Skip to main content

ನಿಮ್ಮ ಗೆಳೆಯರನ್ನು ವಿಸ್ಮಯಾ ನಗರಿಯ ಪ್ರಜೆಯಾಗಲು ಆಮಂತ್ರಿಸಿ.

ಬರೆದಿದ್ದುJanuary 23, 2007
1ಅನಿಸಿಕೆ

ಹಾಯ್!,

ನಿಮ್ಮ ಗೆಳೆಯರನ್ನು ಕರೆಯಲು ಇಲ್ಲಿ ಕ್ಲಿಕ್ ಮಾಡಿ.

ವಿಸ್ಮಯಾ ನಗರಿ ದಿನದಿಂದ ದಿನಕ್ಕೆ ಅಭಿವೃದ್ದಿ ಆಗುತ್ತಿದೆ. ಇನ್ನು ನಿಮ್ಮ ಗೆಳೆಯರನ್ನು ಮತ್ತು ಆಫೀಸಿನವರಿಗೆ ಆಮಂತ್ರಣವನ್ನು ನೀವು ಕಳುಹಿಸಬಹುದು! ಮೊದಲು ನೀವು ವಿಸ್ಮಯಾ ನಗರಿಯ ಪ್ರಜೆ ಆಗಿ ಅಥವಾ ಮೊದಲೇ ಆಗಿದ್ದರೆ ಪ್ರಜೆಯಾಗಿ ವಿಸ್ಮಯಾ ನಗರಿಯನ್ನು ಪ್ರವೇಶಿಸಿ. ನಿಮ್ಮ ಆತ್ಮೀಯರನ್ನು ವಿಸ್ಮಯಾ ನಗರಿಗೆ ಕರೆಯಿರಿ.

ಅವರು ಪ್ರಜೆಯಾದಾಗ ತನ್ನಿಂದ ತಾನೇ ನಿಮ್ಮ ವಿಸ್ಮಯಾ ನಗರಿಯ ಸ್ನೇಹಿತರಾಗುವವರು! ಕೆಲವೇ ದಿನಗಳಲ್ಲಿ ಒರ್ಕುಟ್ ಮಾದರಿಯ ಸ್ಕ್ರ್ಯಾಪಿಂಗ್ ಹಾಗೂ ಅವರನ್ನು ಹೊಗಳುವ ವಿಭಾಗ ಬರಲಿದೆ. ;-) ನಿಮ್ಮ ಸ್ನೇಹ ಭಾಂದವ್ಯ ಇನ್ನೂ ಗಟ್ಟಿ ಮಾಡಿಕೊಳ್ಳಿ!

ಹಾಂ ಈ ತಾಣದ ಪ್ರೋಗ್ರಾಮಿಂಗ್‌ನಿಂದ ಹಿಡಿದು ಸರ್ವರ್ ಮೆಂಟೇನ್ ಮಾಡೋ ಜವಾಬ್ದಾರಿ ನನಗಿರಲಿ. ಆದ್ರೆ ಇದಕ್ಕೆ ಹೊಸ ಲೇಖನಗಳನ್ನು ಬರೆದು ಚೆಂದಗಾಣಿಸುವದು ನಿಮ್ಮ ಜವಾಬ್ದಾರಿ!
ಬಾಳಸಂಗಾತಿಯಲ್ಲಿ ಪ್ರೊಪೈಲ್ ಮಾಡುವವರ ಗಮನಕ್ಕೆ ದಯವಿಟ್ಟು ನಿಮ್ಮ ಚಿತ್ರಗಳನ್ನು ಹಾಕಿ. ನಿಮ್ಮ ಅಲ್ಬಮ್‌ಗಳಲ್ಲಿ ಸಹ ನಿಮ್ಮ ಮತ್ತು ನಿಮ್ಮ ಮನೆಯವರ ಕೆಲವು ಫೋಟೋ ಹಾಕಿ. ಆಗ ನಿಮ್ಮ ಬಗ್ಗೆ ಸ್ವಲ್ಪ ಕಲ್ಪನೆ ಬರಲು ಸಾದ್ಯವಾಗುತ್ತದೆ. ಅಲ್ಲದೇ ನಿಮ್ಮ ಬಾಳಸಂಗಾತಿ ಹೇಗೆ ಇರಬೇಕು ಅನ್ನುವದನ್ನು ನಿಮ್ಮ ಫ್ರೊಪೈಲ್‌ನಲ್ಲಿ ತಿಳಿಸಿ. ನಿಮ್ಮ ಪ್ರೊಫೈಲ್ ಪೂರ್ತಿ ಮಾಡಿ. ನೀವು ಶಾದಿ.ಕಾಮ್ ನಲ್ಲಿ ಹೇಗೆ ಕಾಳಜಿಯಿಂದ ಬರ್ತಿ ಮಾಡುತ್ತೀರೋ ಅಷ್ಟೇ ಕಾಳಜಿ ವಹಿಸಿ. ನಿಮ್ಮ ಜಾತಕವನ್ನು ಅಟ್ಯಾಚ್ ಮಾಡಬೇಕೆಂದಿದ್ದರೆ ಸದ್ಯಕ್ಕೆ ಅಲ್ಬಮ್‌ ನಲ್ಲೇ ಸ್ಕ್ಯಾನ್ ಮಾಡಿ ಹಾಕಿ. ಅಗತ್ಯವಿದ್ದರೆ ಈ ಸೌಲಭ್ಯನ್ನು ಸದ್ಯದಲ್ಲೇ ಕೊಡಲಾಗುವದು.

ಯಾವುದಾರೂ ರಸವತ್ತಾದ ವಿಷಯಗಳ ಬಗ್ಗೆ ಪಿಸುಮಾತು ಆರಂಭಿಸಿ. ಉದಾ: ಪ್ರೀತಿ, ಪ್ರೇಮ, ಸಿನಿಮಾ, ಹಾಡು,ಆರೋಗ್ಯ, ಅಡಿಗೆ, ಕಥೆ, ಕಾವ್ಯ, ಸುದ್ದಿ ವಿಶ್ಲೇಷಣೆ ಇತ್ಯಾದಿ. ಇವುಗಳನ್ನು ಬರೆಯುವಾಗ ಸ್ವಲ್ಪ ಸರಳ ಭಾಷೆ ಬಳಸಿ. ತೀರಾ ಗ್ರಾಂಥಿಕ ಭಾಷೆ ಬೇಡ.

ಸದ್ಯಕ್ಕೆ ನಾನು ಇನ್ನೂ ವಿಸ್ಮಯಾ ನಗರಿಯ ನಿರ್ಮಾಣದಲ್ಲಿ ತೊಡಗಿಕೊಂಡಿರುವದರಿಂದ ನನಗೆ ವಿಸ್ಮಯಾ ನಗರಿಯನ್ನು ಹೇಗೆ ಬಳಸುವದು ಎಂಬುದನ್ನು ಬರೆಯಲು ಸಾಧ್ಯವಾಗುತ್ತಿಲ್ಲ. ಆದರೂ ಅನೇಕ ಜನರು ಯಶಸ್ವಿಯಾಗಿ ಕಲಿಯುತ್ತಿರುವದು ತುಂಬಾ ಸಂತೋಷ. ಅದರಲ್ಲೂ ತುಂಬಾ ಮಂದಿ ನಮ್ಮ ಅಭಿಪ್ರಾಯ ವಿಭಾಗ ಬಳಸುತ್ತಿರುವದು ಸಂತೋಷ. ಆದರೆ ಕನ್ನಡ ಹೆಚ್ಚು ಬಳಸಿ.
ನೆನಪಿಡಿ ಕನ್ನಡ ಉಳಿಯುವದು ಭಾಷಣ ಬಿಗಿಯುವದರಿಂದಲ್ಲ, ಇಂಗ್ಲೀಷ್‌ನಲ್ಲಿ ಕನ್ನಡಕ್ಕೆ ಹೀಗಾಯ್ತು ಹಾಗಾಯ್ತು ಅಂತಾ ಮೇಲ್ ಕಳುಹಿಸಿ ಚರ್ಚೆ ಮಾಡೋದ್ರಿಂದ ಖಂಡಿತ ಅಲ್ಲ. ವಿಸ್ಮಯಾ ನಗರಿಯಂತಹ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುವದರಿಂದ ಮಾತ್ರ. ಇಂತಹ ಪ್ರಯತ್ನವು ವರ್ಷಾನುಗಟ್ಟಲೆ ಕೆಲಸವನ್ನು ಬೇಡುತ್ತದೆ. ನಿಜ ಸದ್ಯಕ್ಕೆ ವಿಸ್ಮಯಾ ನಗರಿ ಒರ್ಕೂಟ್ ಹಾಗೋ ಅಥವಾ ಶಾದಿ.ಕಾಮ್ ಹಾಗೋ ಎಲ್ಲ ರೀತಿಯ ಸೌಲಭ್ಯ ಇಲ್ಲದಿರಬಹುದು. ಆದರೆ ನಿಮ್ಮ ಸಹಕಾರ ಇದ್ದರೆ ಅವುಗಳಲ್ಲಿ ನಾವು ಹೆಚ್ಚು ಬಳಸುವ ಎಲ್ಲ ಸೌಲಭ್ಯವನ್ನು ಕೊಡಲು ವಿಸ್ಮಯಾ ಸಾಫ್ಟ್‌ವೇರ್ ಪಣತೊಟ್ಟಿದೆ! ಇದರಲ್ಲಿರುವ ಸಣ್ಣ ಪುಟ್ಟ ದೋಷವನ್ನು ಮನ್ನಿಸಿ ನಿಮ್ಮದೇ ತಾಣ ಎಂಬಂತೆ ಬಳಸಿ, ಯಾವುದಾದರೂ ವಿಷಯ ಇಷ್ಟವಾದರೆ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಲೇಖನ ಇತ್ಯಾದಿಗಳ ಸೇವೆ ನೀಡಿ ನೋಡುತ್ತಾ ಹೋಗಿ ಹೇಗೆ ಕನ್ನಡ ಭಾಷೆ ಇಂಟರ್‌ನೆಟ್‌ನಲ್ಲಿ ಬೆಳೆಯುತ್ತೆ ಅಂತ!

ಮರೆಯದಿರಿ ಇದು ವಿಸ್ಮಯಾ ನಗರಿ ನಮ್ಮ ನಿಮ್ಮೆಲ್ಲರ ಕನಸಿನ ನಗರಿ. ದಣಿದ ಮನ ತಣಿಸುವ ಮೋಹಕ ತಂಗಾಳಿಯ ಲಹರಿ!

ಬನ್ನಿ ಅಂತರ್ಜಾಲವನ್ನು ವಿಹರಿಸೋಣ ಹೊಸ ರೀತಿಯಲ್ಲಿ.

ರಾಜೇಶ ಹೆಗಡೆ
ವಿಸ್ಮಯಾ ನಗರಿಯ ಕಲ್ಪನೆ, ವಿನ್ಯಾಸ, ಪ್ರೊಗ್ರಾಮಿಂಗ್ (ದ್ರುಪಲ್ ಆಧಾರಿತ)
ವಿಸ್ಮಯಾ ಸಾಫ್ಟ್‌ವೇರ್

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

ಗಿರೀಶ್ ಮಂಗಳ, 01/23/2007 - 12:36

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.