Skip to main content

ಹೌದು ಅವಳೇ ಇದು !!

ಬರೆದಿದ್ದುJuly 24, 2009
6ಅನಿಸಿಕೆಗಳು

ಟೈಟ್ ಜೀನ್ಸ್, ಫಿಟ್ ಟೀ ಶರ್ಟ್ ಪೋನಿ ಟೈಲ್, ಸ್ಮಾರ್ಟ್ ಹೈಟ್ ಮೊನ್ ಬ್ಯೂಟಿ, ಕೈನೆಟಿಕ್ ಹೋಂಡ ಸನ್ ಗ್ಲಾಸ್ ತಲೆ ಮೇಲೆ, ಹೌದು ಅವಳೇ ಇದು. ಪ್ರತಿ ತಿಂಗಳು ನನ್ನ ಬರ್ತ್ ಡೇ ಎಂದು ಹೇಳಿ ಹೊಸ ಹೊಸ ಹುಡುಗರನ್ನು ಸ್ನೇಹಿಸಿ ಗಿಫ್ಟ್ ಗಳನ್ನೂ ಪಡಯುತ್ತಿದ್ದ, ಸ್ಮಾರ್ಟ್ ಹುಡುಗರನ್ನು ಒಂಟಿಯಾಗಿ ಸಿಕ್ಕಿ ನಿಮ್ಮ ಡ್ರೆಸ್ ತುಂಬ ಚೆನ್ನಾಗಿದೆ ಅಂತ ಹೇಳಿ ಅವರಿಂದ ಐಸ್ ಕ್ರೀಂ ಬಿಟ್ಟಿ ಯಾಗಿ ತಿನ್ನುತ್ತಿದ್ದ , ಹೌದು ಅವಳೇ ಇದು.

ತನ್ನ ಕೈನೆಟಿಕ್ ಪೆಟ್ರೋಲ್ ಬಂಕ್ ಗಿಂತ ಸುಮಾರು ೨೦ ಅಡಿ ದೂರದಲ್ಲಿ ನಿಲ್ಲಿಸಿ ಯಾರಾದರು ಸ್ಮಾರ್ಟ್ ಹುಡುಗ ಬರುವಾಗ ಸ್ವಾರಿರೀ ನಾನು ಪರ್ಸ್ ಮರೆತು ಬಂದೆ ಅಂತ ಹೇಳಿ ೧ ಲೀಟರ್ ಪೆಟ್ರೋಲ್ ಹಾಕಿಸ್ರಿ ಈಗ ತಂದು ಕೊಡ್ತೀನಿ ದುಡ್ಡು ಅಂತ ಹೇಳಿ ಫುಲ್ ಟ್ಯಾಂಕ್ ಮಾಡುಸ್ಕೊಲ್ತಿದ್ದ, ಲೆಕ್ಚರರ್ ಗಳಿಗೆ ಬುಜ ತಾಗಿಸಿ ಪ್ರಾಕ್ಟಿಕಲ್ ನಲ್ಲಿ ಮಾರ್ಕ್ಸ್ ಗಿಟ್ಟಿಸುತ್ತಿದ್ದ , ಬಿಹಾರಿ ಹುಡುಗರಿಗೆ ಸ್ವಲ್ಪ ಪ್ರೀತಿ ವೈಯಾರ ತೋರಿಸಿ ಜೊತೆಯಲ್ಲಿ ಹೋಗಿ ತನಗೆ ಬೇಕಾದ ಡ್ರೆಸ್ ವಸ್ತುಗಳನ್ನು ತಂದು ಕೊಳ್ಳುತ್ತಿದ್ದ ಹೌದು ಅವಳೇ ಇದು ,.

ನಮ್ಮ ಕಾಲೇಜ್ ನಲ್ಲಿ ಮೋನ್ ಬ್ಯೂಟಿ ಎಂಬ ಹೆಸರಲ್ಲಿ ಕರೆಯಲ್ಪಡುತ್ತಿದ್ದ , ರಾಣಿ ಯಂತೆ ಮೆರಯುತ್ತಿದ್ದ , ಎಲ್ಲರನ್ನು ಹಾಯ್ ಬಾಯ್ ಎಂದು ಸಂದರ್ಬಕ್ಕೆ ಬೇಕಂತೆ ಸ್ನೇಹಿತರನ್ನು ಮಾಡಿ ಕೊಳ್ಳುತ್ತಿದ್ದ , ಪಯಿಂಗ್ ಗೆಸ್ಟ್ ಆಗ್ಯು ಪೈಯ್ ಮಾಡದೆ ವಿಜ್ರಂಬಿಸುತ್ತಿದ್ದ , ಹೌದು ಅವಳೇ ಇದು ., !

ಆದರೆ ಇವಳಿಗೆನಾಗಿದೆ ಇಂದು ಈ ಆಸ್ಪತ್ರೆಯಲ್ಲಿ ಯಾಕೆ ಮಲಗಿದ್ದಾಳೆ , ಇವಳ ಕಣ್ಣು ಗಳಿಗೆನಾಗಿದೆ ಇವಳ ಸುತ್ತ ಮುತ್ತ ಯಾರು ಇಲ್ಲವಲ್ಲ, ಇದೇನು ಬಿಳಿ ಬಟ್ಟೆಯಲ್ಲಿ ಮಲಗಿದ್ದಾಳೆ , ಪಕ್ಕದಲ್ಲಿ ವೀಲ್ ಚೇರ್ ಇದೆ ಕೈನೆಟಿಕ್ ಎಲ್ಲಿ ! ಇವಳ ಜೀನ್ಸ್ ಎಲ್ಲಿ ಸನ್ ಗ್ಲಾಸ್ ಇಡುತ್ತಿದ್ದ ತಲೆಯಮೇಲೆ ಏನೋ ವೈರ್ ಗಳಿವೆ , ಗ್ಲೂಕೋಸ್ ದ್ರಿಪ್ಸ್ ತೂಗುತ್ತಿದೆ ಪೆಟ್ರೋಲ್ ಬಂಕ್ ?

ಇವಳನ್ನ ಟಿ ವಿ ಯಲ್ಲಿ ಯಾಕೆ ತೋರಿಸುತ್ತಿದ್ದಾರೆ ,. !!!!!! ????? !!!! ???? ಒಂದ್ನಿಮಿಷ ,,,,

ಈಗ ತೋರಿಸುತ್ತಿರುವ ಮಹಿಳೆಯಾ ಸಂಬಂದ ಪಟ್ಟವರು ಯಾರಾದರು ಇದ್ದಲ್ಲಿ ಕೂಡಲೇ ಈ ನಂಬರ್ ಗೆ ಸಂಪರ್ಕಿಸ ತಕ್ಕದ್ದು ಅಥವಾ ಈಗ ಹೇಳುವ ಆಸ್ಪತ್ರೆ ಗೆ ಸಂಪರ್ಕಿಸ ತಕ್ಕದ್ದು ... ,.,.,.,.,..,.,,.,.,.,.,.,.,.,.,.
[img_assist|nid=4862|title=ಹೌದು ಅವಳೇ ಇದು|desc=ಹೌದು ಅವಳೇ ಇದು|link=none|align=left|width=150|height=113]

ಲೇಖಕರು

ಇಸ್ಮಾಯಿಲ್ ಶಿವಮೊಗ್ಗ

" ಮಲೆನಾಡ ಮನಸ್ಸು ಮರಳುಗಾಡಿನಲ್ಲಿ "

I am a simple person like you
ನನ್ನದು ಮಲೆನಾಡಿನ ತವರೂರು ಶಿವಮೊಗ್ಗ, ಕಲಿತದ್ದು ಸಹ್ಯಾದ್ರಿ ಕಾಲೇಜ್, ಈಗ ಇರುವುದು ಅಬುಧಾಬಿ - ಯು. ಎ. ಯಿ .
ಓದುವುದು, ಬರಿಯುವುದು, ಛಾಯಾಗ್ರಹಣ, ಇಂಪಾದ ಹಾಡುಕೆಳುವುದು,,,,,,,
ನಿಮ್ಮೊಂದಿಗೆ ನಿಮ್ಮ ಭಾಷೆಯಲ್ಲಿ ಮಾತನಾಡುವುದು ...!

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 07/25/2009 - 11:12

ಲೆಖನ ನೈಜ ವಾಗಿದೆ....ಸುಪೆರ್.

ಧನ್ಯವಾದಗಳು ಸಾರ್

ನಾಗರಾಜ್ durga (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 07/26/2009 - 18:43

ಗುರುವೇ ನಿಜವಾಗ್ಲೂ ನೀ ಬರೆದಿರೋದು ಸತ್ಯ ಹೀಗೆ ಬದುಕನ್ನು ಅತಿ ವೇಗವಾಗಿ ಅನುಭವಿಸಿ ಮುಗಿಸಿಬೇಕೆನ್ನುವ ಆತುರದಲ್ಲಿ ಅಡ್ಡ ದಾರಿ ಹಿಡಿದ್ರೆ ಇಂತದೇ ಕ್ಲೈಮಾಕ್ಸ ಸಿಗುತ್ತೆ Gud work I...Smile Bhai....

ನಾಗರಾಜುರವರೆ
ಧನ್ಯವಾದಗಳು.

ವಿಕ್ರಂ ಮಂಗಳ, 07/28/2009 - 12:38

ಚೆನ್ನಾಗಿ ಬರ್ದಿದ್ದೀರಾ...

ವಿಕ್ರಮ ರವರೆ
ಧನ್ಯವಾದಗಳು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.