Skip to main content

ಹಿಂದಿ ಚಲನಚಿತ್ರ 'ಗುರು' - ಕನಸುಗಾರರಿಗೆ ಇದೊಂದು ಸ್ಪೂರ್ತಿ!

ಬರೆದಿದ್ದುJanuary 28, 2007
noಅನಿಸಿಕೆ

ಮಣಿರತ್ನಂ ಡೈರೆಕ್ಟ್ ಮಾಡಿರೋ ಎ.ಆರ್. ರೆಹೆಮಾನ್ ಸಂಗೀತ ನಿರ್ದೇಶನ ಮಾಡಿರೋ ಚಿತ್ರ ನಾನು ಇತ್ತೀಚೆಗೆ ನೋಡ್ದೆ. ಇದು [img_assist|nid=210|title=ಗುರು ಹಿಂದಿ ಸಿನಿಮಾ|desc=|link=node|align=right|width=70|height=100] ಒಂದು ಒಳ್ಳೆಯ ಫಿಲಂ ಅಂತಾ ಹೇಳಬಹುದು. ಇದರ ಕಥೆ ರಿಲಾಯನ್ಸ್ ಕಂಪನಿ ಶುರು ಮಾಡಿದ ಧೀರುಬಾಯಿ ಅಂಭಾನಿಯವರ ಜೀವನದ ಕಥೆ ಆಧಾರಿತ ಅನ್ನೋ ಮಾತಿದೆ. ಚಿತ್ರ ನೋಡಿದಾಗ ಅದು ಸ್ವಲ್ಪ ನಿಜ ಅಂತಾ ಅನಿಸಿತು. ಕಥೆ ತುಂಬಾ ಸಿಂಪಲ್. ಗುರುಕಾಂತ ದೇಸಾಯಿ ಅನ್ನೋ ಹಳ್ಳಿ ಹುಡುಗ ದೊಡ್ಡ ಕಂಪನಿ ಕಟ್ಟೋ ಕನಸು ಕಾಣ್ತಾ ಅದನ್ನು ನಿಜ ಮಾಡಿ ತೋರಿಸುವ ಕಥೆ.
ಇದರಲ್ಲಿ ಅಭಿಷೇಕ್ ಬಚ್ಚನ್‌ರವರು ಅತ್ಯುತ್ತಮವಾಗಿ ನಟಿಸಿದ್ದಾರೆ. ಇನ್ನೇನು ಮದುವೆ ಆಗಲಿರುವ ಐಶ್ವರ್ಯ ರೈ ಹಾಗು ಅಭಿಷೇಕ್ ಬಚ್ಚನ್‌ರವರ ನಡುವಿನ ಕೆಮಿಸ್ಟ್ರಿ ಚೆನ್ನಾಗಿ ಮೂಡಿ ಬಂದಿದೆ. ಕ್ಯಾಮರಾ ವರ್ಕ್ ಕೂಡಾ ಚೆನ್ನಾಗಿದೆ.

ಇನ್ನು ಮಿಥುನ್ ಚಕ್ರವರ್ತಿ,ಆರ್. ಮಾಧವನ್, ವಿದ್ಯಾ ಬಾಲನ್ ಕೂಡಾ ಇದ್ದಾರೆ. ಮಲ್ಲಿಕಾ ಶೇರಾವತ್ ಅವರ ಐಟಂ ಸಾಂಗ್ ಕೂಡಾ ಇದೆ. ಅವರು ಮೈ ಚಳಿ ಬಿಟ್ಟು ಕಡಿಮೆ ಬಟ್ಟೆ ಹಾಕಿಕೊಂಡು ಡ್ಯಾನ್ಸ್ ಮಾಡಿದ್ದಾರೆ! ಹಾಡುಗಳು ಸಹ ಪರವಾಗಿಲ್ಲ ಅನ್ನೋ ಹಾಗಿದೆ.
ನೀವು ದೊಡ್ಡ ಸಾಧನೆ ಮಾಡಬೇಕು. ಹಾಗೆ ಮಾಡಬೇಕು ಹೀಗೆ ಮಾಡಬೇಕು ಅಂತಾ ಕನಸು ಕಾಣೋ ಟೈಪ್ ಆಗಿದ್ರೆ ಅಂತವರಿಗೆ ಈ ಸಿನೆಮಾ ತುಂಬಾ ಇಷ್ಟವಾಗುತ್ತದೆ.
ಈ ಚಿತ್ರದಲ್ಲಿ ನಾಯಕ ಹಗಲು ರಾತ್ರಿ ಕಷ್ಟಪಟ್ಟು ಬಟ್ಟೆ ಕಂಪನಿ ಕಟ್ಟುತ್ತಾನೆ. ಹಾಗೆ ದುಡಿದದ್ದರಿಂದ ನಂತರ ಕೋರ್ಟ್ ಕೇಸು ಅದು ಇದು ಅಂತಾ ಆತನ ಆರೋಗ್ಯ ಕೆಟ್ಟು ಲಕ್ವ ಹೊಡೆಯುತ್ತದೆ. (ಇದು ಧೀರುಬಾಯಿ ಅಂಭಾನಿಯವರ ಜೀವನದಲ್ಲೂ ಆಗಿತ್ತು ಎಂಬುದನ್ನು ನೆನಪಿಸಿಕೊಳ್ಳಿ.) ಇದರಿಂದ ನನಗೆ ಅನಿಸಿದ್ದು ಇಷ್ಟೇ ನಾವು ನಮ್ಮ ಕುಟುಂಬ ಮತ್ತು ಆರೋಗ್ಯವನ್ನು ಕಡೆಗಣಿಸಿ ಬರೀ ಹಣ, ಅಂತಸ್ತು ಇತ್ಯಾದಿಗಳನ್ನು ಗಳಿಸುವದರಲ್ಲಿ ನಮ್ಮ ಜೀವನವನ್ನು ವ್ಯರ್ಥ ಮಾಡಬಾರದು. ಇದರಿಂದ ಏನೂ ಸಾಧನೆ ಆಗುವದಿಲ್ಲ. ಜೀವನದ ಕೊನೆಯಲ್ಲಿ ನರಳಬೇಕಾಗುತ್ತದೆ.
ಇದು ಹಿಂದಿ ಚಿತ್ರಪ್ರಿಯರು ಒಮ್ಮೆ ನೋಡಲೇ ಬೇಕಾದ ಚಿತ್ರ.
ವಿಸ್ಮಯಾ ರೇಟಿಂಗ್ : ೫/೭ (5/7)

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.