ನಿಮ್ಮ ವಿಸ್ಮಯ ನಗರಿಗೆ ಐದು ವರ್ಷ !!
[img_assist|nid=21380|title=ವಿಸ್ಮಯ ನಗರಿಗೆ ಐದು ವರ್ಷ|desc=|link=node|align=left|width=130|height=93] ಬರುವ ಜನವರಿ ೧೮ಕ್ಕೆ ನಿಮ್ಮ ವಿಸ್ಮಯನಗರಿ ಈಗ ಐದು ವರ್ಷವನ್ನು ಯಶಸ್ವಿಯಾಗಿ ಪೂರೈಸಿ ಆರನೇ ವರ್ಷಕ್ಕೆ ಕಾಲಿಡುತ್ತಿದೆ! ಸಮಸ್ತ ಕನ್ನಡಿಗರ ಈ ಬೆಂಬಲಕ್ಕೆ ವಿಸ್ಮಯ ನಗರಿ ಅಭಾರಿ. ವಿಸ್ಮಯ ನಗರಿಯ ಅಭಿವೃದ್ಧಿಗೆ ಇನ್ನೂ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಹೊಸ ವಿಸ್ಮಯ ನಗರಿಯಲ್ಲಿ ಯಾವ ಸೌಲಭ್ಯ ಬಯಸುತ್ತೀರಾ ಎಂಬುದನ್ನು ತಿಳಿಸಿ. ಸಾಧ್ಯವಿದ್ದಲ್ಲಿ ಖಂಡಿತ ನೀಡಲಾಗುವದು.ವಿಸ್ಮಯ ನಗರಿಯಲ್ಲಿ ಬರೆದಿರುವ, ಬರೆಯುತ್ತಿರುವ ನೂರಾರು ಬರಹಗಾರರಿಗೆ, ವಿಸ್ಮಯ ಪ್ರಜೆಗಳೆಲ್ಲರಿಗೆ ಹಾಗೂ ಅನಾಮಿಕ ಓದುಗರೆಲ್ಲರಿಗೆ ನಮ್ಮ ಹೃದಯ ಪೂರ್ವಕ ಧನ್ಯವಾದಗಳು. ನಿಮ್ಮ ಬೆಂಬಲ ಹೀಗೆ ಇರಲಿ. ವಿಸ್ಮಯ ನಗರಿಯ ಪ್ರಜೆ ಹಾಗೂ ಅನಾಮಿಕ ಓದುಗರೆಲ್ಲರಿಗೂ ಹೊಸವರ್ಷದ ಶುಭಾಶಯಗಳು. [img_assist|nid=21380|title=ವಿಸ್ಮಯ ನಗರಿಗೆ ಐದು ವರ್ಷ|desc=|link=node|align=center|width=624|height=445]
ಸಾಲುಗಳು
- Add new comment
- 1633 views
ಅನಿಸಿಕೆಗಳು
ವಿಸ್ಮಯನಗರಿ ೫ ಪೂರೈಸಿ ೬ಕ್ಕೆ
ವಿಸ್ಮಯನಗರಿ ೫ ಪೂರೈಸಿ ೬ಕ್ಕೆ ಹೆಜ್ಜೆ ಇಡುತಿರುವ ಈ ಶುಭ ಸಂದರ್ಭದಲ್ಲಿ ನಿಮಗೆ ನಿಮ್ಮ ಆ ಸತತ ಪರಿಶ್ರಮಕ್ಕೆ ನನ್ ವಂದನೆಗಳು... ವಿಸ್ಮಯನಗರಿ ಅದೆಸ್ಟೋ ಹೊಸಬರಿಗೆ ತಮಂ ಕಥೆ-ಕವನ-ಬರಹ- ಚಿತ್ರ ಸೇರಿಸಲು, ಗೆಳೆತನ ಮಾಡಿಕೊಳ್ಳಲು, ಏಕಾಂತ ಮರೆಯಲು, ಹೊಸತು ಅರಿಯಲು ಸಹಾಯ ಮಾಡಿದೆ..
ವಿಸ್ಮಯನಗರಿಯಿಂದ ನನಗೆ(ನಮಗೆ) ಹೊಸ ಐಡೆಂಟಿಟಿ ಸಿಕ್ಕಿದೆ..ರಾಜೇಶ್ ಅವ್ರ ಶ್ರಮ ಇಲ್ಲಿ ಸಾರ್ಥಕ, ಕನ್ನಡ ಸಾಹಿತ್ಯ ಸಂಸ್ಕೃತಿ ಉಳಿವಿಗೆ ಬೆಳೆವಿಕೆಗೆ ಇಂಟರ್ನೆಟ್ ನಲ್ಲಿ ನೀವು ಮಹಾನ್ ಕಾರ್ಯ ಮಾಡುತ್ತಿರುವಿರಿ.. ನಿಮಗೆ ಶುಭವಾಗಲಿ...
ನನ್ ಒಂದೇ ಒಂದು ಕೋರಿಕೆ- ಸಲಹೆ >> ನಿಮಗೆ ಗೊತ್ತಿರುವ ಹಾಗೆ ಇಲ್ಲಿ ಯಾವುದೇ ಒಬ್ಬ ಅನಾಮಿಕ ಓದುಗ ಪ್ರತಿಕ್ರಿಯೆ ಬರೆಯಬಹುದು ಹಾಗಾಗಿ ಕೆಲವೊಮ್ಮೆ ನಾ ನೋಡಿದ- ಓದಿದ ಹಾಗೆ ಅಶ್ಲೀಲ, ಮತ್ತು ಅಸಹ್ಯ ದ ಕೀಳು ಮಟ್ಟದ ಮನ ನೋಯಿಸುವ ಪ್ರತಿಕ್ರಿಯೆಗಳು ಬರುತ್ತವೆ... ಮತ್ತು ಈಗೀಗ ಕೆಲ ಧಾರ್ಮಿಕ ಪ್ರಸಾರ-ಪ್ರಚಾರ ಜಾಹೀರಾತುಗಳು ಸಹಾ ಕೆಲ ಪ್ರತಿಕ್ರಿಯೆಗಳ ಮಧ್ಯೆ ನುಸುಳುತ್ತಿವೆ.. ಅದಕ್ಕಾಗಿ ಬರೀ ವಿಸ್ಮಯ ನಗರಿ ಸದಸ್ಯರು ಮಾತ್ರ ಪ್ರತಿಕ್ರಿಯಿಸುವಂತೆ ಮಾಡಿ,.... ಆಲ್ ದಿ ಬೆಸ್ಟ್ ವಿಸ್ಮಯ....
ಧನ್ಯವಾದಗಳು ವೆಂಕಟೇಶ
ಧನ್ಯವಾದಗಳು ವೆಂಕಟೇಶ ಅವರೇ,
ವಿಸ್ಮಯ ನಗರಿಯಿಂದ ಅನೇಕ ಜನರಿಗೆ ಅನುಕೂಲವಾದರೆ ಅದೇ ಸಂತೋಷ. ಅನಾಮಿಕ ಕಮೆಂಟ್ ಸೌಲಭ್ಯ ನೀಡಿದ ಮುಖ್ಯ ಉದ್ದೇಶ ಎನೆಂದರೆ ಇಂಟರ್ ನೆಟ್ ಬಗ್ಗೆ ಅಷ್ಟು ತಿಳುವಳಿಕೆ ಇಲ್ಲದವರು ಸಹ ಇಲ್ಲಿ ಕಮೆಂಟ್ ಮಾಡುವಂತೆ ಅನುಕೂಲವಾಗಲಿ ಎಂದು. ಕೆಲವೊಮ್ಮೆ ಆ ಸೌಲಭ್ಯದ ದುರುಪಯೋಗ ಆಗುತ್ತಿರುವದು ದುರದೃಷ್ಟ. ಇಂತಹ ಪ್ರತಿಕ್ರಿಯೆ ಬಂದಾಗ ಅದನ್ನು ಕಡೆಗಣಿಸಲು ಸಾಧ್ಯವೇ? ಅಥವಾ ಇದು ಹೆಚ್ಚಿನ ಮಟ್ಟದಲ್ಲಿ ವಿಸ್ಮಯ ನಗರಿಯ ಪ್ರಜೆಗಳಿಗೆ ನೋವನ್ನುಂಟು ಮಾಡುತ್ತಿದೆಯೇ? ದಯವಿಟ್ಟು ತಿಳಿಸಿ.
ನಮಸ್ಕಾರ ರಾಜೇಶ್ ರವರೇ,
ನಮಸ್ಕಾರ ರಾಜೇಶ್ ರವರೇ,
ವಿಸ್ಮಯನಗರಿಯಿಂದ ಖಂಡಿತವಾಗ್ಯೂ ಹಲವರಿಗೆ ಅನುಕೂಲವಾಗಿದೆ, ಕನ್ನಡದಲ್ಲಿ ಚೆನ್ನಾಗಿರುವ ಕವನ, ಲೇಖನಗಳನ್ನು ಓದುವಂತಾಗಿದೆ. ಆದ್ರೆ ಅನಾಮಿಕರು ಮಾಡುವ ಕಾಮೆಂಟ್ ಕೆಲವೊಮ್ಮೆ
ಮುಜುಗರ ಉಂಟು ಮಾಡಿದರೆ ಕೆಲವೊಮ್ಮೆ ಬೇಸರವನ್ನೂ ಉಂಟು ಮಾಡುತ್ತವೆ. ಕೊನೇ ಪಕ್ಷ ಅಂತಹ ಅನಿಸಿಕೆಗಳನ್ನ, ಕೀಳುಮಟ್ಟದ ಕಾಮೆಂಟ್ಗಳನ್ನ ಅಳಿಸುವ ಅವಕಾಶವನ್ನಾದರೂ ಮಾಡಿ
ಕೊಟ್ಟಲ್ಲಿ ಬಹಳ ಅನುಕೂಲವಾಗುತ್ತೆ. ಅದಲ್ಲದೆ ಇನ್ನೊಂದು ಸಲಹೆ, ನಾವೇ ಬರೆದ ಅಥವಾ ನಮ್ಮ ಬರಹಗಳಿಗೆ ಬಂದಂತಹ ಕೆಲ ಅನಿಸಿಕೆಗಳನ್ನೂ ಅಳಿಸುವ ಒಂದು ಆಯ್ಕೆ ನೀಡಿದಲ್ಲಿ, ನಮ್ಮ
ವಿಸ್ಮಯನಗರಿಯನ್ನು ಇನ್ನೂ ಸ್ವಚ್ಚವಾಗಿ ಇಟ್ಟುಕೊಳ್ಳಬಹುದು ಅಲ್ವೇ? ಎಲ್ಲಾ ಪುಸ್ತಕ, ದಿನಪತ್ರಿಕೆ, ವಾರಪತ್ರಿಕೆಗಳಲ್ಲಿ ಬಂದಂತಹ ಹಾಸ್ಯಗಳನ್ನೇ ಇಲ್ಲಿ ತುರುಕುವುದೂ ಕಡಿಮೆ ಮಾಡಿದಲ್ಲಿ ಒಳ್ಳೆಯದಿತ್ತು.
ಇದರ ಬಗ್ಗೆ ತಾವು ಗಮನಹರಿಸುವಿರಾಗಿ ನಂಬಿದ್ದೇನೆ.
ಧನ್ಯವಾದಗಳೊಂದಿಗೆ,
ಜ್ಯೋತಿ.
ನಮಸ್ಕಾರ ರಾಜೇಶ್ ರವರೇ, ವಿಸ್ಮ
ನಮಸ್ಕಾರ ರಾಜೇಶ್ ರವರೇ, ವಿಸ್ಮಯನಗರಿಯಿಂದ ಖಂಡಿತವಾಗ್ಯೂ ಹಲವರಿಗೆ ಅನುಕೂಲವಾಗಿದೆ, ಕನ್ನಡದಲ್ಲಿ ಚೆನ್ನಾಗಿರುವ ಕವನ, ಲೇಖನಗಳನ್ನು ಓದುವಂತಾಗಿದೆ. ಆದ್ರೆ ಅನಾಮಿಕರು ಮಾಡುವ ಕಾಮೆಂಟ್ ಕೆಲವೊಮ್ಮೆ ಮುಜುಗರ ಉಂಟು ಮಾಡಿದರೆ ಕೆಲವೊಮ್ಮೆ ಬೇಸರವನ್ನೂ ಉಂಟು ಮಾಡುತ್ತವೆ. ಕೊನೇ ಪಕ್ಷ ಅಂತಹ ಅನಿಸಿಕೆಗಳನ್ನ, ಕೀಳುಮಟ್ಟದ ಕಾಮೆಂಟ್ಗಳನ್ನ ಅಳಿಸುವ ಅವಕಾಶವನ್ನಾದರೂ ಮಾಡಿಕೊಟ್ಟಲ್ಲಿ ಬಹಳ ಅನುಕೂಲವಾಗುತ್ತೆ. ಅದಲ್ಲದೆ ಇನ್ನೊಂದು ಸಲಹೆ, ನಾವೇ ಬರೆದ ಅಥವಾ ನಮ್ಮ ಬರಹಗಳಿಗೆ ಬಂದಂತಹ ಕೆಲ ಅನಿಸಿಕೆಗಳನ್ನೂ ಅಳಿಸುವ ಒಂದು ಆಯ್ಕೆ ನೀಡಿದಲ್ಲಿ, ನಮ್ಮವಿಸ್ಮಯನಗರಿಯನ್ನು ಇನ್ನೂ ಸ್ವಚ್ಚವಾಗಿ ಇಟ್ಟುಕೊಳ್ಳಬಹುದು ಅಲ್ವೇ? ಎಲ್ಲಾ ಪುಸ್ತಕ, ದಿನಪತ್ರಿಕೆ, ವಾರಪತ್ರಿಕೆಗಳಲ್ಲಿ ಬಂದಂತಹ ಹಾಸ್ಯಗಳನ್ನೇ ಇಲ್ಲಿ ತುರುಕುವುದೂಕಡಿಮೆ ಮಾಡಿದಲ್ಲಿ ಒಳ್ಳೆಯದಿತ್ತು. ಇದರ ಬಗ್ಗೆ ತಾವು ಗಮನಹರಿಸುವಿರಾಗಿ ನಂಬಿದ್ದೇನೆ. ಧನ್ಯವಾದಗಳೊಂದಿಗೆ, ಜ್ಯೋತಿ.
ಮೊದಲಿಗೆ ಕನ್ನಡದ ಬಗ್ಗೆ ಇರುವ
ಮೊದಲಿಗೆ ಕನ್ನಡದ ಬಗ್ಗೆ ಇರುವ ನಿಮ್ಮ ಅಭಿಮಾನಕ್ಕೆ ಹಾಗು ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಸಾಧ್ಯವಾದಷ್ಟು ಕನ್ನಡದ ಸೇವೆ ಮಾಡುತ್ತಿರುವ ನಿಮಗೆ ವಂದನೆಗಳು ಮತ್ತು ಶುಭ ಹಾರೈಕೆಗಳು. ಸಾಫ್ಟ್ ವೇರ್ ಉದ್ಯೋಗಿಗಳು ಅಂದ್ರೆ ಕನ್ನಡದ ಶತ್ರುಗಳು ಎಂಬಂತೆ ಮಾತಾಡುವವರಿಗೆ ಒಳ್ಳೆಯ ರೀತಿಯಲ್ಲಿ ಉತ್ತರ ನೀಡಿದ್ದೀರಿ. ರಾಜೇಶ್ ಅವ್ರು ಸಾಫ್ಟ್ ವೇರ್ ಉದ್ಯೋಗಿ ಎಂದು ತಿಳಿದಾಗ ಮನೆಯವರಿಗೆಲ್ಲ ಹೇಳಿ ಖುಷಿ ಪಟ್ಟಿದ್ದುಂಟು. ವಿಚಾರ ವಿನಿಮಯಕ್ಕೆ, ನೋವು-ನಲಿವುಗಳನ್ನು ಹಂಚಿಕೊಳ್ಳಲು ವಿಸ್ಮಯನಗರಿ ಉತ್ತಮ ವೇದಿಕೆ. ಒಳಿತು ಕೆಡಕುಗಳೇನೆ ಆದರೂ ತಕ್ಷಣ ನೆನಪಾಗುವು ವಿಸ್ಮಯನಗರಿ, ನನ್ನದು ಎಂಬುದೇನೋ ಇದೆ ಎಂಬ ಭಾವ.. ಇದಕ್ಕೆ ಕಾರಣ ಇಲ್ಲಿ ಬೆಳೆಯುವುದು ಉತ್ತಮ ಹಾಗು ಆರೋಗ್ಯಕರ ಸಂಬಂಧಗಳು ಎಂದು.. ಇದು ಹೀಗೆ ಇದ್ದು ಇನ್ನು ಸ್ಟಾಂಡರ್ಡ್ ಆಗಬೇಕಾದರೆ ವೆಂಕಟ್ ಅವರ ಅಭಿಪ್ರಾಯ ಉಪಯುಕ್ತ ಅನ್ನಿಸುತ್ತೆ. ಅಲ್ಲದೇ ವಿಸ್ಮಯ ಪ್ರಜೆಗಳಲ್ಲದವರೂ ಸಹ ಇಲ್ಲಿನವರ ಪ್ರೊಫೈಲ್ ಗಳಲ್ಲಿ ಸಂದೇಶಗಳನ್ನು ನೋಡಬಹುದು ಅವರಿಗೆ ಈ ಅವಕಾಶ ಇಲ್ಲದಿದ್ದ್ರೆ ಚೆನ್ನ. ಜೊತೆಗೆ ಹೊಸದಾಗಿ ವಿಸ್ಮಯಕ್ಕೆ ಸೇರಿದವರಿಗೆ ಅವರ ಪದ ಪ್ರಯೋಗದ ಬಗ್ಗೆ ಅರಿವಿದ್ದು ಮಾತಿನ ಮೇಲೆ ಹಿಡಿತವಿದ್ದು ಪ್ರಬುದ್ಧರಾಗಿ ಚಿಂತಿಸುವವರಾದರೆ ಸರಿ, ಇಲ್ಲವಾದರೆ ಅಂತಹವರ ಸಂದೇಶಗಳೂ ಮುಜುಗರ ತರಬಹುದು.. ಅವರ ಪುಟದಲ್ಲಿ ಫೋಟೊ ಮೇಲೆ ಕಾಣುವ ಸಂದೇಶ ಬೇರೆ ಆ ಆಯ್ಕೆ ಚೆನ್ನಾಗಿದೆ, ಆದರೆ ಮತ್ತೊಬ್ಬರ ಪುಟದಲ್ಲಿ ಸ್ನೇಹಿತರಲ್ಲದವರೂ ಬರೆಯಬಹುದಾಗಿದೆ ಹೀಗಾಗಿ ಸ್ನೇಹಿತರ ಪಟ್ಟಿಯಲ್ಲಿರುವವರು ಮಾತ್ರ ಪರಸ್ಪರರಿಗೆ ಸಂದೇಶ ಬರೆಯುವಂತಿದ್ದರೆ ಚೆನ್ನ ಎಂದು ನನ್ನ ಅನಿಸಿಕೆ. ಧನ್ಯವಾದಗಳು.. ಗುಡ್ ಲಕ್:)
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು ಸ್ಪಂದನ ಅವರೇ,
ಖಂಡಿತ ಮುಂದಿನ ವಿಸ್ಮಯ ನಗರಿಯ ಅವತರಣಿಕೆಯಲ್ಲಿ ನಿಮ್ಮೆಲ್ಲರ ಸಲಹೆಯನ್ನು ಪರಿಗಣನೆಗೆ ತೆಗೆದು ಕೊಳ್ಳುತ್ತೇನೆ.
ಮತ್ತೊಮ್ಮೆ ನಿಮ್ಮ ಬೆಂಬಲಕ್ಕೆ ಅನಂತ ಧನ್ಯವಾದಗಳು.