ಕೆಲವು ಪದಗಳ ಕಥೆಗಳು
ಸುಮ್ಮನೆ ಒಂದಷ್ಟು ಸಾಲುಗಳಿವೆ ಓದಿಕೊಳ್ಳಿ
ಇದಕ್ಕೆ ಯಾವುದೇ ವಿಶೇಷ ಅರ್ಥಗಳಿಲ್ಲ
ಹುಚ್ಚನ ತಲೆಯೂ ಕೂಡ ಒಮ್ಮೊಮ್ಮೆ
ಸರಿಯಾಗಿ ವರ್ತಿಸುವುದಿದೆ
ಹಾಗೇನಾದರೂ ನಿಮಗಿದು ಅರ್ಥವಾದರೆ
ನಿಜವಾದ ಹುಚ್ಚರಾರು?
ಬಾಲ ಚಂದ್ರ
1) ಅವನು ಪ್ರೇಮಿ
ದಿನಾ ದಿನಕರನಿಗಿಂತ ಮುಂಚೆ ಎದ್ದು ಇಬ್ಬನಿಯಲ್ಲಿ ತೊಯ್ದ ಹೂಗಳನ್ನು ಕೊಯ್ದು ಸುಂದರವಾದ ಗುಚ್ಚ ಮಾಡಿ ಅವಳ ಕಣ್ಣೆದುರು ಇರಿಸುತ್ತಾನೆ
ಅವಳು ಪ್ರೇಯಸಿ
ಒಮ್ಮೆ ಅವನ ಕಣ್ಣುಗಳನ್ನು ದಿಟ್ಟಿಸಿ ನೋಡುತ್ತಾಳೆ , ಮತ್ತೊಮ್ಮೆ ಇಬ್ಬನಿ ಆರಿದ ಹೂಗಳನ್ನು ನೋಡುತ್ತಾಳೇ
ಹೂಗಳನ್ನು ತೆಗೆದು ತಿಪ್ಪೆಗೆಸೆಯುತ್ತಾಳೆ
2)ಸಪ್ತ ಸಮುದ್ರದಾಚೆ, ಏಳು ದ್ವೀಪಗಳಾಚೆ ಹೋದ ರಾಜಕುಮಾರ
ಅಲ್ಲಿದ್ದ ಹುಲಿಯನ್ನು ಗೆದ್ದ , ಹಾವನ್ನು ಗೆದ್ದ, ಏಳು ಸುತ್ತಿನ ಕೋಟೆಯನ್ನೂ
ಮತ್ತು ನರಮಾಂಸ ತಿನ್ನುವ ರಾಕ್ಷಸನನ್ನೂ ಗೆದ್ದ, ಆದರೆ
ನರ ಮನಸು ತಿನ್ನುವ ರಾಜಕುಮಾರಿಗೆ
ಸೋತು ಬಿಟ್ಟ
3) ಶೂರಾಧಿಶೂರ, ಶೂರಮಾರ್ತಾಂಡ, ಅರಿಭಯಂಕರ ,ರಿಪು ಸಂಹಾರಿ, ಕದನ ವಿಹಾರಿ,
ಬಚ್ಚಲು ಮನೆಯಲ್ಲಿ ಜಿರಳೆಗೆ ಹೆದರಿದ
4) ಇಬ್ಬರು ನಿಜವಾದ ಪ್ರೇಮಿಗಳಿದ್ದರು
ಅವರು ಒಬ್ಬರೊನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು
ಅವರು ಮದುವೆಯಾಗುವರೆಗೂ ಸುಖವಾಗಿದ್ದರು
5) ಮೊದಲು ಪ್ರೀತಿಸಿದ
ಇನ್ನೂ ಪ್ರೀತಿಸಬೇಕೆಂಬ ಹಂಬಲವಾಯ್ತು
ಗಾಢವಾಗಿ ಪ್ರೀತಿಸಿದ, ಅತಿಯಾಗಿ ಪ್ರೀತಿಸಿದ, ಹೆಚ್ಚಾಗಿ, ಹುಚ್ಚಾಗಿ
ಉಸಿರುಗಟ್ಟುವ ಹಾಗೆ ಪ್ರೀತಿಸಿದ
ಅವಳು ಇವನನ್ನು ದ್ವೇಷಿಸಲು ಶುರು ಮಾಡಿದಳು
6) ವಿಷ್ಣು ವೈಕುಂಠದಲ್ಲಿ ಹಾವಿನ ಮೇಲೆ ಮಲಗಿ- ಮೆರೆದ
ರುದ್ರ ಕೈಲಾಸದಲ್ಲಿ ನಂದಿಯ ಮೇಲೆ ಕುಳಿತು -ಮೆರೆದ
ಬ್ರಹ್ಮ ಸತ್ಯ ಲೋಕದಲ್ಲಿ ಕಮಲದ ಮೇಲೆ ಕುಂತು -ಮೆರೆದ
ಮಗುವೊಂದು ತಾಯಿ ತೊಡೆಯ ಮೇಲೆ ಹಾಯಾಗಿ ನಿದ್ರಿಸುತ್ತಿತ್ತು
ತ್ರಿಮೂರ್ತಿಗಳು ಶಾನೆ ಬೇಜಾರು ಮಾಡಿಕೊಂಡರು
7) ಒಂದು ಗಿಡ , ಅದರೊಲ್ಲೊಂದು ಮೊಗ್ಗು
ಅದಕ್ಯಾಕೋ ಬಲು ಸಿಗ್ಗು
ಅದು ಅರಳಿತು , ಒಂದು ದುಂಬಿ ಬಂತು
ಅದರ ಮೇಲೆ ಕುಳಿತು , ಅದರ ಮೇಲೆಲ್ಲಾ ಹೊರಳಿ, ಪರಾಗವೆಲ್ಲಾ ಪೂಸಿಕೊಂಡು, ಗಂಧದಲಿ ಮಿಂದು
ಹೊರಟು ಹೋಯಿತು
ಈವಾಗ ನೋಡಿ ಆ ಹೂವನ್ನ
ಅದೇನ್ ಪೊಗರು ಅಂತೀರಿ
ಸಾಲುಗಳು
- Add new comment
- 1606 views
ಅನಿಸಿಕೆಗಳು
ಕೆಲವು ಕತೆಗಳ ತಿರುಳು
ಕೆಲವು ಕತೆಗಳ ತಿರುಳು ಅಲ್ಲಿ-ಇಲ್ಲಿ ಓದಿದ್ದು ಅನ್ನಿಸುತ್ತೆ! ಚೆನ್ನಾಗಿವೆ, ಎಲ್ಲಕ್ಕಿಂತ "ತ್ರಿಮೂರ್ತಿಗಳು ಶಾನೆ ಬೇಜಾರು ಮಾಡಿಕೊಂಡರು..." ತುಂಬಾ ಚೆನ್ನಾಗಿದೆ!
ಥ್ಯಾಂಕ್ಸ್ ಶಿವು
ಥ್ಯಾಂಕ್ಸ್ ಶಿವು
Good one ತ್ರಿಮೂರ್ತಿಗಳು ಶಾನೆ
Good one
ತ್ರಿಮೂರ್ತಿಗಳು ಶಾನೆ ಬೇಜಾರು ಮಾಡಿಕೊಂಡರು
ಎಲ್ಲಾ ಕತೆಗಳೂ ತುಂಬಾ
ಎಲ್ಲಾ ಕತೆಗಳೂ ತುಂಬಾ ಚೆನ್ನಾಗಿದೆ
ಇಂಥಾ ಇನ್ನಷ್ಟು ಕಥೆಗಳನ್ನು ಬರೆಯಿರಿ
ಪ್ಲೀಸ್
4) ಇಬ್ಬರು ನಿಜವಾದ
4) ಇಬ್ಬರು ನಿಜವಾದ ಪ್ರೇಮಿಗಳಿದ್ದರು
ಅವರು ಒಬ್ಬರೊನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು
ಅವರು ಮದುವೆಯಾಗುವರೆಗೂ ಸುಖವಾಗಿದ್ದರು
ತುಂಬಾ ಚೆನ್ನಾಗಿದೆ.. :) ಬರೆಯುತ್ತಿರಿ. ಬರುತ್ತಿರುವೆ.
2,3,4 ಮತ್ತು 6 ತುಂಬ
2,3,4 ಮತ್ತು 6 ತುಂಬ ಚೆನ್ನಾಗಿತ್ತು. ಇನ್ ಜ್ಯೋಯಿ ಮಾಡಿದೆ.ಇಂತದೇ ಇನ್ನೂ ಬರೆಯಿರಿ.
ಧನ್ಯವಾದಗಳು.