ನಿನ್ನ ಕನಸುಗಳು ನನಗೆ ಇನ್ನೂ ಹತ್ತಿರ..
ತರ ತರ ಹಿಡಿಸಿದೆ ಮನಸಿಗೆ ನೀನು ..ಹಗಲಲೇ ಮುಳುಗಿದೆ ಕನಸಲಿ ನಾನು .. ಕುಂತರೂ ನಿಂತರೂ ನಿನ್ನ ಭಜನೆ ಬೇರೇ ಕೆಲಸಾನೆ ಇಲ್ಲ...ಪ್ರತಿರಾತ್ರಿಯು ನಿನ್ನದೇ ನಿನ್ನದೇ.. ನಿನ ಜಾತ್ರೆಯು ಸಾಗಿದೆ ಸಾಗಿದೆ..ಇದಕೊಂದು ಪರಿಹಾರ ತಿಳಿಸು ....ನಿನ್ನ ಪ್ರೀತಿಯ ಕನಸುಗಳು ಸಹ, ಥೇಟ್ ನಿನ್ನ ಥರಾನೆ.. ನನ್ನ ಜೊತೆ ತುಂಟಾಟ ಆಡುತ್ವೆ.. ನನ್ನ ಸತಾಯಿಸಿ, ನಗಿಸಿ, ಅಳಿಸಿ.. ಒಮ್ಮೆ ಕೆನ್ನೆ ಕೆಂಪಗಾಗಿಸುತ್ತೆ. ನೀನು ನನ್ನ ಹತ್ತಿರ ಮಾತಾಡ್ತಾ ಇದ್ರೂ.. ನಿನ್ನ ಕನಸುಗಳು ನನಗೆ ಇನ್ನೂ ಹತ್ತಿರ.. ನೀನು ನನಗೆಷ್ಟು ಹತ್ತಿರಾನೋ ಅದಕ್ಕಿಂತ ಜಾಸ್ತಿ ಹತ್ತಿರ ನಿನ್ನ ಕನಸುಗಳು.. ಯಾಕಂದ್ರೆ ಕನಸುಗಳು ಬೇಕು ಅನಿಸಿದಾಗಲೆಲ್ಲ ನನ್ನ ಹತ್ರ ಓಡಿ ಬರುತ್ವೆ..ನೀನು ನನ್ನಿಂದ ಒಂದಿನ ಒಂದು ಕ್ಷಣ ಮಾತಾಡ್ದೇನೆ ದೂರ ಹೋಗಬಹುದು.. ಆದರೆ ನಿನ್ನ ಕನಸುಗಳು ಹಾಗಲ್ಲ.. ಅವು ಎಂದೆಂದೂ ನನ್ನವು.. ಮತ್ತೆ ಎಂದೂ ನನ್ನಿಂದ ದೂರ ಆಗೋಲ್ಲ ಅವು..
ನಾನ್ ನಿನ್ ಬಗ್ಗೆ ಕಾಣೋ ಕನಸುಗಳಿಗೆ ಏಣೆಯೇ ಇಲ್ಲ.. ಒಂದೊಂದಾಗಿ ಹೇಳ್ತಾ ಹೋಗ್ತೀನಿ..ನೀನ್ ಹಾಗೆ ಕೇಳ್ತಾ ಹೋಗ್ತಿಯಾ?......
ನಾನು ಮುದ್ದಾಗಿ ನಿನ್ನ ಕೂದಲನ್ನ ಬಾಚಿ,ಬಾಚಣಿಗೆಯನ್ನ ನನ್ನ ಬಾಯಲ್ಲಿಟ್ಟುಕೊಂಡು,ನಿನಗೆ ಜಡೆ ಹಾಕ್ತಾ ಇದ್ರೆ ಏನ್ ಹಿತ ಅನ್ಸುತೆ ನಾನು ಹಾಕೊಂಡಿರೋ ಶರ್ಟ್ ಮೇಲೇನೇ ಬಟನ್ ನಿನು ಪೋನಿಸ್ತಾ ಇದ್ರೆ ಎಷ್ಟು ಹಿತ ಅನ್ಸುತ್ತೆ ಗೊತ್ತಾ?
ಮದುವೆಗೆ ಹೋಗಬೇಕಾದ್ರೆ "ಸೀರೆ ಉಟ್ಕೋ" ಅಂತ ನಾನು, "ಸೀರೆ ಉಟ್ಕೊಳ್ಳೋಕೆ ಬರಲ್ಲ ಚೂಡಿ ಹಾಕೊಳ್ತಿನಿ"ಅಂತ ನಿನ್ನು, ಹಾಗಿದ್ರೆ " ನೀನು ಬರೋದ್ ಬೇಡ" ಅಂತ ನಾನು, "ಬರಲ್ಲ ಹೋಗೋ" ಅಂತ ನೀನು ಇಬ್ರು ಹೀಗೆ ಹಾವು ಮುಂಗುಸಿ ತರ ಕಚ್ಛಾಡ್ತಾ ಇದ್ರೆ ಎಷ್ಟು ತಮಾಷೆಯಾಗಿರತ್ತೆ ಗೊತ್ತಾ?ನಾನು ನಿನ್ನ ಕಾಡಿಬೇಡಿ ಸೀರೆ ಉಟ್ಕೋಳ್ಳೊಕೆ ಒಪ್ಪಿಸಿ ನಾನೆ ನಿನಗೆ ಸೀರೆ ಉಡಿಸ್ತಾ ಇರೋವಾಗ ನಾನು ಕಷ್ಟಪಟ್ಟು ಉಡೋಸೋದನ್ನ ನೋಡಿ ನಿನು ನನ್ನ ಕೆನ್ನೆಗೆ ಪ್ರೀತಿಯಿಂದ ಮುತ್ತು ಕೊಡ್ತಾ ಇದ್ರೆ ಎಷ್ಟು ಚೆನ್ನಾಗಿರತ್ತೆ ಅಲ್ವಾ?
ನಾನು ಮನೆಗೆ ಲೇಟಾಗಿ ಬಂದಾಗ, ನೀನು ನಿನ್ಮೇಲೆ ಕೋಪ ಮಾಡ್ಕೊಂಡು ಮಾತು ಆಡದೆ ಇದ್ರೆ ಎಷ್ಟು ಸುಖಾ ಅನ್ಸುತ್ತೆ ಗೊತ್ತಾ?
Sorry ಕಣೇ ಅಂತ ನಾನು ಹತ್ರ ಬಂದಾಗ ಕೊರಳ್ ಪಟ್ಟಿ ಹಿಡಿದು ನನ್ನ ಚೆನ್ನಾಗ್ ಹೊಡೆದು ಆಮೇಲೆ ನನ್ನೆದೆಮೇಲೆ ಒರಗಿ ನನ್ನ ಗಟ್ಟಿಯಾಗಿ ಅಪ್ಕೊಂಡು ಇನ್ಮೇಲೆ ಲೇಟಾಗಿ ಬರಬಾರ್ದು ಅಂತ ಅಳೋದ್ರಲ್ಲಿ ಏಷ್ಟು ಸಮಾಧಾನ ಇರತ್ತೆ ಗೊತ್ತಾ?ಯು2 ನೋಡ್ತೀನಿ ಅಂತಾ ನೀನು.. ಕ್ರಿಕೆಟ್ ನೋಡ್ತೀನಿ ಅಂತಾ ನಾನು.. ಹೀಗೆ ಇಬ್ರು ಹಂದಿ-ನಾಯಿಗಳ ಥರ ಕಚ್ಚಾಡ್ತಾ ಇದ್ರೆ ಎಷ್ಟು ಮಜಾ ಇರುತ್ತೆ ಗೊತ್ತಾ?
ಇಬ್ರು ಒಟ್ಟಿಗೆ ಬೈಕ್ನಲ್ಲಿ ಹೋಗ್ತಾ ಇರೋವಾಗ ನೀನು ಹಿಂದುಗಡೆ ಕುಳಿತುಕೊಂಡು ಬೇಕಂತ್ಲೆ ನಿನ್ನ ಹಾರಾಡೋ ಕೂದಲ್ನನ್ನ ನನ ಮುಖಕ್ಕೆ ರಂಗೋಲಿ ಬಿಡಿಸೊಹಾಗೆ
ತಾಕೋವಂತೆ ತಮಾಷೆ ಮಾಡ್ತಾ ಇದ್ರೆ ಏನ್ ಹಿತ ಅನ್ಸುತ್ತೆ ಗೊತ್ತಾ..?ಇಬ್ರು ತಾಜಮಹಲ್ ಎದ್ರು ನಿಂತು ಕೈ ಕೈ ಹಿಡ್ಕೊಂಡು "ನೀ ಅಮೃತಧಾರೆ" ಅಂತ ನಾನು " ಹೇ ಪ್ರೀತಿ ಹುಡುಗ" ಅಂತ ನೀನು ಡ್ಯೂಯೇಟ್ ಸಾಂಗ್ ಹಾಡ್ತಾ ಇದ್ರೆ ಎಷ್ಟು romantic ಆಗಿರುತ್ತೆ ಗೊತ್ತಾ?
ನೀನು ಅಡುಗೆ ಮನೇಲಿ ಒಬ್ಬಳೇ ಇರ್ಬೇಕಾದ್ರೆ ಹಿಂದಿನಿಂದ ನಾನು ಬಂದು ಹೆದರಸಿದ್ರೆ ಎಷ್ಟು thrill ಇರುತ್ತೆ ಗೊತ್ತಾ?
ನಾನು ಆಪೀಸ್ ನಲ್ಲಿ ಬ್ಯೂಸಿ ಇದ್ಡಾಗ ನೀನು ಮತ್ತೆ ಮತ್ತೆ ಕಾಲ್ ಮಾಡಿ ನನಗೆ ಸಿಟ್ಟು ಬರೋ ಹಾಗೆ ಮಾಡೋದ್ರಲ್ಲಿ ಏನ್ ಖುಷಿ ಇರತ್ತೆ ಗೊತ್ತಾ?
t.v. ನಲ್ಲಿ ಬರೋ ರಮ್ಯ ರಕ್ಷಿತ ರಾಧಿಕ ಹಿರೋಯಿನನ ಬಾಯ್ ಬಿಟ್ಕೊಂಡು ನಾನು ನೋಡ್ತಿರಬೇಕಾದ್ರೆ ಸೌಟ್ ನಿಂದಾ ನೀನು ನನ್ನ ಹೋಡಿತಾ ಇದ್ರೆ ಎಷ್ಟು ಮಜಾ ಇರತ್ತೆ ಗೊತ್ತಾ?
ಯಾವುದೋ ಕಾರಣಕ್ಕೆ 2 ದಿನ ಇಬ್ರು ಮಾತು ಬಿಟ್ಟು ಆಮೇಲೆ ಒಬ್ಬರ್ನೋಬ್ರು ತಬ್ಬಿಕೊಂಡು ಗೊಳೋ ಅಂತಾ ಅಳೋದ್ರಲ್ಲಿ ಎಷ್ಟು ಹಿತ ಇರತ್ತೆ ಗೊತ್ತಾ?
ಯಾವಾಗ್ಲೂ ನಾವಿಬ್ಬರೂ I Love You.... I Love You ಅಂತ ಒಬ್ರಿಗೊಬ್ಬರು ಹೇಳ್ಕೊಳ್ತಾ ಇದ್ರೆ ಎಷ್ಟು ಖುಷಿ ಅನ್ಸುತ್ತೆ ಗೊತ್ತಾ?
ಸಾಲುಗಳು
- Add new comment
- 1494 views
ಅನಿಸಿಕೆಗಳು
nice keep on write
nice keep on write
ಒಂದೇ ವಾಕ್ಯದಲ್ಲಿ ಹೇಳೋದಾದ್ರೆ,
ಒಂದೇ ವಾಕ್ಯದಲ್ಲಿ ಹೇಳೋದಾದ್ರೆ, ಮನಸ್ಸಿಗೆ ತುಂಬಾ ಇಷ್ಟ ಆಯ್ತು.
Superb nim kansu
Superb nim kansu