beLLimoDa
ಬೆಳ್ಳಿಮೋಡದ ಮೆರಗು ತೊಟ್ಟ ಬಾನಂಚಿನಲ್ಲಿ ಕೆಂಪುತೋರಣ , ಜಾವದಿಂದ ಸಾಗಿ ದಣಿದು ಕಡಲಲ್ಲಿ ಮೀಯಲು ಹೊರಟ ಸೂರ್ಯಕಿರಣ; ಸಂಜೆಯತನಕ ಮೇದುಬಂದ ತಾಯ್ಗುರಿಯು ಕೆಚ್ಚಲುತುಂಬಿ ಸಂಜೆಯಲ್ಲಿ, ಮಮತೆಯ ಕಡಲು ತುಂಬಿ, ಹಾಲೆರೆಯಲು ಕರೆಯುವುದು ತನ್ನ ಕಂದನ.ಗುಡ್ಡಗಾಡಿನಲ್ಲಿ ಹಸಿರು ಚಿಗುರಿ, ಇಳಿಜಾರಿಗೆ ಹರಿದು ತೊರೆ, ತೋರಣ, ಇಂಪಿನಲ್ಲಿ ಕೋಗಿಲೆಯೂ ಹಾಡಿ , ಕುಣಿಸುವುದು ಮಯೂರನ ಸ್ವಾಗತಿಸಲು ವಸಂತ. ದುಡಿದು, ದಣಿದು ಗೂಡು ಸೇರುವ, ಜೀವಕ್ಕೆ ನೀಡಲು ಸಾಂತ್ವನ, , ಕತ್ತಲು ಕರೆಯೂವುದು ಬಾನಿನಲ್ಲಿ , ಹಲ್ಬೆಳಕು ಚೆಲ್ಲಲು ಚಂದ್ರನಾ. ಜನ್ಮತಾಳಿ ಬದುಕಿನ ಜಾಡಿನಲ್ಲಿ, ಜಾರುತ್ತ ಧುಮುಕುತ್ತ ಮ್ರುತ್ಯುತಾಗಿ, ಪಯಣ ಸಾಗುವುದು ಮಸಣದೆಡೆಗೆ, ಮಣ್ಣಾಗಿ ಈ ದೇಹ , ಹೋಗಿಚೇತನ.
, ,
ಸಾಲುಗಳು
- 283 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ