ನಮ್ಮ ಊರಿನ ಬಸ್ಸು
ಯಾರ್ರೀ ರಮನಗರ,ರಮನಗರ, ರಮನಗರ, ರಮನಗರ ಬೇಗ ಬೇಗ ಹತ್ಕೊಳ್ರಿ ಇನ್ನು ೧೦ ನಿಮಿಷ ಮಾತ್ರ ಇದೆ ನೋಡಿ ಮಾವಿನಕಾಯಿ,ಮಾವಿನಕಾಯಿ, ಹತ್ತುರೂಪಾಯಿಗೆರಡು ಕಿತ್ತಲೆಹಣ್ಣು ಕಿತ್ತಲೆಹಣ್ಣು ಎರಡುರೂಪಯಿ, ಎರಡುರೂಪಯಿ, ಬೇಗ ಬೇಗ ಹತ್ಕೊಳ್ರಿ . ಹತ್ತೋ ಬೇಗ ಅಲ್ಲಿ ಸೀಟು ಬೇರೆ ಇಲ್ಲ. ಏ ರವಿ ಕರ್ಚೀಫ್ ಹಾಕೋ ಏ ನಮ್ದು ಬಿಡ್ರಿ ಸೀಟು ನಮ್ಮ ಅಪ್ಪ ಅಮ್ಮ ಅಲ್ಲಿ ಹಿಂದಗಡೆ ಬರ್ತಾ ಇದಾರೆ ಅಣ್ಣಾ ಮೇಲಗಡೆ ಎರಡು ಚೀಲ ಹಾಕಿದೀನಿ ೨೦ರೂಪಾಯಿ ಕೊಡ್ರಿ ಹಗ್ಗ ಕಟ್ಟಿದ್ದೀನಿ ಅದೇ ನಿಮ್ಮ ಚೀಲ ಸರಿ ಬಿಡಪ್ಪಾ ಅಯ್ಯಯ್ಯಪ್ಪಾ ಏನ್ ಸಕೇರಿ ರೀ ಡ್ರೈವರ್ ಬೇಗ ಹೋಗ್ ಬಾರದಾ ತಡಿಯಮ್ಮಾ ಇನ್ನು ಒಂದುನಿಮಿಪ ಇದೆ.
ಕಂಡಕ್ಟರ್ ಒಂದ್ನುಮಿಪ ಟಾಯ್ಲೆಟ್ ಹೋಗಿ ಬಂದು ಬಿಡುತ್ತೇನೆ. ಇಷ್ಟೊತ್ತನಕ ಏನ್ರೀ ಮಾಡ್ತೀದ್ರಿ ಸರಿ ಸರಿ
ಯಾರ್ರೀ ರಮನಗರ,ರಮನಗರ, ರಮನಗರ, ರಮನಗರ ಬೇಗ ಬೇಗ ಹತ್ಕೊಳ್ರಿ ಯಾರಾದರೂ ಮಧ್ಯದ ಹಳ್ಳೀಯೋರು ಇದ್ರೆ ಈಗಲೇ ಇಳ್ಕೊಂಬಿಡ್ರಿ ಸ್ವಲ್ಪ ಮುಂದೆ ಹೋಗ್ರೀ ಬಾಗಿಲಲ್ಲೇ ನಿಂತ್ಕೊಂಡು ಸಾಯ್ತೀರಲ್ರೀ ಪೊಲೀಸರು ಹಿಡಿದ್ರೆ ನಾವು ಪೆನಾಲ್ಟಿ ಕಟ್ಟಬೇಕು ಟಿಕೆಟ್. ಟಿಕೆಟ್. ಯಾರ್ರೀ ಟಿಕೆಟ್. ಟಿಕೆಟ್ ಒಂದು ರಮನಗರ ಕೊಡ್ರಿ ೪೦ರೂಪಯಿ ಕೊಡ್ರಿ ೧೦೦೦ರೂಪಯಿ ಕೊಟ್ಟರೆ ಹೇಗೆಪ್ಪ ಚಿಲರೆ ಇದ್ರೆ ಕೊಡ್ರಿ ನೀವು ಎಲ್ಲಿಗ್ರಿ ನನಗು ಎರಡು ರಮನಗರ ಕೊಡ್ರಿ ೮೦ ರೂಪಯಿ ಕೊಡ್ರಿ ಎಷ್ಟುಜನಕ್ಕೆ ಅಂತಾ ಚಿಲ್ಲರೆ ಕೊಡ್ಲಿ ನೀವೇ ಹೇಳಿ ಏ ರೋಡ್ ಲ್ಲಿ ಎರಡು ಸೀಟ್ ನಿಂತಿದಾರೆ ಎಲ್ಲಿಗೆ ಕೇಳು ಬಿಡದಿ ಹೋಗುತ್ತಾ ರೈಟ್.ರೈಟ್ ರೀ ವಾಂತಿ ಮಾಡ್ ಬೇಕಾದ್ರೆ ಹೇಳೋದಲ್ವಾ ನೋಡಿ ಮೈಮೇಲೆಲ್ಲಾ ಹಾರತಲ್ರೀ.... ವಾಂತಿ ಹೇಳಿ ಕೇಳಿ ಬರುತ್ತಾ ಕಿಟಕಿ ಹಾಕಿದ್ರೆ ತಕ್ಕೋಳತ್ತೆ ಅದಕ್ಕೆ ಬಸ್ ನಿಂತಾಗ ಹಾಳು ಮೂಳು ತಿನ್ ಬೇಡ್ರಿ ಅನೋದು ಏ ಸರಿಯಾಗಿ ನಿಂತ್ಕಳೊಕ್ಕೆ ಆಗಲವಾ ಮಕ್ಕಳು ಮರಿ ಮೇಲೆಲ್ಲಾ ಬೇಳ್ತೀರಲ್ರೀ ಹಿಡ್ಕೊಂಡು ನಿಂತಕ್ಕಳ್ರೀ ..... ಹೆಂಗಸರು ಮೇಲೆಲ್ಲಾ ಬೀಳ್ತೀರಲ್ಲಾ ನಾಚಿಕೆ ಆಗೋಲ್ವಾ ನಿಮಗೆ ಅಕ್ಕ.ತಂಗಿ ಯಾರು ಇಲ್ವಾ .. ಎಲ್ಲಾರು ಇದಾರೆ ಆದರೆ ಅವರಿಗೆಲ್ಲಾ ಹೀಗೆ ಮಾಡೋಕೆ ಆಗುತ್ತಾ ಮೇಡಂ .. ರೀ ಬಸ್ಸು ನಿಲಿಸಿರಿ ನಮ್ಮ ಯಜಮಾನ್ರು ಟಾಯ್ಲೆಟ್ ಅಂತಾ ಹೋದೋರು ಬಂದೇ ಇಲ್ವಲ್ರೀ ಅಯ್ಯೋ ನೆಕ್ಸ್ಟ್ಬ ಬಸ್ ಗೆ ಬರ್ತಾರೆ ಬಿಡಿಮ್ಮ ಎರಡು ಟಿಕೆಟ್ ಷಾರ್ಟೇಜ್ ಬರ್ತಾ ಇದೆ. ಟಿಕೆಟ್ ಮಾಡಿಸದೇ ಇರೋರು ಬೇಗ ಮಾಡ್ಸಿ ಕಿಟಕಿ ಹಾಕಮ್ಮಾ ಮಳೆ ನೀರೆಲ್ಲಾ ಒಳಗೆ ಬರ್ತಾ ಇದೆ ಮಗೂ ಅಳುತ್ತೆ ಅದಕ್ಕೆ ತಗೆದಿದ್ದೆ . ಸಾರಿ ಏನಪ್ಪಾ ಡ್ರೈವರ್ ಹಿಂಗೆ ಹೊಡಿತಾನೆ ಕೊನೇ ಸಿಟ್ ನಲ್ಲಿ ಕೂರಕ್ಕೆ ಆಗಲ್ಲಾ ಹೊಸಬ ಸಾರ್ ಹೇಳಿದ್ರೆ ಕೇಳಲ್ಲ ಕಂಪೆನಿಗೆ ಕಂಪ್ಲೇಟ್ ಮಾಡ್ರಿ ಅವಾಗ ಗೊತ್ತಾಗುತ್ತೆ ..
ಇದು ಯಾರೀದ್ರಿ ಲಗ್ಗೇಜ್ ಟಿಕೆಟ್ ಆಗಿಲ್ವಲ್ರೀ ಅದರಲ್ಲಿ ಬರೀ ಬಟ್ಟೆ ಮಾತ್ರ ಇದೆ ಆದ್ರೂ ಅರ್ಧ ಟಿಕೆಟ್ ತೊಗಳ್ಳೇಬೇಕು ಚೆಕಿಂಗ್ ಬಂದ್ರೆ ನಾವು ಮನೆಗೆ ಹೋಗಬೇಕಾಗುತ್ತೆ ಟಿವಿ ಸೌಂಡ್ ಕಮ್ಮಿ ಮಾಡಕ್ಕೆ ಹೇಳ್ರಿ ತಲೇ ನೋವ್ತಾ ಇದೆ ಹೊಸ ಫಿಲ್ಮ್ ಯಾವುದೂ ಇಲ್ಲ ಯಾವಾಗ ಬಂದ್ರೂ ಇಂದೇ ಫಿಲ್ಮ್ ಹಾಕ್ತೀರಲ್ರೀ ಯಾರು ರಮನಗರ ರಮನಗರ ರಮನಗರ ಬತ್ತು ನೋಡ್ರಿ ಎಷ್ಟಾಗಿದೆ ಕಲೆಕ್ಷನ್ ನಿನ್ನೆಗಿಂತ ಡಲ್ಲೇ ಮಳೆಗಾಲ ಅಲ್ವಾ ಅದಕ್ಕೆ
( ಲೋಕೇಶನ್ನೂ ಪ್ರೀತ್ರೊ ಹೃದಯ ಇರುತ್ತಾ )
ಸಾಲುಗಳು
- Add new comment
- 924 views
ಅನಿಸಿಕೆಗಳು
ನಿಮ್ಮ ಉರಿನ ಬಸ್ಸು ತುಂಬಾ
ನಿಮ್ಮ ಉರಿನ ಬಸ್ಸು ತುಂಬಾ ಚೆನ್ನಾಗಿದೆ.
ಆ ಊರು ರಾಮನಗರ ನಾ ರಮನಗರ ನಾ?
ನಾವು ರಾಮನಗರ ಜಿಲ್ಲೆಯವರು .
ನಿಮ್ಮದ್ದು ರಮನಗರದಲ್ಲಿ ಯಾವ
ನಿಮ್ಮದ್ದು ರಮನಗರದಲ್ಲಿ ಯಾವ ಊರು ???????
ನಮ್ಮಮ್ಮ ಚಾಮುಂಡಿ ತಾಯಿ ನೆಲೆಸಿರೋದೇ ನನ್ನೂರು
ರಮನಗರ ( ಜಿಲ್ಲೆಯ )ರಮನಗರ ( ತಾಲೂಕಿನಲ್ಲಿ ) ಒಂದು ಸಣ್ಣ ಹಳ್ಳಿ
ನಾನ್ನು ಇರುವುದು ಬೆಂಗಳೂರುನಲ್ಲಿ
ನಾನು ರಾಮನಗರ ಜಿಲ್ಲೆ ಚನ್ನಪಟ್ಟಣ
ನಾನು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಒಂದು ಸಣ್ಣ ಗ್ರಾಮ.
ಚನ್ನಪಟ್ಟಣದಲ್ಲಿ ಯಾವ ಊರು
ಚನ್ನಪಟ್ಟಣದಲ್ಲಿ ಯಾವ ಊರು ನಿಮ್ಮದು ?
PAVU ಯಾವ ಊರು ನಿಮ್ಮದು ಲೋಕೇಶರವರೆ ? ಲೋಕಿ ಇಲ್ಲೇ ಬೆಂಗಳೂರು
ಪಕ್ಕ ಮಂಗಳೂರು. ನಿಮ್ಮದು ?? PAVUನಮ್ದು ಇಲ್ಲೇ ಯಲಹಂಕ ಪಕ್ಕ ಶ್ರೀಲಂಕ
ಈ ರೀತಿ ಹೇಳಬೇಡಿ ಪ್ಲೀಸ್,,, ತಮಾಷೆ ಮಾಡಿದ
ಚೆನ್ನಾಗಿ ಬರಿತ್ತಿದ್ದಿರಾ ಬರಿತ್ತಾನೆ ಇರಿ,,,,
ಹಾಯ್ ಗೆಳೆಯ ಲೋಕೇಶ್ thanks for
ಹಾಯ್ ಗೆಳೆಯ ಲೋಕೇಶ್ thanks for your compliments.....