Skip to main content

ಕವನ

ಪ್ರತಿಜ್ಞೆ

ಇಂದ prabhu
ಬರೆದಿದ್ದುJune 18, 2019
noಅನಿಸಿಕೆ

ಕಾಡಿನ ಲೋಕದ ಆಲದ ಮರದಡಿ
ಪ್ರಾಣಿಗಳೆಲ್ಲ ಸೇರಿದವು |
ತಮ್ಮಯ ತೊಂದರೆ ಪಟ್ಟಿಯನೆಲ್ಲ
ಸಿಂಹದ ಮುಂದೆ ಹೇಳಿದವು ||೧||
ಕುಡಿಯಲು ನೀರು ಸಿಗುತಿಲ್ಲ
ಬತ್ತುತಿವೆ ಹಳ್ಳಕೊಳ್ಳಗಳೆಲ್ಲ |
ತಿನ್ನಲು ಹಣ್ಣು ಹಂಪಲವಿಲ್ಲ
ಗೆಡ್ಡೆ ಗೆಣಸುಗಳು ಸಾಲುತಿಲ್ಲ ||೨||
ಮರಗಳ ಕಡಿದು ಕಾಡೆ ಮಾಯ

ನಮ್ಮ ಕನ್ನಡ ಶಾಲೆ

ಇಂದ prabhu
ಬರೆದಿದ್ದುJune 17, 2019
noಅನಿಸಿಕೆ

ನಮ್ಮೂರ ಶಾಲೆಗೆ ಬರಬೇಕು
ಶಾಲೆಯ ನೀ ಕಲಿಬೇಕು|
ಮಗುವೆ ನೀ ಓದಬೇಕು
ಓದಿ ಜಾಣ ಆಗಬೇಕು||೧||
ತಿದ್ದಿ ತೀಡುತ ಕಲಿಸುವರಿಲ್ಲಿ
ಪುಸ್ತಕದಕ್ಷರ ಮಸ್ತಕದಲ್ಲಿ|
ವಿದ್ಯೆಯ ಜೊತೆಗೆ ವಿನಯವಿಲ್ಲಿ
ಹೊಸ ಹೊಸ ಕಲಿಕೆಯು ನಿಮಗಿಲ್ಲಿ||೨||
ಸಿರಿತನ ಬಡತನ ಅಂತಸ್ತಿಲ್ಲ
ಜಾತಿಧರ್ಮದ ಹಂಗೂ ಇಲ್ಲ|

ಶಾಲೆಗೆ ಕಳಿಸು

ಇಂದ prabhu
ಬರೆದಿದ್ದುJune 16, 2019
noಅನಿಸಿಕೆ

ಶಾಲೆಯು ಸುರುವಾಯಿತು ಮತ್ತೆ
ಪಾಟಿ ಚೀಲವ ತೆಗೆಯಮ್ಮ|
ಮೇಲಿನ ಧೂಳನು ಕೊಡವಿ ಹಾಕಿ
ಹೊಸ ಪುಸ್ತಕ ಹಾಕಮ್ಮ ||೧||
ಚಿಣ್ಣಿದಾಂಡು ಬ್ಯಾಟು ಬಾಲ್
ಗೋಲಿ ಗಜ್ಜುಗ ಅಟ್ಟದಿ ಹಾಕು |
ಶಾಲೆಯ ರಜೆಯ ವೇಳೆಯಲಿ
ಆಡಲು ನನಗೆ ಮತ್ತೆ ಬೇಕು ||೨||
ಬಟ್ಟೆಗಳೆಲ್ಲವ ಇಸ್ತ್ರೀ ಹಾಕಿ
ಸಾಕ್ಸು ಬೂಟು ಜೋಡಿಸಿಡು|

ಸಂಚಾರ

ಇಂದ prabhu
ಬರೆದಿದ್ದುMarch 6, 2019
noಅನಿಸಿಕೆ

ಹಳಿಗಳ ಮೇಲೆ ಚುಕುಬುಕು ಎಂದು
ಓಡುವ ರೈಲು ನೋಡಮ್ಮ|
ಊರಿ
ಊರಿಂದೂರಿಗೆ ಜನರನು ಹೊತ್ತು
ಓಡುವ ಗಾಡಿಯು ಚಂದಮ್ಮ||೧||
ಪೌಂವ್ ಪೌಂವ್ ಎಂದು ರಸ್ತೆಯ ಮೇಲೆ
ಓಡುವ ಬಸ್ಸು ನೋಡಮ್ಮ|
ಕಂಡಕ್ಟರನು ಸೀಟಿಯ ಹೊಡೆಯಲು
ಬಿಡುವನು ಡ್ರೈವರ್ ಬಸ್ಸಮ್ಮ||೨||
ಟಾಂಗಾ ರಿಕ್ಷಾ ಕಾರು ಟ್ಯಾಕ್ಷಿ

ಅರಿವು

ಇಂದ prabhu
ಬರೆದಿದ್ದುMarch 5, 2019
noಅನಿಸಿಕೆ

ಜ್ಞಾನ ವಿಜ್ಞಾನದಿಂದ
ಅಜ್ಞಾನವ ಕಳೆಯುವಾ|
ಸುಜ್ಞಾನದ ಜ್ಯೋತಿ ಹಚ್ಚಲು
ಅಕ್ಷರವ ಕಲಿಯುವಾ||೧||
ಅನಕ್ಷರತೆ ಅಜ್ಞಾನಕೆ
ಮೆಟ್ಟಲೆಂದು ತಿಳಿ|
ಹೆಬ್ಬೆಟ್ಟು ಬಿಟ್ಟು ನೀ
ಶಾಲೆಯನು ಕಲಿ||೨||
ಸಿರಿ ಸಂಪತ್ತು ಆಸ್ತಿಗೆ
ಕಳ್ಳರ ಭಯ ಯಾವತ್ತೂ|
ವಿದ್ಯೆ ಕಲಿತ ಜಾಣಗೆ

ಚಿಲಿಪಿಲಿ

ಇಂದ prabhu
ಬರೆದಿದ್ದುMarch 1, 2019
noಅನಿಸಿಕೆ

ಹಕ್ಕಿಯ ಚಿಲಿಪಿಲಿ ಕೇಳುತಲಿದ್ದರೆ
ಜಗವೇ ಮರೆಯುವದು|
ಕುಣಿಯುವ ನವಿಲನು ನೋಡುತಲಿದ್ದರೆ
ಮೈಮನ ಪುಳಕಿತವು||೧||
ಅರಳುವ ಹೂಗಳು ಬೀರುವ ಪರಿಮಳ
ಘಮ್ಮನೆ ಹೊಮ್ಮುವದು|
ಮಧುವನು ಹೀರಲು ಸುತ್ತುವ ದುಂಬಿಯ
ಆಟವೆ ಮೋಹಕವು||೨||
ಸುರಿಯುವ ಜೋಗದ ಧಾರೆಯ ನೀರು
ಕಣ್ಮನ ಸೆಳೆಯುವದು|

ಬೇಸಿಗೆ

ಇಂದ prabhu
ಬರೆದಿದ್ದುFebruary 28, 2019
noಅನಿಸಿಕೆ

ಅಮ್ಮ ಅಮ್ಮ ಪಾತ್ರೆಯ ಕೊಡು
ನೀರನು ಹಾಕಿ ಮನೆ ಮೇಲಿಡುವೆ|
ಬೇಸಿಗೆ ಬ್ಂತು ಪಕ್ಷಿಗಳಿಗೆ
ಕುಡಿಯಲು ನೀರು ಬೇಕಲ್ಲವೇ?||೧||
ಸುಡುವ ಬಿಸಿಲಿನ ಧಗೆಯು ಹೆಚ್ಚಿದೆ
ನೀರು ಇಲ್ಲ ಎಲ್ಲ ಕಡೆ|
ನದಿ ಕೆರೆ ಹಳ್ಳ ಕೊಳ್ಳ
ಬತ್ತಿ ಬರಿದಾಗಿವೆ ಒಳಗಡೆ||೨||
ಮನುಜರೆ ದಾಹದಿ ಬಳಲುವಾಗ
ಪಕ್ಷಿ ಸಂಕುಲ ಪಾಡೇನು?|

ಇರುವೆ

ಇಂದ prabhu
ಬರೆದಿದ್ದುFebruary 27, 2019
noಅನಿಸಿಕೆ

ಇರುವೆ ಇರುವೆ ಎಲ್ಲೆಲ್ಲೂ ಇರುವೆ
ಸರ ಸರ ಎಲ್ಲಿಗೆ ಹೊರಟಿರುವೆ?|
ಸರತಿಯ ಸಾಲಲಿ ಸಾಗುತ ನೀ
ಶಿಸ್ತಿನ ಸಿಪಾಯಿ ಆಗಿರುವೆ||೧||
ನೆಲ ಗೋಡೆ ಗಿಡ ಬಳ್ಳಿಗಳ
ಎಲ್ಲೆಂದರಲ್ಲಿ ನೀ ಇರುವೆ|
ಸಿಹಿ ಸಿಹಿ ರುಚಿಗೆ ಮುತ್ತಿಗೆ ಹಾಕಿ
ಸವಿಯನೆ ಮೆಲ್ಲುತ ಇರುವೆ||೨||
ಶೇಂಗಾ ಪುಟಾಣಿ ಖೊಬ್ರಿಗಳೆಲ್ಲ

ಸೂರ್ಯ

ಇಂದ prabhu
ಬರೆದಿದ್ದುFebruary 26, 2019
noಅನಿಸಿಕೆ

ಯಾಕಣ್ಣ ಸೂರ್ಯ ಬೇಸಿಗೆ ಮೊದಲೆ
ಹೀಗೆ ಉರಿಯೋದು ?|
ಬೆಳಗಿನ ವೇಳೆಯೇ ಸುಡುತ ಬಂದ್ರೆ
ಹೇಗೆ ಬದುಕೋದು? ||೧||
ಕುಳಿತರೂ ನಿಂತರೂ ಸಮಾಧಾನವಿಲ್ಲ
ಜೀವಕೆ ಚಡಪಡಿಕೆಯೆಲ್ಲ|
ನೀರನು ಕುಡಿದರೂ ನೆಮ್ಮದಿಯಿಲ್ಲ
ಬಾಯರಿಕೆ ನೀಗುತ್ತಿಲ್ಲ||೨||
ಹಸಿವು ಹತ್ತಿರ ಸುಳಿಯುತ್ತಿಲ್ಲ
ತಂಪು ಪಾನೀಯ ಬೇಕಲ್ಲ|