Skip to main content

ನೆಟ್ friend ಜತೆ E- ಸ್ನೇಹ

ಬರೆದಿದ್ದುMarch 19, 2012
12ಅನಿಸಿಕೆಗಳು

 
ಮಾಡುತಿರೆ ಪಯಣವ ಹೊಸ ಸ್ನೇಹದ ಹಾದೀಲಿ 
ಮೂಡಿಸುತ ಕಾತರವ ನಿನ ಮನಸಿನಲಿ 
ಆಡಿದಂತಾಗಿಹುದೆ ಏರಿ ತೂಗುವ ಜೋಕಾಲಿ?
 
ಮರೆತು ದಿನವೆಲ್ಲ ಕಾಡುವ ಚಿಂತೆಗಳನ್ನ
ಕೊರಗದೆ ನೆನೆಯುತ ಹಿಂದಿನ ನೋವುಗಳನ್ನ 
ಇರಲೆಂದುನಗುನಗುತಿರಲು ಬೇಕು ಈ-ಸ್ನೇಹ
ಮನಕೆ ಸಂತಸ ತರಲು ಬೇಕು E-ಸ್ನೇಹ.
 
ಪ್ರಶ್ನೆಗಳು ನೂರಾರು ಮನದಲಿ ಹುಟ್ಟಿರಲು
ಉತ್ತರವ ತಿಳಿಯುವಾ ತವಕದಲಿ ಕಾದಿರಲು
ಒಂದೊಂದಾಗೆಲ್ಲವನು ನಾವರಿತುಕೊಳುತಿರಲು
ದಿನಗಳು ಕ್ಷಣವಾದಂತೆ ಕಾಲವದು ಉರುಳಿರಲು
ಏನೋ ಹೊಸ ಆನಂದವು ಮನಕೆ ಹಿತ ನೀಡಿರಲು
ಕಾಣದಾ ಸವಿ ಅನುಭವವು ಮನವನು ತುಂಬಿತ್ತು
ತುಟಿಗಳಲಿ ಕಿರುನಗುವಾಗಿ ಹೊರಗೆ ಚಿಮ್ಮಿತ್ತು.
 
ಮೊದಲ ಮಾತಲೆ ನಿನ ನಗುವಿನ ಅಲೆ ಉಲಿದುಲಿದು
ಇಂದೂ ನನ ಕಿವಿಗಳ ತುಂಬ ಝೇಂಕರಿಸುತಿಹುದು
ನನ ಮನವೂ ಖುಶಿಯಿಂದ ಬೀಗುತಲಿಹುದು
ಊಹಿಸುತ ಆ ನಗೆ ಸೂಸುವ ತುಟಿಗಳು ಹೇಗಿಹುವೆಂದು
ನೀನಷ್ಟು ಸುಂದರ ಮೊಗ ಹೊಂದಿಲ್ಲವೆಂದು
ಹೇಳಿರುವೆ ಹೂವೊಂದಕೆ ಹೋಲಿಸಿ ನೋಡಲೆಂದು.
 
ಜಗದೊಳಿಹ ಅತಿದೊಡ್ಡ ಹೂ ದೂರದಿಂದಲೆ ಅಂದ
ಸನಿಹ ಸಾಗಲು ಅದು ಸೂಸುವುದು ದುರ್ಗಂಧ
ಎಕ್ಕದ ಹೂಗೂ ಕೂಡ ಇರುವುದು ಅದರದೆ ಅಂದ
ನನಗಂತು ಹೊರಗೆ ನೀ ಹೇಗಿದ್ದರೂ ಚೆಂದ
ಮನಕೆ ಹಿತ ನೀಡುವುದು ಮನಸಿನಾ ಆ ಅಂದ
ತರ್ಕ ಮಾಡದೆ ಒಪ್ಪಿ ಇರುವ ದೇಹದ ಅಂದ
ತೋರಿಸುವೆ ನೀನೆಂದೊ ನಿನ ವಧನಾರವಿಂದ.
 
ಹೊರಗೆ ಅಂದದ ದೇಹ-ಒಳಗೆ ಕುರೂಪ ಮನಸು
ಹೇಗೇ ಇರಲಿ ಹೊರಗೆ ಒಳಗಿರಲು ಸುಂದರ ಮನಸು
ಚೆಂದದ ಚಿಂತನೆಗಳು ಇರಲದೆಷ್ಟು ಸೊಗಸು
ಎರಡು ಮನಗಳ ಅನಿಸಿಕೆಗಳೊಂದಾಗಿದ್ದರೆ ಸಾಕು
ಉಳಿದೆಲ್ಲ ಚಿಂತೆಗಳು ನಮಗೇಕೆ ಬೇಕು...?
 
ನಿನ ತುಟಿಗಳಲಿ ಹೀಗೆ ಎಂದೂ ನಗು ಸೂಸಿರಲಿ
ಅನುದಿನವು ಮನಸಿನಲಿ ಸಂತಸ ತುಂಬಿರಲಿ
ನಮ್ಮೀ ಸ್ನೇಹವು ಎಂದು ಹೀಗೇ ಉಳಿದಿರಲಿ
ನೆಮ್ಮದಿಯ ಜೀವನ ಪಯಣ ನಿರಂತರವಾಗಿರಲಿ..!

ಲೇಖಕರು

ತ್ರಿನೇತ್ರ

ನಾವಿರೋದೇ ಹೀಗೆ...!

ನಾನು ಹುಟ್ಟು ಕನ್ನಡಿಗ ಓದಿ ಬೆಳೆದಿದ್ದು ಬೆಂಗಳೂರಿನಿಂದ ಮೈಸೂರಿನವರೆಗೂ ವಿವಿಧ ಊರುಗಳಲ್ಲಿ. ವೃತ್ತಿಗಾಗಿ ಅಲೆದದ್ದು ಬೆಂಗಳೂರಿನಿಂದ ಕೊಡಗಿನವರೆಗೆ ನಂತರ ರಾಷ್ಟ್ರದ ರಾಜಧಾನಿ ದೆಹಲಿ ಹಾಗೊ ಅದರ ಸುತ್ತಲಿನ ಹರ್ಯಾಣಾ ಗಳಲ್ಲಿ ೨೧ ವರ್ಷ ಸೇವೆ ಸಲ್ಲಿಸಿ ಮತ್ತೆ ತಾಯ್ನಾಡಿನ ರಾಜಧಾನಿ ಬೆಂಗಳೂರಿಗೆ ಬಂದು ನೆಲೆಸಿರುವೆ. ಆದರೂ ಕನ್ನಡ ಮರೆತಿಲ್ಲ ಮರೆಯುವಂತಿಲ್ಲ. ಕನ್ನಡದ ಯಾವುದೇ ಲೇಖನ ಕಥೆ ಕವಿತೆ ಇತ್ಯಾದಿ ಓದುವುದು ಹಿಂದಿನ ಅಭ್ಯಾಸ. ಸಮಯ ಸಿಕ್ಕಾಗ ಏನಾದರೂ ಚಿಕ್ಕ ಪುಟ್ಟದ್ದು ಬರೆವುದು ಇತ್ತೀಚಿಗೆ ಬೆಳೆಸಿಕೊಂಡ ಹವ್ಯಾಸ ಹಾಗಾಗಿ ಈ ವಿಸ್ಮಯನಗರಿಗೆ ಪ್ರವೇಶ...!

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/20/2012 - 11:57

Very nice. 

ತ್ರಿನೇತ್ರ ಮಂಗಳ, 03/20/2012 - 12:16

ಓದಿ ಮೆಚ್ಚುಗೆಯ ಎರಡು ನುಡಿಗಳನ್ನು ಬರೆದು ತಿಳಿಸಿದ್ದಕ್ಕೆ ಮನಃಪೂರ್ವಕ ಧನ್ಯವಾದಗಳು. ಅದನ್ನು ಕನ್ನಡದಲ್ಲೇ ಬರೆದಿದಲ್ಲಿ ನನಗಿನ್ನೂ ಬಹಳ ಸಂತಸವಾಗುತ್ತಿತ್ತು. ಮುಂದಿನ ಬಾರಿ ಈ ರೀತಿ ಅನಿಸಿಕೆಗಳನ್ನು ತಿಳಿಸಲು ಬರೆಯುವಾಗ ಇದೇ ಅಂಕಣದ (ಮೆಸೇಜ್ ವಿಂಡೋ ನಲ್ಲಿ) ಟೈಪ್ ಮಾಡುವ ಮೊದಲು ಟೂಲ್ ಬಾರ್ ನಲ್ಲಿ ಕನ್ನಡ ಕ್ಲಿಕ್ ಮಾಡಿ ನಂತರ ಏನು ಬರೆಯಬೇಕೆಂದಿದ್ದೀರೋ ಅದನ್ನು ಇಂಗ್ಲೀಷಿನಲ್ಲೇ ಟೈಪ್ ಮಾಡಿದರೆ ಅದು ಕನ್ನಡಕ್ಕೆ ಬದಲಾಗುತ್ತದೆ. ಉದಾಹರಣೆ- Very nice ಎಂಬುದನ್ನು ಕನ್ನಡದಲ್ಲಿ ಬರೆಯಲು bahaLa chennaagide ಎಂದೋ ಅಥವಾ tuMbaa chenaagide ಎಂದೋ ಬರೆಯಬಹುದು. ಇದು ಎಷ್ಟು ಸುಲಭ ಎಂದು ನೀವೇ ಒಮ್ಮೆ ಪ್ರಯತ್ನಿಸಿ ನೋಡಿ.....!

pavu ಮಂಗಳ, 03/20/2012 - 14:35

ಚೆನ್ನಾಗಿದೆ ಸರ್ ಈ ನಿಮ್ಮ ಕವನ ಮತ್ತು ನಿಮ್ಮ ಕನ್ನಡ ಅಭಿಮಾನ.

ತ್ರಿನೇತ್ರ ಮಂಗಳ, 03/20/2012 - 18:39

ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ತುಂಬಾ ಧನ್ಯವಾದಗಳು ಪವಿಯವರೇ...!
ಕನ್ನಡದವನಾಗಿ ಈ ಕನ್ನಡ ನಾಡಿನಲ್ಲಿ ಹುಟ್ಟಿ  ಕನ್ನಡ ಮಣ್ಣಿನಲ್ಲಿ ಬೆಳೆದ ಅನ್ನ ತಿಂದು ಅದರ ನೀರು ಗಾಳಿ ಕುಡಿದು ಬೆಳೆದು ಅದರ ನೆಲದ ಮೇಲೇ ಓಡಾದಿ ಅಷ್ಟೋ ಇಷ್ಟೋ ವಿಧ್ಯೆ ಬುದ್ಧಿ ಕಲಿತು ಈಗ ಹೊಟ್ಟೆಪಾಡಿಗಾಗಿ ಹುಟ್ಟಿದ ಊರುಬಿಟ್ಟು ಒಂದುರೀತಿ ಅಲೆಮಾರಿಗಳಂತೆ ಯಾವ್ಯಾವುದೋ ಊರು ಅಲೆಯುತ್ತಿರುವ  ನನಗೆ ಅದಕ್ಕೆ ಪ್ರತಿಯಾಗಿ ಇಷ್ಟೂ ಕನ್ನಡ ಸೇವೆ ಮಾಡದಿದ್ದರೆ ಹೇಗೆ...? ಹಿಂದೊಮ್ಮೆ ನಾನೇ ವ್ಯಕ್ತಪಡಿಸಿರುವಂತೆ ಕನ್ನಡ ಕನ್ನಡ ಎಂದು ಮೇಲೆ ಮಾತ್ರಾ ಹೇಳುತ್ತಾ ಒಳಗೊಳಗೇ ಪರಬಾಷಾ ವ್ಯಾಮೋಹದಿಂದ ತುಂಬಿತುಳುಕುತ್ತಾ "ನಮಗೆ ಕನ್ನಡ ಬರುವುದೇ ಇಲ್ಲಾ..." "ಕನ್ನಡದಲ್ಲಿ ಬರೆಯಲು ಓದಲು ಕಷ್ಟ..." ಎಂದು ಪ್ರಯತ್ನವನ್ನೂ ಮಾಡದೇ ಸೋಗು ಹಾಕಿ "ಇಂಗ್ಲೀಷಿನಲ್ಲೇ ಕನ್ನಡ" ಬರೆವ ಇಂದಿನ ಕಾಲದ ನವ-ಯುವ ಜನತೆಗಿಂತಾ ಇದು ಎಷ್ಟೋ ಮೇಲೆಂದು ನನ್ನ ಭಾವನೆ. ಅದಕ್ಕಾಗಿ ಈ ಅಭಿಮಾನ ಆಧರ ಎಲ್ಲಾ...! ಬನ್ನಿ ನಿಮ್ಮಂತಾ ಸಮ ಮನಸ್ಸಿನ ಎಲ್ಲಾ  ಜತೆಗೂಡಿ ಕೈಲಾದಷ್ಟು ಕನ್ನಡ ಸೇವೆ ಮಾಡೋಣಾ ಬಾರದವರಿಗೆ ಕನ್ನಡ ಕಲಿಸೋಣಾ ಬೆಳೆಸೋಣಾ...! ಶುಭವಾಗಲಿ -ತ್ರಿನೇತ್ರ.

sujathathekkamoole (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/21/2012 - 14:23

ಕವನ ಚೆನ್ನಾಗಿದೆ. ಜಗತ್ತು ಎಷ್ಟೇ ಮು೦ದುವರಿದರು ಮಾನವೀಯ ಸ೦ಬ೦ಧಗಳು ಗಟ್ಟಿಗೊಳ್ಳುವುದು ಸ್ನೇಹದ೦ತಹ ಮಧುರ ಬಾ೦ಧವ್ಯದ ಮೂಲಕವೇ ಅಲ್ಲವೇ? .....ಚೆನ್ನಾಗಿದೆ ಸರ್ ಕವನ...

ತ್ರಿನೇತ್ರ ಗುರು, 03/22/2012 - 12:12

ಧನ್ಯವಾದಗಳು ಸುಜಾತಾ ಅವರಿಗೆ. ನಿಮ್ಮ ಮಾತು ಖಂಡಿತಾ ಸಥ್ಯವಾದವು.

ತ್ರಿನೇತ್ರ ಸೋಮ, 04/09/2012 - 12:03

ಸುಜಾತಾ ಅವರೇ... ತಮ್ಮ ಬಿಚ್ಚುಮನಸ್ಸಿನ ಸ್ವಚ್ಛ ಅಭಿಪ್ರಾಯವನ್ನು ತಿಳಿಸಿ ಬರೆದಿದ್ದಕ್ಕೆ ಧನ್ಯವಾದಗಳು. ಸ್ನೇಹ ಎಂಬುದೇ ಹಾಗೆ ನೋಡೀ... ಯಾರಿಗೆ ಎಲ್ಲಿ ಯಾವತ್ತು ಅಂಟಿಕೊಳ್ಳುವುದೋ ಹೇಗೆ ಬೆಳೆದು ಹೆಮ್ಮರವಾಗುವುದೋ ಅಥವಾ ಬರಸಿಡಿಲು ಬಂದಾಗ ಬುಡಸಮೇತ ಧರೆಗೊರಗುವ ಹಾಗೆ ಮಲಗಿ ತಿರೆ ಸೇರುವುದೋ ಯಾರಿಗೂ ತಿಳಿಯದು. ತಾವು ಯಾಕೆ ವಿಸ್ಮಯ ಪ್ರಜೆಯಲ್ಲ ಎಂಬುದು ತಿಳಿಯಲಿಲ್ಲ... ಅಥವಾ ಪ್ರಜೆಯಾಗಿದ್ದೂ ಬರೀ ಓದುಗರಾಗಿ ಅನಿಸಿಕೆ ಬರೆದಿದ್ದೀರೆಂದು ಭಾವಿಸುವೆ. ಸಹಕಾರ ಹೀಗೇ ಮುಂದುವರೆಯಲಿ. -ತ್ರಿನೇತ್ರ.

Hesaru Helalla (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 04/09/2012 - 11:29

Nanu Nimage Chennage Gothu.  Modale E kavan nanagagi Baredaddu Antha Gothu.  Vismaya Nagariyalli Baredadu Nodu Thumba Santhosha Ayithu.  Very Nice Antha message madiddu Nane.  But Nivu nanna Bagge Enu Baredilla.

ತ್ರಿನೇತ್ರ ಸೋಮ, 04/09/2012 - 12:08

ತಾವು ಯಾರೇ ಆಗಿರಿ, ನನ್ನ ಉತ್ತರ ನಿಮ್ಮ ಅನಿಸಿಕೆಯ ಕೆಳಗೇ ಬರೆದು ತಿಳಿಸಿದ್ದೇನೆ. ಕನ್ನಡದಲ್ಲಿ ಬರೆಯಲು ತಿಳಿಸಿದ್ದೇನೆ ಆದರೂ ಮತ್ತೊಮ್ಮೆ ಕನ್ನಡದವರಾಗಿ ಇಂಗ್ಲೀಷಿನಲ್ಲಿ ಬರೆದಿರುವುದು ತಪ್ಪಲ್ಲವೇ...? ದಯಮಾಡಿ ಇದನ್ನೇ ನಾನು ತಿಳಿಸಿದಂತೆ ಕನ್ನಡದಲ್ಲಿ ಬರೆದು ಪ್ರಕಟಿಸಿದರೆ ತುಂಬಾ ಸಂತೋಷ. ಶುಭವಾಗಲಿ. -ತ್ರಿನೇತ್ರ. 

Hesaru Helalla (ಪ್ರಮಾಣಿಸಲ್ಪಟ್ಟಿಲ್ಲ.) ಧ, 04/11/2012 - 16:26

ನಿಮ್ಮ ಸಲಹೆಗೆ ಧನ್ಯವಾದ. ಕನ್ನಡದಲ್ಲಿ ಬರೆಯಲು ಪ್ರಯತ್ನಿಸಿದ್ದೆನೆ. ದಯವಿಟ್ಟು ಸಹಕರಿಸಿ. ಇನ್ನ ನಾನು ವಿಸ್ಮಯನಗರಿಯ ಒದುಗಳು.

ತ್ರಿನೇತ್ರ ಧ, 04/11/2012 - 18:03

ಅಂತೂ ಕನ್ನಡದಲ್ಲಿ ಬರೆವುದನ್ನು ಕಲಿತಿರಿ ತಾವು, ತುಂಬಾ ಸಂತೋಷ...! ಹೀಗೇ ನಿಮಗೂ ಅನ್ನಿಸಿದ್ದನ್ನು ಬರೆದು ಪ್ರಕಟಿಸಬಹುದು. ನನ್ನ ಇತರೆ ಕವನ ಮತ್ತು ಬರಹಗಳನ್ನೂ ಓದಿ ತಮ್ಮ ಅಭಿಪ್ರಾಯ ಬರೆಯುತ್ತೀರೆಂದು ಆಶಿಸುವೆ. ಶುಭವಾಗಿಲಿ -ತ್ರಿನೇತ್ರ.

Hesaru Helalla (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 04/12/2012 - 11:13

ಹಾಯ್ ಅಗ್ನಿ,
ಉತರ ಕೊಟ್ಟಿದ್ದಕ್ಕೆ ಧನ್ಯವಾದ. ನಾನು ನಿಮ್ಮ ಎಲ್ಲ ಕವನಗಳನ್ನು ಓದಿದ್ದೆನೆ. ಹೊಸದು ಇದ್ದರೆ ಬರೆಯಿರಿ. ಹೆಗಿದೆ ಜೀವನ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.