ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ ಸುಮ್ಮನೆ ಗೀಚಿದ್ದು
1) ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು.ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು.2) ಒಂದು ಕಡೆ ಇವನ ಪ್ರೀತಿ, ಮತ್ತೊಂದು ಕಡೆ ಅವಳ ಪ್ರೇಮವನ್ನ ಒಂದು ತಕ್ಕಡಿಯಲ್ಲಿ ತೂಕಹಾಕಿದರು. ಗಾಬರಿಗೆ ಬಿದ್ದ ತಕ್ಕಡಿ ತೂಗಲೇ ಇಲ್ಲ.3.) ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ.ಆಕೆ ತಡವರಿಸದೇ ನುಡಿದಳು. ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ 4) ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ.5) ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು.ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ.6) ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು7) ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ.8) ಎರಡು ಸಾಲಿನ ಕಥೆ ಹೇಳಲೆಂದು ಅವನು ಅಣಿಯಾದ ಅವಳ ನೆನಪಾಯ್ತು...... ಮೊದಲ ಸಾಲೇ ಮರೆತು ಹೋಯ್ತು.9) ತ್ಸುನಾಮಿ ಹೊಡೆದು ಊರು, ಮನೆ, ಕಟ್ಟಡಗಳ ಜೊತೆ ಎಲ್ಲರನ್ನೂ ಕೊಚ್ಚಿಕೊಂಡು ಹೋಗಿತ್ತು. ಒಬ್ಬಾತನ ಮೊದಲ ಹೆಂಡತಿಯ ಆರು ವರ್ಷದ ಮಗು ಅದು ಹೇಗೋ ಬದುಕುಳಿದು ತನ್ನ ಆಟದ ಸಾಮಾನುಗಳನ್ನು ಹುಡುಕುತ್ತಿತ್ತು.10) ದಿನವೂ ಪ್ರೇಮ ಪತ್ರವನ್ನು ನನ್ನಿಂದಲೇ ಬರೆಸಿಕೊಂಡು ಹೋಗುತ್ತಿದ್ದ. ಕೊನೆಗೊಂದು ದಿನ ಆತ್ಮಹತ್ಯ ಪತ್ರವನ್ನು ಮಾತ್ರ ತಾನೇ ಬರೆದ.11) ಒಂದು ಎತ್ತು ಇನ್ನೊಂದು ಎತ್ತಿಗೆ ಹೇಳಿತು "ಈ ಮನುಷ್ಯನ ಗಾಡಿ ಎಳೆದುಕೊಂಡು ಎಷ್ಟು ದಿನ ಅಂತ ಬದುಕೋದು? ಆ ಬೆಟ್ಟದಲ್ಲಿ ತುಂಬಾ ಹುಲ್ಲು ಬೆಳೆದಿದೆ, ಅಲ್ಲಿ ಹೋಗಿ ತಿಂದುಕೊಂಡು ಆರಾಮಾಗಿ ಇರೋಣವೇ?" ಇನ್ನೊಂದು ಎತ್ತು ಹೇಳಿತು "ಅಲ್ಲಿ ಸಂಜೆಯಾದ ನಂತರ ನಮ್ಮನ್ನು ಕಟ್ಟಿ ಹಾಕಲು ಯಾರೂ ಇರಲ್ಲ, ಏನು ಮಾಡೋದು ?12) ಅಳುತ್ತಾ ಕುಳಿತಿದ್ದ ಮಗನನ್ನು ಸಮಾಧಾನ ಪಡಿಸುತ್ತಾ ಅಪ್ಪ ಹೇಳಿದ.. "ಅಳಬೇಡ ಕಂದ, ಅವಳು ಹೋದರೆ ಏನಂತೆ. ಇನ್ನೊಬ್ಬಳನ್ನು ಮನೆಗೆ ತಂದರಾಯ್ತು. ಮಗ ಅಳುತ್ತಾ ನುಡಿದ.. ತರಬಹುದು ಅಪ್ಪಾ.. ಆದರೆ ಆಕೆ ನನಗೆ ಚಿಕ್ಕಮ್ಮ ಆಗುತ್ತಾಳೆಯೇ ಹೊರತೂ ಹೆತ್ತಮ್ಮ ಆಗುವುದಿಲ್ಲವಲ್ಲ?13) ಹದಿನೈದು ವರ್ಷದ ಹಿಂದೆ ನಾನು ಬಾಲಕನಾಗಿದ್ದಾಗ ಆ ದೀಪಾವಳಿಯನ್ನು ತುಂಬಾ ಖುಶಿಯಿಂದ ಪಟಾಕಿ ಸಿಡಿಸಿ ಕೊಂಡಾಡಿದೆ. ಎಷ್ಟೊಂದು ಕೊಂಡಾಡಿದೆನೆಂದರೆ ಇಂದಿಗೂ ನನಗೆ ದೃಷ್ಟಿ ಬಂದಿಲ್ಲ.14) ಇಲ್ಲಿಗೆ ಅವಳ ನನ್ನ ಕತೆ ಮುಗಿಯಿತೆಂದು ಒಂದು ಹಾಳೆಯಲ್ಲಿ ಬರೆದು ಪೂರ್ಣವಿರಾಮ ಹಾಕಲಿಕ್ಕೆ ಹೋದ ಅಷ್ಟರಲ್ಲಿಯೇ ಪೆನ್ನಿನ್ನ ಇಂಕು ಕಾಲಿಯಾಗಿತ್ತು. 15) ನಿನ್ನನ್ನ ಯಾರೂ ಮುದ್ದಿಸುವುದಿಲ್ಲ ಅಂತ ಗುಲಾಬಿ ಚೆಂಡುಹೂವಿನ ಕಾಲೆಳೆಯುತ್ತಿತ್ತು. ಗುಲಾಬಿ ಕೀಳಲು ಬಂದ ಮಗು ಕೈಗೆ ಮುಳ್ಳು ಚುಚ್ಚಿ ಅಳುತ್ತಿತ್ತು. ನಾನು ಯಾರನ್ನು ಅಳಿಸುವುದಿಲ್ಲವೆಂದ ಚೆಂಡುಹೂವು ತನ್ನ ಸೇಡು ತೀರಿಸಿಕೊಂಡಿತು.16) ಅವನು ಡಿವೋರ್ಸ್ ತಗೊತೀನಿ ಅಂತ ತಮಾಷೆಗೆ ಅಂದ. ಇವಳು ದೇವರ ಮುಂದೆ ಹಣತೆ ಹಚ್ಚಿಟ್ಟು ನಿಜಕ್ಕೂ ಅತ್ತಿದ್ದಳೂ ಅನ್ನುವುದಕ್ಕೆ ಸಾಕ್ಷಿಯಾಗಿ ಹಣತೆಯಾರಿತ್ತು.ಅಲ್ಲಿ ಅವಳ ಕಣ್ಣೀರಿತ್ತು 17) ಅವನಿಗೆ ಒಳ್ಳೆಯದಾಗಲಿ ಅಂತ ಪೂಜೆ ಮಾಡಿಸಲು ಸರತಿ ಸಾಲಿನಲ್ಲಿ ಅವಳು ನಿಂತಿದ್ದಳು. ಮಧ್ಯಾಹ್ನವಾದರೂ ಅವಳ ಸರದಿ ಬರಲಿಲ್ಲ. ಅವನ ನೆನಪಾಗಿ ಮನೆಗೆ ಹೋದವಳ ಮೇಲೆ ದೇವರು ಮುನಿಸಿಕೊಂಡ. ಆದರೆ ಅವನು ಮುದ್ದಿಸಿದ.18) ಹುಡುಗಿ ಯಾವುದೋ ಧ್ಯಾನದಲ್ಲೋ ಇನ್ಯಾರದೋ ನೆನಪಿನಲ್ಲೋ ಅರಳಿಕಟ್ಟೆಗೆ ಮೂರು ಸುತ್ತು ಹಾಕುತ್ತಿದ್ದಳು. ಅರಳಿಕಟ್ಟೆಯ ಮುಂದೆ ಚಪ್ಪಲಿ ಹೊಲೆಯುತ್ತ ಕುಳಿತಿದ್ದ ಅವನು ಅವಳಸುತ್ತಿದ್ದಕ್ಕೆ ಲೆಕ್ಕವಿನ್ನು ಸಿಕ್ಕಿಲ್ಲ.19) ಚಂದನೆಯ ಹೆಸರಿನ ಗೆಳೆಯ ಸತ್ತು ಹೋಗಿದ್ದ. ಹಾಳುಜನ ಕೂಡಲೇ ಅವನಿಗೊಂದು ಹೆಸರಿಟ್ಟಿದ್ದರು. “ಬಾಡಿ” ಇನ್ನು ಬಂದಿಲ್ಲವಂತೆ ಅನ್ನುತ್ತಿದ್ದರು.20) ತಾನೆಷ್ಟು ಪ್ರೀತಿಸುತ್ತೇನೆ ಅಂತ ತನ್ನ ಗೆಳತಿಗೆ ಹೇಳುತ್ತಿದ್ದ. “ಎಷ್ಟು ಪ್ರೀತಿಸ್ತೀಯ” ಅಂದು ಕಣ್ಣು ಮಿಟುಕಿಸಿದಳು. ಇವನಿಗೆ ಆಕಾಶದಲ್ಲಿನ ನಕ್ಷತ್ರಗಳ ಲೆಖ್ಖ ಸಿಗಲಿಲ್ಲ.
ನೀನಾರಿಗಾದೆಯೊ ಎಲೆ ಮಾನವ
( ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ ಸುಮ್ಮನೆ ಗೀಚಿದ್ದು )
ಸಾಲುಗಳು
- Add new comment
- 1330 views
ಅನಿಸಿಕೆಗಳು
suppar
suppar