ನನ್ನವ
ರಾಮನೆನ್ನಲೆ ಅವನನ್ನ
ಶಾಮನೆನ್ನಲೆ.........,
ರಾಮನೆಂದರೆ ಅನುಮಾನದ ಜಾಲ
ಶಾಮನೆಂದರೆ ಸ್ತ್ರೀಲೋಲ
ರಾಮನೆನ್ನಲೆ ಅವನನ್ನ
ಶಾಮನೆನ್ನಲೆ.........,
ಲೋಕವನಾಳುವ ಈಶನೆನ್ನಲೇ......,
ಸೃಷ್ಠಿಕರ್ತ ಬ್ರಹ್ಮನೆನ್ನಲೇ........,
ಈಶನೆಂದರೆ ಮುಡಿಯಲ್ಲಿ
ಇನ್ಯಾರನ್ನೋ ಹೊತ್ತಿಲ್ಲ!
ಬ್ರಹ್ಮನೆಂದರೆ ತನ್ನಿಂದಲೇ
ಸೃಷ್ಠಿಯಾದವಳನ್ನು ವರಿಸಿಲ್ಲ!
ರಾಮನೆನ್ನಲೆ ಅವನನ್ನ
ಶಾಮನೆನ್ನಲೆ.........,
ಅವ ಮೂಗನತ್ತು
ಹಣೆಯಲಿ ಹೊಳೆವ ಮುತ್ತು
ತುಸುನಗೆಯ ಸೂಸಿ; ತಲೆಯ ಮೂಸಿ
ಸೀಗೆಯ ಸೊಗಡನ್ನೀರಿ
ಪಿಸುಗುಟ್ಟ ಗುಟ್ಟು ನಂಗೆ ಮಾತ್ರ ಗೊತ್ತು!
ಸಾಲುಗಳು
- Add new comment
- 505 views
ಅನಿಸಿಕೆಗಳು
ತುಂಬಾ ಚೆನ್ನಾಗಿದೆ ಅಂಜಲಿ ಅವರೇ:)
ತುಂಬಾ ಚೆನ್ನಾಗಿದೆ ಅಂಜಲಿ ಅವರೇ:)
ರಾಮ,ಶಾಮ,ಈಶ,ಬ್ರಹ್ಮ ಇವುಗಳೆಲ್ಲ ಯ
ರಾಮ,ಶಾಮ,ಈಶ,ಬ್ರಹ್ಮ ಇವುಗಳೆಲ್ಲ ಯಾಕೆ?ಅವ ನನ್ನವ, ನನ್ನವ ಎಂದರೆ ಅಷ್ಟೆ ಸಾಕಲ್ಲವೇ?ಕವನ ಚೆನ್ನಾಗಿದೆ ಅಂಜಲಿಯವರೆ
ಅಂಜಲಿ ಇದು ನಿಮ್ಮ ಬರಹಗಳಲ್ಲಿ
ಅಂಜಲಿ ಇದು ನಿಮ್ಮ ಬರಹಗಳಲ್ಲಿ ಅತಿ ಹೆಚ್ಚು ಇಷ್ಟ ಅದ ಅರ್ಥವತ್ತಾದ ಬರಹ.. ಬಹಳ ಸೊಗಸಾಗಿ ಹೇಳಿದೀರ, ರಾಮ ಶ್ಯಾಮ ಶಿವನ ಕುರಿತು ಸರ್ಯಾಗೆ !! ಹೇಳಿದೀರ... ನಿಮ್ಮ ಈ ಬರಹ ನನಗೆ ಭಲೇ ಹಿಡಿಸಿತು.... ನೀವು ಒಳ್ಳೊಳೆ ಕವನ ಬರೆಯುತ್ತೀರಿ...