Skip to main content

ನಾ ಮಾಡಿದ್ದು ಸರಿಯೋ ತಪ್ಪೋ...?

ಬರೆದಿದ್ದುFebruary 21, 2012
10ಅನಿಸಿಕೆಗಳು

ಪ್ರಿಯ ಮಿತ್ರರೇ, ಬೆಂಗಳೂರು ದೇಶದಲ್ಲೇ ಅತೀ ಶೀಘ್ರವಾಗಿ ಬೆಳೆಯುತ್ತಿರುವ ನಗರಗಳಲ್ಲೊಂದು. ಇಂತಹಾ ನಗರದಲ್ಲಿ ವಾಸಿಸುತ್ತಿರುವ ಸಾಮಾನ್ಯ ಜನರಿಗೆ ಕಾಣಬರುವ ಮತ್ತು ಅನುಭವಕ್ಕೆ ಬಂದಿರುವ ಹಲವಾರು ಘಟನೆಗಳು ದಿನ ನಿತ್ಯ ನಡೆಯುತ್ತಿರುತ್ತವೆ. ಅಂತಹದೇ ಒಂದು ಘಟನೆಯನ್ನು ಹಂಚಿಕೊಳ್ಳುತ್ತಿದ್ದೇನೆ.
 
ಇದೇ ಜನವರಿ ತಿಂಗಳು ನಡೆದ ಘಟನೆ ಇದು. ನಾನು ಕನಕಪುರದಿಂದ ಬರುತ್ತಾ ಕಲಾಶಿಪಾಳ್ಯಮ್ ಕೋಟೆ ಬಳಿ ಬಸ್ ನಿಲ್ದಾಣದಲ್ಲಿ ಇಳಿಯುವವನಿದ್ದೆ ಅದೇ ಮತ್ತೊಂದು ಪಕ್ಕದ ಸೀಟಿನಲ್ಲಿದ್ದ ಸುಮಾರು ೪೦-೪೫ ವಯಸ್ಸಿನ ವ್ಯಕ್ತಿಯೊಬ್ಬ ಸಾರ್... ನನ್ನನ್ನು ಇಳಿಸಿ ಸ್ವಲ್ಪಾ ಇಂದಿರಾ ನಗರಕ್ಕೆ ಹೋಗೋ ಸಿಟಿ ಬಸ್ ಸ್ಟಾಪ್ ಹತ್ರ ಕರ್ಕೊಂಡ್ ಹೋಗಿ ಬಿಟ್ಟುಬಿಡಿ ಪ್ಲೀಸ್... ಎಂದ. ಅವನನ್ನು ನಾ ಒಮ್ಮೆ ದಿಟ್ಟಿಸಿ ನೋಡಿದೆ.
 ಕಣ್ಣುಗಳು ಸಣ್ಣ ಸಣ್ಣವಾಗಿದ್ದು ಹುಡುಕಾಡುತ್ತಾ ತಡಕಾಡುತ್ತಾ ಎದ್ದು ನಿಲ್ಲುತಿದ್ದ ಅವನ ಹಾವ ಭಾವಗಳನ್ನು ನೋಡಿ ಪಾಪ ಕಣ್ಣು ಕಾಣಿಸದ ಅಂಧ ಎಂದುಕೊಂಡು ಸಹಾನುಭೂತಿ ಮೂಡಿ ಅವನನ್ನು ಬುಜದಮೇಲೆ ಕೈಯ್ಯಿರಿಸಿಕೊಂಡು ಸಿಟಿ ಬಸ್ ಸ್ಟ್ಯಾಂಡಿನವರೆಗೂ ಕರೆತಂದು ಹಲಸೂರು ಕಡೆ ಹೋಗುವ ಬಸ್ ತೋರಿಸಿ ಹತ್ತಲು ತಿಳಿಸಿದಾಗ.. ನಮ್ದುಗೆ ಒಂದ್ ರಿಕ್ವೆಸ್ಟ್ ಇದೆ ಸಾರ್.. ಬೆಳ್ಗಿಂದಾ ಊಟ ಮಾಡಿಲ್ಲ ದೈವಿಟ್ಟು ಸ್ವಲ್ಪ ಬಿಸ್ಕೆಟ್ ಅಥ್ವಾ ಬನ್ ತಗೋಬೇಕು ಇಲ್ಲೇ ಪಕ್ಕ ಬೇಕರಿ ಏನಾದ್ರೂ ಇದ್ರೆ ಕರ್ಕೊಂಡ್ ಹೋಗ್ತೀರಾ ಎಂದ ಅಲ್ಲಿಗೂ ಕರೆದೊಯ್ದು ಆಯ್ತು ತಗೊಳ್ಳಿ ಎಂದೆ. ಅವನು ಎರಡು ದಿಲ್ ಪಸಂದ್, ಖಾರಾ ಬಿಸ್ಕೆಟ್ ಮತ್ತು ಸ್ವಲ್ಪ ಖಾರಾ ಎಲ್ಲಾ ಕಟ್ಟಿಸಿಕೊಂಡ. ನಂತರ ಬೇಕರಿಯವ ೩೬ ರೂ ಆಯ್ತು ಕೊಡಿ ಎಂದಾಗ ಅವನು ನನ್ನನ್ನುದ್ದೇಶಿಸಿ ಸಾರ್ ನೀವೇ ಸ್ವಲ್ಪಾ ಹೆಲ್ಪ್ ಮಾಡ್ಬೇಕೂ... ನಮ್ದೂ ಹತ್ರಾ ಹಣಾ ಇಲ್ಲಾ... ಹಿಹ್ಹಿಹ್ಹೀ... ಎನ್ನುತ್ತಾ ಹಲ್ಕಿರಿದು ನಿಂತ. .. ಸಹಾಯ ಮಾಡಲು ಹೋಗಿ ಕಾಸೂ ಕೇಡು ತಲೇನೂ ಬೋಳು ಅಂತಾರಲ್ಲಾ ಹಾಗಾಗಿ ಹಿಂಗು ತಿಂದ ಮಂಗನಂತಾಗಿತ್ತು ನನ್ನ ಪರಿಸ್ಥಿತಿ. ಮಾತಾಡದೇ ನಾನೇ ದುಡ್ಡು ಕೊಟ್ಟು ಅವನನ್ನು ಮತ್ತೆ ಬಸ್ ಹತ್ತಿರ ಕರೆತಂದು ಅದರಲ್ಲಿ ಕೂರಿಸಿದೆ. ತುಂಬಾ ಥ್ಯಾಂಕ್ಸ್ ಸಾರ್ ನಿಮ್ಮದೂ ಮಕ್ಳೂ ಮನೆವ್ರೂ ಎಲ್ರುಗೂ ಆ ಅಲ್ಲಾ ಒಳ್ಳೇದ್ಮಾಡ್ತಾನೇ.... ಅಂತ ಹೇಳುತ್ತಿರಲು ಬಸ್ ಹೊರಟೇಬಿಟ್ಟಿತು. ನಾನು ನನ್ನ ಮನೆ ಕಡೆ ಬಸ್ ಹಿಡಿದು ಸೇರುವ ಹೊತ್ತಿಗೆ ರಾತ್ರಿ ಹತ್ತೂವರೆಯಾಗಿತ್ತು. ಮನದಲ್ಲಿ ಏನೇನೋ ಯೋಚನೆಗಳು ಕಾಡುತ್ತಿದ್ದವು ನಾನು ಮಾಡಿದ್ದು ಸರೀನಾ ತಪ್ಪಾ.. ಅವನು ನನ್ನನ್ನು ಮೋಸಗೊಳಿಸಿಲ್ಲಾ ತಾನೇ...ಎಂದು. ನಾನು ಮೋಸಹೋದಬಗ್ಗೆ ಹೆಂಡತಿಗೂ ತಿಳಿಸಿದೆ. ಅವಳು ಹೋಗ್ಲೀ ಬಿದ್ರೀ ಪಾಪಾ ನಿಜ್ವಾಗ್ಲೂ ಊಟ ಮಾಡಿರ್ಲಿಲ್ವೇನೋ... ಹಸಿದವರಿಗೆ ಒಂದು ಹೊತ್ತು ಊಟ ಹಾಕಿದ್ರೆ ನಮಗೇನೂ ಕಡಿಮೆಆಗೊಲ್ಲಾ... ಎಂದು ಸುಮ್ಮನಾದಳು. ಅದೇನೋ ಸರೀ ಆದ್ರೆ ಹಾಗಿದ್ದಲ್ಲಿ ಮೊದಲೇ ಹೇಳಬಹುದಿತ್ತಲ್ವಾ ನನ್ನ ಹತ್ರಾ ದುಡ್ಡಿಲ್ಲ ಊಟ ಕೊಡ್ಸೀ ಅಂದಿದ್ರೆ ನಾನೇ ಪಕ್ಕದ ಹೋಟೆಲ್ ನಲ್ಲಿ ಊಟ ಕೊಡಿಸಿ ಕಳಿಸ್ತಿದ್ದೆನಲ್ಲಾ... ಅದು ಬಿಟ್ಟು ಮೊದಲು ಏನೂ ಹೇಳದೇ ಎಲ್ಲಾ ಕಟ್ಟಿಸಿಕೊಂಡು ನಂತರ ಹೀಗೆ ಮಾಡಿದನಲ್ಲಾ... ಎನ್ನುತ್ತಾ ನಿದ್ರೆಹೋಗಿದ್ದೆ.
 
ನಂತರ.... ನಾಳೆ ಬೆಳಿಗ್ಗೆ ಎದ್ದು ದೆಹಲಿಯತ್ತ ಪ್ರಯಾಣಕ್ಕೆ ಏರ್ಪೋರ್ಟ್ ಗೆ ಹೋಗಬೇಕಿತ್ತು ರಸ್ತೆ ಪಕ್ಕ ಬಂದು ನಿಂತು ಆಕಡೆ ಹೋಗುತ್ತಿರೋ ಖಾಲೀ ಟ್ಯಾಕ್ಸೀಗಾಗಿ ಕಾದು ನಿಂತಿದ್ದೆ . ಯಾಕಂದ್ರೆ DIAS ಬಸ್ ನಲ್ಲಿ ೧೪೦ ರೂ ಟಿಕೆಟ್ಟಾದರೆ ಟ್ಯಾಕ್ಸಿಯವರು ೧೦೦ ರೂ ತೆಗೆದುಕೊಳ್ಳುತ್ತಾರೆ ಹಾಗಾಗಿ ೪೦ ರೂ ಉಳಿಸಬಹುದಿತ್ತು. ಹಾಗೆನೇ ಒಂದು ಟ್ಯಾಕ್ಸೀ ಬಂತು ಅದರಲ್ಲಿ ಆಗಲೇ ಒಬ್ಬ ಪ್ರಯಾಣಿಕ ಕುಳಿತಿದ್ದ ನಾನು ಮುಂದಿನ ಸೀತಿನಲ್ಲಿ ಕುಳಿತು ಪ್ರಯಾಣಿಸಿದೆ. ಏರ್ ಪೋರ್ಟ್ ಸೇರಿದಾಗ ಆ ವ್ಯಕ್ತಿ ಅವನಿಗೆ ನೂರು ರೂ ಕೊಟ್ಟು ಹೊರಟುಹೋದ, ನಾನು ಎಷ್ಟು ಕೊಡಬೇಕೆಂದು ಕೇಳಲು... ಅವನು ನಿಮ್ಮ ಖುಶೀ ಸಾಬ್.. ಕೊಡೀ... ಎಂದ ಅವನೂ ದಾಡಿ ಬಿಟ್ಟಿದ್ದ... ಪರ್ಸ್ ತೆಗೆದು ನೊಡಿದೆ ಬರೀ ಐನೂರರ ಮತ್ತು ನೂರರ ಹಾಗೂ ಒಂದು ಇಪ್ಪತ್ತರ ನೋಟುಗಳು ಇದ್ದವು ಅದರಲ್ಲಿ ಇಪ್ಪತ್ತರ ನೋಟನ್ನು ತೆಗೆದು ಅವನ ಕೈಗಿತ್ತೆ. ಅವನು ಅದನ್ನು ತನ್ನ ಕಣ್ಣುಗಳಿಗೆ ಒತ್ತಿಕೊಳ್ಳುತ್ತಾ ಶುಕ್ರಿಯಾ ಸಾಬ್.. ಎನ್ನುತ್ತಾ ನಸುನಗುತ್ತಲೇ ಸ್ವೀಕರಿಸಿ ಹೊರಟುಹೋದ...!
 
ನನ್ನ ಹೆಂಡತಿ ರಾತ್ರಿ ಹೇಳಿದ್ದನ್ನು ನೆನೆಸಿಕೊಂಡೆ... ನಾವು ಯಾರಿಗೋ ಮನಃಪೂರ್ತಿ ಸಹಾಯ ಮಾಡಿದ್ದಲ್ಲಿ ಎಂದಾದರೊಮ್ಮೆ ಅದಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆಂದು ಆದರೆ ರಾತ್ರಿ ನಾನು ಕಳೆದು ಕೊಂಡಿದ್ದೆನೆಂದು ಚಿಂತಿಸುತ್ತಿದ್ದ ನನಗೆ ಅದಕ್ಕಿಂತಾ ಎರಡರಷ್ಟು ಹಣ ಬರೇ ೧೨ ಘಂಟೆಯೊಳಗೆ ಅಲ್ಲಾನ ಕಡೆಯವರಿಂದಲೇ ಉಳಿತಾಯವಾಗಿತ್ತು....! ನನ್ನ ಮನದಲ್ಲಿ ಈಗಲೂ ಒಂದು ಪ್ರಶ್ನೆ ನನ್ನನ್ನು ಕಾಡುತ್ತಿದೆ ನಾನು ಮಾಡಿದ್ದು ಸರಿಯೋ ತಪ್ಪೋ ಎಂದು... ಮತ್ತು ಆ ವ್ಯಕ್ತಿ ಮಾಡಿದ್ದು ಸರಿಯೋ ತಪ್ಪೋ ಎಂದು...!
 
ಹೀಗೇ ಹಿಂದೊಮ್ಮೆ ೩೦೦೦ ಕೂಡ ಕಳೆದುಕೊಂಡಿದ್ದೇನೆ ಅದೂ ಬಾಲ್ಯದಲ್ಲಿ ಮಿತ್ರನಾಗಿದ್ದ ಒಬ್ಬ ವ್ಯಕ್ತಿಯ ಕಷ್ಟಕಾಲದ ಕಣ್ಣೀರಿಗೆ ಕರಗಿ....! ನಂತರ ನನಗೆ ತಿಳಿಯಿತು ಅವನು ದುಶ್ಚಟಗಳಿಗೆ ಬಿದ್ದು ಹೀಗೇ ಎಲ್ಲರ ಬಳಿಯೂ ಮಾಡಿದ್ದಾನೆಂದು. ಆಗ ಅರಿವಾಯ್ತು ನಾನು ಮಾಡಿದ್ದು ತಪ್ಪೆಂದು. ಇನ್ನೆಂದೂ ಆ ತಪ್ಪು ಮಾಡುವುದಿಲ್ಲ ಎಂದುಕೊಂಡಿದ್ದೇನೆ ನೋಡೋಣಾ...!
 
 
 

ಲೇಖಕರು

ತ್ರಿನೇತ್ರ

ನಾವಿರೋದೇ ಹೀಗೆ...!

ನಾನು ಹುಟ್ಟು ಕನ್ನಡಿಗ ಓದಿ ಬೆಳೆದಿದ್ದು ಬೆಂಗಳೂರಿನಿಂದ ಮೈಸೂರಿನವರೆಗೂ ವಿವಿಧ ಊರುಗಳಲ್ಲಿ. ವೃತ್ತಿಗಾಗಿ ಅಲೆದದ್ದು ಬೆಂಗಳೂರಿನಿಂದ ಕೊಡಗಿನವರೆಗೆ ನಂತರ ರಾಷ್ಟ್ರದ ರಾಜಧಾನಿ ದೆಹಲಿ ಹಾಗೊ ಅದರ ಸುತ್ತಲಿನ ಹರ್ಯಾಣಾ ಗಳಲ್ಲಿ ೨೧ ವರ್ಷ ಸೇವೆ ಸಲ್ಲಿಸಿ ಮತ್ತೆ ತಾಯ್ನಾಡಿನ ರಾಜಧಾನಿ ಬೆಂಗಳೂರಿಗೆ ಬಂದು ನೆಲೆಸಿರುವೆ. ಆದರೂ ಕನ್ನಡ ಮರೆತಿಲ್ಲ ಮರೆಯುವಂತಿಲ್ಲ. ಕನ್ನಡದ ಯಾವುದೇ ಲೇಖನ ಕಥೆ ಕವಿತೆ ಇತ್ಯಾದಿ ಓದುವುದು ಹಿಂದಿನ ಅಭ್ಯಾಸ. ಸಮಯ ಸಿಕ್ಕಾಗ ಏನಾದರೂ ಚಿಕ್ಕ ಪುಟ್ಟದ್ದು ಬರೆವುದು ಇತ್ತೀಚಿಗೆ ಬೆಳೆಸಿಕೊಂಡ ಹವ್ಯಾಸ ಹಾಗಾಗಿ ಈ ವಿಸ್ಮಯನಗರಿಗೆ ಪ್ರವೇಶ...!

ಅನಿಸಿಕೆಗಳು

ಪಿಸುಮಾತು ಧ, 02/22/2012 - 20:19

ನನಗನ್ನಿಸಿದಂತೆ ನೀವು ಮಾಡಿದ್ದು ತಪ್ಪೇನಿಲ್ಲ. ಮೊದಲಿನ ವ್ಯಕ್ತಿ ಸುಳ್ಳು ಹೇಳಿರಲಿಕ್ಕಿಲ್ಲ. ನಿಜವಾಗಿಯೂ ಅವನು ತುಂಬಾ ಹಸಿದಿದ್ದು ನೇರವಾಗಿ ಮೊದಲೇ ಹಣ ಕೇಳಿದರೆ ಕೊಡುತ್ತಾರೊ ಇಲ್ಲವೋ ಎಂಬ ಅನುಮಾನದಿಂದ ಬೇಕರಿಗೆ ಕರೆದೊಯ್ದು ನಾಟಕ ಆಡಿರಲಿಕ್ಕೂ ಸಾಕು. ಆದರೆ ನಾವೊಂದು ಕಡೆ ಕಳೆದುಕೊಂಡರೆ ಮತ್ತೊಂದು ವಿಧದಲ್ಲಿ ಅದು ಬಂದೇ ಬರುತ್ತದೆ. ಅತವಾ ಒಂದು ಕಡೆ ಅನ್ಯಾಯವಾಗಿ ಸಂಪಾದಿಸಿದರೆ ಮತ್ತೊಂದು ಕಡೆ ಕಣ್ಣೆದುರೇ ಅದು ಹೊರಟು ಹೋಗುತ್ತದೆ. ಆದಷ್ಟು ಪ್ರಾಮಾಣಿಕವಾಗಿ ಸಂಪಾದಿಸಿ ಪ್ರಾಮಾಣಿಕವಾಗಿ ಬದುಕಿದರೇನೇ ಹೆಚ್ಚು ಖುಶಿ ಅನ್ನಿಸುತ್ತೆ.

ತ್ರಿನೇತ್ರ ಗುರು, 02/23/2012 - 13:54

ಧನ್ಯವಾದಗಳು ಶ್ರೀಪತಿಯವರೇ ತಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಾನು ನಿಮ್ಮಷ್ಟು ದೊಡ್ಡ ಬರಹಗಾರನಲ್ಲ ಹಿಂದೆಂದೋ ರಚಿಸಿ ಮನದೊಳಗೇ ಇರಿಸಿಕೊಂಡಿದ್ದ ಸಣ್ಣ ಪುಟ್ಟ ಕವನಗಳು ಇಲ್ಲಿ ಈಗ ಪ್ರಕಟಿಸಿದ್ದೇನೆ ಮತ್ತು ಇದು ನನ್ನ ಪ್ರಥಮ ಪ್ರಯತ್ನ ಹಾಗಾಗಿ ನನ್ನ ಅನುಭವವನ್ನು ಹಂಚಿಕೊಂಡೆ ಅಷ್ಟೇ. ತಾವು ಹೇಳಿದಂತೆ ಅನ್ಯಾಯವಾಗಿ ಸಂಪಾದಿಸಿದ್ದು ಕಂಡಿತಾ ನಮಗೆ ದಕ್ಕುವುದಿಲ್ಲ. ಅದರಿಂದ ಸಿಗುವ ಕ್ಷಣಿಕ ಸುಖಕ್ಕಿಂತಾ ನಷ್ಟವನ್ನನುಭವಿಸಿದಾಗ ಆಗುವ ದುಖಃ ಬಹಳ ಹೆಚ್ಚು. ಸಾಕಷ್ಟು ಸಮಯ ಸಿಕ್ಕಿದಾಗ ನಿಮ್ಮ ಬ್ಲಾಗನ್ನೂ ನೋಡುವೆ. -ತ್ರಿನೇತ್ರ.

ತ್ರಿನೇತ್ರ ಗುರು, 02/23/2012 - 13:53

ಧನ್ಯವಾದಗಳು ಶ್ರೀಪತಿಯವರೇ ತಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಾನು ನಿಮ್ಮಷ್ಟು ದೊಡ್ಡ ಬರಹಗಾರನಲ್ಲ ಹಿಂದೆಂದೋ ರಚಿಸಿ ಮನದೊಳಗೇ ಇರಿಸಿಕೊಂಡಿದ್ದ ಸಣ್ಣ ಪುಟ್ಟ ಕವನಗಳು ಇಲ್ಲಿ ಈಗ ಪ್ರಕಟಿಸಿದ್ದೇನೆ ಮತ್ತು ಇದು ನನ್ನ ಪ್ರಥಮ ಪ್ರಯತ್ನ ಹಾಗಾಗಿ ನನ್ನ ಅನುಭವವನ್ನು ಹಂಚಿಕೊಂಡೆ ಅಷ್ಟೇ. ತಾವು ಹೇಳಿದಂತೆ ಅನ್ಯಾಯವಾಗಿ ಸಂಪಾದಿಸಿದ್ದು ಕಂಡಿತಾ ನಮಗೆ ದಕ್ಕುವುದಿಲ್ಲ. ಅದರಿಂದ ಸಿಗುವ ಕ್ಷಣಿಕ ಸುಖಕ್ಕಿಂತಾ ನಷ್ಟವನ್ನನುಭವಿಸಿದಾಗ ಆಗುವ ದುಖಃ ಬಹಳ ಹೆಚ್ಚು. ಸಾಕಷ್ಟು ಸಮಯ ಸಿಕ್ಕಿದಾಗ ನಿಮ್ಮ ಬ್ಲಾಗನ್ನೂ ನೋಡುವೆ. -ತ್ರಿನೇತ್ರ.

ಪಿಸುಮಾತು ಗುರು, 02/23/2012 - 14:58

ಹಹಹ, ನಾನೇನೂ ದೊಡ್ಡ ಸಾಹಿತಿ ಅಲ್ಲ ಮಾರಾಯ್ರೇ, ದೊಡ್ಡ ಸಾಹಿತಿಗಳೆಲ್ಲಾ ಪ್ರಶಸ್ತಿ ಪುರಸ್ಕಾರ ತಗೊಳ್ಳೋದರಲ್ಲಿ ಬ್ಯುಸಿಯಾಗಿದ್ದಾರೆ. ನಮ್ಮ ನಿಮ್ಮಂತವರೇ ಚಿಕ್ಕ ಪುಟ್ಟ ವಿಷಯಗಳನ್ನೂ ಬರೆದು, ಹಂಚಿ ಖುಷಿ ಪಡೋದು. ಆದರೂ ನನ್ನಂತವನನ್ನೂ ದೊಡ್ಡವನನ್ನಾಗಿ ಕಂಡ ನಿಮ್ಮ ದೊಡ್ಡತನಕ್ಕೆ ಸಲಾಮು. Smile

ತ್ರಿನೇತ್ರ ಶುಕ್ರ, 02/24/2012 - 09:46

ಶುಭ ದಿನವು ನಿಮಗೆ ...! ಇಷ್ಟೆಲ್ಲಾ ಬರೆದು ಏನೇನೆಲ್ಲಾ ಓದುಗರಿಗೆ ಹಂಚಿಕೂಳ್ಳುತ್ತಿರುವ ನೀವೇ ನಾನು ಏನೇನೂ ಅಲ್ಲ ಎಂದು ಹೇಳುವುದಾದರೆ ನಾನು ಈ ಲೋಕಕ್ಕೆ ಪ್ರವೇಶಿಸಿದ್ದು ಇತ್ತೀಚೆಗೆ ಮತ್ತು ಕೆಲವು ಬಾಲಿಶಃ ಎನ್ನಿಸುವಂತಹಾ ಚಿಕ್ಕ ಪುಟ್ಟದನ್ನೂ ಬರೆದು ಪ್ರಕಟಿಸಲು ಪ್ರಯತ್ನಿಸುತ್ತಿರುವ ಒಬ್ಬ ಸಣ್ಣ Amature ಲೇಖಕ ಎನ್ನಬಹುದು. ಹಾಗಾಗಿ ವಯಸ್ಸಿನಲ್ಲಿ ಚಿಕ್ಕವರು ದೊಡ್ಡವರು ಆಗಿರಬಹುದು ಅದು ಲೆಕ್ಕಕ್ಕೆ ಬರುವುದಿಲ್ಲ ಬದಲಾಗಿ ಅವರವರ ಅನುಭವ, ಕಲೆಗಾರಿಕೆ ಮತ್ತು ತಮಗನ್ನಿಸಿದ್ದನ್ನು ಓದುಗರಿಗೆ ಮನಮುಟ್ಟುವಂತೆ ಪ್ರಸ್ತುತ ಪಡಿಸುವ ರೀತಿಯಲ್ಲಿ ಯಾರು ಪಳಗಿರುತ್ತಾರೋ ದಿನದಿಂದ ದಿನಕ್ಕೆ ಪರಿಪಕ್ವತೆಯ ಮೆಟ್ಟಿಲುಗಳನ್ನು ಏರುತ್ತಿರುತ್ತಾರೋ ಅವರೇ ದೊಡ್ಡವರು ಎಂದು ನನ್ನ ಭಾವನೆ. ನೀವು ಹೇಳಿರುವುದು ಅಲಕ್ಷರಶಃ ಸಥ್ಯ, ಪುರಸ್ಕಾರ ತೆಗೆದುಕೊಳ್ಳುತ್ತಿರುವವರೆಲ್ಲಾ ಹಿಂದೊಮ್ಮೆ ನಮ್ಮಂತೆಯೇ ಶುರುಮಾಡಿದವರು ಎಂಬುದನ್ನು ಮರೆಯಲಾಗದು ಅಲ್ಲವೇ...?

ಪಿಸುಮಾತು ಶುಕ್ರ, 02/24/2012 - 14:53

ಹಾಗಾದರೆ ಇನ್ಮುಂದೆ ನಾವೂ ಪ್ರಶಸ್ತಿ ಪುರಸ್ಕಾರ ತಗೊಳ್ಳೋಕೆ ಮುಗಿ ಬೀಳಬಹುದನ್ನಿ. Money mouth

ತ್ರಿನೇತ್ರ ಶುಕ್ರ, 02/24/2012 - 15:17

ಕಂಡಿತಾ... ಯಾಕೆ ಆಗಬಾರದು...? ಮುಗಿಬೀಳುವುದು ಎನ್ನುವುದಕ್ಕಿಂತಾ ಅವಕಾಶ ಸಿಕ್ಕಾಗ ಸೂಕ್ತ ಪ್ರವೇಶ ಕಳಿಸಿ ನಮ್ಮ ಪ್ರತಿಭೆಯನ್ನು ಒರೆಹಚ್ಚಿ ನೋಡಬಹುದು ಎಂದರೆ ತಪ್ಪಾಗದು...!
ನಿಮ್ಮ ಬ್ಲಾಗ್ ಪ್ರವೇಶಿಸಿ ನೋಡಿದೆ ಅದರಲ್ಲಿ ವೆಬ್ ಸೈಟ್ ಶೃಷ್ಠಿಸಿ ಅದನ್ನು ಹೋಸ್ಟ್ ಮಾಡುವುದು ಇತ್ಯಾದಿಗಳ ಬಗ್ಗೆ ಚೆನ್ನಾಗಿ ವಿವರಿಸಿ ಹೇಳಿ ಅದರ ಬಗ್ಗೆ ನಮ್ಮಂತಹಾ ಏನೂ ತಿಳಿಯದವರ  ಹಾಗೂ ಅಲ್ಪ ಸ್ವಲ್ಪ ತಿಳಿದವರ ಜತೆ ಹಂಚಿಕೊಂಡಿದ್ದೀರಿ. ಧನ್ಯವಾದಗಳು.

ಪಿಸುಮಾತು ಶುಕ್ರ, 02/24/2012 - 15:51

ಧನ್ಯವಾದಗಳು. :)

venkatb83 ಶುಕ್ರ, 02/24/2012 - 18:57

  ತ್ರಿನೇತ್ರ ಅವ್ರೆ  ಇದನ್ನೇ ಹೋಲುವ ಬರಹ ಕೆಲ ದಿನಗಳ ಹಿಂದೆ ಇಲ್ಲಿ ಬಂದಿತ್ತು(ವಿಸ್ಮಯನಗರಿ)http://www.vismayanagari.com/vismaya11/node/21490ಆದಕ್ಕೆ ನಾ ಪ್ರತಿಕ್ರಿಯಿಸಿರುವೆ...   ಕೆಲವೊಮ್ಮೆ  ನಾವ್ ಕನಿಕರ ಪಟು ಕಾಸು ಕಳೆದುಕೊಳ್ಳೋದು  ನಿಜ, ಆದ್ರೆ  ಇಂತಹ  ಮೈಗಲ್ಳ ಜನರಿಂದ ಒಂದೊಮ್ಮೆ ನಿಜವಾಗಿಯೂ ತೊಂದರೆಯಲ್ಲಿದವರನ್ನು ನಾವ್ ಸಶಯ ಪಡಬೇಕಾಗುತ್ತೆ... ಅದೇ ದುರಂತ!  ನಂಗೂ ಅನುಭವ ಆಗಿತು..... ಆದರೆ ಒಮ್ಮೆ ಮಾತ್ರ....ನೀವ್ ಈ ನಡುವೆ ವಿಸ್ಮಯನಗರಿಯಲ್ಲಿ ಬಹು ಸಕ್ರಿಯ ಆಗಿದ್ದೀರ.ತುಂಬಾ ಸಂತೋಷ.. ಹಾಗೆ  ನಿಮ್ಮ ವಯುಕ್ತಿಕ ವಿವರ ನೋಡಿದೆ ಪ್ರತಿ ವಿಷಯವೂ ವಿಭಿನ್ನ ..ನೀವ್ ಛಾಲೇ0ಜ್  ಮಾಡಿದ್ದು ಅದನ ಸಾಧಿಸಿದ್ದು , ನನಗೆ ಹಿಡಿಸಿತು...ನೀವ್  ಕೆಲ ವಿಸ್ಮಯನಗರಿ ಸದಸ್ಯರಿಗೆ  ಹೀತೋಪದೇಶ..    ಮಾಡಿದ್ದು ಸಹ ಓದಿದೆ!ಅದು  ಸರೀನೆ   ನಿಮ್ಮಿಂದ ಇನ್ನಸ್ತು ಒಳ್ಳೊಳ್ಲೆ ಬರಹ ನಿರೀಕ್ಷಿಸುವೆ.. ಶುಭವಾಗಲಿ     

ತ್ರಿನೇತ್ರ ಸೋಮ, 02/27/2012 - 09:38

ನಮಸ್ಕಾರ ವೆಂಕಟ್ ಅವರಿಗೆ.  ತಾವು ನನ್ನ ಸಣ್ಣ ಸಣ್ಣ ಲೇಖನಗಳನ್ನೂ ನೋಡಿ ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಕೂಡಾ. ನೀವು ಹೇಳಿದ್ದು ಕಂಡಿತ್ತಾ ಸರಿ ಆಗ ಇದೇ ಲೇಖನವನ್ನು ಶ್ರೀ ಚಿದಾನಂದ ರವರ ನಾಕಂಡ ಬೆಂಗಳೂರು ಎಂಬ ಲೇಖನಕ್ಕೆ ನನ್ನ ಪ್ರತಿಕ್ರಿಯೆಯ ರೂಪದಲ್ಲಿ ಅನುಭವವನ್ನು ಹಂಚಿಕೊಂಡಿದ್ದೆ. ನಂತರ ನನಗನಿಸಿತು ಇದನ್ನೇ ಒಂದು ಲೇಖನವನ್ನಾಗಿ ಮಾಡಿ ಪ್ರಕಟಿಸಿದರೆ ಇನ್ನೂ ಹೆಚ್ಚು ಓದುಗರಿಗೆ ತಲುಪಬಹುದೆಂದು ಅದಕ್ಕಾಗಿ ಮತ್ತೆ ಪ್ರಕಟಿಸಿದೆ ಅಷ್ಟೇ. ನಾನು ಈ ವಿಸ್ಮಯ ನಗರಿಯಲ್ಲಿ ಇತ್ತೀಚೆಗೆ ಬಹಳ ಸಕ್ರಿಯನಾಗಿದ್ದೀನೆಂದು ತಿಳಿಸಿದ್ದೀರಾ... ಹೌದು ಕೆಲಸದಲ್ಲಿ ಬಹಳ ಮಗ್ನನಾಗಿದ್ದು ಸಮಯ ಸಿಕ್ಕಾಗ ಮಾತ್ರ ಈ ಲೋಕದೊಳಗೆ ಪ್ರವೇಶಿಸಿ ಅವಲೋಕನ ಮಾಡಿ ವಿಹರಿಸಿ ಮನಸ್ಸಿಗೆ ಹಿಡಿಸಿದ ಮತ್ತು ಹಿಡಿಸದ ವಿಚಾರಗಳ ಬಗ್ಗೆ ನನಗನ್ನಿಸಿದ ಮೆಚ್ಚುಗೆ ಮತ್ತು ಸಲಹೆ ಯಾವುದು ಸೂಕ್ತವೋ ಅದನ್ನು ಬರೆದು ತಿಳಿಸುತ್ತಿದ್ದೇನೆ. ಇಷ್ಟವಾದವರು ಮೆಚ್ಚುತ್ತಾರೆ ಇಲ್ಲವಾದವರು ತೆಗಳಿ ಬರೆಯುತ್ತಾರೆ ಎರಡೂ ಸ್ವಾಗತ. ಆದರೆ ಕಣ್ಣ ಮುಂದೆಯೇ ಕೆಲವರಿಂದ ಕೆಲವು ಅಹಿತವಾದ ಬಾಲಿಶಃ ಎನ್ನಬಹುದಾದ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದಾಗ  ಅದೇಕೋ ಏನೋ ಸಹಿಸಲಾಗುವುದಿಲ್ಲ. ಹಾಗಾಗಿ ಹಿತವೆನ್ನಿಸುವ ಅವರನ್ನು ಅವರೇ ತಿದ್ದಿಕೊಳ್ಳುವಂತಾಗಲು  ಒಂದೆರಡು ಸಲಹೆಗಳಬನ್ನು ನೀಡುವುದು ಈ ದೇಶದ ಕನ್ನಡ ಪ್ರಜೆಯಾದ ನನ್ನ ಆಧ್ಯ ಕರ್ತವ್ಯ ಎಂದು ಭಾವಿಸುತ್ತೇನೆ.
ತಮಗೆ ಶುಭವಾಗಲಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.