Skip to main content

ವಿಸ್ಮಯ ನಗರಿಯ ಪರಿಚಯ

ವಿಸ್ಮಯ ನಗರಿ ಕನ್ನಡ ವೆಬ್ ಸೈಟ್ - ಕನ್ನಡ ಬ್ಲಾಗ್, ಕವನ, ಸಮಾಚಾರ, ಮಾಹಿತಿ, ವಿಮರ್ಶೆ,  ಸಮೀಕ್ಷೆ, ಚಿತ್ರ, ಹಾಸ್ಯ, ವಿಡಿಯೋ, ಸ್ನೇಹಲೋಕ ಇನ್ನೂ ಹಲವು ಸೌಲಭ್ಯಗಳೊಂದಿಗೆ


ಮಾಲೀಕತ್ವಃ ರಾಜೇಶ ಮಹಾಬಲೇಶ್ವರ ಹೆಗಡೆ


ಪರಿಕಲ್ಪನೆ, ತಾಣ ವಿನ್ಯಾಸ, ಕೋಡಿಂಗ್ ಮತ್ತು ಡೆವೆಲಪ್ ಮೆಂಟ್, ನಿರ್ವಹಣೆ:  ರಾಜೇಶ ಮಹಾಬಲೇಶ್ವರ  ಹೆಗಡೆ


ವಿಸ್ಮಯ ಸಾಫ್ಟ್ ವೇರ್ ಲಿಮಿಟಡ್ ಮುಖ್ಯ ಗುರಿ ಕನ್ನಡದಲ್ಲಿ ಸಾಫ್ಟ್ ವೇರ್ ಹಾಗೂ ಆಧುನಿಕ ಸೌಲಭ್ಯಗಳನ್ನು ಅತ್ಯುತ್ತಮ ಗುಣಮಟ್ಟದಲ್ಲಿ ನೀಡುವದು. ಇದೇ ಉದ್ದೇಶದಿಂದ ಆರಂಭವಾದದ್ದು ಈ ಕನ್ನಡ ತಾಣ ವಿಸ್ಮಯ ನಗರಿ. ಈಗ ಹಲವು ಸಾವಿರಾರು ಕನ್ನಡಿಗರು ಭೇಟಿ ನೀಡುತ್ತಿರುವ ಈ ತಾಣ ಜನಪ್ರಿಯಗೊಳ್ಳುತ್ತಿದೆ. ವಿಸ್ಮಯ ನಗರಿ ಕನ್ನಡದ ಒಂದು ಸುಂದರ ತಾಣ. ಕನ್ನಡಿಗರ ಅಚ್ಚುಮೆಚ್ಚಿನ ಈ ತಾಣ ನಾಲ್ಕು ವರ್ಷ ಯಶಸ್ವಿಯಾಗಿ ಪೂರೈಸುತ್ತಿದೆ. ಇಡೀ ಪ್ರಪಂಚಾದ್ಯಂತ ಓದುಗರಿರುವ ಈ ತಾಣ ಈಗಾಗಲೇ ಲಕ್ಷಾಂತರ ಹಿಟ್ಸ್ ಪಡೆದಿದೆ. ಟ್ರಾಫಿಕ್ ಇನ್ನೂ ಹೆಚ್ಚುತ್ತಿದೆ!! ಹಲವು ಸಾವಿರಾರು ಜನರನ್ನು ಮನಸೆಳೆದಿರುವ ಈ ತಾಣ ನಿಮಗೂ ಇಷ್ಟವಾಗಬಹುದು.


ವಿಸ್ಮಯ ಪಿಸುಮಾತು


ಇದು ವಿಸ್ಮಯ ಪ್ರಜೆಗಳಾಗಿರುವ ಕನ್ನಡಿಗರ ಬ್ಲಾಗ್. ಇಲ್ಲಿ ನಿಮ್ಮ ಅಭಿಪ್ರಾಯ, ಅನುಭವ, ಕವನ, ಲೇಖನಗಳನ್ನು ಬರೆಯ ಬಹುದು. ಈಗಾಗಲೇ ವಿಸ್ಮಯ ನಗರಿಯಲ್ಲಿ 2155 ಬ್ಲಾಗ್ ಗಳಿವೆ. 249 ಜನ ಪಿಸುಮಾತುಗಾರರು ಇದ್ದಾರೆ. ಅಷ್ಟೊಂದು ಜನರ ವಿಚಾರಧಾರೆ ಹರಿದಿದೆ. ಇನ್ನೂ ಬರೆಯುತ್ತಿದ್ದಾರೆ. ಬೇರೆಲ್ಲ ಕನ್ನಡ ಬ್ಲಾಗ್ ಗಳು ಬರಹಗಾರ ನಿಲ್ಲಿಸಿದಾಕ್ಷಣ ಜನಪ್ರೀಯತೆ, ಓದುಗರು ಕಡಿಮೆ ಆಗುತ್ತಾ ಬರುತ್ತೆ. ಆದರೆ ವಿಸ್ಮಯ ಪಿಸುಮಾತಲ್ಲಿ ಹಾಗಲ್ಲ. ತಡ ಯಾಕೆ ವಿಸ್ಮಯ ಪಿಸುಮಾತು ವಿಭಾಗದಲ್ಲಿ ಬರೆಯಿರಿ, ಪ್ರತಿದಿನ ಓದಿರಿ.


ವಿಸ್ಮಯ ಚಿತ್ರಶಾಲೆ


ಈಗಾಗಲೇ ೧೬೮೬ ಚಿತ್ರಗಳಿರುವ ಈ ಚಿತ್ರಶಾಲೆಯಲ್ಲಿ ಕಣ್ಣನ್ನು ತಂಪು ಮಾಡುವಂತಹ ಸುಂದರ ಚಿತ್ರಗಳಿವೆ. ನೀವು ಸಹ ನಿಮ್ಮ ಚಿತ್ರ ಹಾಕಬಹುದು! ನಿಮ್ಮ ಫೋಟೋಗ್ರಾಫಿಯನ್ನು ಕನ್ನಡಿಗರಿಗೆ ತೋರಿಸಿ ಹೆಮ್ಮೆಯಿಂದ.


ವಿಸ್ಮಯ ಚರ್ಚಾಕೂಟ


ಕನ್ನಡದಲ್ಲಿ ಚರ್ಚೆ ಮಾಡಲು ಇದು ಉತ್ತಮ ಜಾಗ. ಇಲ್ಲಿ ಬಿಸಿ ಬಿಸಿ ಚರ್ಚೆ ಸಾಮಾನ್ಯ!


ವಿಸ್ಮಯ ಮಾರ್ಕೆಟ್


ನಿಮ್ಮ ಅಂಗಡಿ, ಕಂಪನಿ, ಶಾಲೆ, ಸೇವೆ ವ್ಯಾಪಾರದ ಬಗ್ಗೆ ತಿಳಿಸಲು ಇಲ್ಲಿ ಭೇಟಿ ಕೊಡಿ.


ವಿಸ್ಮಯ ಚಿನ್ನದಂತಾಮಾತು


ಜನಪ್ರಿಯ ನುಡಿಮುತ್ತುಗಳ ಸಂಗ್ರಹ. ನೀವು ಸಹ ನಿಮ್ಮ ಸಂಗ್ರಹವನ್ನು ಸೇರಿಸಬಹುದು.


ವಿಸ್ಮಯ ಸಮೀಕ್ಷೆ


ಇದು ವಿಸ್ಮಯ ನಗರಿಯ ಪ್ರಜೆಗಳ ಅಭಿಪ್ರಾಯಗಳ ಸಮೀಕ್ಷೆ. ಇಲ್ಲಿ ನೀವು ಓಟು ಹಾಕಬಹುದು. ಬನ್ನಿ ನಮ್ಮ ಹೆಮ್ಮೆಯ ಕನ್ನಡ ಭಾಷೆಯನ್ನು ಅಂತರ್ಜಾಲದಲ್ಲಿ ಬೆಳೆಸೋಣ. ಇದಕ್ಕೆ ನೀವು ಹಣ ನೀಡಬೇಕಾಗಿಲ್ಲ. ವಿಸ್ಮಯ ನಗರಿ ಬಳಸಿ. ಇಲ್ಲಿ ಕನ್ನಡದಲ್ಲಿ ಬರೆಯಿರಿ. ಓದಿರಿ. ನಿಮ್ಮ ಅನಿಸಿಕೆ ತಿಳಿಸಿ. ಕಮೆಂಟ್ ಹಾಕಿ. ವಂದನೆಗಳು. ನೀವು ಸಹ ನಮ್ಮ ಈ ಪ್ರಯತ್ನಕ್ಕೆ ಸಹಾಯ ಮಾಡಬಹುದು.  • ವಿಸ್ಮಯ ನಗರಿಯಲ್ಲಿ ಕನ್ನಡ ಬ್ಲಾಗ ಬರೆಯುವದರ ಮೂಲಕ

  • ವಿಸ್ಮಯ ನಗರಿಯಲ್ಲಿ ಕವನ ಬರೆಯುವದರ ಮೂಲಕ

  • ಚರ್ಚೆ ಮಾಡುವದರ ಮೂಲಕ

  • ವಿಸ್ಮಯ ನಗರಿಯಲ್ಲಿ ಫೋಟೋ ಕಳುಹಿಸುವದರ ಮೂಲಕ

  • ವಿಸ್ಮಯ ನಗರಿಯಲ್ಲಿ ಲೇಖನಗಳನ್ನು ಓದುವದರ ಮೂಲಕ ಮತ್ತು ಅವುಗಳಿಗೆ ಕಮೆಂಟ್ ಬರೆಯುವದರ ಮೂಲಕ

ಅನಿಸಿಕೆಗಳು

hariharapurasridhar ಧ, 09/02/2009 - 18:52

ನನ್ನ ಅಭಿಪ್ರಾಯ ಅಂದ್ರೆ ನಿಜ ಹೇಳೋದೇ ಅಲ್ವೇ? ಹಾಗಾದರೆ ದಿಢೀರನೆ ಇಲ್ಲಿ ಭೇಟಿಕೊಡಲು ಕಾರಣ ಹೇಳಿಬಿಡ್ತೀನಿ. ವಿಸ್ಮಯನಗರಿ ಪ್ರವೇಶಮಾಡಿಸಿದವರು ಬೆಂಗಳೂರಿನ ನನ್ನ ಮಿತ್ರ ಪ್ರಸನ್ನ. ಅದು ಒಳ್ಳೆಯ ಕಾಲಕ್ಕೆ ಉಪಯೋಗಕ್ಕೆ ಬಂತು. ಸಂಪದದ ಆಧುನೀಕರಣ ಕಾಮಗಾರಿ ನಡೀತಾ ಇದೆ. ಈಗ ಸುಮ್ಮನೆ ಕೂರೋ ಬದಲು ಇಲ್ಲಿ ಬಂದೆ. ಇಲ್ಲಿ ಜಾಂಡಾ ಊರೋ ಪರಿಸ್ಥಿತಿ ನಿರ್ಮಾಣ ವಾದರೆ ಉಳಿದು ಬಿಡುವ ಲೆಕ್ಕಾಚಾರ.ಸಂಪದದಂತೆ ಇಲ್ಲೂ ಸನ್ಮಿತ್ರರು ಕಾಲು ಕೆರೆದುಕೊಂಡು ಬಂದರೆ ಶಿವಾ ಅಂತಾ ಸುಮ್ಮನಿರುವ ಅಭಿಪ್ರಾಯವೂ ಇದೆ.ಇಷ್ಟು ನನ್ನ ವಿಚಾರ. ಅರರೆ ನನ್ನ ವಿಚಾರ ನಿಮಗೆಲ್ಲಿ ಹೇಳಿದ್ದೀನಿ. ಮುಂದೆ ಹೇಳಬೇಕಷ್ಟೆ. ನೋಡೋಣಾ, ನಮ್ಮಂತ ಹಳ್ಳೀ ಹೈದರ ವಿಚಾರ ನಿಮಗೆ ಹಿಡಿಸುತ್ತಾ ಅಂತಾ! ಒಂದು ವಿಚಾರ ಅಂತೂ ನಿಮಗೆ ತಿಳಿದಿರಲಿ. ನಂದು ಬುದ್ಧಿ ಕೆಲಸ ಕಡಿಮೆ. ಭಾವನೆಯೇ ಹೆಚ್ಚು.

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 09/03/2009 - 06:54

ಬೇರೆ ಸೈಟಗಳಲ್ಲಿ ಲೇಖನಗಳ ಎಲ್ಲಾ ಹಕ್ಕುಗಳು ಲೇಖಕರದ್ದು ಎನ್ನುವ ಸ್ಪಸ್ಟಿಕರಣವಿದೆ. ತಮ್ಮ ವೆಬಸೈಟನಲ್ಲಿ ಅದರ ಬಗ್ಗೆ ಏನು ಹೇಳಿಲ್ಲ.

ಮೇಲಧಿಕಾರಿ ಶನಿ, 09/05/2009 - 17:30

ಹಾಯ್ ಅನಾಮಿಕರೇ,

ಖಂಡಿತ ವಿಸ್ಮಯ ನಗರಿಯಲ್ಲಿ ಪ್ರಕಟವಾಗುವ ಎಲ್ಲ ಲೇಖನಗಳ ಹಕ್ಕು ಆಯಾ ಲೇಖಕರದ್ದೇ. ವಿಸ್ಮಯ ನಗರಿ ನಿಮ್ಮ ಭಾವನೆ, ವಿಚಾರ ಧಾರೆಗಳ ವ್ಯಕ್ತಪಡಿಸಲು ವೇದಿಕೆ. ಕೇವಲ ತಾಣ ವಿನ್ಯಾಸದ ಮೇಲೆ ಮಾತ್ರ ವಿಸ್ಮಯ ಸಾಫ್ಟ್ ವೇರ್ ಹಕ್ಕನ್ನು ಹೊಂದಿದೆ.
ಈ ತಾಣದಲ್ಲಿ ಪ್ರಕಟವಾಗುವ ಲೇಖನಗಳಲ್ಲಿ ಆಯ್ದ ಕೆಲವನ್ನು ವಿಸ್ಮಯ ನಗರಿಯ ಪುಸ್ತಕದಲ್ಲಿ ಪ್ರಕಟಿಸಲಾಗುವದು. ಅಕಸ್ಮಾತ್ ಯಾವುದಾದರೂ ಲೇಖಕರಿಗೆ ಅದು ಇಷ್ಟ ಇಲ್ಲದಿದ್ದರೆ ಅದನ್ನೂ ಸಹ ತಿಳಿಸಿದರೆ ಅಲ್ಲಿ ಪ್ರಕಟವಾಗುವದಿಲ್ಲ.

ಆದರೆ ಆಯಾ ಲೇಖಕರ ಅನುಮತಿ ಇಲ್ಲದೇ ಇಲ್ಲಿನ ಲೇಖನವನ್ನು ಬೇರೆ ತಾಣಕ್ಕೆ ಕಾಪಿ ಮಾಡುವಂತಿಲ್ಲ.

ತಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿದೆ ಎಂದು ಭಾವಿಸುತ್ತೇನೆ.

ವಂದನೆಗಳು
--ಮೇಲಧಿಕಾರಿ
ವಿಸ್ಮಯ ನಗರಿ

srinivasa.s ಶನಿ, 10/17/2009 - 14:35

ತುಂಬಾ ಚೆನ್ನಾಗಿದೆ

ಎಚ್.ಎಸ್. ಪ್ರಭಾಕರ ಮಂಗಳ, 11/03/2009 - 13:11

ನನಗೆ ವಿಸ್ಮಯ ನಗರಿ ಪರಿಚಯಿಸಿದವರು ಸನ್ಮಾನ್ಯ ಹರಿಹರಪುರ ಶ್ರೀಧರ್ ಅವರು. ಇದೊಂದು `ನೆಮ್ಮದಿಯ ತಾಣ'; `ಹೊಂಗೆಯ ನೆರಳು'; ನನ್ನೆಲ್ಲ `ತುಡಿತ ಮಿಡಿತ' ಗಳಿಗೆ ಸೂಕ್ತವಾದ `ಅರಳಿ ಕಟ್ಟೆ' ಎಂದು ಭಾಸವಾಗಿದೆ. `ಪಿಸುಮಾತಿನಲ್ಲಿ' ನಾನೂ ಭಾಗಿಯಾಗಲು ಆಸಕ್ತಿಯಿದೆ. ಒಂದು ಒಳ್ಳೆಯ ತಾಣ ಸ್ಥಾಪಿಸಿದವರು ಹಾಗೂ ಪರಿಚಯಿಸಿದರಿಗೆ ಧನ್ಯವಾದಗಳು.

ಉಮಾಶಂಕರ ಬಿ.ಎಸ್ ಭಾನು, 11/15/2009 - 22:02

ನನಗೆ ಈ ತಾಣ ಗೂಗಲ ಸರ್ಚ್ ಇಂಜಿನ್ ಮೂಲಕ ತಿಳಿಯಿತು. ನಾನು ನನ್ನ ಬ್ಲೊಗ್ ನಲ್ಲಿ ಬರೆಯುವುದಕ್ಕಿಂತ ಇದರಲ್ಲಿ ತುಂಬಾ ಸುಲಭ ಹಾಗು ಆನಂದದಾಯಕ ಕೂಡ.
ಆದರೆ ಇಲ್ಲಿ ನಾವು ಸ್ನೇಹಿತರನ್ನು ನಮ್ಮ ಗುಂಪಿಗೆ ಆಹ್ವಾನಿಸಿದಾಗ ಅಥವಾ ಅವರು ನಮ್ಮನ್ನು ಅವರ ಸ್ನೇಹಕ್ಕಾಗು ಆಹ್ವಾನಿಸಿದಾಗ ನಮಗೆ ತಿಳಿಯುವುದು ಸ್ವಲ್ಪ ಕಷ್ಟ. ಅದಕ್ಕೆ ನನ್ನ ಸಲಹೆಯೇನೆಂದರೆ, ನಾವು ಲಾಗ್ ಇನ್ ಆದ ತಕ್ಷಣ ತಿಳಿಯುವಹಾಗೆ ಅದನ್ನು display ಮಾಡಲು ಸಾದ್ಯವಿಲ್ಲವೇ? ಪರಿಶೀಲಿಸಿ.

ವಿನಯ್_ಜಿ ಧ, 11/25/2009 - 12:37

ಮೇಲಧಿಕಾರಿ ಯವರೆ,
ನಾವು ವಿಸ್ಮಯನಗರಿ ಗೆ Login ಆಗಿದ್ದಾಗ ಅಕಸ್ಮಾತ್ ನಮ್ಮ Browser/System Hang ಆಗಿ Screen Close ಅದರೆ ಮತ್ತೆ ನಾವು ವಿಸ್ಮಯನಗರಿ Re-Open ಮಾಡಿದರೆ ನಮ್ಮ User Account Active ಆಗಿರುತ್ತದೆ. ಅದರೆ ಒಂದು ತೊಂದರೆ ಏನೆಂದರೆ ನಾವು Logout ಅದರೂ ಸಹ ಮತ್ತೆ ವಿಸ್ಮಯನಗರಿ Site Open ಮಾಡಿದರೆ ಆದು Login Status ನಲ್ಲೇ ಇರುತ್ತದೆ. ಮತ್ತೆ-ಮತ್ತೆ Logout ಮಾಡಿದರೂ ಸಹ ಈ ತೊಂದರೆ ಸರಿಹೋಗುವುದಿಲ್ಲ. ಇದನ್ನು ನಾನು ಹಲವು ಸಲ ನೋಡಿದ್ದೇನೆ (In Internet Explorer Browser). ಈ ತೊಂದರೆ ನಾನು temporary files folder ಕ್ಲಿಯರ್ ಮಾಡಿದರೆ ಮಾತ್ರ ಸರಿಹೋಗುತ್ತದೆ. ನೀವು ಇದನ್ನು ದಯವಿಟ್ಟು ಪರಿಶೀಲಿಸುವಿರಾ?

ಮೇಲಧಿಕಾರಿ ಶುಕ್ರ, 02/12/2010 - 20:03

ಹಾಯ್ ವಿನಯ್ ಅವರೇ,
ಈ ಹೊಸ ವಿಸ್ಮಯ ನಗರಿಯಲ್ಲಿ ಈ ತರಹದ ಸಮಸ್ಯೆ ಇರಕೂಡದು. ಇನ್ನೂ ಇದ್ದರೆ ತಿಳಿಸಿ.
ವಂದನೆಗಳೊಂದಿಗೆ
--ಮೇಲಧಿಕಾರಿ
ವಿಸ್ಮಯ ನಗರಿ

munna ಮಂಗಳ, 03/09/2010 - 15:54

ಕವನ ಹೇಗೆ ಬರೆಯಬೇಕು ಅಂತ ತೀಳಿತ್ತಿಲ್ಲ.

NITHESH N ಶನಿ, 03/13/2010 - 09:51

ಇದರಲ್ಲಿ ಫೊಟೋ ಹೇಗೆ ಹಾಕುವುದು

ಮೇಲಧಿಕಾರಿ ಶನಿ, 03/13/2010 - 14:26

ನಮಸ್ಕಾರಗಳು ನಿತೇಶ್ ಅವರೇ,
ವಿಸ್ಮಯ ನಗರಿಗೆ ಸುಸ್ವಾಗತ.
ಇಲ್ಲಿ ಚಿತ್ರ ಹಾಕುವದು ತುಂಬಾ ಸುಲಭ! ಈ ಮುಂದಿನ ಯಾವುದೇ ಮಾರ್ಗದ ಮೂಲಕ ಹೊಸ ಚಿತ್ರ ಸೇರಿಸ ಬಹುದು.

  • ತಿರುಗಾಟ ಪಟ್ಟಿಯಲ್ಲಿ ಹೊಸತನ್ನು ಸೇರಿಸು -> ಚಿತ್ರ
  • ಚಿತ್ರಶಾಲೆ ವಿಭಾಗದಲ್ಲಿ ಹೊಸ ಚಿತ್ರ
  • ಮೇಲೆ ಉಪಲಿಂಕ್ ನಲ್ಲಿ ಹೊಸ ಲೇಖನ ಬರೆಯಿರಿ -> ಚಿತ್ರ

ಅಲ್ಲಿ ನಿಮ್ಮ ಚಿತ್ರ ಆರಿಸಿ ಅದಕ್ಕೆ ಸೂಕ್ತ ಹೆಸರು ಕೊಡಿ. ಎಷ್ಟು ಸಿಂಪಲ್ ಅಲ್ವಾ?
ವಂದನೆಗಳೊಂದಿಗೆ
--ರಾಜೇಶ ಹೆಗಡೆ
 

ಮಾನ್ಯ ಮೇಲಧಿಕಾರಿಯವರೆ,
ನನ್ನದೊದು ಸಲಹೆ, ಸಧ್ಯ ನಾವು ಪರಿಸ್ಥಿತಿಯನ್ನು ಬರೆದಾಗ ಅದು ನಮ್ಮ ವಿಸ್ಮಯ ಪುಟದಲ್ಲಿ ಮಾತ್ರ ಗೋಚರವಾಗುತ್ತಿದೆ. ಅದರ ಬದಲು ನಮ್ಮ ಲೇಖನ/ ಪಿಸುಮಾತಿನ ಲೇಖನಗಳನ್ನು ತೆರೆದಾಗ ಬಲಭಾಗದಲ್ಲಿ ಕಾಣುವ ನಮ್ಮ ಫೋಟೋ ಮೇಲೆ ಕಾಣಿಸಿದರೆ ಅದರಿಂದ ಉಪಯೋಗ ಹೆಚ್ಚು ಎನಿಸುತ್ತದೆ.
ಸಾಧ್ಯವೇ ಪರಿಶೀಲಿಸಿ,
ನಿಮ್ಮ
ಉಮಾಶಂಕರ ಬಿ.ಎಸ್

Basavaraj G ಗುರು, 06/17/2010 - 18:28

ನಾನು ಕನ್ನಡ ತಾಣಗಳ ಹುಡುಕಾಟದಲ್ಲಿ ನಿರತನಾದವನು. ನನಗೆ ಮೊದಲ ದೊರೆತ ಕನ್ನಡ ತಾಣ ಸಂಪದ, ದಟ್ಸ್ ಕನ್ನಡ ಒನ್ ಇಂಡಿಯ, ನಂತರ ಆಕಸ್ಮಿಕವಾಗಿ ವಿಸ್ಮಹ ತಾಣವನ್ನು ನನ್ನ ವಿಂಡೋಸ್ ಮೊಬೈಲ್ ಒಪೆರಾ ಬ್ರೌಸರ್‌ನಲ್ಲಿ ನೋಡಿದೆ. ಆದರೆ ಮೊಬೈಲ್‌ನಲ್ಲಿ ಓದುವುದಕ್ಕೆ ಮಾತ್ರ ಸಾಧ್ಯ. ಪ್ರತಿಕ್ರಿಯಿಸಲು ಸಾಧ್ಯ. ಕಾರಣ ನನ್ನ ನೋಟ್‌ಬುಕ್ ಬೌಸರ್‌ನಲ್ಲಿ ವಿಸ್ಮಯನಗರಿ ತಾಣ ನೋಡಿ, ವಿಸ್ಮಯನಗರಿ ತಾಣಕ್ಕೆ ಸದಸ್ಯನಾಗಿ ನೋಂದಾಯಿಸಿಕೊಂಡೆ. ನಂತರ ಮತ್ತೆ ಹುಡುಕಿದಾಗ ಸಿಕ್ಕ ಕನ್ನಡ ತಾಣಗಳು ಕನ್ನಡ ರತ್ನ, ಕನ್ನಡ ಹನಿಗಳು, ಸಿರಿನುಡಿ, ಕಂಪ್ಯೂಇನ್‌ಕನ್ನಡ ಇತ್ಯಾದಿ. ಇತರೆ ದಕ್ಷಿಣ ಭಾರತದ ಭಾಷೆಗಳಿಗೆ ಹೋಲಿಸಿದರೆ, ವೆಬ್‌ನಲ್ಲಿ ಕನ್ನಡದ ಕಂಪು ಕಡಿಮೆ. ಕನ್ನಡ ತಂತ್ರಾಂಶ ತಿಳಿದವರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುವುದು ಉತ್ತಮ.

ಉಪೇಂದ್ರ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 07/03/2010 - 18:21

ತುಂಬಾ ಚೆನ್ನಾಗಿದೆ. ನಿಮ್ಮ ಬ್ಲಾಗಿನ ಲೇಖನಗಳನ್ನು ನಮ್ಮ 'ಕರ್ನಾಟಕ ಕಾರ್ಮಿಕ ಲೋಕ' ಪತ್ರಿಕೆಗೆ ಬಳಸಿಕೊಳ್ಳಬಹುದೆ?

ಮೇಲಧಿಕಾರಿ ಭಾನು, 07/04/2010 - 09:47

ಇದಕ್ಕಾಗಿ ಆಯಾ ಲೇಖಕರ ಅನುಮತಿ ಪಡೆಯುವದು ಅತ್ಯವಶ್ಯಕ. ಲೇಖಕರು ಅನುಮತಿ ನೀಡಿದರೆ ಅವರ ಹೆಸರಿನಲ್ಲೇ ಪ್ರಕಟಿಸಬಹುದಾಗಿದೆ. ಹಾಗೆಯೇ ಸುಮ್ಮನೆ ಎತ್ತಿ ಪ್ರಕಟಿಸುವಂತಿಲ್ಲ. ವಿಸ್ಮಯ ನಗರಿಯ ಲೇಖಕರ ಹಕ್ಕು ಕಾಪಾಡುವದಕ್ಕಾಗಿ ಈ ನಿಯಮವಿದೆ.

ತೇಜಸ್ವಿನಿ ಹೆಗಡೆ ಭಾನು, 07/04/2010 - 20:25

ಮಾನ್ಯ ಮೇಲಧಿಕಾರಿಯವರೇ,
"ಈ ತಾಣದಲ್ಲಿ ಪ್ರಕಟವಾಗುವ ಲೇಖನಗಳಲ್ಲಿ ಆಯ್ದ ಕೆಲವನ್ನು ವಿಸ್ಮಯ ನಗರಿಯ ಪುಸ್ತಕದಲ್ಲಿ ಪ್ರಕಟಿಸಲಾಗುವದು." - ಎಂದಿರುವಿರಿ. ಒಳ್ಳೆಯದು. ಆದರೆ ಮೆಚ್ಚುಗೆಯಾದ ಬರಹವನ್ನು ಪುಸ್ತಕದಲ್ಲಿ ಬಳಸಿಕೊಳ್ಳುವ ಮೊದಲು ಲೇಖಕರಿಗೆ ತಿಳಿಸಿ ಒಪ್ಪಿಗೆ ಪಡೆದ ನಂತರವೇ ಹಾಕುವಿರಿ ಎಂದು ಭಾವಿಸುವೆ.

ವಂದನೆಗಳೊಂದಿಗೆ,
ತೇಜಸ್ವಿನಿ ಹೆಗಡೆ

ಮೇಲಧಿಕಾರಿ ಸೋಮ, 07/05/2010 - 12:13

ಹಾಯ್ ತೇಜಸ್ವಿನಿ ಹೆಗಡೆ ಅವರೇ,
ಖಂಡಿತ. ವಿಸ್ಮಯ ನಗರಿಯಲ್ಲಿ ಪ್ರಕಟವಾದ ಲೇಖನಗಳಲ್ಲಿ ಮೆಚ್ಚುಗೆ ಪಡೆದ ಲೇಖನಗಳನ್ನು ಆಯಾ ಲೇಖಕರ ಒಪ್ಪಿಗೆ ಇದ್ದರೆ ಮಾತ್ರವೇ ಪ್ರಕಟಿಸಲಾಗುವದು.
ವಾಸ್ತವಿಕವಾಗಿ ಆ ಪುಸ್ತಕಕ್ಕೆ ಹೊಸತಾದ ಲೇಖನಗಳನ್ನು ಸಹ ಆಹ್ವಾನಿಸಿ ಅದನ್ನು ಸಹ ಪ್ರಕಟಿಸುವ ಯೋಜನೆ ಸಹ ಇದೆ. ಅದಕ್ಕೆ ಅನುಮತಿ ಇರುವವರು ಮಾತ್ರ ಲೇಖನ ಕಳುಹಿಸಬಹುದು. ಆ ಲೇಖನಗಳಿಗೆ ಪ್ರತ್ಯೇಕ ಒಪ್ಪಿಗೆ ಕೇಳಲಾಗುವದಿಲ್ಲ.
ಒಟ್ಟಿನಲ್ಲಿ ವಿಸ್ಮಯ ನಗರಿಯ ಬರಹಗಾರರ ಹಿತಾಸಕ್ತಿಗೆ ದಕ್ಕೆ ಬರದಂತೆ ನಡೆಯಲಾಗುವದು :)

zabiullakhan (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 12/20/2010 - 19:44

Dear sir, Open for all, greate website. I want to learn kannada typing, please guide me.

ಮೇಲಧಿಕಾರಿ ಮಂಗಳ, 12/21/2010 - 21:45

ನಮಸ್ಕಾರ,
ವಿಸ್ಮಯ ನಗರಿಗೆ ಸ್ವಾಗತ.
ವಿಸ್ಮಯ ನಗರಿಯಲ್ಲಿ ಕನ್ನಡವನ್ನು ನೇರವಾಗಿ ಟೈಪ್ ಮಾಡುವ ಸೌಲಭ್ಯ ಇದೆ. ಈ ಮುಂದಿನ ಲಿಂಕ್ ನೋಡಿ. ವಿಸ್ಮಯ ಕೀಲಿ ಮಣೆ
F9  ಒತ್ತುವದರ ಮೂಲಕ ಹಾಗೂ ಕನ್ನಡವನ್ನು ಡ್ರಾಪ್ ಡೌನ್ ನಲ್ಲಿ ಆಯ್ಕೆ ಮಾಡುವದರ ಮೂಲಕ ಕನ್ನಡದಲ್ಲಿ ಬರೆಯಬಹುದು.

naveen ramanagara (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/03/2011 - 18:32

banni kannadada kampannu ellede haradona.........
banni elaaru....ki jodisi.....
jai karnataka.....
Regards,
naveen
Doha (qatar)

RAVISH ಗುರು, 03/10/2011 - 15:11
ಸತೀಶ್ ಸಿ. ಕೆ ಶನಿ, 09/08/2012 - 16:46

ಮೇಲಧಿಕಾರಿ ಯವರೆ,
ನಾವು ವಿಸ್ಮಯನಗರಿ ಗೆ Login ಆಗಿದ್ದಾಗ ಅಕಸ್ಮಾತ್ ನಮ್ಮ Browser/System Hang ಆಗಿ Screen Close ಅದರೆ ಮತ್ತೆ ನಾವು ವಿಸ್ಮಯನಗರಿ Re-Open ಮಾಡಿದರೆ ನಮ್ಮ User Account ನಲ್ಲಿ ನನ್ನ ಹೆಸರಿನ ಬದಲು ಬೆರೆ ಹೆಸರಿದೆ ದಯಮಾಡಿ ನನ್ನ account close madi ನಾನು new accout open madthini .

ಮೇಲಧಿಕಾರಿ ಮಂಗಳ, 09/11/2012 - 06:35

ನಮಸ್ಕಾರ,


ಇದು ಲೋಕಲ್ ಬ್ರೌಸರ್ ಸಮಸ್ಯೆ ಹೊರತು ವಿಸ್ಮಯ ನಗರಿಯದ್ದಲ್ಲ. ಬ್ರೌಸರ್ ಕ್ಯಾಶ್ ಡಿಲೀಟ್ ಮಾಡಿ. ವಿಸ್ಮಯ ಬಳಸಿ. :)


ವಂದನೆಗಳೊಂದಿಗೆ


--ಮೇಲಧಿಕಾರಿ

ಮಣಿಕಂಟ ಶುಕ್ರ, 11/30/2012 - 16:49

ಇದು ನನ್ನ ಬಾವನೆಗಳನ್ನು ಹಂಚೀ ಕೊಳಲ್ಲು ತುಂಬಾ ಅನುಕೂಲ ವಾಗಿದೆ

prabhu ಶನಿ, 12/01/2012 - 12:51

ವಿಸ್ಮಯ ನಗರಿ ಹೊಸರೂಪ..ಹೊಸ ವಿನ್ಯಾಸ ಚೆನ್ನಾಗಿದೆ.ಇನ್ನೂ ಆಕಷ೯ಕವಾಗಿರುವಂತೆ ಮಾಡಿರಿ.ಭಾವನೆಗಳ ಹಂಚಿಕೊಳ್ಳಲು ಮನಸು ಮುದಗೊಳ್ಳಲು ಒಳ್ಳೆಯ ತಾಣ-ಡಾ.ಪ್ರಭು.ಅ.ಗಂಜಿಹಾಳ್

K.M.Vishwanath ಸೋಮ, 12/03/2012 - 20:15

ಆತ್ಮಿಯ ಮೇಲ್ದಾಕಾರಿಗಳೆ  ಈ ವಿಸಮಯನಗರಿ ತಾಣದಿಂದ ನನಗೆ ತುಂಬಾ ಸಂತೋಷವಾಗಿದೆ ಇದರಿಂದ ನಾನು ಈಗಾಗಲೆ ಮೂರು ಪತ್ರಿಕೆಯಲ್ಲಿ ಅಂಕಣಕಾರನಾಗಿ ಬರವಣಿಗೆ ಬರೆಯುತ್ತಿದ್ದೇನೆ ಇದರಲ್ಲಿ ನೋಡೊದ ಆ ಪತ್ರಿಕೆಗಳ ಸಂಪಾದಕರು ಕರೆಮಾಡಿ ನನ್ನ ಲೇಖನಗಳನ್ನು  ಪ್ರಕಟಿಸಿದ್ದಾರೆ ಅವರೆಲ್ಲಾ ವಿಸಮಯನಗರಿಯಲ್ಲಿ ಪ್ರಕಟವಾದ ನನ್ನ ಬರಹಗಳನ್ನು ನೋಡಿ ಕರೆಮಾಡಿದವರು ಅದಕ್ಕಾಗಿ ನಾನು ಈ ತಾಣಕ್ಕೆ ಚಿರ ರುಣಿಯಾಗಿದ್ದೇನೆ ಇದು  ನನ್ನ ಬೆಳವಣಿಗೆಗ ಸಾಹಾಯ ಮಾಡಿದ ಉತ್ತಮವಾದ ತಾಣ ಕೆಲವು ಸಲಹೆಗಳು ನೀಡಿ ಹಿಂದೆ ನನಗೆ ಯೂನಿಕೋಡ್ ಪರಿಚಯ ಇಲ್ಲದಾಗ ನಾನು ಕೆಲವು ಬೇರೆ ಅಕ್ಷರದಲ್ಲಿ ಬರೆದಿದ್ದೇನೆ ಅವುಗಳನ್ನು ಬದಲಿಸುವ ಪರಿ ಹೇಗೆ ತಿಳೀಸಿ ನನ್ನ ಹೆಸರು ಇಂಗ್ಲೀಷನಲ್ಲಿ ಬರೆದಿದ್ಧೇನೆ ಅದನ್ನು ಕನ್ನಡಕ್ಕೆ ಪರಿವರ್ತಿಸುವ ಬಗೆ ತಿಳಿಸಿ ಕೆಲವು ಬರಹಗಳು ಎರಡುಬಾರಿಯಾಗಿವೆ ಅಳಿಸುವ ಬಗೆ ಹೇಗೆ ತಿಳಿಸಿ ಇಂಗ್ಲೀಷ ಪದ ಬಳಕೆ ಮಾಡಿ ಬರೆಯುವ ರಿತಿ ತಿಳೀಸಿ  ನಿಮಗೆ ಧನ್ಯವಾದಗಳು

prabhu ಸೋಮ, 12/03/2012 - 21:21

ನವನವೀನ ಮುದನೀಡುತ್ತಿದ್ದ ಚಿತ್ರಗಳೆ ಕಾಣುತ್ತಿಲ್ಲ.ಪ್ಲೀಸ್  ಫೋಟೋಗಳಿಗೆ ಅವಕಾಶ ನೀಡಿ.-ಡಾ.ಪ್ರಭು.ಅ.ಗಂಜಿಹಾಳ್.ಗದಗ. 

ರಾಜೇಶ ಹೆಗಡೆ ಮಂಗಳ, 12/04/2012 - 22:39

ನಮಸ್ಕಾರ ಪ್ರಭುಗಳೇ,
ಹೊಸ ವಿಸ್ಮಯದಲ್ಲಿ ಚಿತ್ರಶಾಲೆ ಲಭ್ಯವಿದೆ.
ಇತರೆ > ಚಿತ್ರಶಾಲೆ
ಹೊಸ ವಿಸ್ಮಯದಲ್ಲಿ ಚಿತ್ರ ಸೇರಿಸುವದು ಸುಲಭ. ಹೊಸ ಲೇಖನ ಸೇರಿಸಿ, ಲೇಖನದ ಬಗೆ ಚಿತ್ರ ಎಂದು ಆಯ್ಕೆ ಮಾಡಿ. ಹತ್ತು ಚಿತ್ರದವರೆಗೆ ನೀವು ಸೇರಿಸಬಹುದು. ಆದು ಚಿತ್ರಶಾಲೆ ವಿಭಾಗದಲ್ಲಿ ಪ್ರಕಟವಾಗುತ್ತದೆ.

veeranna manthalkar ಧ, 01/09/2013 - 17:16

ನಮಸ್ಕಾರ ಸರ್,

ವಿಸ್ಮಯ ನಗರಿ ನಿಜಕ್ಕೂ ಒಂದು ಅದ್ಭುತವಾದ ಬ್ಲಾಗ್. ಸಾವಿರಾರು ಬರಹಗಾರರು ಈ ವೇದಿಕೆಯಡಿ ಬೆಳಕಿಗೆ ಬರಲು ಸಾಧ್ಯವಾಗುತ್ತದೆ. ಇಲ್ಲಿ ವೈವಿಧ್ಯಮಯ ಲೇಖನಗಳು, ಕತೆ, ಕವನಗಳು ಮುದ ನೀಡುವ ಚುಟುಕುಗಳು, ಹಾಸ್ಯ ಲೇಖನಗಳು ಎಲ್ಲವೂ ಬೆರಗುಗೊಳಿಸುವಂಥವಾಗಿವೆ.

ಸಂತೆಬೆನ್ನೂರು ಫ… ಮಂಗಳ, 01/22/2013 - 18:11

ಚಿಂತನೀಯ ಬರಹ ನೀಡುತ್ತಾ ಬಂದಿದೆ ಧನ್ಯವಾದಗಳು.

RAVEENDRA ಧ, 04/10/2013 - 19:52

ಪ್ರಾಯೋಗಿಕ ವಾಗಿ ನಾನು ಪ್ರಯತ್ನಿಸುತ್ತೆನೆ. ಕನ್ನಡದಲ್ಲಿ ಇಂತಹದೋಂದು ವಿಸ್ಮಯ ವಿರುವುದು ಸಂತೋಷ್ ದಾಯಕ ವಾದಸಂಗತಿ.


ರವೀಂದ್ರ.

Ganapati J Jadhav ಭಾನು, 05/05/2013 - 19:21

ನಾನು ಪದವಿ ಓದ್ತಾ ಇರೋ ಹುಡುಗಾ ನೊಡಿ, ನನಗೆ ಮೊದಲಿನಿಂದಲು ಕವನ , ಕವಿತೆ,ಕಾದಂಬರಿ ಓದೋದು ಅಂದ್ರೆ ನನಗೆ ತುಂಬಾ ಇಷ್ಫ್.


 ನಿಮಗೆ ಗೊತ್ತಾಗಿರಬೇಕು  ನಾನೋಬ್ಬ ಹುಚ್ಚ್ ಅಂತ್ ಪರವಗಿಲ್ಲ ಬಿಡಿ, ನನ್ನ ಹುಚ್ಹು ಮಾತುಗಳನ್ನ ನನಗೆ ಹೇಳೋಕೆ ಈ ವಿಸ್ಮಯ ನಗರಿ


 ನನಗೆ ಒಂದು ಅವಕಾಶ ಕೋಟ್ಟಿದೆ. ನೋಡೋಣ ನಿಮಗು ಗೋತ್ತಾಗುತ್ತೆ, ಕನ್ನಡ ಕವನಗಳ ಹುಚ್ಚು ಹಿಡಿದವನ ಮಾತುಗಳು ಹೇಂಗ್ ಇರ್ತವೆ ಅಂತ್.


ಆದ್ರು ಕೂಡಾ ನಾನು ವಿಸ್ಮಯ ನಗರಿ ವೆಬಸೈಟ್ಗೆ ಹೇಗೆ ಧನ್ಯವಾದ ಹೇಳ್ಬೆಕು ಅಂತಾ ಗೊತ್ತಾಗ್ತಾ ಇಲ್ಲ ನೋಡಿ..

paarthamanu ಭಾನು, 05/12/2013 - 11:39

ಜೀವನದಲ್ಲಿ ಯಾರಿಗಾಗಿ ನಾವು ಬಾಳಬಾರದು 

ನಮಗಾಗಿಯೂ ನಾವು ಬಾಳಬಾರದು

ಎಲ್ಲರ ಸಂತೋಶಕ್ಕಾಗಿಬಾಳಬೇಕು

divyav patil ಗುರು, 11/14/2013 - 12:27

 

ನಿಮ ಅನಿಸಿಕೆ ಸುಂದರವಾಗಿದೆ

kmbasavarajappa ಶುಕ್ರ, 08/16/2013 - 16:26

thumba chennagide

Lakshmi m ಗುರು, 09/19/2013 - 16:44

ಸರ್ ನನಗೆ ಈ ವಿಸ್ಮಯ ನಗರಿಯ ಎಲ್ಲ ಸ೦ದೇಶಗಳು ಇಷ್ಟವಾಗುತ್ತವೆ. ಅವುಗಳನ್ನು ಮೊಬೈಲ್ ಗೆ ಕಳಿಸಿಕೊಳುವುದು ಹೇಗೆ ಎ೦ಬುವುದರ ಬಗ್ಗೆ ಸ್ವಲ್ಪ ಮಾಹಿತಿ ನೀಡುವೀರಾ?

chandra kumar g m ಮಂಗಳ, 01/21/2014 - 10:21

ಸರ್ ನನಗೆ ಈ ವಿಸ್ಮಯ ನಗರಿಯ ಎಲ್ಲ ಸ೦ದೇಶಗಳು ಇಷ್ಟವಾಗುತ್ತವೆ. 

vipinkumar ಭಾನು, 02/15/2015 - 17:41

ಇದೊ೦ದು ಒಳ್ಳೆಯ ತಾಣ.

ವರದರಾಜು ಎಸ್ ಹೆಚ್ ಮಂಗಳ, 02/17/2015 - 14:02

 ನಿಮ್ಮ ಲೇಖನಗಳು ತುಂಬಾ ಚೆನ್ನಾಗಿವೆ ಇನ್ನು ಹೆಚ್ಚು

ಹೆಚ್ಚು ಬರೆಯಿರಿ

ಧನ್ಯವಾದಗಳೊಂದಿಗೆ

ವರದರಾಜು ಎಸ್ ಹೆಚ್

Geeta G Hegde ಶುಕ್ರ, 12/11/2015 - 15:47

ವಿಸ್ಮಯ ನಗರಿಗೆ ವಂದನೆಗಳು. ನಾನು ಸಾಹಿತ್ಯ ಕ್ಷೇತ್ರಕ್ಕೆ

ಹೊಸಬಳು. ನನ್ನ ಕವನವನ್ನು ಹೇಗೆ ಇಲ್ಲಿ ಬರೆಯುವುದು, ತಿಳಿಸಿ.

 

Geeta G Hegde ಮಂಗಳ, 12/29/2015 - 13:54

ಸರ್,

ಈ ವಿಸ್ಮಯ ನಗರಿಯ ವತಿಯಿಂದ ಕವಿ ಸಮ್ಮೇಳನ ನಡೆಯುತ್ತಿದೆಯೆ? ತಾವೇ ಸ್ವತಃ ಇಲ್ಲಿ ಪ್ರಕಟವಾಗುವ ಲೇಖನಗಳ ಕುರಿತು ಕವಿಗಳಿಗೆ ತಮ್ಮ ಅಭಿಪ್ರಾಯ ತಿಳಿಸಿದರೆ ಇನ್ನೂ ಹೆಚ್ಚಿನ ಉತ್ತೇಜನ ಸಿಗಬಹುದು ಎನ್ನುವದು ನನ್ನ ಅನಿಸಿಕೆ.

Sachinkumar Hiremath ಶನಿ, 11/19/2016 - 20:37

ನನ್ನ ಲೇಖನ 'ಗರ್ಲ್ ಫ್ರೆಂಡ್ ಹುಡುಗರಿಗೇಕೆ ಅನಿವಾರ್ಯ?' ಎಂಬ ಲೇಖನವನ್ನು ಲೋಕೇಶ ಎನ್ಯನುವವರು ಯಥಾವತ್ತಾಗಿ ಕೃತಿಚೌರ್ಯ ಮಾಡಿದ್ದಾರೆ.

ನನ್ನ ಲೇಖನದ ಲಿಂಕ್

https://madhuramanase.wordpress.com/2008/10/13/%E0%B2%97%E0%B2%B0%E0%B3%8D%E0%B2%B2%E0%B3%8D-%E0%B2%AB%E0%B3%8D%E0%B2%B0%E0%B3%86%E0%B2%82%E0%B2%A1%E0%B3%8D-%E0%B2%B9%E0%B3%81%E0%B2%A1%E0%B3%81%E0%B2%97%E0%B2%B0%E0%B2%BF%E0%B2%97%E0%B3%87/

 

Sachinkumar Hiremath ಶನಿ, 11/19/2016 - 20:39

ನನ್ನ ಲೇಖನ 'ಗರ್ಲ್ ಫ್ರೆಂಡ್ ಹುಡುಗರಿಗೇಕೆ ಅನಿವಾರ್ಯ?' ಎಂಬ ಲೇಖನವನ್ನು ಲೋಕೇಶ ಎನ್ಯನುವವರು ಯಥಾವತ್ತಾಗಿ ಕೃತಿಚೌರ್ಯ ಮಾಡಿದ್ದಾರೆ.

ನನ್ನ ಲೇಖನದ ಲಿಂಕ್

https://madhuramanase.wordpress.com/2008/10/13/%E0%B2%97%E0%B2%B0%E0%B3%8D%E0%B2%B2%E0%B3%8D-%E0%B2%AB%E0%B3%8D%E0%B2%B0%E0%B3%86%E0%B2%82%E0%B2%A1%E0%B3%8D-%E0%B2%B9%E0%B3%81%E0%B2%A1%E0%B3%81%E0%B2%97%E0%B2%B0%E0%B2%BF%E0%B2%97%E0%B3%87/

 

Sachinkumar Hiremath ಶನಿ, 11/19/2016 - 20:43

ನೋಡಿ... ಇವರು ಹೇಗೆ ನನ್ನ ಲೇಖನವನ್ನು ಕಾಪಿ ಪೇಸ್ಟ್ ಮಾಡಿದ್ದಾರೆ.

http://vismayanagari.com/node/5159