Skip to main content

ಎಸ್.ಎಸ್.ಎಲ್.ಸಿ/ಪಿ.ಯು ರಿಸಲ್ಟ್ ಮತ್ತು ಅತ್ಮಹತ್ಯೆಗಳು...

ಬರೆದಿದ್ದುMay 12, 2011
2ಅನಿಸಿಕೆಗಳು

ಎಂದಿನಂತೆ ಈ ವರ್ಷದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು ಫಲಿತಾಂಶಗಳು ಹೊರಬಿದ್ದಿವೆ. ವಿದ್ಯಾರ್ಥಿಗಳ ಮುಂದಿನ ಜೀವನದ ಬಾಗಿಲು ಸಹ ತೆರೆದಿದೆ. ಶಿಕ್ಷಕರ ಮುಷ್ಕರ, ಹೆಚ್ಚಿನ ಆನುದಾನದ ಬೇಡಿಕೆ, ಹೋರಾಟಗಳ ನಡುವೆಯೂ ಉತ್ತರಪತ್ರಿಕೆಗಳ ತಿದ್ದುವಿಕೆ ಕಾರ್ಯ ಬೇಗನೆ ಮುಗಿದು ನಿಗದಿಗಿಂತೆ ಮೊದಲೇ ಫಲಿತಾಂಶಗಳು ಹೊರಬಿದ್ದಿವೆ. ಇನ್ನೂ ಪಾಸಾದ ವಿದ್ಯಾರ್ಥಿಗಳ ಸಂಭ್ರಮ ಹೇಳತೀರದು. ಉತ್ತಮ ಕಾಲೇಜ್ ಗಳಲ್ಲಿ ಸೀಟಿಗಾಗಿ ಪ್ರಯತ್ನ, ಅದಕ್ಕಾಗಿ ಕಾಲೇಜ್ ಪ್ರಾಸ್ಪೇಕ್ಟಸ್ ನ ತರುವುದು ಎಲ್ಲಾ ನೆಡೆದೇ ಇದೆ. ಇದೆಲ್ಲದರ ನಡುವೆ ಕಡಿಮೆ ಅಂಕ ತಗೆದ ವಿದ್ಯಾರ್ಥಿಗಳು ರೀವ್ಯಾಲುವೇಷನ್, ರೀಟೋಟಲಿಂಗೆ ಸಹ ಅರ್ಜಿ ಗುಜರಾಯಿಸಿ ಆಗಿದೆ. ಕಾಡುವ ಪ್ರಶ್ನೆ ಯೆಂದರೆ ಫೇಲಾದ ವಿದ್ಯಾರ್ಥಿಗಳು ಮಾಡಿಕೊಳ್ಳುತ್ತಿರುವ ಅತ್ಮಹತ್ಯ ಅಥವ ಸುಸೈಡ್ ಪ್ರವೃತ್ತಿ...
ಪಿ.ಯು / ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶಗಳು ಹೊರಬಂದ ಹಿಂದಿನ ದಿನದಿಂದಲೇ (ಇಂಟರ್ನೆಟ್ ಪ್ರಕಟಣೆ..) ಹೆಚ್ಚಿನ ವಿದ್ಯಾರ್ಥಿಗಳು ತಾವು "ಫೇಲಾದೆ"ವು ಎಂಬ ಒಂದೇ ಕಾರಣಕ್ಕೆ ಅತ್ಮಹತ್ಯೆಯ ಮೂಲಕ ಸಾವಿಗೆ ಶರಣಾಗಿದ್ದಾರೆ. "ಪರೀಕ್ಷೆಯಲ್ಲಿ ಫೇಲ್, ** ವಿದ್ಯಾರ್ಥಿಗಳ ಅತ್ಮಹತ್ಯೆ" ಎಂದು ಪತ್ರಿಕೆ/ಟಿ.ವಿ ಚಾನಲ್ ಗಳಲ್ಲಿ ಬರುವುದ ಕಂಡರೆ ಮನಕ್ಕೆ ದಿಗಿಲಾಗುತ್ತದೆ. ಕೆಲವು ವಿದ್ಯಾರ್ಥಿಗಳಂತೂ ಪರೀಕ್ಷೆ ಬರೆದ ದಿನವೇ "ಪೇಪರ್ ಸರಿಯಾಗಿ ಬರೆದಿಲ್ಲ" ಎಂಬ "ಕ್ಷುಲಕ" ಕಾರಣಕ್ಕೆ ಅತ್ಮಹತ್ಯೆ ಮಾಡಿಕೊಂಡ ಘಟನೆಗಳು/ಸುದ್ಧಿ ಪರೀಕ್ಷೆ ನೆಡೆದ ಸಮಯದಲ್ಲಿ ಬಂದಿದ್ದವು. ಕೆಲವರು "ಹಾಲ್ ಟಿಕೆಟ್" ದೊರೆಯದ ಕಾರಣಕ್ಕೂ ಸಾವಿಗೆ ಶರಣಾದವರು ಇದ್ದಾರೆ...
ಬಹುಶ: ಇಂದಿನ ಜಗತ್ತಿನ "ಕಾಂಪೀಟಿಷನ್" ಯುಗಕ್ಕೋ, ಪೋಷಕರ "ಅಸೆಗಳ" ಭಾರದ ಒತ್ತಡಕ್ಕೋ, ಅಥವ ತಮ್ಮನ್ನೇ "ಉಹೆಗೆ ನಿಲುಕದಷ್ಟು" ಎತ್ತರಕ್ಕೆ ತಲುಪಿಸಿಕೊಳ್ಳುವ ಅಸೆಗೋ ಏನೋ, ಬಹುತೇಕ ವಿದ್ಯಾರ್ಥಿಗಳು ಒಂಬತ್ತನೆ ಕ್ಲಾಸ್ ಪಾಸಾಗುತ್ತಿದಂತೆ "ಜಗದ ಭಾರ" ವನ್ನ ತಮ್ಮ ಮೈಮೇಲೆ ಹೊತ್ತಿಕೊಂಡಿರುತ್ತಾರೆ. "ಸಾಧಿಸಿಯೇ ತೀರಿಸು...", "ಅವನನ್ನ/ಅವಳನ್ನ ಮೀರಿಸು...", "ಫಸ್ಟೇ ಬಾ.." ಗಳ ಹೊರೆ ಯಾವ ಕಾಲದವರೆಗೂ ತಾನೇ ಹೊರಬಲ್ಲರು...!. ಕೊನೆಗೆ "ಫಲಿತಾಂಶ" ಎಂಬ "ಪಾನ್ಡೋರಾ" ಪೆಟ್ಟಿಗೆ ತೆರೆದಾಗ, ನಿರೀಕ್ಷೆಯ ಸೌಧ ಕಳಚಿಬಿದ್ದು, ಮನ ನೊಂದು ಅಗುವ ಆನಾಹುತಗಳ ಸರಮಾಲೆ - ಈ ಅತ್ಮಹತ್ಯೆಗಳ ಪ್ರಕರಣ..
ಇಂಟರೆಸ್ಟಿಂಗ್ ಅಂದರೆ ನಮ್ಮ ದಕ್ಷಿಣ ಭಾರತದ ರಾಜ್ಯಗಳು ಈ "ಅತ್ಮಹತ್ಯ ಪ್ರಕರಣ" ಗಳ ಸಾಲಿನಲ್ಲಿ "ಬಹಳ" ಮುಂದಿವೆ..!! http://www.rediff.com/news/2004/apr/15spec.htm  ದಲ್ಲಿರುವ ಮಾಹಿತಿಯಂತೆ ಪ್ರತಿತಿಂಗಳು ೧೫ ಜನ ೧೫ ರಿಂದ ೨೫ ವರ್ಷದ ವಯೋಮಾನದವರು ಅತ್ಮಹತ್ಯೆ ಮಾಡಿಕೊಳ್ಳೂತ್ತಿದ್ದಾರೆ. ೨೦೦೨ ರ ಅಂಕಿಗಳಂತೆ ಕರ್ನಾಟಕವು ೧೦,೯೩೪ ಅತ್ಮಹತ್ಯ ಸಾವುಗಳನ್ನ ಕಂಡಿದೆ.. (ಇನ್ನೂ ಹೆಚ್ಚಿನ ಮಾಹಿತಿಯನ್ನು ನೀವು ಮೇಲಿನ ಲಿಂಕಿನಲ್ಲಿ ಓದಬಹುದು...)
ಇನ್ನೊಂದು ತಾಣ (http://www.maithrikochi.org/india_suicide_statistics.htm ) ದಲ್ಲಿ ಸೂಚಿಸಿರುವಂತೆ ವಿಶ್ವಕ್ಕೆ ಶೇಕಡ ೧೦% ಅತ್ಮಹತ್ಯ ಸಾವುಗಳ ಕೊಡುಗೆ ನಮ್ಮ ಭಾರತ ದೇಶದಿಂದೇ ಬರುತ್ತಿದೆ. ಅದು ಇನ್ನೂ ಹೆಚ್ಚಾಗಿ ೧೦.೫ ಪ್ರತಿಶತ ತಲುಪಿ (ಪ್ರತಿ ಲಕ್ಷ ಜನಸಂಖ್ಯೆಗೆ..) ೨೦೦೬ ರ ವರ್ಷ ಮತ್ತು ೧೯೮೦ ರ ವರ್ಷಕ್ಕೆ ತುಲನೆ ಮಾಡಿದರೆ ೬೭% ಪ್ರತಿಶತ ಏರಿಕೆಯಾಗಿದೆ... ನಿಜಕ್ಕೂ ಭಯಪಡುವ ಅಂಶವೆಂದರೆ ಇದು ವರ್ಷದಿಂದ ವರ್ಷಕ್ಕೆ ಏರುತ್ತಲೇ ಹೋಗುತ್ತಿದೆ...!!
ಸಮಾಜದ ಒತ್ತಡ, ಪೋಷಕರ ಒತ್ತಡ, "ನೆರೆಯವರ" ಒತ್ತಡ... ಒಂದೇ-ಎರಡೇ... ಎಲ್ಲಾ "ಒತ್ತಡ" ಗಳ ನಡುವೆ ಇಂದಿನ ಯುಗದಲ್ಲಿ ಬಾಳುತ್ತಿರುವ ವಿದ್ಯಾರ್ಥಿ/ಯುವ ಸಮೂಹ ತಮ್ಮ ಅಸೆ, ಕೋರಿಕೆ ಗಳ ರೆಕ್ಕೆ ಕತ್ತರಿಸಿಕೊಂಡು, ಪರರ "ಕನಸುಗಳ" ನೊಗವ ಬೆನ್ನ ಮೇಲೆ ಹೊತ್ತು... ತಮ್ಮ ದಾರಿಯ ಬಿಟ್ಟು ಇತರರ "ಕನಸಿನ" ಕತ್ತಲ ದಾರಿಯಲ್ಲಿ ನೆಡೆದುಹೋಗುತ್ತಿದ್ದಾರೆ. ಬಹುಶ: ಅವರ ಮನ ಎಷ್ಟು ನೊಂದಿರುತ್ತವೋ ಏನೋ.., ಕೊನೆಗೆ ಸಾವಿನ ಹೆಗಲ ಮೇಲೆ ತಲೆಯಿಟ್ಟು ಮಲಗಿ ಸಂತೋಷ ಪಟ್ಟುಬಿಡುತ್ತಾರೆ...
ಜೀವನ ಕೇವಲ "ಒಂದು ಪರೀಕ್ಷೆ" ಗೆ ಮಾತ್ರ ಸೀಮಿತವಲ್ಲಾ, ಮಾರ್ಕ್ಸ್ ಕಡಿಮೆ ಬಂದರೆ ಮತ್ತೆ ಪ್ರಯತ್ನಿಸಲು "ಸಪ್ಪ್ಲೀಮೆಂಟರಿ" ಪರೀಕ್ಷೆಗಳು ಇದ್ದರೂ, ತಮ್ಮನ್ನೂ ಇನ್ನೂ ಉತ್ತಮ ಪಡಿಸಿಕೊಳ್ಳಲು ಮಾರ್ಗವಿದ್ದರೂ ಸಹ ಜೀವನಕ್ಕೆ "ಕೊನೆಹಾಡುವ" ಕಾರ್ಯಗಳು ಮಾತ್ರ ಎಂದಿನಂತೆ ಸುದ್ದಿಮೂಲಗಳಲ್ಲಿ ವಿರಾಜಿಸುತ್ತಲೇ ಇವೆ...
ಇದೆಲ್ಲದರ ನಡುವೆ ಮನವು "ಥ್ರೀ ಈಡಿಯಟ್ಸ್" ಚಿತ್ರದ ಹಾಡನ್ನು ನೆನೆದು ಕೊರಗುತ್ತದೆ:
ಸಾರಿ ಊಮ್ರ್ ಹಮ್,
ಮರ್ ಮರ್ ಕೆ ಜೀ ಲಿಯೆ..
ಎಕ್ ಪಲ್ ತೊ ಅಬ್ ಹಮೇ
ಜೀನೇ ದೋ ಜೀನೇ ದೋ..
Give me some Sunshine
give me some rain
Give me another chance
wana grow up once again
ವಿದ್ಯಾರ್ಥಿಗಳ/ಯುವ ಮನಸ್ಸಿನಲ್ಲಿ ಮೂಡಿಬರುವ ನೋವು, ದುಗುಡಗಳು ಶಮನವಾಗಿ, ಅವರಿಗೆ ಭವಿಷ್ಯದಲ್ಲಿ ಉತ್ತಮ ಫಲಗಳು ಸಿಕ್ಕಿ, ಅವರ ಎಲ್ಲಾ ಕನಸುಗಳು ಸಾಕರವಾಗುವ ದಿನಗಳು ಮುಂದೆ ಬಂದೇ ಬರುತ್ತವೆ ಎಂಬ ಆಶಯ, ಪೋಷಕರು ಸಹ ತಮ್ಮ "ಕನಸುಗಳ" ಒತ್ತಡವನ್ನು ತಮ್ಮ ಮಕ್ಕಳ ಮೇಲೆ ಹೇರದೆ ಅವರ ಕನಸಿಗೂ ಬೆಲೆ ಕೊಟ್ಟು ಮುಂದಿನ ಉತ್ತಮ-ಸ್ವಾಸ್ಥ ಜನಾಂಗಕ್ಕೆ ಮಾದರಿಯಾಗುವರು ಎಂಬ ಸಣ್ಣ ಬಯಕೆಯೊಂದಿಗೆ ಈ ಲೇಖನ..

ಲೇಖಕರು

ವಿನಯ್_ಜಿ

ಮನದ ಮಾತು...

ಹುಟ್ಟಿದ್ಧು: ಉಡುಪಿ ಓದಿದ್ದು, ಬೆಳೆದದ್ದು: ಬೆಂಗಳೂರು ಹವ್ಯಾಸ: ಇಂಟರ್ನೆಟ್ ಬ್ರೌಸಿಂಗ್, ಬೀದಿ ಸುತ್ತುವುದು..... ( ಅದೆಲ್ಲಾ ಮಾಡಿ ಸಮಯ ಉಳಿದರೆ ಪುಸ್ತಕ ಓದುವುದು.... :) )

ಅನಿಸಿಕೆಗಳು

ಉಮಾಶಂಕರ ಬಿ.ಎಸ್ ಶನಿ, 05/14/2011 - 11:40

ಹಲೋ ವಿನಯ್ ಸರ್,ನೀವು ಹೇಳಿದಂತೆ ಪೋಷಕರ 'ನಿರೀಕ್ಷಾಭಾರ' ಇಂದು ದಿನದಿಂದ ದಿನಕ್ಕೆ ವಿದ್ಯಾರ್ಥಿಗಳ ಮೇಲೆ ಹೆಚ್ಚುತ್ತಲೇ ಇದೆ. ಇದಕ್ಕೆ ಪೂರಕವೆಂಬಂತೆ ನಮ್ಮ ಶಿಕ್ಷಣ (ಅ)ವ್ಯವಸ್ಥೆ ಕೂಡ ಕೊಡುಗೆ ನೀಡುವಲ್ಲಿ ಸಫಲವಾಗಿದೆ. "ಪರೀಕ್ಷೆ ಬರೆದರಷ್ಟೇ ಜೀವನವಲ್ಲ" ಎಂದು ನಮ್ಮ ಪೋಷಕರು ಮತ್ತು  ವ್ಯವಸ್ಥೆಗಳು ತಿಳಿಸುವವರೆಗೂ, ಅದನ್ನು ನಮ್ಮ ಸಮಾಜ ಸಕಾರಾತ್ಮಕವಾಗಿ ಸ್ವೀಕರಿಸುವವರೆಗೂ ಯುವಜನತೆಯ ಆತ್ಮಹತ್ಯೆಗೆ ಕಡಿವಾಣ  ಹಾಕಲಿಕ್ಕೆ ಸಾಧ್ಯವಿಲ್ಲವೆನಿಸುತ್ತದೆನಿಮ್ಮ ಉಮಾಶಂಕರ

ವಿನಯ್_ಜಿ ಶನಿ, 05/14/2011 - 15:04

ಲೇಖನವನ್ನ ಮೆಚ್ಚಿ ಪ್ರತಿಕ್ರಿಯಿಸಿದಕ್ಕೆ ಬಹಳ ಧನ್ಯವಾದಗಳು ಉಮಾಶಂಕರ್ ರವರೆ,
ಹೌದು, ಪೋಷಕರ ಬೌದ್ಧಿಕ ವಿಚಾರ ಮತ್ತು ಶಿಕ್ಷಣದ ವ್ಯವಸ್ಥೆ ಸರಿಹೋಗುವವರೆಗೂ ಇನ್ನೆಷ್ಟು ಯುವ ಜೀವಗಳು ನಲುಗಬೇಕೋ ಆ ದೇವನೇ ಬಲ್ಲ.. ಅದು ಈ ಸ್ಪರ್ಧಾತ್ಮಕ ಯುಗದಲ್ಲಿ ಯಾವ ಪೋಷಕರು ತಾನೇ ತಮ್ಮ ಮಕ್ಕಳು ಹಿಂದೆ ಬೀಳುವುದನ್ನ ಇಷ್ಟಪಡುತ್ತಾರೆ..? ಒತ್ತಡ ಮತ್ತು ನಿರೀಕ್ಷೆ ಹೆಚ್ಚು ಹೆಚ್ಚಾಗಿ ಅನಾಹುತಗಳು ಜಾಸ್ತಿಯಾಗುತ್ತಿವೆ...
-- ವಿನಯ್

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.