Skip to main content

ನಮ್ಮ ಊರಿನ ಬಸ್ಸು

ಇಂದ lokesh
ಬರೆದಿದ್ದುJanuary 5, 2012
5ಅನಿಸಿಕೆಗಳು

ಯಾರ್ರೀ ರಮನಗರ,ರಮನಗರ, ರಮನಗರ, ರಮನಗರ ಬೇಗ ಬೇಗ ಹತ್ಕೊಳ್ರಿ  ಇನ್ನು ೧೦ ನಿಮಿಷ ಮಾತ್ರ ಇದೆ ನೋಡಿ ಮಾವಿನಕಾಯಿ,ಮಾವಿನಕಾಯಿ, ಹತ್ತುರೂಪಾಯಿಗೆರಡು ಕಿತ್ತಲೆಹಣ್ಣು ಕಿತ್ತಲೆಹಣ್ಣು ಎರಡುರೂಪಯಿ, ಎರಡುರೂಪಯಿ,    ಬೇಗ ಬೇಗ ಹತ್ಕೊಳ್ರಿ . ಹತ್ತೋ ಬೇಗ ಅಲ್ಲಿ ಸೀಟು ಬೇರೆ ಇಲ್ಲ. ಏ ರವಿ ಕರ್ಚೀಫ್ ಹಾಕೋ ಏ ನಮ್ದು ಬಿಡ್ರಿ ಸೀಟು ನಮ್ಮ ಅಪ್ಪ ಅಮ್ಮ ಅಲ್ಲಿ ಹಿಂದಗಡೆ  ಬರ್ತಾ ಇದಾರೆ ಅಣ್ಣಾ ಮೇಲಗಡೆ ಎರಡು   ಚೀಲ ಹಾಕಿದೀನಿ ೨೦ರೂಪಾಯಿ ಕೊಡ್ರಿ ಹಗ್ಗ ಕಟ್ಟಿದ್ದೀನಿ ಅದೇ ನಿಮ್ಮ ಚೀಲ ಸರಿ ಬಿಡಪ್ಪಾ ಅಯ್ಯಯ್ಯಪ್ಪಾ ಏನ್ ಸಕೇರಿ ರೀ ಡ್ರೈವರ್ ಬೇಗ ಹೋಗ್ ಬಾರದಾ ತಡಿಯಮ್ಮಾ ಇನ್ನು ಒಂದುನಿಮಿಪ ಇದೆ.
ಕಂಡಕ್ಟರ್ ಒಂದ್ನುಮಿಪ ಟಾಯ್ಲೆಟ್ ಹೋಗಿ ಬಂದು ಬಿಡುತ್ತೇನೆ. ಇಷ್ಟೊತ್ತನಕ ಏನ್ರೀ ಮಾಡ್ತೀದ್ರಿ ಸರಿ ಸರಿ
 
ಯಾರ್ರೀ  ರಮನಗರ,ರಮನಗರ, ರಮನಗರ, ರಮನಗರ ಬೇಗ ಬೇಗ ಹತ್ಕೊಳ್ರಿ  ಯಾರಾದರೂ ಮಧ್ಯದ ಹಳ್ಳೀಯೋರು ಇದ್ರೆ ಈಗಲೇ ಇಳ್ಕೊಂಬಿಡ್ರಿ ಸ್ವಲ್ಪ ಮುಂದೆ ಹೋಗ್ರೀ  ಬಾಗಿಲಲ್ಲೇ ನಿಂತ್ಕೊಂಡು ಸಾಯ್ತೀರಲ್ರೀ  ಪೊಲೀಸರು ಹಿಡಿದ್ರೆ ನಾವು ಪೆನಾಲ್ಟಿ ಕಟ್ಟಬೇಕು ಟಿಕೆಟ್. ಟಿಕೆಟ್. ಯಾರ್ರೀ  ಟಿಕೆಟ್. ಟಿಕೆಟ್ ಒಂದು ರಮನಗರ ಕೊಡ್ರಿ ೪೦ರೂಪಯಿ ಕೊಡ್ರಿ ೧೦೦೦ರೂಪಯಿ ಕೊಟ್ಟರೆ ಹೇಗೆಪ್ಪ ಚಿಲರೆ ಇದ್ರೆ ಕೊಡ್ರಿ ನೀವು ಎಲ್ಲಿಗ್ರಿ  ನನಗು ಎರಡು ರಮನಗರ ಕೊಡ್ರಿ ೮೦ ರೂಪಯಿ ಕೊಡ್ರಿ ಎಷ್ಟುಜನಕ್ಕೆ ಅಂತಾ ಚಿಲ್ಲರೆ ಕೊಡ್ಲಿ ನೀವೇ ಹೇಳಿ ಏ ರೋಡ್ ಲ್ಲಿ ಎರಡು ಸೀಟ್ ನಿಂತಿದಾರೆ ಎಲ್ಲಿಗೆ ಕೇಳು ಬಿಡದಿ ಹೋಗುತ್ತಾ  ರೈಟ್.ರೈಟ್   ರೀ  ವಾಂತಿ  ಮಾಡ್ ಬೇಕಾದ್ರೆ ಹೇಳೋದಲ್ವಾ ನೋಡಿ ಮೈಮೇಲೆಲ್ಲಾ ಹಾರತಲ್ರೀ.... ವಾಂತಿ ಹೇಳಿ ಕೇಳಿ ಬರುತ್ತಾ  ಕಿಟಕಿ ಹಾಕಿದ್ರೆ ತಕ್ಕೋಳತ್ತೆ  ಅದಕ್ಕೆ ಬಸ್ ನಿಂತಾಗ ಹಾಳು ಮೂಳು ತಿನ್ ಬೇಡ್ರಿ ಅನೋದು ಏ ಸರಿಯಾಗಿ  ನಿಂತ್ಕಳೊಕ್ಕೆ ಆಗಲವಾ ಮಕ್ಕಳು ಮರಿ ಮೇಲೆಲ್ಲಾ ಬೇಳ್ತೀರಲ್ರೀ ಹಿಡ್ಕೊಂಡು ನಿಂತಕ್ಕಳ್ರೀ .....   ಹೆಂಗಸರು ಮೇಲೆಲ್ಲಾ ಬೀಳ್ತೀರಲ್ಲಾ ನಾಚಿಕೆ ಆಗೋಲ್ವಾ ನಿಮಗೆ ಅಕ್ಕ.ತಂಗಿ ಯಾರು ಇಲ್ವಾ .. ಎಲ್ಲಾರು ಇದಾರೆ ಆದರೆ ಅವರಿಗೆಲ್ಲಾ ಹೀಗೆ ಮಾಡೋಕೆ ಆಗುತ್ತಾ ಮೇಡಂ .. ರೀ ಬಸ್ಸು  ನಿಲಿಸಿರಿ ನಮ್ಮ ಯಜಮಾನ್ರು ಟಾಯ್ಲೆಟ್ ಅಂತಾ ಹೋದೋರು ಬಂದೇ ಇಲ್ವಲ್ರೀ ಅಯ್ಯೋ ನೆಕ್ಸ್ಟ್ಬ ಬಸ್ ಗೆ ಬರ್ತಾರೆ ಬಿಡಿಮ್ಮ ಎರಡು ಟಿಕೆಟ್ ಷಾರ್ಟೇಜ್ ಬರ್ತಾ ಇದೆ. ಟಿಕೆಟ್ ಮಾಡಿಸದೇ ಇರೋರು ಬೇಗ ಮಾಡ್ಸಿ ಕಿಟಕಿ ಹಾಕಮ್ಮಾ ಮಳೆ ನೀರೆಲ್ಲಾ ಒಳಗೆ ಬರ್ತಾ ಇದೆ ಮಗೂ ಅಳುತ್ತೆ ಅದಕ್ಕೆ ತಗೆದಿದ್ದೆ . ಸಾರಿ ಏನಪ್ಪಾ ಡ್ರೈವರ್ ಹಿಂಗೆ ಹೊಡಿತಾನೆ ಕೊನೇ ಸಿಟ್ ನಲ್ಲಿ ಕೂರಕ್ಕೆ ಆಗಲ್ಲಾ  ಹೊಸಬ ಸಾರ್ ಹೇಳಿದ್ರೆ ಕೇಳಲ್ಲ  ಕಂಪೆನಿಗೆ ಕಂಪ್ಲೇಟ್ ಮಾಡ್ರಿ ಅವಾಗ ಗೊತ್ತಾಗುತ್ತೆ ..
ಇದು ಯಾರೀದ್ರಿ ಲಗ್ಗೇಜ್ ಟಿಕೆಟ್ ಆಗಿಲ್ವಲ್ರೀ ಅದರಲ್ಲಿ ಬರೀ ಬಟ್ಟೆ ಮಾತ್ರ ಇದೆ ಆದ್ರೂ ಅರ್ಧ ಟಿಕೆಟ್ ತೊಗಳ್ಳೇಬೇಕು ಚೆಕಿಂಗ್ ಬಂದ್ರೆ ನಾವು ಮನೆಗೆ ಹೋಗಬೇಕಾಗುತ್ತೆ ಟಿವಿ  ಸೌಂಡ್ ಕಮ್ಮಿ ಮಾಡಕ್ಕೆ ಹೇಳ್ರಿ ತಲೇ ನೋವ್ತಾ ಇದೆ ಹೊಸ ಫಿಲ್ಮ್ ಯಾವುದೂ ಇಲ್ಲ ಯಾವಾಗ ಬಂದ್ರೂ ಇಂದೇ ಫಿಲ್ಮ್ ಹಾಕ್ತೀರಲ್ರೀ ಯಾರು ರಮನಗರ ರಮನಗರ ರಮನಗರ ಬತ್ತು ನೋಡ್ರಿ ಎಷ್ಟಾಗಿದೆ ಕಲೆಕ್ಷನ್ ನಿನ್ನೆಗಿಂತ ಡಲ್ಲೇ ಮಳೆಗಾಲ ಅಲ್ವಾ ಅದಕ್ಕೆ
 
 
 
( ಲೋಕೇಶನ್ನೂ ಪ್ರೀತ್ರೊ ಹೃದಯ ಇರುತ್ತಾ )
 

ಲೇಖಕರು

lokesh

ಮರೆಯೋಲ್ಲ ನಿನ್ನ! ಮರೆತರೂ ನನ್ನ

ನನ್ನ ಬಗ್ಗೆ ನಾನೇ ಹೇಳಬೇಕ ......

ಅಲ್ವೇ ಮತ್ತೆ ನನ್ನ ಬಗ್ಗೆ ನೀವೇ ಹೇಳೋಕೆ ನಾನೇನು ಗಾಂಧಿ ಪೀಸಾ... ಇಲ್ಲಾ ಕ್ರೇಜಿ ಸ್ಟಾರ್ ರವಿಚಂದ್ರನ್ ?
ಹ್ಹಾ ಹ್ಹಾ ಹ್ಹಾ .....!!!! ಅರೇ ನಿಲ್ಲಿ ಸ್ವಲ್ಪ ನನ್ನ ಪ್ರೊಫೈಲ್ ಇನ್ನು ಮುಗಿದಿಲ್ಲ ಆಗಲೇ ಬೇಜಾರ. ಅಲ್ಲಾ.... ನೀವು ಬೇಜಾರಾದ್ರೆ ನಾನೇನು ಮಾಡೋಕಾಗಲ್ಲ,,,,,,ಈಗ್ಲೂ ಬೇಜಾರಾದ್ರೆ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ,,, ಏಕೆಂದರೆ ನೀವು ನನ್ನ ಫ್ರೆಂಡ್ಸ್ ಅಲ್ಲ್ವಾ. ನೋಡಿ ಇದು ನನ್ನ ಪ್ರೊಫೈಲ್ ಆಗಿರೋದ್ರಿಂದ ನಾನು ನನ್ನ ಸ್ಟೈಲ್ ನಲ್ಲಿ ಹೇಳ್ತೀನಿ ಕಿವಿ (!) ಇದ್ರೆ ಕೇಳಿ......
ಕ್ಷಮಿಸಿ ಅದು ಕೇಳೋಕೆ ಬರಲ್ಲ ಓದಿ ತಿಳಿಕೊಳ್ಳಿ.

Hello ನನ್ನ ಬಗ್ಗೆ ಜಾಸ್ತಿ ಕೇಳಬೇಡಿ ನಿಮ್ಮ ಕಿವಿಗೆ ಒಳ್ಳೇದಲ್ಲ.........
ನಾನು ♥ಸ್ವಲ್ಪ ತರ್ಲೆ♥ಸ್ನೇಹ ಪೂರ್ವ ♥ಬುದ್ದಿವಂತ ♥ಆಶ್ಚರ್ಯ ♥ಜವಬ್ದಾರಿ ♥ಕಳ್ಳ ♥ಮಳ್ಳ ♥ಸುಂದರ ♥ತುಂಟ ♥ಮನಪೂರ್ವಕ ♥ಮಿಂಚುವ ♥ತಲೆ ಕೆಡಿಸುವ ♥ಒಳ್ಳೆ ಮನಸಿನ ♥ಸ್ವಲ್ಪ ಗಲಾಟೆ ♥ಕಣ್ಣ ಸಂಚಲ್ಲಿ ಮಿಂಚುವ ಮಿಂಚು ♥
ನನಗೆ ಕನಸಿದೆ♥ನಗುವಿದೆ♥ಜೊತೆಗೆ ಹೇಳಲಾಗದ ದುಃಖ ಇದೆ♥ಮರೆಯಲಾಗದ ಸಂತೋಷವಿದೆ♥ಕಾಣಿಸದ ಕಣ್ಣೀರಿದೆ♥
ಹಂಚಲಾಗದ ಆಘಾತವಿದೆ♥ದುಃಖ ಮರೆಸೋ ಮನಸುಗಳಿವೆ♥ಕಣ್ಣಿರುಒರೆಸೋ ಕೈಗಳಿವೆ♥ಸುಖ ದುಃಖ ಹಂಚಿಕೊಳ್ಳಲು ನಿಮ್ಮೆಲ್ಲರ ಸ್ನೇಹವಿದೆ♥ಈ ಸ್ನೇಹ ಹೀಗೆ ಚಿರವಾಗಿರಲಿ ಎಂದು ಆಶಿಸೋ ನನ್ನ ಮನಸಿದೆ ♥ಆ ಮನಸಿಗೆ ನಿಮ್ಮ ಸ್ನೇಹದ ಅವಶ್ಯಕತೆ ಇದೆ ♥
my facebook id: llokesh023@gmail.com
97310 31333

ಅನಿಸಿಕೆಗಳು

pavu ಗುರು, 01/05/2012 - 15:43

ನಿಮ್ಮ ಉರಿನ ಬಸ್ಸು ತುಂಬಾ ಚೆನ್ನಾಗಿದೆ.
 
ಆ ಊರು ರಾಮನಗರ ನಾ ರಮನಗರ ನಾ?
ನಾವು ರಾಮನಗರ ಜಿಲ್ಲೆಯವರು .

lokesh ಗುರು, 01/05/2012 - 17:15

ನಿಮ್ಮದ್ದು ರಮನಗರದಲ್ಲಿ  ಯಾವ ಊರು ???????
ನಮ್ಮಮ್ಮ ಚಾಮುಂಡಿ ತಾಯಿ ನೆಲೆಸಿರೋದೇ ನನ್ನೂರು
ರಮನಗರ ( ಜಿಲ್ಲೆಯ )ರಮನಗರ ( ತಾಲೂಕಿನಲ್ಲಿ )  ಒಂದು ಸಣ್ಣ ಹಳ್ಳಿ
ನಾನ್ನು ಇರುವುದು ಬೆಂಗಳೂರುನಲ್ಲಿ
 

pavu ಶುಕ್ರ, 01/06/2012 - 14:26

ನಾನು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಒಂದು ಸಣ್ಣ ಗ್ರಾಮ.

lokesh ಶುಕ್ರ, 01/06/2012 - 15:20

 ಚನ್ನಪಟ್ಟಣದಲ್ಲಿ ಯಾವ ಊರು ನಿಮ್ಮದು ?
 PAVU ಯಾವ ಊರು ನಿಮ್ಮದು ಲೋಕೇಶರವರೆ ? ಲೋಕಿ  ಇಲ್ಲೇ ಬೆಂಗಳೂರು
 ಪಕ್ಕ ಮಂಗಳೂರು. ನಿಮ್ಮದು ??  PAVUನಮ್ದು ಇಲ್ಲೇ ಯಲಹಂಕ ಪಕ್ಕ ಶ್ರೀಲಂಕ 

 ಈ ರೀತಿ ಹೇಳಬೇಡಿ ಪ್ಲೀಸ್,,, ತಮಾಷೆ ಮಾಡಿದ
ಚೆನ್ನಾಗಿ  ಬರಿತ್ತಿದ್ದಿರಾ ಬರಿತ್ತಾನೆ ಇರಿ,,,,
 

pavu ಶನಿ, 01/07/2012 - 12:14

 ಹಾಯ್ ಗೆಳೆಯ ಲೋಕೇಶ್ thanks for your compliments.....

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.