಸಬೇಡ ಬರಿಯ ಹರೆಯದ ಜಿದ್ದಿಗೆ ಬಿದ್ದ. ಹಪಹಪಿಕೆ ಎಂದೆಣಿಸಬೇಡ. ಎಂದು ನಿವೇದಿಸಿಕೊಂಡು.ಬಿಕ್ಕಿದವನಿಗೆ.’ನಿಲ್ಲು... ನಿಲ್ಲು..... ನನಗೂ ಅರ್ಥವಾಗುತ್ತೆ. ಆದರೆ ಅದಕ್ಕೆ ನಾ ಹೊಣೆಯಲ್ಲ.. ಎಂದುಳು ೧೦) ನಮ್ಮ ಊರಿನ ಹುಡುಗಿಯೊಬ್ಬಳು ಯಾರನ್ನೋ ಮದುವೆಯಾಗಿ ಹೊಸ ಬದುಕಿನ ಹೊಸ್ತಿಲೊಳಗೆ ಒಂದು ಹೆಜ್ಜೆ ಇಡುತ್ತಿರುವಾಗಲೇ ಅದೇ ಊರಿನ ಮುಗ್ಧ ಹುಡುಗನೊಬ್ಬ ಬದುಕಿನಿಂದಾಚೆ ಹೆಜ್ಜೆಯಿಟ್ಟು ತುಂಬ ದಿನಗಳಾಗಿದ್ದವು. ಲೋಕೇಶನ್ನೂ ಪ್ರೀತ್ರೊ ಹೃದಯ ಇರುತ್ತಾ
ಸಾಲುಗಳು
- Add new comment
- 10817 views
ಅನಿಸಿಕೆಗಳು
ಲೋಕೇಶ್ ರವರೇ ಎಲ್ಲಾ ತಪ್ಪುಗಳನ್ನು
ಲೋಕೇಶ್ ರವರೇ ಎಲ್ಲಾ ತಪ್ಪುಗಳನ್ನು ಹುಡುಗಿಯರ ಮೇಲೆ ಹಾಕಬೇಡಿ ನಿಮ್ಮ ದೃಷ್ಟಿಯಲ್ಲಿ ಹುಡುಗರು ತಪ್ಪು ಮಾಡೋದಿಲ್ಲವೇ ನೀವು ಹೇಳೋ ಹಾಗೆ ಪ್ರೀತಿಸೋ ಹುಡುಗಿಯರೆಲ್ಲಾ ನಿಜವಾಗಲೂ ಪ್ರೀತಿಸುವುದಿಲ್ಲ ಎನ್ನುವುದು ನಿಮ್ಮ ತಪ್ಪು ಕಲ್ಪನೆ ಎಲ್ಲಹುಡುಗಿಯರೂ ಅದೇ ರೀತಿ ಇದ್ದರೆ ಇವತ್ತು ಯಾರೂ ಕೂಡ ಪ್ರೀತಿಸರೊನ್ನ ಮದುವೆ ಆಗುತ್ತೀರಲಿಲ್ಲ ಹಾಗೇ ಪ್ರೀತಿಸುವವರೆಲ್ಲಾ ತಮ್ಮ ತಂದೆ ತಾಯಿಗಳಿಗೆ ಎದುರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ.
ನಿಮ್ಮ ಪ್ರೀತಿ ಹೀಗೆಯೆ ಮುಂದೆ
ನಿಮ್ಮ ಪ್ರೀತಿ ಹೀಗೆಯೆ ಮುಂದೆ ಇರಲಿ ಎಂದು ನಿಮ್ಮಲ್ಲಿ ಕೇಳುವೆ
ನಿಮ್ಮ ಅನಿಸಿಕೆಗಳನ್ನು ನಾನು ತುಂಬಾ ಸ್ವಾಗತಿಸುತ್ತೇನೆ
ನನ್ನ ತಪ್ಪುಗಳನು ತಿಳಿಸಿ ಆದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರಲ್ಲಿ ೯೦ ಭಾಗ ಹುಡುಗರೆ೧೦ ಭಾಗ ಹುಡಿಗಿಯರು ಅಲ್ಲಿ ಒಂದು ಇಲ್ಲಿ ಒಂದು೯೦ ಭಾಗ ಹುಡಿಗಿಯರು ಹಸೆ ಮಣೆ ಏರುತರೆ
90 ಜನ ಹುಡುಗಿಯರು ಹಸಮಣೆ
90 ಜನ ಹುಡುಗಿಯರು ಹಸಮಣೆ ಎರುತ್ತೀದ್ದಾರೆ ಎಂಬುದು ಎಲ್ಲಿ ದಾಖಲಾಗಿದೆ ಲೋಕೇಶ್ ರವರೇ
ಅದು ನಿಮ್ಮ ತಪ್ಪು ಕಲ್ಪನೆ ನಿಮ್ಮ ಹುಡುಗಿ ಕೈ ಕೊಟ್ಟಳು ಅಂತ ಉಳಿದಿರೋ ಹುಡುಗಿಯರ ಬಗ್ಗೆ ತಪ್ಪು ಅಭಿಪ್ರಾಯವಾಗಿ ತಿಳಿಯೋದು ತಪ್ಪು ನನ್ನ ಅನಿಸಿಕೆ ಪ್ರಕಾರ ಹುಡುಗ ಹುಡುಗಿಯರದು ಸಮಪಾಲು....
ನಾನು ಎಲ್ಲ ಹುಡುಗಿಯರ ಬಗೆ
ನಾನು ಎಲ್ಲ ಹುಡುಗಿಯರ ಬಗೆ ಹೇಳುತಿಲ್ಲ ಪ್ರೀತಿ ಮಾಡಿ ಕೈ ಕೊಡೊ ಹುಡುಗಿರಿಗೆ ಬಗೆ ಮಾತ್ರ 90 ಜನ ಹುಡುಗಿಯರು ಹಸಮಣೆ ಎರುತ್ತೀದ್ದಾರೆ ಎಂಬುದು ನನ್ನ ಅಭಿಪ್ರಾಯ PAVUರವರೆ
ಲೋಕೇಶ್ ರವರೇ ಇವೆಲ್ಲಾ ಕೇವಲ ಹುಡು
ಲೋಕೇಶ್ ರವರೇ ಇವೆಲ್ಲಾ ಕೇವಲ ಹುಡುಗಿಯರ ತಪ್ಪುಗಳು, ಅವರು ಮಾಡುವ ಮೋಸಗಳು ಮಾತ್ರ, ಹುಡುಗ್ರು ತುಂಬಾ ಸಾಚಾಗಳು ಅನ್ನೋ ಹಾಗಿದ್ರೆ, ಎಷ್ಟೊಂದು ಹುಡುಗೀರು ನೆಮ್ಮದಿಯಾಗಿ ಇರ್ತಾ ಇದ್ರು ಗೊತ್ತಾ??????? ಆತ್ಮಹತ್ಯೆ ಮಾಡಿಕೊಂಡ್ರೆ ಒಂದೇ ಸಲ ಎಲ್ಲಾ ನೋವಿಗೂ ಪೂರ್ಣ ವಿರಾಮ..ಆದ್ರೆ ಜೀವನ ಇಡೀ ನರಳೋ ಕರ್ಮನೂ ಹುಡುಗ್ರು ಹುಡುಗೀರ್ಗೆ ದಯಪಾಲಿಸಿರ್ತಾರೆ. ಪ್ರೀತಿಸಿ ಕೈ ಕೊಡೋದ್ರಲ್ಲಿ ಕೇವಲ ಹುಡುಗಿಯರು ಮಾತ್ರ ಅಲ್ಲ, ಹುಡುಗರ ಪಾಲೂ ಇದೆ.
ನಾನು ಹೆಣ್ಣು ಮಕ್ಕಳ ವಿರೋಧಿ ಅಲ್ಲ
ನಾನು ಹೆಣ್ಣು ಮಕ್ಕಳ ವಿರೋಧಿ ಅಲ್ಲ ??
ಪ್ರೀತಿ ಮಾಡಿ ಕೈ ಕೊಡೊ ಹುಡುಗಿರಿಗೆ ಮಾತ್ರ ವಿರೋಧಿ
ಇದನ್ನೂ ನಾನು ಬರೆವಾಗ ನನಗೆ ಎರಡೇ ಕಣ್ಣು. ಆದರೆ ಓದುಗರಿಗೆ ಕೋಟಿ ಕೋಟಿ ಕಣ್ಣು’ ಒಂದು ಪುಟವನ್ನು ವಿಸ್ಮಯನಗರಿಗೆ ಕಳುಹಿಸುವ ಮುನ್ನ ನಾನು ಒಬ್ಬ ನೋಡಿರಬಹುದು. ಆದರೆ ಅದೇ ಪುಟವನ್ನು ಸಾವಿರ ಮಂದಿ ಓದುತ್ತಾರೆ ಏನು ಮನಸ್ಸಿಗೆ ಬರುತ್ತದೋ ಅದನ್ನೇ ಬರೆದದ್ದು, ಹೀಗಾಗಿ ನನ್ನ ಬರಹಗಳು ಅಡೇ ತಡೆ ಇಲ್ಲದೆ ... ನಾನು........................
ನಾನು ಪ್ರೀತೀಸಿದ ಹುಡುಗಿ ನನಗೆ ಮೋಸ ಮಾಡಿದಳು ನಾನೇನು ಮಾಡಲಿ ? ಮನಸಿನಲ್ಲಿ ಇರೋದನ್ನ ಮನಸಿನಲ್ಲೇ ಬಿಡೋಕೆ ಮನಸಿಲ್ಲ ಮನಸಿಗೆ ಏನ್ ತೊಚತ್ತೋ ಅದನ್ನ ಮಾಡ್ಬೇಕು, ಪ್ರೀತಿ ಅಂದರೆ ಬರೀ ಮೋಸ ? ಎದೆಯೊಳಗದೆಷ್ಟು ಪ್ರಶ್ನೆಗಳ - ನಿಮ್ಮ ಉತ್ತರ?????
ಲೋಕೇಶ್ ರವರೇ ಭಾವನೆಗಳನ್ನ ನಿಯಂತ್
ಲೋಕೇಶ್ ರವರೇ ಭಾವನೆಗಳನ್ನ ನಿಯಂತ್ರಿಸಿಕೊಳ್ಳಬೇಕು... ನೀವು ಪ್ರೀತಿಯಲ್ಲಿ ಮೋಸ ಹೋದ ಹಾಗೆ ಹಲವು ಹುಡುಗಿಯರು ಕೂಡ ಪ್ರಾಮಾಣಿಕವಾಗಿ ಪ್ರೀತಿಸಿ ಆಮೇಲೆ ಜೀವನವಿಡೀ ಕೊರಗುತ್ತಾ ಇರೋದನ್ನ ನಾನು ನೋಡಿದ್ದೀನಿ, ನೋಡ್ತಾ ಇದ್ದೀನಿ.. ಪ್ರೀತಿ ಅಂದರೆ ಬರೀ ಮೋಸ ಅಂತ ಯಾಕೆ ಅಂದುಕೋಳ್ತೀರಾ?? ನಿಮ್ಮೆಲ್ಲಾ ಪ್ರಶ್ನೆಗಳಿಗೂ ನನ್ನಿಂದಾದಷ್ಟು ಉತ್ತರಿಸಲು ಖಂಡಿತಾ ಪ್ರಯತ್ನಿಸ್ತೀನಿ. ಪ್ರೀತಿ ಅನ್ನೋದು ಒಂದು ಭಾವನೆ ಅಷ್ಟೆ. ಅದೇ ಜೀವನ ಅಲ್ಲ. ಹಾಗೆ ಅಂತ ಅಂದುಕೊಂಡ್ರೆ ಬದುಕೋದೆ ಕಷ್ಟ ಆಗುತ್ತೆ..ಇದು ಇತ್ತೀಚೆಗೆ ನಾನು ಕಂಡುಕೊಂಡ ಸತ್ಯ. ನಿಮಗೆ ಯಾರೂ ಆಗಿರದ ಒಬ್ಬಳು ಹುಡುಗೀನ ನೀವು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದಿರಿ ಎಂದರೆ ಖಂಡಿತಾ ನಿಮ್ಮ ಭಾವನೆಗಳನ್ನ ಎಲ್ಲರೂ ಗೌರವಿಸ್ತೀವಿ. ಯಾಕೆಂದರೆ, ಈ ಸ್ವಾರ್ಥ ಪ್ರಪಂಚದಲ್ಲಿ ನಿಸ್ವಾರ್ಥ ಪ್ರೀತಿ ಬಹಳಾನೇ ಅಪರೂಪ. ಯಾರಿಗ್ಗೊತ್ತು, ನಿಮ್ಮನ್ನ ನೀವು ಇರುವಂತೆಯೇ ನಿಮ್ಮೆಲ್ಲಾ ಒಳ್ಳೇ ಹಾಗೂ ಕೆಟ್ಟ ಗುಣಗಳೊಂದಿಗೆ ಪ್ರೀತಿಸುವ ಹುಡುಗಿ ಸಿಗಬಹುದು. ಅಲ್ವಾ???? ಜೀವನ ಹೇಗೆ ಸಾಗುತ್ತೆ ಅಂತ ಯಾರಿಗೂ ಹೇಳೋಕಾಗಲ್ಲ. ಒಂದು ಬಾರಿ ನೀವು ಕಳೆದುಕೊಂಡೆ ಅಂದುಕೊಂಡಿದ್ದು ಇನ್ನೊಂದು ರೂಪದಲ್ಲಿ ನಿಮ್ಮ ಜೀವನದಲ್ಲಿ ಸಿಗಬಹುದು. ಏನಂತೀರಾ????
ಜ್ಯೋತಿ ನೀವು ಬರೆದ ಬರಹಗಳನ್ನು
ಜ್ಯೋತಿ ನೀವು ಬರೆದ ಬರಹಗಳನ್ನು ನೋಡಿ ಓದಿ ತು೦ಬಾ ಇಷ್ಟಪಟ್ಟಿದ್ದೆ....ಆದರೆ ನೀವು ಲೋಕೇಶ್ ಅವರ ಬರಹದ ಅಭಿಪ್ರಾಯದಲ್ಲಿ ಬಳಸಿದ "ಸಾಚಾ" ಅನ್ನೋ ಪದದಿ೦ದ ನಿಮ್ಮ ಮನೋಭಾವದ ದೌರ್ಭಲ್ಯದ ಬಿ೦ಬ ಮೂಡಿದೆ...ದಯವಿಟ್ಟು ಇ೦ತಹ ಆಡು ಭಾಷೆಗಳ ಪದಬಳಕೆ ಮಾಡಬೇಡಿ....
ಮಹೇಶ್ ರವರೇ, ನನ್ನ ಬರಹಗಳನ್ನು ಮೆ
ಮಹೇಶ್ ರವರೇ, ನನ್ನ ಬರಹಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಸಾಚಾ ಅನ್ನೋ ಪದ ನೀವು ಹೇಗೆ ಅಂದುಕೊಳ್ಳುತ್ತೀರೋ ಆ ಅರ್ಥ ಕೊಡುತ್ತೆ. ಬಹುಷಃ ಇತ್ತೀಚಿಗಿನ ಸಿನೆಮಾಗಳಿಂದ ಅದರ ಅರ್ಥ ಅನರ್ಥವಾಗಿದ್ದರೆ ಅದಕ್ಕೆ ನಾನು ಹೊಣೆಯಾಗಲಾರೆ.. ಸಾಚಾ ಅನ್ನೋ ಪದ ಮನೋ ದೌರ್ಬಲ್ಯವನ್ನ ಹೇಗೆ ತೋರಿಸುತ್ತೋ ನನ್ಗೆ ಗೊತ್ತಿಲ್ಲ. ಆದರೆ ಮನೋಭಾವದ ದೌರ್ಬಲ್ಯವನ್ನ ಬಿಂಬಿಸೋ ಪದವಂತೂ ಅದಲ್ಲ. ಕೇವಲ ಒಂದು ಪದದ ಬಳಕೆಯಿಂದ ನೀವು ಒರ್ವ ವ್ಯಕ್ತಿಯ ಮನೋಭಾವವನ್ನು ಅಳೀತೀರಾ ಅಂದ್ರೆ, ನನ್ಗೆ ನಂಬೋದಿಕ್ಕೆ ಆಗ್ತಾ ಇಲ್ಲ.!! ಅದೇನೇ ಇದ್ರೂ ನಿಮ್ಮ ಸಲಹೆಯನ್ನ ಖಂಡಿತ ಸ್ವೀಕರಿಸ್ತೀನಿ ಹಾಗೂ ಇಂಥ ಆಡು ಭಾಷೆಯ ಪದ ಬಳಸೋದಿಲ್ಲ. ನಿಮ್ಮ ಸಲಹೆಗೆ ಧನ್ಯವಾದಗಳು.
ಜ್ಯೋತಿ & PAVU ರವರೆ ನಾನು
ಜ್ಯೋತಿ & PAVU ರವರೆ
ನಾನು ಯಾರನ್ನು ಪ್ರೀತಿಸುತ್ತಿಲ್ಲ ನನ್ನ ಸ್ನೇಹಿತನನ್ನ ಪ್ರೀತೀಸಿದ ಹುಡುಗಿ ನನ್ನ ಸ್ನೇಹಿತನಿಗೆ ಮೋಸ ಮಾಡಿದಳು ನಾನು ಇನ್ನು ಯಾರನ್ನು ಲವ್ ಮಾಡಿಲ್ಲ ನಾನು ಲವ್ ಮಾಡುವವರನ್ನು ದ್ವೇಷಸುತ್ತೆನೆ ಹಾಗೂ ನಾನು ಯಾರನ್ನು ಕೂಡ ಪ್ರೀತಿಸುತ್ತಿಲ್ಲ. ಮತ್ತೆ ನಿವು ತುಂಬಾ ಅನುಮಾನದ ಹುಡುಗಿಯರು ನನ್ನ ಸ್ನೇಹಿತ ಪ್ರೀತೀಸಿದ ಹುಡುಗಿ ಎಂದು ಬರೆಯಲ್ಲು ಬದಲು ನಾನು ಎಂದು ಬರೆದಿದೆ
ಲೋಕೇಶ್ ರವರೇ, ಅನುಮಾನಂ ಪೆದ್ದ ರೋ
ಲೋಕೇಶ್ ರವರೇ, ಅನುಮಾನಂ ಪೆದ್ದ ರೋಗಂ ಅನ್ನೋ ಮಾತಿದೆ.. ನೀವು ಪ್ರೀತಿಸಿ ಮೋಸ ಹೋಗಿದ್ದೆ ಎಂದು ತಿಳಿಸಿದ ಕಾರಣದಿಂದಲೇ ನಾನು ಆ ರೀತಿಯ ಅನಿಸಿಕೆ ನೀಡಿದ್ದು. ಇಲ್ಲದಿದ್ದರೆ ಬಹುಷಃ ನನ್ನ ಅನಿಸಿಕೆ ನಿಮ್ಮ ಗೆಳೆಯನ ಕುರಿತಾಗಿಯೇ ಇರುತ್ತಿತ್ತೇನೋ. .. ನಾನು ಹಾಗೂ ಪಾವು ಖಂಡಿತ ಅನುಮಾನದ ಹುಡುಗಿಯರಲ್ಲ. ಪ್ರೀತಿಯನ್ನು ಹಾಗು ಪ್ರೀತಿಸುವವರನ್ನ ಗೌರವಿಸುವ ಮತ್ತು ಯಾರಿಗೂ ಯಾವತ್ತೂ ಮೋಸ ಮಾಡಿರದೆ ಇದ್ದ ಕಾರಣವೇ ಇಂತಹ ಪ್ರತಿಕ್ರಿಯೆ ನೀಡಿದೆವು. ಎಲ್ಲಾ ಹುಡುಗರು ಹಾಗೂ ಎಲ್ಲಾ ಹುಡುಗಿಯರೂ ಕೆಟ್ಟವರಲ್ಲ್. ಸಾರ್ವತ್ರಿಕವಾಗಿ ಎಲ್ಲಾ ಹುಡುಗಿಯರೂ ಕೆಟ್ಟವರು, ಮೋಸ ಮಾಡೋರು ಅನ್ನೋ ರೀತಿಯಲ್ಲಿ ಹೇಳಿದ್ರೆ, ಒಳ್ಳೆ ಹುಡುಗಿಯರಿಗೆ, ಪ್ರಾಮಾಣಿಕವಾಗಿ ಪ್ರೀತಿಸಿ ಮೋಸ ಹೋದ ಹುಡುಗಿಯರಿಗೆ, ಬೇಸರ ಆಗುತ್ತೆ ಅಲ್ವೇ?? ಅದ್ಕೆ ಈ ರೀತಿ ಅಭಿಪ್ರಾಯ ನೀಡಿದ್ವಿ.. ನಿಮ್ಮನ್ನ ಅನುಮಾನಿಸೋ ಅಥವಾ ಇಡಿ ಗಂಡು ಕುಲವನ್ನೇ ಅವಮಾನಿಸೋ ಉದ್ದೇಶ ಇಲ್ಲ... ಧನ್ಯವಾದಗಳೊಂದಿಗೆ, ಜ್ಯೋತಿ.
ಲೋಕೇಶ್ ರವರೇ ಅನುಮಾನ ಅಂತ
ಲೋಕೇಶ್ ರವರೇ ಅನುಮಾನ ಅಂತ ಏನಿಲ್ಲಾ ಬೇರೆಯವರ ಮೇಲೆ ಅನುಮಾನ ಪಡುವ ಭಾವನೆಯು ನಮಗಿಲ್ಲ...ನಿಮಗೆ ನಾವು ಅನುಮಾನ ಪಡುವ ಹುಡುಗಿಯರ ಹಾಗೇ ಕಾಣಿಸಿದ್ದು ನಿಮ್ಮ ಅನುಮಾನ......
ಲೋಕೇಶ್ ರವರೆ, ಪ್ರೀತಿಯ ಬಗ್ಗೆ ತು
ಲೋಕೇಶ್ ರವರೆ, ಪ್ರೀತಿಯ ಬಗ್ಗೆ ತುಂಬಾ ಚೆನ್ನಾಗಿ ಬರ್ದಿದ್ದಿರಾ,ಆದರೂ ನಿಮ್ಮ ಅನುಭವದ ಈ ಲೇಖನದಲ್ಲಿ ಕೇವಲ ಹುಡುಗಿಯರ ವಿರೋದಿಯಂತೆ ಕಂಡುಬರಿತ್ತೀರಾ,ಯಾಕೆಂದರೆ ಪ್ರೀತಿಯ ವಿಷಯದಲ್ಲಿ ಅದು ಗಂಡಾಗಿರಬಹುದು ಹೆಣ್ಣಾಗಿರಬಹುದುಇಬ್ಬರಲ್ಲೂ ಸಮಾನವಾದ ಭಿನ್ನ ಭಾವ ಇದ್ದೆ ಇರುತ್ತದೆ. ಎಲ್ಲ ಹುಡುಗರು ಒಳ್ಳೆಯವರಲ್ಲ ಅದೇ ರೀತಿ ಎಲ್ಲಾ ಹುಡುಗಿಯರೂ ಕೂಡ ಕೆಟ್ಟವರಲ್ಲಕೆಲವರು ಶೋಕಿಗೆ,ಮತ್ತೆ ಕೆಲವರು ಟೈಂ ಪಾಸ್ ಗೆ, ಇನ್ನೂ ಮತ್ತೆ ಕೆಲವರು ಐಷಾರಾಮಿ ಜೀವನದ ಆಸೆಗಾಗಿ ಪ್ರೀತಿ ಎಂಬ ನಾಟಕವಾಡುತ್ತಾರೆ, ಆದರೆ ಇಲ್ಲಿ ನಿಜವಾಗಿ ಪ್ರೀತಿ ಮಾಡುವವರಿಗೆ ಆ ರೀತಿಯ ಮನೋಭಾವ ಇರುವುದಿಲ್ಲ, ಪ್ರೀತಿ ಎಂಬುದೇ ನಿಜವಾಗಲು ಅದೊಂದು ಅರ್ಥವಾಗದ ಬಂಧವಾಗಿದೆ.ಹೆತ್ತು ಹೊತ್ತು ಸಾಕಿದ ತಂದೆ ತಾಯಿಗಳ ಪ್ರೀತಿಗಿಂತ ಈ ಪ್ರಪಂಚದಲ್ಲಿ ಅದಕ್ಕಿರುವಷ್ಟು ಬೇರೆ ಪ್ರೀತಿಗೆ ಸ್ಥಾನವಿಲ್ಲ ಎಂಬುದೆ ನನ್ನ ಅಭಿಪ್ರಾಯ, ಹುಡುಗ-ಹುಡುಗಿ ಪ್ರೀತಿ ವಿಷಯದಲ್ಲಿ ಆ ಪ್ರೀತಿ ಎಷ್ಟರಮಟ್ಟಿಗೆ ನಿಜವಾಗಿದೆ ಎಂಬುದೇ ಸಂಶಯಾತ್ಮಕವಾಗಿರುತ್ತದೆ,,, ಯಾಕೆಂದರೆ ತಂದೆ ತಾಯಿಯರ ಕಣ್ಣು ತಪ್ಪಿಸಿ ನಡೆಯುವ ಈ ಪ್ರೀತಿಕೊನೆಗೆ ಅವರಿಂದಲೇ ಆ ಪ್ರೀತಿ ಕೆಲವೊಮ್ಮೆ ಕೊನೆಯಾಗುತ್ತದೆ.ಮತ್ತೆ ೯೦ ರಷ್ಟು ಹುಡುಗರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂತಾ ಹೇಳ್ತಿರಲ್ಲಾ ಲೋಕೇಶ್, ಹುಡುಗಿರೇ ಕೈ ಕೊಟ್ಟು ಧೈರ್ಯವಾಗಿ ಹಸೆ ಮಣೆ ಏರುವಾಗ ನಾವು ಹುಡುಗರೇಕೆ ಆತ್ಮಹತ್ಯೆ ಮಾಡ್ಕೋಬೇಕು ಅಂತಾ ಗೊತ್ತಾಗ್ತಿಲ್ಲ. ಪ್ರೀತಿ ಅನ್ನೊದು ಕೇವಲ ಒಬ್ಬರಿಗೆ ಮೀಸಲಾದುದಲ್ಲ ಅದು ವಿಶಾಲವಾದುದು... ಆದರೂ ನನ್ನ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಹೇಳಿ ಲೋಕೇಶ್,,, ಈ ಹುಡುಗ-ಹುಡುಗಿಯರ ನಡುವೇ ನಡೆಯುವ ಈ ಪ್ರೀತಿ ಅನ್ನೋದುನಿಜವಾದ ಪ್ರೀತಿಯೇ?? ತಂದೆ-ತಾಯಿಯರ ಪ್ರೀತಿ ಮರೆತು ವಯಸ್ಸಿನ ತೊಳಲಾಟದಲ್ಲಿ ಅವರನ್ನೆ ದಿಕ್ಕರಿಸಿ ಮಾಡುವ ಈ ರೀತಿಯ ಪ್ರೀತಿ ಬೇಕೆ???ಬಹುಶಃ ನನ್ನ ಅಭಿಪ್ರಾಯ ಅತಿಯಾಯ್ತು.. ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ,,,,,,,,,,,,,,
ಮಹೇಶ್ ರವರೇ, ತಾಯಿ
ಮಹೇಶ್ ರವರೇ,
ತಾಯಿ ಪ್ರೀತಿ
ಬಾಲ್ಯದಲ್ಲಿ ಕೇಳಿದ ಒಂದು ಪುಟ್ಟ ಕಥೆ.. ಹೆತ್ತ ಕರುಳಿನ ದೊಡ್ಡತನವನ್ನು ಹೀಗೆ ಬಿಂಬಿಸುತ್ತದೆ:
ಒಮ್ಮೆ ದುಷ್ಟನಾದ ಮಗನೊಬ್ಬ, ತನ್ನ ಪ್ರೇಯಸಿಯ ಆಸೆ ಈಡೇರಿಸಲು, ತನ್ನ ತಾಯಿಯನ್ನೇ ಕೊಂದು, ಆಕೆಯ ಹೃದಯವನ್ನು ಪ್ರಿಯತಮೆಗೆ ತೋರಿಸಲು ಅವಸರವಸರವಾಗಿ ಓಡುತ್ತಿರುತ್ತಾನೆ. ರಸ್ತೆಯಲ್ಲಿ ಕಲ್ಲು ಎಡವಿ ಆ ದುಷ್ಟ ಮಗ ಮುಗ್ಗರಿಸುತ್ತಾನೆ.
ಆಗ ತಾಯಿ ಹೃದಯ ಕೇಳುತ್ತದಂತೆ, ಮಗು ನಿನಗೆ ನೋವಾಗಲಿಲ್ಲ ತಾನೆ?
ತಾಯಿಯ ಹೃದಯವೇ ಅಂತಹದ್ದು. ತನಗೆ ನೋವಾದರೂ ಸರಿಯೇ, ತನ್ನ ಮಗ ಸಂತೋಷದಿಂದ ಇರಬೇಕು ಎಂದು ಬಯಸುವ ಸಹೃದಯಿ ಆಕೆ. ಹತ್ತಾರು ಕಷ್ಟ, ಕಾರ್ಪಣ್ಯಗಳನ್ನು ಸಹಿಸುವ ತಾಯಿ, ತನ್ನ ಕರುಳಿನ ಕುಡಿಗೆ ಕೊಂಚ ನೋವಾದರೂ ಸಹಿಸಳು. ದೂರದಲ್ಲಿರುವ ತನ್ನ ಕಂದನಿಗೆ ಕೊಂಚ ನೋವಾದರೂ, ಆಕೆಯ ಹೃದಯ ಮಿಡಿಯುತ್ತದೆ. ಆಕೆಯ ಆರನೇ ಇಂದ್ರಿಯ (ಸಿಕ್ಸ್ತ್ ಸೆನ್ಸ್ ) ತುಡಿಯುತ್ತದೆ. ಎಲ್ಲಾದರೂ ಇರಲಿ ತನ್ನ ಮಗ ಚೆನ್ನಾಗಿರಲಿ ಎಂದು ತಾಯಿ ಸದಾ ದೇವರನ್ನು ಪ್ರಾರ್ಥಿಸುತ್ತಾಳೆ. ಈ ತಾಯಿ ಮಮತೆ - ಮಮಕಾರವನ್ನು ವರ್ಣಿಸಲು ಪದಗಳೇ ಇಲ್ಲ. ಇದಕ್ಕೆ, ದೇಶ - ಭಾಷೆಯ ಎಲ್ಲೆಯಿಲ್ಲ. ತಾಯಿಗೆ ಮಿಗಿಲಾದ ದೇವರಿಲ್ಲ. ಭೂಮಿಗೆ ಬಂದ ಮೊದಲ ಕಂದನ ಅಳುವ ದನಿಯಿಂದ ಬಂದ ಅಮ್ಮಾ ಎಂಬ ಆ ಮಹಾ ಚೇತನ ಸ್ವರೂಪವಾದ ಶಬ್ದಕ್ಕೆ ಅರ್ಥ ಹೇಳುವ ಗಟ್ಟಿಗರು ಇನ್ನೂ ಹುಟ್ಟಿಲ್ಲ.
ಹುಡುಗಿಯರ ಪ್ರೀತಿ
ಪ್ರೀತಿ ಎಂದರೆ ಹುಡುಗಿಯರಿಗೆ ಸೌಕೆಸ್ ನಲ್ಲಿರು ಬೊಂಬೆ ತರ ಬೇಕಾದರೆ ಇಟ್ಟ್ಕೊತರೆ ಬೇಡಅಂದ್ರೆ ಬಿಸಾಕುತ್ತಾರೆ, ಒಂದು ಬೊಂಬೆಗಿಂತ್ತಾ ಮತೊಂದು ಬೊಂಬೆ ಚೆನ್ನಾಗಿದ್ದರೆ ಹಳೆ ಬೊಮ್ಬೆ ಬಿಸಾಡಿ ಹೊಸ ಬೊಂಬೆ ತರುತ್ತಾರೆ ಹಾಗೆ ಹುಡುಗಿರಾ ಪ್ರೀತಿ
ಹುಡಿಗೀರಿಗೆ,ಎಂಡ್ರಿ ,ಮಾತು ,ಮಾತಿಗೆ ಅಳುತ್ತಾರೆ ,ದಡ್ಡರು ನಾವು ನಂಬಿ ಬಿಡುತ್ತಿವಿ,ಪ್ರೇಮಿಗಳನ್ನು ಲೆಕ್ಕ ಮಾಡೋ ಕ್ಕಿಂತ , ಪ್ರೀತಿಲಿ ,ಮೋಸ ಹೋದವರನ್ನು ಲೆಕ್ಕ ,ಮಾಡಿ ನೋಡಿ , ನೂರಕ್ಕೆ , ನೂರು ಜನ , ಹುಡುಗರೇ ಸಿಗೋದು ,ಹುಡುಗರ ದುಕ್ಕ , ಅವರ ,ಗೋಳು , ಯಾರಿಗೂ ಗೊತ್ತಾಗಲ್ಲ , ಯಾಕೆಂದರೆ ,ನಮಗೆ ಎಲ್ಲರ ಮುಂದೆ ಅಳಾಕ್ಕಗಲ್ಲ, ಹಾಗಾಗಿ ಯಾರಿಗೂ ಗೊತ್ತಾಗಲ್ಲ ,Nixt Month 14 ಪ್ರೇಮಿಗಳ ದಿನ ,ಸಂಬ್ರಮಿಸೋ,ಪ್ರೇಮಿಗಳ ಗಿಂತ ,ದುಕ್ಕ ಪಡೋ ಪ್ರೇಮಿಗಳೇ ಜಾಸ್ತಿ , ಆದರೆ ಅವರ ಬಗ್ಗೆ , ಯಾರು ,ಯೋಚನೆ ಮಾಡಲ್ಲ ,ಹೆಣ್ಣು ಚಂಚಲೆ , ಎಲ್ಲ ಮರೆತು ಬಿಡ್ತಾಳೆ , ಆದ್ರೆ ,ನಾವು ಹುಡುಗರು ,ಯಾವದು ಮರೆಯಕ್ಕೆ ಆಗಲ್ಲ ,,, ಅವರ ನೆನಪಲ್ಲೇ , ಕೊರಗುತ್ತಿವಿ ,ಅಳೋದಕ್ಕೆ ಕಣ್ಣಿರು ಕೂಡ ಬತ್ತಿ ಹೋಗಿರುತ್ತೆ ,ಏನ್ ಮಾಡೋದು ಯಾರಿಗೆ ,ಹೇಳೋದು .ಆದ್ರೆ ,ಅವರು , ಮಾತ್ರ ಎಲ್ಲ ,ಮರೆತು ಸುಕವಗಿರ್ತಾರೆ , ಪ್ರೀತಿಸಿದ ಹುಡುಗಿ ಸಿಕ್ಕಿಲ್ಲ ಅಂತ ಬೇಜಾರಾಗಿ ,ಅವಳು ಹಸೆ ಮಣೆ ಏರಿದನ ನೋಡಿ ಹುಡುಗರು ಸತ್ತು ,ಹೋಗ್ತಾರೆ ,
ಜೀವನ ತಾಯಿಯಿಂದ ಆರಂಭವಾಗಿ ಹುಡುಗಿಯ ಪ್ರೀತಿಯಲ್ಲಿ ಅಂತ್ಯ ಆಗುತ್ತೆ ಪ್ರೀತಿ ಅಂದ್ರೇನೇ ಹಾಗೆ
ಜೀವನದಲ್ಲಿ ಒಂದೇ ಸಾರಿ ಪ್ರಾಮಾಣಿಕವಾಗಿ ಪ್ರೀತಿ ಮಾಡೋದಕ್ಕೆ ಸಾಧ್ಯ. ಆಮೇಲಾಮೇಲಿನ ಪ್ರೀತಿಯೆಲ್ಲ ಮೊದಲ ಪ್ರೀತಿಯ ಪಡಿಯಚ್ಚು. ಅದರ ನೆರಳು ಮಾತ್ರ’ ಆಕರ್ಷಣೆ - ಕ್ಷಣಿಕ ಪ್ರೀತಿ - ಅಮರ.
ನನ್ನ ಉತ್ತರ ಅತಿಯಾಯ್ತು.. ನಿವು ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಮಹೇಶ್ ರವರೇ
ನಾನು ಮಹೇಶ್ ಅಲ್ಲ ಲೋಕೇಶ್,,, ನವೀ
ನಾನು ಮಹೇಶ್ ಅಲ್ಲ ಲೋಕೇಶ್,,, ನವೀನ್ ಚಂದ್ರ ಅಂತಾ! ಉತ್ತರ ಉದ್ದವಾದರು ಪರ್ವಾಗಿಲ್ಲ,,. ತಾವು ಪ್ರೀತಿಯನ್ನು ತಾಯಿ ಪ್ರೀತಿ, ಹುಡುಗಿಯರ ಪ್ರೀತಿ ಅಂತೆಲ್ಲ ವಿಂಗಡಣೆ ಮಾಡುವ ಅಗತ್ಯವಿರಲಿಲ್ಲತಾಯಿಯನ್ನೆ ಕೊಂದು ಯಾವುದೋ ಹುಡುಗಿಯ ಪ್ರೀತಿಗೋಸ್ಕರ ಓಡಿಹೋದವನ ದು ಅದ್ಯಾವ ಪ್ರೀತಿ ಗೊತ್ತಿಲ್ಲ ಲೋಕೇಶ್,,,,ಪ್ರೀತಿ ಅನ್ನೋದು ಕೇವಲ ತಾಯಿ ಹುಡುಗಿಗೆ ಸೀಮಿತವಲ್ಲ ಅದು ವಿಶಾಲವಾದುದು,,,,, ಹುಡುಗಿ-ಹುಡುಗಿಯರ ನಡುವೆ ನಡೆಯುವ ಪ್ರೀತಿ ಕೇವಲಆಕರ್ಷಣೆಯಷ್ಟೆ ಎಂಬುದು ನನ್ನ ಅಭಿಪ್ರಾಯ,,,ಪ್ರೀತಿಗೋಸ್ಕರ ಸಾಯೋದು ನಿಜವಾಗಲೂ ಹುಚ್ಹುತನದ ಪರಮಾವಧಿ,,,,,,,,
i am sorry ನವೀನ್ ಚಂದ್ರ
i am sorry ನವೀನ್ ಚಂದ್ರ ರವರೆ
22 ವರ್ಷ ಪ್ರೀತಿ, ವಾತ್ಸಲ್ಯ, ಮಮಕಾರ, ಕಾಳಜಿ, ವಿದ್ಯಾಭ್ಯಾಸ, ಊಟ, ಬಟ್ಟೆ, ಹಣ ಎಲ್ಲಕ್ಕಿಂತ ಮುಖ್ಯವಾಗಿ ಜನ್ಮ ಕೊಟ್ಟ ಅಪ್ಪ-ಅಮ್ಮನಿಗೆ ಈ ಮಟ್ಟದ ನಯವಂಚನೆ, ನಂಬಿಕೆ ದ್ರೋಹ ಮಾಡಲು ಮನಸ್ಸಾದರೂ ಹೇಗೆ ಬರುತ್ತೆ ಅಪ್ಪ-ಅಮ್ಮನ ವಾತ್ಸಲ್ಯದ ಬಿಸುಪಿಗಿಂತ ಹುಡುಗಿಯ ಮೇಲಿನ ಪ್ರೀತಿ ಹೆಚ್ಚು ಸುಖ,ಶಾಂತಿ, ನೆಮ್ಮದಿ ನೀಡುತ್ತಾ ಕೇವಲ ಎರಡು ವರ್ಷಗಳ ಹಿಂದೆ ಪರಿಚಯವಾದವರ ಪ್ರೇಮ, ; ತಂದೆ-ತಾಯಿಯೊಂದಿಗೆ ಇರಲಾರದಷ್ಟು ಕೆರಳಿಸುತ್ತವಾ ? ಅಥವಾ, ತಂದೆ-ತಾಯಿ ಬೇಡವಾಗಿಬಿಡುತ್ತಾರಾ ? ಪ್ರಪಂಚದಲ್ಲಿ ತಾಯಿ ಪ್ರೀತಿಗಿಂತ ಮಿಗಿಲಾದ ಪ್ರೀತಿ ಮತ್ತೊಂದಿಲ್ಲವೆಂಬ ಮಾತಿದೆ.ಈ ಮಾತು ಪಕ್ಷಿ ಪ್ರಾಣಿ ಸಂಕುಲಕ್ಕೂ ಅನ್ವಯವಾಗುತ್ತದೆ ತಾಯಿ ಪ್ರೀತಿ ನಿಷ್ಕಲ್ಮಷವಾದದ್ದು ತಾಯಿ ಮಗುವಿಗೆ ತೋರಿಸುವ ಮಮತೆಯು ನಿಷ್ಕಲ್ಮಶವಾಗಿರುತ್ತದೆ, ನಿರ್ಮಲವಾಗಿರುತ್ತದೆ. ಆ ತಾಯಿಯ ಮಮತೆ ಪಡೆಯುವ ಮಗುವೇ ಧನ್ಯ. ತಾಯಿ ಮಗುವಿಗೆ ತೋರಿಸುವ ಪ್ರೀತಿ, ವಿಶ್ವಾಸವನ್ನು ಎಷ್ಟು ಬಣ್ಣಿಸಿದರೂ ಸಾಲದು.ತಾಯಿ ಎ೦ಬ ಪದದ ಅರ್ಥ ತಿಳಿಯಲಾಗದು, ಏಕೆ೦ದರೆ ಅಷ್ಟೊ೦ದು
ಆಳವಾಗಿದೆ. ಅಮ್ಮಾ....... ಅಮ್ಮಾ......ಎ೦ಬ ಪದದಲ್ಲಿ ಏನೊ ಅಡಗಿದೆ. ದುಖವನ್ನು ದೂರವಿಟ್ಟು ಸ೦ತೋಷವನ್ನು. ಸೆಳೆಯುವ ಶಕ್ತಿ
ಇದರಲ್ಲಿ ಅಡಗಿಕೊ೦ಡಿದೆ. ತಾಯಿ ಇಲ್ಲದ ಪ್ರಪ೦ಚ ನೀರು ಇಲ್ಲದ ಮರುಭೂಮಿ ...
ಪ್ರೀತಿಗೆ ತಾಯಿ ಪ್ರೀತಿ, ಹುಡುಗಿಯ ಪ್ರೀತಿ ಅಣ್ಣನ ಪ್ರೀತಿ ತಂಗಿ ಪ್ರೀತಿ ಅಕ್ಕನ ಪ್ರೀತಿ ಅತ್ತಿಗೆ ಪ್ರೀತಿ ಈಗೆ ತುಂಬಾ ಅರ್ತ ಇಂದೆ ನವೀನ್ ಚಂದ್ರರವರೇ
ಜ್ಯೋತಿ
ಜ್ಯೋತಿ ರವರೇ, ನನ್ನ ಬರಹಗಳನ್ನು ಓದಿ ಅಭಿಪ್ರಾಯ ತಿಳಿಸಿದಕೆ ಧನ್ಯವಾದಗಳು.
ಪ್ರೀತಿ ಅನ್ನೋದು ಒಂದು ಭಾವನೆ ಅಲ್ಲ.. ಅದೇ ಜೀವನ
ಪ್ರೀತಿ ಇಲದ್ದಿದರೆ ಈ ಪ್ರಪಂಚದಲ್ಲಿ ಯಾರು ಬದುಕಲು ಸಾಧ್ಯವಿಲ್ಲ ಜ್ಯೋತಿರವರೇ
ಈ ಪ್ರಪಂಚದಲ್ಲಿ ಏಷ್ಟೂಂದು ವಿಷಯ ಇದ್ರು ನಾನ್ಯಾಕೆ ಈ ಹುಡುಗಿಯರ ಬಗ್ಗೆ ಬರೆಯುತ್ತೆನೆ.ನನಗೆ ಗೊತಿಲ್ಲ ?
ಕೆಲವು ಪ್ರಶ್ನೆಗಳಿಗೆ ಉತ್ತರವೆ ಇರುವುದಿಲ್ಲ
ಲೋಕೇಶ್ ರವರೇ, ನಿಮ್ಮ ಪ್ರಶ್ನೆಯಲ್
ಲೋಕೇಶ್ ರವರೇ, ನಿಮ್ಮ ಪ್ರಶ್ನೆಯಲ್ಲೇ ಉತ್ತರವೂ ಇದೆ.. ಪ್ರೀತಿನೇ ಜೀವನ ಅಂತೀರಾ ಹಾಗಿದ್ದಮೇಲೆ ಪ್ರೀತೀನಾ ದ್ವೇಷಿಸಬೇಡಿ. ಹುಡುಗಿಯರ ಬಗ್ಗೆ ಚಿಂತಿಸೋದು, ಬರೆಯೋದು ಬಿಟ್ಟು ಇತರೆ ವಿಷ್ಯಗಳ ಕಡೆ ಗಮನ ಕೊಡಿ..ನಿಮ್ಮ ಉತ್ತರ ಸಿಗದ ಪ್ರಶ್ನೆಗಳಿಗೆ ಜೀವನದ ಅನುಭವ ಉತ್ತರ ಕೊಡುತ್ತೆ.. ಆದ್ರೆ ಈ ರೀತಿ ಸಾರ್ವತ್ರಿಕವಾಗಿ ಎಲ್ಲಾ ಹುಡುಗೀರೂ ಕೆಟ್ಟವರು, ಮೋಸಮಾಡೋರು ಅನ್ನೋ ಭ್ರಮೆಯಿಂದ, ತಪ್ಪು ಕಲ್ಪನೆಯಿಂದ ಆದಷ್ಟು ಬೇಗ ಹೊರಬನ್ನಿ. ಧನ್ಯವಾದಗಳೊಂದಿಗೆ, ಜ್ಯೋತಿ.
ಮಹೇಶ್ ರವರೇ, ನನ್ನ ಬರಹಗಳನ್ನು ಮೆ
ಮಹೇಶ್ ರವರೇ, ನನ್ನ ಬರಹಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು
ನಾನು ಕೆಟ್ಟವನಲ್ಲ, ನಾನು ಒಳ್ಳೆಯವನು. ನನಗೂ ಮನುಷ್ಯತ್ವ ಎಂಬುದಿದೆ. ಆದರೆ, ನನ್ನ ಸ್ನೆಹಿತರ ಜೀವನ ನನ್ನ ಈ ರೀತಿ ಮಾಡಿದೆ ಈ ಪ್ರಪಂಚದಲ್ಲಿ ಕೆಲವರು ಸಿನಿ ಪ್ರಿಯರು ಒಬ್ಬರು ಕಥೆ ಪ್ರಿಯ ಇನುಬ್ಬ ಕವನ ಪ್ರಿಯ ಇನ್ನು ಕೆಲವರು ಅಲೆಲೆಲೆ ಜಿಂಕೆಮರಿ ಪ್ರಿಯ ಈಗೆ ಹತ್ತು ಹಲವಾರು ವೇಷಗಳಲ್ಲಿ ಬದುಕುತ್ತಿರುವ ಜನರ ನಾನು ಹುಡುಗಿಯರ ಬಗ್ಗೆ ಈ ರೀತಿ ಬರೆದ ಕೂಡಲೇ ನನಗೆ ಹುಡುಗಿಯರ ಬಗ್ಗೆ ಗೌರವ ಇಲ್ಲವೇ ನನಗು ಗೌರವ ಇದ್ದೆ
ಹಾಯ್ ಲೋಕೇಶ್..... ನೀವು ಕೊನೆಯಲ್
ಹಾಯ್ ಲೋಕೇಶ್.....ನೀವು ಕೊನೆಯಲ್ಲಿ ಹೇಳಿದ್ರಲ್ಲಾ... ಮುಗ್ಧಹುಡುಗನೊಬ್ಬ ಬದುಕಿನಿಂದಾಚೆ ಹೆಜ್ಜೆಯಿಟ್ಟು ತುಂಬ ದಿನಗಳಾಗಿದ್ದವು.. ಅಂತಹ ಒಳ್ಳೆಯ ಕೆಲಸ!!! ಮಾಡಿಕೊಳ್ಳುವವರುಹೇಡಿಗಳು. ನನ್ನ ಪ್ರಕಾರ ಜೀವನದ ಪ್ರಾಮುಖ್ಯತೆಯ ಬಗ್ಗೆ ತಿಳಿಯದವರು ಆತ್ಮಹತ್ಯೆ ಮಾಡ್ಕೋಳ್ಳುತ್ತಾರೇನೋ...ಪ್ರೀತಿಯಾಚೆಗೂ.....ಬದುಕು.....ಜೀವನ...... ಭವಿಷ್ಯ ಇದೆಯಲ್ವಾ..........
ಸರಿಯಾಗಿ ಹೇಳಿದ್ರಿ ಶುಭಾ.... ಹುಡ
ಸರಿಯಾಗಿ ಹೇಳಿದ್ರಿ ಶುಭಾ.... ಹುಡುಗನೂ ಹಸೆಮಣೆ ಏರಬಹುದಲ್ವಾ?? ಸತ್ತು ಸಾಧಿಸೋದಾದರೂ ಏನು..ಪ್ರೀತಿಯಲ್ಲಿ ವಿಫಲಗೊಂಡು ಸತ್ತವರೆಲ್ಲಾ ಶ್ರೇಷ್ಟರಲ್ಲ.. ಕೇವಲ ಒಂದುವೈಫಲ್ಯತೆಯನ್ನ ಎದುರಿಸೋಕೆ ಹೆದರುವ ಜನರು ಅಷ್ಟೆ...
ಶುಭಾ & ಜ್ಯೊತಿ ರವರೆ ಏನು ಮಾಡೋಕೆ
ಶುಭಾ & ಜ್ಯೊತಿ ರವರೆ
ಏನು ಮಾಡೋಕೆ ಆಗಲ್ಲ ನಡಿದೆಲ್ಲ ಒಂದು ಕನಸು ಅಂತ ತಿಳ್ಕೊಂಡು ಅವನನ್ನ ಮರೆಯೋದಕ್ಕೆ ಟ್ರೈ ಮಾಡಿ ನಿಮ್ಮ ಕಾಲ್ ಮೇಲೆ ನೀವು ನಿಂತು ಅವನಿಗಿಂತ ಒಳ್ಳೆ ಹುಡುಗನ ಜೊತೆ ನೀವು ಮದ್ವೆ ಆಗಿತ್ತಿರ
ಆದರ ಹುಡುಗರು ಆ ರೀತಿ ಮಾಡಲು ಮನಸ್ಸು ಒಪ್ಪಲ್ಲ ಹುಡ್ಗುರು ಬೇರೆ ಹುಡುಗಿನ ಮದುವೆ ಅದರು ಕೊಡ ಅವರಿಗೆ ಹುಟ್ಟು ಮಕ್ಕಳಿಗೆ ನಿಮ್ಮ ಹೇಸರು ಇಟ್ಟು ಅವರನ್ನು ತುಂಬಾ ಪ್ರೀತಿಸುತ್ತಾರೆ ಅವರಿಗೆ ಸ್ವಲ್ಪ ನೋವು ಅಂದರೆ ಕೂಡ ಅವರ ಮನಸ್ಸಿಗೆ ತುಂಬಾ ನೋವುಗುತ್ತೆ ಆ ಮಕ್ಕಳಲ್ಲಿ ನಿಮ್ಮನು ಕಾಣುತ್ತಾರೆ ಅಷ್ಟು ಪ್ರೀತಿಸುತ್ತಾರೆ ನಿಮ್ಮನ
ಪ್ರಪಂಚದಲ್ಲಿರೋ ಎಲ್ಲಾ ಹುಡ್ಗುರು ಮಾಡೋ ಒಂದೇ ಒಂದು ತಪ್ಪು ಏನು ಗೊತ್ತಾ? ಒಂದ್ ಹುಡ್ಗೀನ ಪ್ರೀತ್ಸೋದು
Shubha ರವರೆ ನಿವು ಹೇಳಿದಿರಿ
Shubha ರವರೆ
ನಿವು ಹೇಳಿದಿರಿ ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿಗಳು. ಎಂದು ಅಂದು ನಿಮ್ಮ ತಪ್ಪು ಕಲ್ಪನೆ
ಅಂದು ಹುಡುಗರು ಪ್ರೀತಿಗೆ ಕೊಡುವ ಗೌರವ
ತಂದೆ ತಾಯಿ ಗೋಸ್ಕರ ಪ್ರಾಣ ಕೊಡುವ ಹುಡುಗರು ಹುಡಿಗಿಯರು ಯಾರು ಇಲ್ಲ
ಪ್ರೀತಿಗೆ ಬೇಕಿರುವುದು ಎರಡು ನಿಷ್ಕಲ್ಮಶ, ಸಮಾನ ಭಾವನೆಗಳುಳ್ಳ ಮನಸ್ಸು. ಪ್ರೀತಿ ನೀಡುವ ಮನಸ್ಸಿಗೆ ಪ್ರತಿಯಾಗಿ ಪ್ರೀತಿ ದೊರಕದಿದ್ದರೆ ಅದು ಪ್ರೀತಿ ನೀಡಬೇಕಾದರೂ ಯಾರಿಗೆ, ಏತಕ್ಕೆ? ಹುಡುಗಿಯರ ಮನಸ್ಸು ಸೂಕ್ಷ್ಮ ಎನ್ನುತ್ತಾರೆ, ಆದರೆ ಕನ್ನಡಕ ಹಾಕಿ ಹುಡುಕಿದರೂ ಕಿಂಚಿತ್ತು ಪ್ರೀತಿಯ ಕುರುಹು ಸಿಗುವುದಿಲ್ಲ. ಸಿಕ್ಕರೆ, ಅದು ಕೇವಲ ತಮಗಾಗಿ ಮಡಿದವರ ಅಸ್ಥಿಪಂಜರ. ಅದರ ಮೇಲೆ ಹುಡುಗಿಯರ ನಿತ್ಯದ ಮೆರವಣಿಗೆ, ಉತ್ಸವ ಎಲ್ಲಾ.
ಮೈ ಡಿಯರ್ ಗಯ್ಸ್, ನಿಮ್ಮ ಪ್ರೀತಿಗೆ ಸ್ಪಂದಿಸಿ ನಿಮ್ಮ ಮನಸ್ಸಿನ ತುಡಿತವನ್ನು ಅರಿತು ಬರುವ ಹುಡುಗಿಯರು ಬೆಳದಿಂಗಳ ಹುಣ್ಣಿಮೆಯಂತೆ, ತುಂಬಾ ಅಪರೂಪ. ಆದರೆ ಅವಸರ ಪಡುವ ನೀವುಗಳು, ಅಮವಾಸ್ಯೆಯ ದಿನವೇ ಹುಡುಗಿಯ ಹಿಂದೆ ಹೋಗಿ, ನಿಮ್ಮ ಬದುಕನ್ನು ಮುಂದೆಂದೂ ಬೆಳಕು ಕಾಣದ ಕತ್ತಲಿಗೆ ದೂಡುತ್ತೀರ. ಈ ರೀತಿ ನಮ್ಮ ಉಜ್ವಲವಾದ ಬದುಕಿಗೆ ಕತ್ತಲಿನ ಕೂಪದ ದಾರಿ ತೋರುವ ಪ್ರೀತಿ ನಮಗೆ ಬೇಕೆ? ನಮ್ಮತನವ ಮಾರಿಕೊಂಡು, ನಮ್ಮ ಮನಸ್ಸಿಗೆ ಮಾರಿಯಾಗಿ ಕಾಡುವ ಪ್ರೀತಿ ಬೇಕೆ? ಯಾರಿಗೋಸ್ಕರ , ಯಾರು ಬದುಕಲ್ಲ ,
ಯಾರ ,ಜೊತೆ ,ಯಾರು ಬರಲ್ಲ
ಯಾರಿಗೋಸ್ಕರ ,ಯಾರು ,ಅಳಲ್ಲ (ಅತ್ರು ಸಮಯಕ್ಕೆ ,ಅಷ್ಟೇ )
ನೀವು , ನಿಮ್ಮ ಜೀವನ , ನಿಮ್ಮ , ಗುರಿ ,ನಿಮ್ಮ ಸಾದನೆ , ಅಷ್ಟೇ ,
ವರ ,ಕೊಡದೆ ಇರೋ ದೇವರಿಗೊಸ್ಕರ ,ಯಾಕೆ ತಪಸ್ಸು ಮಡಿ ,ಜೀವನದ ,,ಅಮೂಲ್ಯ ಸಮಯನ ,ಹಾಳು ಮಾಡಿಕೊಳ್ಳುತ್ತಿರಿ ..?
ಪ್ರೀತಿ ,ಪ್ರೀತಿ ,ಪ್ರೀತಿ ,ಯಾರಿಗೆ ಬೇಕ್ರೀ, ಈ ಪ್ರೀತಿ ,
ಇಲ್ಲಾ ಲೋಕೇಶ್ ಆತ್ಮಹತ್ಯೆ ಅನ್ನ
ಇಲ್ಲಾ ಲೋಕೇಶ್ ಆತ್ಮಹತ್ಯೆ ಅನ್ನೋದು ನನ್ನ ಪ್ರಕಾರ ಪಲಾಯನವಾದ. ಪ್ರೀತಿಗೆ ಕೊಡೋ ಗೌರವ ಅಲ್ಲ. ನಾನ್ಯಾಕೆ ಈ ಮಾತು ಹೇಳ್ತಿದೀನಿ ಅಂದ್ರೆ ನಾವು ಒಂದು ಜೀವವನ್ನು ಉಳಿಸ್ಬೇಕು ಅಂತ ಎಷ್ಟೆಲ್ಲಾ ಕಷ್ಟ ಪಡ್ತೀವಿ.... ಹೀಗಿರುವಾಗ ಆತ್ಮಹತ್ಯೆ ಒಳ್ಳೆಯದಾ.......? ಆತ್ಮಹತ್ಯೆ ಮಾಡ್ಕೊಂಡ್ ತಕ್ಷಣ ಪ್ರೀತಿ ಅಮರನಾ.....?( ಆದ್ರೂ ನೀವು ವರ ಕೊಡದೆ ಇರೋ ದೇವರು ಅಂತೇಳಿ ಹುಡುಗಿಯರಿಗೆ ದೇವರ ಸ್ಥಾನ ಕೊಟ್ರಿ
..... ಧನ್ಯವಾದಗಳು.....