ನಿನಗಿಲ್ಲವೇ ಪ್ರೀತಿ..
ಒಳಕೋಣೆ ಕಿಟಿಕಿಯಲಿ ಮುಖವಿಟ್ಟು ಕಿವಿಕೊಟ್ಟು
ಕಾತರಿಸಿ ನಿಂತದ್ದು ನಿನಗೆಂದೇ ನೀ ಬಲ್ಲೆ
ಹೊರಬಾಗಿಲಲಿ ನಿಂತು ಹೊಸಿಲು ದಾಟುವಮುನ್ನ
ಕಣ್ಣು ಹುಡುಕಾಡಿದ್ದು ನನಗೆಂದೇ ನಾ ಬಲ್ಲೆ.
ನಾನೆನ್ನ ಭಾವಗಳ ಮಾತಿಗಿಳಿಸಲೇ ಇಲ್ಲ
ಒಳಗೆ ನೀ ಸ್ಪಂದಿಸಿಯೂ ಹೊರಗೆ ತೋರಿಸಲಿಲ್ಲ
ಸುಳ್ಳಾಡಬಹುದು ಜಿಹ್ವೆ ನಿನ್ನ ಕಣ್ಣುಗಳಲ್ಲ
ಸಾಕು ನಿಲ್ಲಿಸು ನಟನೆ ನನಗೆ ತಿಳಿದಿದೆ ಎಲ್ಲ
ಸೇರದಿರು ನೇಪಥ್ಯ ತರವಲ್ಲ ಈ ರೀತಿ
ಹೇಳಿಬಿಡು ಒಂದು ಸಲ- ನಿನಗಿಲ್ಲವೇ ಪ್ರೀತಿ?
ಸಾಲುಗಳು
- Add new comment
- 708 views
ಅನಿಸಿಕೆಗಳು
ರಷ್ಮಿಯವರೇ ನಿಮ್ಮ ಕವನ ತುಂಬಾ
ರಷ್ಮಿಯವರೇ ನಿಮ್ಮ ಕವನ ತುಂಬಾ ಅಹ್ವಾದಕರವಾಗಿದೆ,,,, ನನಗೆ ತುಂಬಾ ಇಷ್ಟವಾಯಿತು, ನಿಮ್ಮ ಕವನಕ್ಕೆ ನನ್ನ ಅಭಿನಂದನೆಗಳು
ಕವನವನ್ನು ಓದಿ
ಕವನವನ್ನು ಓದಿ ಪ್ರೊತ್ಸಾಹಿಸಿರುವಿರಿ. ತುಂಬು ಮನದ ಧನ್ಯವಾದಗಳು