Skip to main content

ಮನದ ಕನವರಿಕೆ..

ಬರೆದಿದ್ದುDecember 25, 2011
11ಅನಿಸಿಕೆಗಳು

ಮತ್ತೊಂದು ದಿನ ಜಾರಿ ನಿಶೆಯ ತೆಕ್ಕೆಯೊಳಗೆ ಜಾರಿಯೇ ಬಿಟ್ಟಿತು.  ಈ ದಿನವೂ 'ಅವನು' ನೆನಪಾಗದೇ ಉಳಿಯಲಿಲ್ಲ.  ಅದೇ ದಿನ.. ಅದೇ ದಿನಚರಿ, ಅದೇ ಮಾತು, ಅದೇ ನೆನಪು.. ಹೊಸ ಅನುಭವಗಳತ್ತ ಕೈ ಚಾಚಿದರೂ ಅದೇಕೋ ಕೈಗೆ ಶೂನ್ಯವಲ್ಲದೇ, ಖಾಲಿತನವಲ್ಲದೇ ಇನ್ನೇನೂ ಸಿಗ್ತಾ ಇಲ್ಲ. ಮೊದಲು ಚಿಕ್ಕ ಚಿಕ್ಕ ವಿಷ್ಯಗಳಿಗೂ ಸಂಭ್ರಮಿಸುತ್ತಾ ಇದ್ದ ಮನಸು ಅದೇಕೋ ಜಡಗಟ್ಟಿ ಹೋಗಿದೆ. ಮೊದಲೆಲ್ಲಾ ನಾನೇ ಆಗಿ ಅನುಭವಿಸುತ್ತಾ ಇದ್ದಂತಹ ಐಸ್ ಕ್ರೀಮ್ ತಿನ್ನುವ ಖುಷಿ, ಸಿನೆಮಾಗಳಲ್ಲೊಂದಾಗಿ ಬೆರೆತು ಹೋಗುತ್ತಿದ್ದ ಆ ಬಗೆ, ಹೊಸತನಕ್ಕೆ ವಾಲುತ್ತಿದ್ದ ಮನಸ್ಸು, ಖುಷಿ ಖುಷಿಯಾಗಿ ಲವಲವಿಕೆಯಿಂದಿರುತ್ತಿತ್ತು. ಇತ್ತೀಚೆಗೆ ಮನದ ತುಂಬಾ ಖುಷಿಯ ಜಾಗವನ್ನು ಒಮ್ಮೆ ಮಾತು ಆವರಿಸಿಕೊಂಡರೆ ಮತ್ತೊಮ್ಮೆ ಮೌನವೇ ಸಾಮ್ರಾಜ್ಯವನ್ನಾಳುತ್ತದೆ... ಒಟ್ಟಾರೆ ನೆಮ್ಮದಿಯಿಲ್ಲ, ಏನೋ ಕಳೆದು  ಹೋದ ಭಾವ, ಬೇಸರ, ಹತಾಶೆ, ಕೋಪ.  ನಾಳೆಗೆ, ನಾಳೆಯ ಅದೇ ಮಾಮೂಲು ದಿನಚರಿಗೆ ತಯಾರಾಗ್ತಾ ಇರೋ ಮನಸು ಕತ್ತಲ ಆಕಾಶದಲ್ಲಿ ನಾಳೆ ಹೊಸದಾಗಿರಬಹುದೇನೋ ಎಂಬ ಆಶಾವಾದದ  ನಕ್ಷತ್ರಗಳನ್ನು ಹುಡುಕುತ್ತಾ, ಕೆದಕುತ್ತಾ, ಕನವರಿಸುತ್ತಾ ನಿದಿರೆಯ ಮಡಿಲಿಗೆ ಜಾರುತ್ತಾ ಇದೆ.....ಪ್ಲೀಸ್  ದೇವರೇ.. ... ನಾಳೆ ಹೊಸತಾಗಿರಲಿ.....ಪ್ಲೀಸ್... 

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

shubha ಸೋಮ, 12/26/2011 - 09:26

ಹಾಯ್ ಜ್ಯೋತಿ, ಹೇಗಿದ್ದೀರಾ....ಬಹಳ ಚೆನ್ನಾಗಿದೆ ನಿಮ್ಮ ಬರವಣಿಗೆಗಳು. ಹೀಗೇ ಮುಂದುವರಿಯಲಿ ನಿಮ್ಮ ಬರವಣಿಗೆ. ಹಾ ಪ್ರತಿ ದಿನವೂ ನಿಮಗೆ ಹೊಸತಾಗಿರಲಿ....ಶೂನ್ಯತೆ ಆವರಿಸದಿರಲಿ.

Jyothi Subrahmanya ಸೋಮ, 12/26/2011 - 10:02

ಚೆನ್ನಾಗಿದ್ದೀನೆ ಶುಭಾ.. ಧನ್ಯವಾದಗಳು ನಿಮ್ಮ ಹಾರೈಕೆಗೆ ಮತ್ತು ಅನಿಸಿಕೆಗೆ... 

ನವೀನ್ ಚ೦ದ್ರ ಸೋಮ, 12/26/2011 - 17:44

ನೀವು ನಾಳೆಯನ್ನು ಹೊಸತಾಗಿ ಮಾಡಿಕೊಂಡರೆ ಹೊಸತು ಇಲ್ಲವಾದರೆ ಇಲ್ಲ ಎಲ್ಲವು ನಿಮ್ಮಯ ಮನಸ್ಸಿನ ಮಂದಿರದಲ್ಲೆ ಮನೆ ಮಾಡಿಕೊಂಡಿದೆ,ಮತ್ತೆ ನೀವು ನೆನಪೇ ನೆನಪಾಗಲಾರೆಯಾ ಅಂತಾ ನೀವೇ ನೆನಪ್ಪನ್ನು ಪ್ರಶ್ನೆ ಮಾಡ್ತಿರಾ ಈಗ ನೋಡಿದ್ರೇ ನೆನಪಾಗದೇ ಉಳಿಯಲಿಲ್ಲ ಅಂತಾ ಹೇಳ್ತೀರಾ ಏನಿದರ ಒಳಾರ್ಥ ಜ್ಯೋತಿಯವರೇ...........

Jyothi Subrahmanya ಸೋಮ, 12/26/2011 - 17:50

ನವೀನ್ ಎರಡೂ ಬೇರೆ ಬೇರೆ ಲೇಖನಗಳು..ಬೇರೆ ಬೇರೆಯಾಗಿ ಓದಿದ್ರೆ ಒಳಾರ್ಥ ಗೊತ್ತಾಗಬಹುದು ಃ) ಅನಿಸಿಕೆಗೆ ಧನ್ಯವಾದಗಳು.

ಹರಿಹರಪ್ರಿಯ ಧ, 12/28/2011 - 12:15

 ಪ್ರತಿ  ಕ್ಷ್ನಣವೂ ಹೊಸದೆ ಕಣ್ರಿ, .. ಕಳೆದ ಒ೦ದು ಕ್ಷಣವನ್ನು ವಾಪಸ್ ತನ್ನಿ ನೊಡೊಣ.. ? ಆಗಲ್ಲ ತಾನೆ.. ಅದೆ ತರ, ಪ್ರತಿ ಕ್ಷಣವೂ ಹೊಸದೆ.. ನೀವು ಇನ್ನೂ ಬದುಕ್ಕಿದ್ದಿರಿ ಅನ್ನೊ ಕಾರಣವೊ೦ದೆ ಸಾಕಲ್ವೆ, ನೀವಿನ್ನೂ ಚೆನ್ನಾಗಿ ಬದುಕೊದಕ್ಕೆ...!!  Be Cheerful...

Jyothi Subrahmanya ಧ, 12/28/2011 - 16:59

ಃ) thanks a lot :)

anjali n n ಧ, 12/28/2011 - 14:01

ಕಳೆ ಎಷ್ಟೆ ಇದ್ದೆಇರಲಿ ಕನಸಿರದ ಬಾಳು-ಬಾಳೆ
ಮಳೆ ಬಿಲ್ಲು ಸಿಂಗರಿಸಿದ ಕರಿಮುಗಿಲ ನೊಂದ ಮಾಲೆ!
ಜ್ಯೋತಿ ಯಾವಗ್ಲೂ ಬೆಳಗುತ್ತಿರಬೇಕು, ಅರ್ಥ ಆಯ್ತಾ.........,
 

Jyothi Subrahmanya ಧ, 12/28/2011 - 16:57

ಅರ್ಥವಾಯ್ತು ಅಂಜಲಿಯವರೇ,...... ಧನ್ಯವಾದಗಳು ನಿಮ್ಮ ಪ್ರೀತಿಪೂರ್ವಕ ಅನಿಸಿಕೆಗೆ ಃ)

ಸ್ಪಂದನ ಶುಕ್ರ, 12/30/2011 - 09:13

ಹಾಯ್ ಜ್ಯೋತಿ..ನಿಮ್ಮ ಲೇಖನ ಓದಿದಾಕ್ಷಣ ಸಣ್ಣ ಖುಷಿಯ ನಗುವೊಂದು ತೇಲಿಬಂತು.. ಬಿಡುವಿಲ್ಲದ ಕಾರಣ ಹೆಚ್ಚಾಗಿ ವಿಸ್ಮಯನಗರಿಗೆ ಬರಲು ಆಗಿತ್ತಿಲ್ಲ. ಫ್ರೀ ಇದ್ದಿದ್ರೆ ಬಹುಶಃ ಇಂತಹದ್ದೇ ಬರೀತಿದ್ದೆ ಅನ್ಸುತ್ತೆ. ನನ್ನ ಮನದಲ್ಲಿರುವುದನ್ನು ನಾನು ಬರೆದಂತಾಯಿತು ಇದನ್ನು ಓದಿ. ಕ್ಷಣಕಾಲ ಖುಷಿಯಿಂದಿದ್ದರೂ ಮರುಕ್ಷಣವೇ ಅದೇನೋ ನೋವು ಹಿಂಸೆ. ಚೆನ್ನಾಗಿ ಬರೆದಿದ್ದೀರ.. ಶುಭವಾಗಲಿ:)

Jyothi Subrahmanya ಶುಕ್ರ, 12/30/2011 - 19:31

ಧನ್ಯವಾದಗಳು ಭಾವನಾ... ಬಹುಷಃ ನಮ್ಮಿಬ್ಬರ ಮನಸ್ಥಿತಿ ಒಂದೇ ರೀತಿ ಇದೆ ಅನಿಸ್ತದೆ.. ಅದಿಕ್ಕೆ ನಿಮಗೆ ಹಾಗೆನಿಸಿದ್ದು.  ಒಂದೇ ದೋಣಿಯ ನಾವಿಕರು ಃ) ಇತ್ತೀಚೆಗೆ ಆ ನೋವು, ಹಿಂಸೆಯನ್ನ ಮರೆಯೋದು ಕೂಡ ಕಲಿತಾ ಇದ್ದೇನೆ.  ಯಾರಿಗಾಗಿ ನಾವು ಕಣ್ಣೀರಿಟ್ಟು, ನಮ್ಮ ಅಮೂಲ್ಯವಾದ ಸಮಯವನ್ನು ಮೀಸಲಿಟ್ಟು ಕೊರಗುತ್ತೇವೋ ಅವರಿಗೆ ಅದರ ಸಣ್ಣ ಅರಿವು ಕೂಡ ಇಲ್ಲದಿದ್ರೆ ನಮ್ಮ ಕಣ್ಣೀರಿಗೆ ಅವಮಾನ ಅಲ್ವೇ??? ಅದ್ಕೆ.. ಃ) ಹೊಸ ವರ್ಷದ ಹಾರ್ದಿಕ ಶುಭಾಷಯಗಳು.. ಹೊಸ ವರ್ಷ ನಿಮ್ಮೆಲ್ಲಾ ನೋವು ತೊಂದರೆಗಳನ್ನು ನಿವಾರಿಸಿ, ಸುಖ, ನಗು ಹಾಗೂ ನೆಮ್ಮದಿ ನೀಡಲಿ ಅಂತ ಹಾರೈಸ್ತೀನಿ... 

ಸ್ಪಂದನ ಶುಕ್ರ, 12/30/2011 - 21:58

ನಿಜ..ನಿಮಗೂ ಹೊಸ ವರ್ಷದ ಶುಭಾಶಯಗಳು.. ನಿಮ್ಮ ಜೀವನ ಸಂತೋಷ ನೆಮ್ಮದಿಯಿಂದ ತುಂಬಿರಲಿ. ನೀವು ಬಯಸುವ ಸುಖಮಯ ಜೀವನ ನಿಮ್ಮದಾಗಲಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.