Skip to main content

ನೆನಪು...

ಬರೆದಿದ್ದುDecember 15, 2011
3ಅನಿಸಿಕೆಗಳು

ನೆನಪು... - ಕೇವಲ ಮೂರೇ ಅಕ್ಷರಗಳ ಪದವಾದರೂ, ಅದು ನಡೆಸುವ ದಾಂಧಲೆ ಅಷ್ಟಿಷ್ಟಲ್ಲ.  ಮರೆಯಬೇಕೆಂದುಕೊಂಡದ್ದನ್ನು ನೆನಪಿಸುವ, ನೆನಪಿಟ್ಟುಕೊಳ್ಳಬೇಕೆಂದು ಆಶಿಸಿದುದನೆಲ್ಲಾ ಮರೆಯಿಸಿಬಿಡುವ ಮನಸಿನ ಆಜ್ನ್ಯಾಪಾಲಕ ಈ ನೆನಪು.  ಇದಕ್ಕೆ ಸಂಬಂಧಿಸಿದಂತೆ, ಮನ್ವಂತರ ಧಾರಾವಾಹಿಯ ಶೀರ್ಷಿಕೆ ಗೀತೆಯ ಒಂದು ಸಾಲು ನನಗೆ ಬಹಳ ಅಚ್ಚುಮೆಚ್ಚು.  "ಮನಸಿನ ಪುಟಗಳ ನಡುವೆ ನೆನಪಿನ ನವಿಲುಗರಿ..." ಆಹ್!!! ಎಂಥಾ ಹೋಲಿಕೆ! ನೆನಪನ್ನು ಹೋಲಿಸಲು ನವಿಲುಗರಿಯಂಥಾ ವಸ್ತು ಬಿಟ್ಟರೆ ಇನ್ಯಾವುದೂ ಸರಿಸಾಟಿಯಾದ ವಸ್ತು ಸುಲಭವಾಗಿ ದೊರಕುವುದಿಲ್ಲ ಅನ್ನೋದು ನನ್ನ ಅಭಿಪ್ರಾಯ.  ಅದೆಂಥದೋ ಒಂದು ನವಿರಾದ ಮಧುರ ಭಾವನೆ ನೆನಪನ್ನು ಮುದ್ದಾದ ನವಿಲುಗರಿಗೆ ಹೋಲಿಸುವಂತೆ ಮಾಡಿಬಿಡುತ್ತದೆ.  ನೆನಪು ಸಿಹಿಯಾಗಿರಲಿ, ಅಥವಾ ಕಹಿಯಾಗಿರಲಿ, ಅದರ ನೇವರಿಕೆ ಎಲ್ಲರಿಗೂ ಇಷ್ಟ.  ಕಹಿನೆನಪುಗಳ ಮರೆಯೋಣ ಅಂತ ಪ್ರತೀ ಬಾರಿ ಅಂದುಕೊಂಡಾಗಲೂ, 'ನಾನಿದ್ದೇನೆ' ಎಂದು ಧುತ್ತೆಂದು ನಿಲ್ಲುವ ಈ ನೆನಪುಗಳು, ಅವುಗಳನ್ನು ತಂದೊಡ್ಡುವ ಹಲವಾರು ಯೋಚನಾ ಸರಣಿಗಳು, ವಸ್ತು, ವ್ಯಕ್ತಿ, ವಿಷಯಗಳು ನಮ್ಮ "ಮರೆಯಬೇಕು" ಅನ್ನೋ ಪ್ರತಿಜ್ನ್ಯೆಯನ್ನು ಸಡಿಲಗೊಳಿಸಿಬಿಡುತ್ತವೆ.  ಅದೇನೇ ಆದರೂ ಮನಸ್ಸು ಮಾತ್ರ ಹಠಮಾರಿಯಂತೆ ಬೇಡದ ಯೋಚನಾ ಸರಣಿಗಳನ್ನು, ನೆನಪುಗಳನ್ನು, ವ್ಯಕ್ತಿ, ವಿಷಯಗಳನ್ನು ಮೆಲುಕು ಹಾಕುತ್ತಾ ಮನುಷ್ಯನ ಶಾಂತಿಯನ್ನೇ ಕದಡುತ್ತಿರುತ್ತದೆ.  ಈಗಲೂ ಅಷ್ಟೆ... ಬೇರೇನೋ ನೆನಪಾಗುತ್ತಾ ಇದ್ಯೇ ಹೊರತು, ಏನನ್ನು ಬರೆಯಬೇಕು ಅಂತ ಅಂದುಕೊಂಡಿದ್ದೆನೋ ಅದೇ ನೆನಪಾಗುತ್ತಿಲ್ಲ.!!!!!! ನೆನಪೇ ನೆನಪಾಗಲಾರೆಯಾ ಪ್ಲೀಸ್.....................

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

girish.g.h ಶನಿ, 12/17/2011 - 14:48

 "ಮನಸಿನ ಪುಟಗಳ ನಡುವೆ ನೆನಪಿನ ನವಿಲುಗರಿ..." ಈ ಸಾಲುಗಳು ಇಷ್ಟವಾದವು. ನಿಮ್ಮ ನೆನಪುಗಳೆಲ್ಲಾ ಲೇಖನಗಳಾಗಿ ಹೊರಹೊಮ್ಮಲಿ.                                                                                                       - ಗಿರೀಶ.ಜಿ.ಎಚ್.

Jyothi Subrahmanya ಸೋಮ, 12/19/2011 - 18:26

ನಿಮ್ಮ ಹಾರೈಕೆಗೆ ಧನ್ಯವಾದಗಳು ಗಿರೀಶ್...

ನವೀನ್ ಚ೦ದ್ರ ಭಾನು, 12/18/2011 - 00:04

ಸವಿ ಸವಿ ನೆನಪು ಸಾವಿರ ನೆನಪು ಎದೆಯಾಳದಲಿ ಬಚ್ಹಿಟ್ಟುಕೊಂಡಿರುವ ಎಲ್ಲಾ ರೀತೀಯ ನಿಮ್ಮ ನೆನಪುಗಳು ಸುರುಳಿ ಸುರುಳಿಯಾಗಿ ಬರುತ್ತಿರಲಿ,ಸಿಹಿ ನೆನಪುಗಳಿಗಿಂತ ಹೆಚ್ಹಾಗಿ ಕಹಿ ನೆನಪುಗಳೇ ನಮ್ಮನ್ನು ಮೌನವಾಗಿಸಿ ಚಿಂತಿಸುವಂತೆ ಮಾಡುತ್ತೆ ಅಲ್ವಾ ಜ್ಯೋತಿ??? ಆದರೆ ಆ ಕಹಿ ನೆನಪುಗಳು ಕೆಲವೊಮ್ಮೆ ಕಣ್ಣೀರನ್ನು ಹರಿಸುತ್ತದೆ,,. ಅಲ್ವಾ??? ಅದೆಲ್ಲಾ ಸರಿ ಕಣ್ರಿ,,,,,,.ನೆನಪೇ ನೆನಪಾಗಲಾರೆಯಾ ಪ್ಲೀಸ್,,,,,, ಅಂದ್ರಲ್ಲಾ  ತುಂಬಾ ಚೆನ್ನಾಗಿ ನೆನಪನ್ನು ಪ್ರಶ್ನಿಸಿದ್ದೀರಾ ಜ್ಯೋತಿಯವರೇ,,,  ಈ ನೆನಪು ಅಂದ್ರೆ ಎನು? ಅಂತಾ ಖಂಡಿತಾ ಕೇಳೋದಿಲ್ಲ. ಆದರೂ ನೆನಪು ಎಂದ ಮೇಲೆ ಬರುತ್ತೆ, ಹೋಗುತ್ತೆ, ನೆನಪು ಬಂದಾಗಲೆಲ್ಲಾ ಬರೀತ್ತಾನೆ ಇರಿ, ಅದಕ್ಯಾಕೆ ತಾವು ಬೇರೇನೋ ನೆನಪಾಗುತ್ತಾ ಇದ್ಯೇ ಹೊರತು, ಏನನ್ನು ಬರೆಯಬೇಕು ಅಂತ ಅಂದುಕೊಂಡಿದ್ದೆನೋ ಅದೇ ನೆನಪಾಗುತ್ತಿಲ್ಲ, ಅಂತಾ ಪರಿತಾಪವ ಪಡುವಿರಿ??? ಸರಿ ಏನ್ನನ್ನೂ ಬರೆಯಬೇಕೆಂದುಕೊಂಡಿದ್ದಿರಿ??

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.