ಪ್ರಶ್ನೆ: ಉತ್ರ:
ಪ್ರಶ್ನೆ:- ಮೊನ್ನೆ ನಿಮ್ಮ ಮಾವ ಸತ್ತುಹೋದ್ರು ಅಂತ ರಜೆ
ತಕೊಂಡ್ರಲ್ಲ?
ಉತ್ರ:- ಹೌದು!
ಪ್ರಶ್ನೆ:- ಅವರು ಇವಾಗ ಚೆನ್ನಾಗಿದ್ದಾರಾ?!!!
=
ಪ್ರಶ್ನೆ:- ಹಣ ಎಂದರೇನು?
ಉತ್ರ:- ನಾನು ಬಡವ ಸ್ವಾಮಿ, ನನಗೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
=
ಪ್ರಶ್ನೆ:- ಕಂಪ್ಯೂಟರ್ ಕಂಡು ಹಿಡಿದವನು ಯಾರು?
ಉತ್ರ - ಒಬ್ಬ ವಿಜ್ಞಾನಿ
=
ಪ್ರಶ್ನೆ:- ಹದಿನೈದು ಹಣ್ಣುಗಳ ಹೆಸರುಬರೆಯಿರಿ?
ಉತ್ರ:- ಮೂಸಂಬಿ, ಕಲ್ಲಂಗಡಿ, ಆಪಲ್ ಮತ್ತು ಒಂದು ಡಜನ್
ಬಾಳೆಹಣ್ಣು
=
ಪ್ರಶ್ನೆ:- ಪ್ರಪಂಚದಲ್ಲಿ ಒಟ್ಟು ಎಷ್ಟುದೇಶಗಳಿವೆ?
ಉತ್ರ: - ಪ್ರಪಂಚದಲ್ಲಿ ಇರೋದು ಒಂದೇ ದೇಶ, ಅದು ಭಾರತ...
ಮಿಕ್ಕಿದ್ದೆಲ್ಲಾ ವಿದೇಶ.
=
ಪ್ರಶ್ನೆ:- ಈ ಛತ್ರಿ ಬಾಳಿಕೆ ಬರುತ್ತಾ?
ಉತ್ರ:- ಖಂಡಿತಾ, ಆದ್ರೆ ನೀರಿಗೆ ಹಾಕ್ಬೇಡಿ
=
ಪ್ರಶ್ನೆ:- ವಾಸ್ಕೋಡಿಗಾಮ ಭಾರತಕ್ಕೆ ಯಾಕೆ ಬಂದ?
ಉತ್ರ:- ನನ್ನ ಫೇಲ್ ಮಾಡೋಕ್ಕೆ
=
ಪ್ರಶ್ನೆ:- ಕಾಯಿಸಿದಾಗ ಘನ ವಸ್ತುವಾಗಿ ಪರಿವರ್ತನೆ ಹೊಂದುವ
ದ್ರವ ಯಾವುದು?
ಉತ್ರ: - ಇಡ್ಲಿ, ದೋಸೆ
=
ಪ್ರಶ್ನೆ:- ನಿನ್ನ ಚೂಡಿದಾರ ತುಂಬಾ ಚೆನ್ನಾಗಿದೆ, ಎಲ್ಲಿ
ತಕೊಂಡೆ?'
ಉತ್ರ:- ಬಟ್ಟೆ ಅಂಗಡಿಯಲ್ಲಿ!!!
=
ಪ್ರಶ್ನೆ:- ರಾವಣನಿಗೆ ಹತ್ತು ತಲೆ ಇತ್ತು ಅಂದ್ರಲ್ಲ?
ಉತ್ರ:- ಹೌದು, ಏನಿವಾಗ?
ಪ್ರಶ್ನೆ:- ಎಡಗಡೆ ಎಷ್ಟಿದೆ, ಬಲಗಡೆ ಎಷ್ಟಿದೆ?!
=
ಪ್ರಶ್ನೆ:- 1983ರ ಕ್ರಿಕೆಟ್ ವಿಶ್ವಕಪ್ ಯಾರಿಗೆ ಸಿಕ್ತು?
ಉತ್ರ: - ಗೆದ್ದವರಿಗೆ
=
ಪ್ರಶ್ನೆ:- ನನಗೂ ನಿನಗೂ ಇರುವ ವ್ಯತ್ಯಾಸವೇನು?
ಉತ್ರ:- ಒಂದೇ ಒಂದು ವ್ಯತ್ಯಾಸ. ಅದೆಂದರೆ,
ನಾನು ಹುಚ್ಚನಲ್ಲ.
=
ಪ್ರಶ್ನೆ:- ಕ್ರಿಕೆಟ್ ಬಗ್ಗೆ ಅತೀ ಚಿಕ್ಕದಾದ ಒಂದು ಪ್ರಬಂಧ
ಬರೆಯಿರಿ
ಉತ್ರ:- ಮಳೆ ಬಂದ ಕಾರಣ
ಪಂದ್ಯವನ್ನು ರದ್ದುಗೊಳಿಸಲಾಗಿದೆ
=
ಪ್ರಶ್ನೆ:- ಈ ಸೇಬನ್ನು ಎರಡು ಭಾಗ ಮಾಡಿ ಇಬ್ಬರೂ ತಿನ್ನೋಣವೇ?
ಉತ್ರ: ಬೇಡ, ನಾಲ್ಕು ಭಾಗ ಮಾಡಿ ಎರಡೆರಡು ತಿನ್ನೋಣ, ನಂಗೆ
ತುಂಬಾ ಹಸಿವಾಗ್ತಿದೆ.
=
ಪ್ರಶ್ನೆ:- ಮಹಾತ್ಮ ಗಾಂಧೀಜಿ ಸಾಯದೇ ಇದ್ದಿದ್ದರೆ?
ಉತ್ರ:- ಈಗಲೂ ಬದುಕಿರುತ್ತಿದ್ದರು.
=
ಪ್ರಶ್ನೆ:- ಕ್ಲೋರೈಡ್ ಅನ್ನು ಕಾಯಿಸಿದಾಗ ಏನಾಗುತ್ತದೆ?
ಉತ್ರ:- ಕಾಯುತ್ತದೆ.
=
ಪ್ರಶ್ನೆ:- ಮೊಗಲರು ಎಲ್ಲಿಯವರೆಗೆ ರಾಜ್ಯಭಾರ ಮಾಡಿದರು?
ಉತ್ರ:- ಸುಮಾರು 14ನೇ ಪುಟದಿಂದ 22ನೇ ಪುಟಗಳವರೆಗೆ
=
ಪ್ರಶ್ನೆ:- ನೀರಿನಿಂದ ಯಾಕೆ ಕರೆಂಟ್ ತೆಗೀತಾರೆ?
ಉತ್ರ:-ಸ್ನಾನ ಮಾಡೋವಾಗ ಶಾಕ್ ಹೊಡೆಯುತ್ತೆ ಅಂತ!
=
ಪ್ರಶ್ನೆ:- ಮಾವು ಹೆಚ್ಚಾಗಿ ಎಲ್ಲಿ ಬೆಳೆಯುತ್ತದೆ?
ಉತ್ರ:- ಮರದಲ್ಲಿ
=
ಪ್ರಶ್ನೆ:- ಭೂಮಿ ಗುಂಡಗಿದೆ ಎನ್ನುವುದನ್ನು ಹೇಗೆ ನಿರೂಪಿಸುವಿರಿ?
ಉತ್ರ:- ಭೂಮಿ ಗುಂಡಗಿದೆ ನಿಜ, ಹಾಗಂತ ನಮ್ಮೇಷ್ಟ್ರು ಹೇಳಿದ್ರು.
ಅವರು ಯಾವತ್ತೂ ಸುಳ್ಳು ಹೇಳುವುದಿಲ್ಲ.
=
ಪ್ರಶ್ನೆ:- ಏಷ್ಯಾದ ಪ್ರಥಮ ಹಾಕಿ ಪಂದ್ಯ ಎಲ್ಲಿ ನಡೆಯಿತು?
ಉತ್ರ:- ಹಾಕಿ ಕ್ರೀಡಾಂಗಣದಲ್ಲಿ
=
ಪ್ರಶ್ನೆ:- ಶ್ರೀಕೃಷ್ಣ ಎಷ್ಟು ಹುಡುಗಿಯರನ್ನು ಮದ್ವೆ ಆಗಿದ್ದ?
ಉತ್ರ:- ಅವನು ಮದ್ವೆಯಾಗಿರೋರೆಲ್ಲಾ ಹುಡುಗಿಯರೇ.
=
ಪ್ರಶ್ನೆ:- ಮಾತು ಬರದವರನ್ನು ಮೂಗ ಎಂದು ಕರೆದರೆ, ಕಿವಿ
ಕೇಳಿಸದವನನ್ನು ಹೇಗೆ ಕರೆಯುತ್ತಾರೆ?
ಉತ್ರ:- ಹೇಗೆ ಬೇಕಾದರೂಕರೆಯಬಹುದು, ಏಕೆಂದರೆ ಅವರಿಗೆ ಕೇಳಿಸಲ್ಲ.
=
ಪ್ರಶ್ನೆಪತ್ರಿಕೆಯೊಂದರ ಕೊನೆಯ ಪ್ರಶ್ನೆ:-
ಛಾಲೆಂಜ್ ಅಂದರೆ ಏನು?
ಹರಿ ಬರೆದ ಉತ್ತರ:- ಧಮ್ ಇದ್ರೆ ಪಾಸ್ ಮಾಡ
ಸಾಲುಗಳು
- Add new comment
- 1302 views
ಅನಿಸಿಕೆಗಳು
Nice questions and answers
Nice questions and answers