Skip to main content

ಗುರಿ

ಬರೆದಿದ್ದುDecember 4, 2011
4ಅನಿಸಿಕೆಗಳು

ಮನದಲ್ಲಿ ಮೂಡಿ ಬಂದಸಾವಿರಾರು ಭಾವನೆಗಳಿಗೆನೂರಾರು ಕಲ್ಪನೆಗಳಿಗೆಹಲವು ಸವಿಕನಸುಗಳಿಗೆಮಾತಾಗಬಲ್ಲವನ ಹುಡುಕಾಟದಲ್ಲಿ....... 

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

Pattar ಭಾನು, 12/04/2011 - 10:21

ಜ್ಯೋತಿಯವರೇ...ಈ ಕವನ ನಿಮ್ಮ ಮನದಾಳದಿ೦ದ ಮೂಡಿಬ೦ದಿದ್ದರೆ ಖ೦ಡಿತ ಇದು "ಗುರಿ" ಅಲ್ಲ...ಇದನ್ನು "ಮನದಾಸೆ" ಎ೦ಬ ಶಿರ್ಷಿಕೆಗೆ ಬದಲಾಯಿಸಿ....(ಕ್ಷಮಿಸಿ)ಇನ್ನು ನೈಸರ್ಗಿಕವಾಗಿ ನೀವು ಬರೆದಿದ್ದರೆ..."ಹೃನ್ಮನದ ಬಯಕೆ" ಅನ್ನಬಹುದು....ಅಲ್ವಾ..?

Jyothi Subrahmanya ಭಾನು, 12/04/2011 - 19:01

ಸಾಹಿತ್ಯ, ಕವನ, ಲೇಖನ ಎಲ್ಲಾ ಓದಿ ಗೊತ್ತೇ ಹೊರತು ಬರವಣಿಗೆಯಲ್ಲಿ ನನಗೆ ಅನುಭವ ಇಲ್ಲ. ನಿಮ್ಮಂಥ ಅನುಭವೀ ಬರಹಗಾರರ ಅನಿಸಿಕೆ ಅಭಿಪ್ರಾಯಗಳು ಹೀಗೇ ಸಿಗ್ತಾ ಇರಲಿ... ಧನ್ಯವಾದಗಳು.. 

Pattar ಸೋಮ, 12/05/2011 - 10:16

Really Sorry ಜ್ಯೋತಿಯವರೇ...ಬರವಣಿಗೆಯಲ್ಲಿ ನಿಮಗೆ ಅನುಭವ ಇಲ್ಲಾ ಎ೦ದು ನನ್ನ ಅಭಿಪ್ರಾಯವಲ್ಲ...ಯಾರ ಬರವಣಿಗೆ ನನಗೆ ಇಷ್ಟವಾಗುವುದಿಲ್ಲವೋ ಅವರಿಗೆ ನಾನು ನನ್ನ ಅನಿಸಿಕೆಯನ್ನೇ ಬರೆಯುವುದಿಲ್ಲ..ನಿಮ್ಮ ಬರಹದಲ್ಲಿ ನಿಜರೂಪದ ಸಾಹಿತ್ಯದ ಜೊತೆ ಅಪರೂಪದ ಕಲ್ಪನೆ ಕೂಡ ಬೆರೆತ ಕಾರಣ ನನ್ನ ಸಲಹೆಯನ್ನು ನಿಮಗೆ ಹೇಳಿದೆ ಅಷ್ಟೆ...ನ್ಯಾಯದೇವತೆಯ ನೆರಳಲ್ಲಿರುವ ನೀವು ಖ೦ಡಿತ ನಿಮ್ಮ (ಭಾವನಾತ್ಮಕವಾಗಲಿ, ವಾಸ್ತವಿಕವಾಗಲಿ,ಕಾಲ್ಪನಿಕವಾಗಲಿ) ಬರಹವನ್ನು ನ್ಯಾಯಬದ್ಧವಾಗಿ ಬರೆಯುತ್ತೀರ ಎ೦ದು ನನಗೆ ನ೦ಬಿಕೆಯಿದೆ..ಹೀಗೆ ನಿಮ್ಮ ಬರಹಗಳು ಮು೦ದುವರೆಯಲಿ...ಧನ್ಯವಾದಗಳು....ನಾಗರಾಜ್.  

Jyothi Subrahmanya ಸೋಮ, 12/05/2011 - 19:03

ಅಯ್ಯೋ ಅದಕ್ಕೆ ಕ್ಷಮೆ ಯಾಕೆ ಕೇಳ್ತೀರಾ?? ನಿಮ್ಮ ಅನಿಸಿಕೆ ಸರಿಯಾಗಿಯೇ ಇದ್ದ ಕಾರಣ ಆ ರೀತಿ ಹೇಳಿದೆ.  ಖಂಡಿತವಾಗಿಯೂ ಬರವಣಿಗೆಯಲ್ಲಿ ನನಗೆ ಯಾವುದೇ ಅನುಭವ ಇಲ್ಲ.  ಮನಸ್ಸಿಗೆ ತೋಚಿದ್ದನ್ನ ಗೀಚೋ ಹವ್ಯಾಸ ಅಷ್ಟೆ.  ನಿಮ್ಮ ಸಲಹೆ, ಸೂಚನೆಗಳು ಹೀಗೇ ಸಿಗ್ತಾ ಇರಲಿ ... ಃ)

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.