ಅದ್ಧೂರಿ ಆದ್ರೆ ಬರೀ ಮಸಾಲೆ ಚಿತ್ರ - ಅರಸು ವಿಮರ್ಶೆ
ಕನ್ನಡದ ಮಟ್ಟಿಗೆ ಹೇಳುವದಾದರೆ ಅರಸು ತುಂಬಾ ಖರ್ಚು ಮಾಡಿರೋ ಅದ್ಧೂರಿ ಚಿತ್ರ.ತುಂಬಾ ಸಿಂಪಲ್ ಕಥೆ. ಶಿವರಾಜ್ ಅರಸು (ಪುನೀತ್) ಕೋಟ್ಯಾಧಿಪತಿ ಮಗ. ಅಪ್ಪ ಮಾಡಿಟ್ಟ ಹಣ ಎಲ್ಲಾ ಫಾರಿನ್ನಲ್ಲಿ ಮಜಾ ಉಡಾಯಿಸುತ್ತಾ ಇರುತ್ತಾನೆ. ಅಪ್ಪನ ಬಿಸಿನೆಸ್ ನೋಡಿಕೊಳ್ಳೋ ಜವಾಬ್ದಾರಿನೇ ಇಲ್ಲಾ. ಅದನ್ನು ನೋಡಿಕೊಳ್ಳುತ್ತಿರುವ ಮ್ಯಾನೆಜರ್ ರಾಮಣ್ಣ (ಶ್ರೀನಿವಾಸ್ ಮೂರ್ತಿ) ಅವರನ್ನು ಒತ್ತಾಯಿಸಿ ಭಾರತಕ್ಕೆ ಕರೆದುಕೊಂಡು ಬರುತ್ತಾರೆ.
ಯಾವುದೋ ಬೆಂಗಳೂರಿನ ಟ್ರಾಫಿಕ್ ಸಿಗ್ನಲ್ನಲ್ಲಿ ತನ್ನ ಗಾಡಿ ನಿಂತಾಗ ಬಸ್ಸ್ಟ್ಯಾಂಡಿನಲ್ಲಿ ನಿಂತಿರೋ ಶೃತಿ (ರಮ್ಯ)ಯ ಮೇಲೆ ಅರಸುಗೆ ಪ್ರೀತಿ ಉಂಟಾಗುತ್ತೆ. ಅವಳು ಮ್ಯಾನೇಜರ್ ರಾಮಣ್ಣರವರ ಮಗಳು. ಹಣದ ಸೊಕ್ಕು ಇರೋ ಅರಸು ಅವಳಿಗೆ ಪ್ರೊಪೋಸ್ ಮಾಡುತ್ತಾನೆ. ಆದರೆ ಅವನಿಗೆ ೫೦೦೦ ರೂ ಸ್ವಂತ ಗಳಿಸೋ ಕೆಪಾಸಿಟಿನೂ ಇಲ್ಲಾಂತಾ ತಿರಸ್ಕರಿಸುತ್ತಾಳೆ.
ಆಗ ಅರಸು ಚಾಲೆಂಜ್ ಮಾಡಿ ಹಣ ಗಳಿಸಲು ಹೋಗುತ್ತಾನೆ. ನಂತರ ಊಟಕ್ಕೂ ಗತಿ ಇಲ್ಲದೇ ಹಸಿವಿನಿಂದ ತಲೆ ತಿರುಗಿಬಿದ್ದಾಗ ತಂಗಳನ್ನ ಕೊಟ್ಟು, ತನ್ನ ರೂಮಿನಲ್ಲೇ ಉಳಿಯಲು ಬಿಟ್ಟು ನಂತರ ತಾನು ಕೆಲಸ ಮಾಡೋ ಬಟ್ಟೆ ಅಂಗಡಿಯಲ್ಲೇ ಕೆಲಸ ಕೊಡಿಸಿ ಅರಸುಗೆ ಸಹಾಯ ಮಾಡೋಳೆ ಮೀರಾ ಜಾಸ್ಮಿನ್. ಅವಳಿಗೂ ಅರಸು ಮೇಲೆ ಪ್ರೀತಿ ಆಗುತ್ತೆ. ಕೊನೆಗೆ ಪುನೀತ್ ಯಾರನ್ನು ಮದುವೆ ಆಗ್ತಾನೆ ಅನ್ನೋದೆ ಫಿಲಂ ಕಥೆ! ಇದರ ಕ್ಲೈಮಾಕ್ಸ್ ವಿಭಿನ್ನವಾಗಿದೆ. ಆದ್ರೆ ಇದು ಎಲ್ಲರಿಗೂ ಅದು ಇಷ್ಟಾ ಆಗೋದು ಡೌಟು!
ಈ ಫಿಲಂ ನಿಜವಾಗ್ಲೂ ಚೆನ್ನಾಗಿದೆ ಅನ್ನಿಸಿದ್ರೆ ಅದಕ್ಕೆ ಕಾರಣ ಮೀರಾ ಜಾಸ್ಮಿನ್. ಅದ್ಭುತ ನಟನೆ. ಲವಲವಿಕೆಯಿಂದ ಕೂಡಿರೋ , ಭಾವನಾತ್ಮಕವಾಗಿರೋ ನಟನೆ. ಎರಡನೇಯ ಕಾರಣ ಅದ್ಧೂರಿತನ. ಇನ್ನೂ ಪುನೀತ್ ರಾಜಕುಮಾರ್ ಫೈಟಿಂಗ್ ಹಾಗೂ ಹಾಡುಗಳಲ್ಲಿ ಎಂದಿನಂತೆ ಮಿಂಚುತ್ತಾರೆ. ಆದ್ರೆ ಭಾವನಾತ್ಮಕ ಸನ್ನಿವೇಶಗಳಲ್ಲಿ ಅಥವಾ ಪ್ರೀತಿ/ಪ್ರೇಮದ ಸನ್ನಿವೇಶಗಳಲ್ಲಿ ಜೀರೋ. ಅವರು ಕನ್ನಡ ಚೆನ್ನಾಗಿ ಮಾತನಾಡೋ ಪ್ರ್ಯಾಕ್ಟಿಸ್ ಮಾಡೋದು ಒಳ್ಳೇದು. ಕೋಮಲ್ ಕುಮಾರ್ ಕನ್ನಡದ ಅತ್ಯುತ್ತಮ ಹಾಸ್ಯ ನಟರಲ್ಲಿ ಒಬ್ಬರೆನ್ನುವದರಲ್ಲಿ ಸಂಶಯವೇ ಇಲ್ಲ.ಈ ಫಿಲಂ ಅನ್ನು ಸಹನೀಯವನ್ನಾಗಿ ಮಾಡೊದ್ರಲ್ಲಿ ಅವರೂ ಕಾರಣ. ರಮ್ಯ ಯಾಕೋ ಏನೋ ಇಲ್ಲಿ ಸ್ವಲ್ಪ ಮಂಕಾಗಿದ್ದಾರೆ.
ಕ್ಯಾಮರಾ ವರ್ಕ್ ಓಕೆ. ವಿದೇಶಗಳಲ್ಲಿನ ಶೂಟಿಂಗ್ ಚೆನ್ನಾಗಿದೆ. ಹಾಡುಗಳ ಬಗ್ಗೆ ಹೇಳೋದು ಏನೂ ಇಲ್ಲ. ಕೇಳುತ್ತಿದ್ದರೆ ಯಾವುದೋ ತಮಿಳೋ, ಹಿಂದಿ ಹಾಡುಗಳ ಟ್ಯೂನ್ ಕೇಳಿದಂತಾಗುತ್ತದೆ. ಕೆಲವು ಕಡೆ ಮ್ಯೂಸಿಕ್ ಇಷ್ಟವಾದರೂ ಎಲ್ಲೋ ಕೇಳಿದ ಹಾಗಿದೆ. ಕನ್ನಡದ ಟಚ್ ಇಲ್ಲವೇ ಇಲ್ಲ. ಥಿಯೇಟರ್ ನಿಂದ ಹೊರಬರುವಾಗ ಗುನುಗುನಿಸುತ್ತಾನೋ, ಅಥವಾ ಹಾಡಿಕೊಂಡು ಡ್ಯಾನ್ಸ್ ಮಾಡುತ್ತಾ ಬರೋ ತರ ಹಾಡು ಒಂದೂ ಇಲ್ಲ.
ಒಟ್ಟಿನಲ್ಲಿ ಇದು ಮಾಸ್ ಚಿತ್ರ. ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಒಮ್ಮೆ ನೋಡಬೇಕಾದ ಚಿತ್ರ. ಉಳಿದವರಿಗೆ ಒಮ್ಮೆ ನೋಡಬಹುದಾದ ಚಿತ್ರ! ಮುಂಗಾರು ಮಳೆಯನ್ನು ನೋಡಿ ಅದರ ಹ್ಯಾಂಗೊವರ್ನಿಂದ ಇನ್ನೂ ಹೊರ ಬರದಿದ್ದೋರಿಗೆ ಇದೂ ಮಾಮೂಲಿ ಚಿತ್ರ ಅನ್ನಿಸಿ ಬಿಡುತ್ತೆ! ಯಾಕೆಂದರೆ ಅದರಷ್ಟು ಚೆನ್ನಾಗಿರೋ ಸಂಭಾಷಣೆ, ಹಾಡು, ನಿರೂಪಣೆ ಆಗಲಿ ಇದರಲಿಲ್ಲ.
ವಿಸ್ಮಯಾ ರೇಟಿಂಗ್: ೪.೫/೭ (4.5/7)
ಸಾಲುಗಳು
- Add new comment
- 2812 views
ಅನಿಸಿಕೆಗಳು
Re: ಅದ್ಧೂರಿ ಆದ್ರೆ ಬರೀ ಮಸಾಲೆ ಚಿತ್ರ - ಅರಸು ವಿಮರ್ಶೆ
1st day 2nd show, 150 ರೂಪಾಯಿ ಕೊಟ್ಟು ನೋಡಿದೆ.. ಚಿತ್ರ ok ಆಗಿದೆ ಅಷ್ಟೆ.... 3 ಹಾಡುಗಳು ಇಷ್ಟ ಆದವು.
Re: ಅದ್ಧೂರಿ ಆದ್ರೆ ಬರೀ ಮಸಾಲೆ ಚಿತ್ರ - ಅರಸು ವಿಮರ್ಶೆ
Nice movie in present scenario. gud 3 hr entertainment
Re: ಅದ್ಧೂರಿ ಆದ್ರೆ ಬರೀ ಮಸಾಲೆ ಚಿತ್ರ - ಅರಸು ವಿಮರ್ಶೆ
bari entertainment ashte idara bandavaala... kathe weak agide... adannu climaxnalli muchchi haako prayatna :) aadaru idu olleya timepass chitra
ಏನ್ರೀ ಹೀಗ್ ಬರೆದಿದ್ದೀರಾ?
ಏನ್ರೀ ಹೀಗ್ ಬರೆದಿದ್ದೀರಾ? ಒಳ್ಳೆಯ ಸಿನಿಮಾ ಇದು.