
ನಗುವು ಬರುತಿದೆ
ನಗುವು ಬರುತಿದೆ ಎನಗೆ
x~x~x~x~x~x~x~x~x~x
ನಗುವು ಬರುತಿದೆ ಎನಗೆ
ನಗುವು ಬರುತಿದೆ
ಜಗದೊಳಿರುವ ರಸಿಕರೆಲ್ಲ
ನಾಟಕ ಮಾಡುವುದ ಕಂಡು
ನಗುವು ಬರುತಿದೆ ಎನಗೆ
ನಗುವು ಬರುತಿದೆ
ರಾಶಿ ರಾಶಿ ಗ್ರಂಥ ಓದಿ
ಜಪತಪಗಳ ಗೈದು ಕೊನೆಗೆ
ನೆರೆಯ ತರುಣಿ ಬರುತಲಿರಲು
ಬಗ್ಗಿ ನೋಳ್ಪರನ್ನು ಕಂಡು
ನಗುವು ಬರುತಿದೆ ಎನಗೆ
ನಗುವು ಬರುತಿದೆ
ದ್ರಿಕ್ಸ್ ವಾಲ್ ರಾತೀಬೆಂದು
ದಿನವು ಗುಣುಗಿ ಕುರ್ ಆನ್ ಪಠಿಸಿ
ಲವ್ ಜಿಹಾದ್ ಖೆಡ್ಡದಲ್ಲಿ
ಕೆಡವಿ ಸುಡುವರನ್ನು ಕಂಡು
ನಗುವು ಬರುತಿದೆ ಎನಗೆ
ನಗುವು ಬರುತಿದೆ
ಜಾತಿಬೇಧ ಸಲ್ಲದೆನುತ
ನೀತಿ ನಿಯಮ ರೂಪಿಸುತ್ತ
ಜಾತಿ ಯಾವುದೆಂದು ಅರಿತು
ಕೆಲಸ ನೀಡುವವರ ಕಂಡು
ನಗುವು ಬರುತಿದೆ ಎನಗೆ
ನಗುವು ಬರುತಿದೆ
ಕೋಟಿ ಕೋಟಿ ಸಾಲ ತಂದು
ಮೇಟಿಗಾಗಿ ಸುರಿದೆವೆನುತ
ಮೇಟಿಸುತರ ಭೂಮಿ ನುಂಗೊ
ಕಾಂಕ್ರೀಟು ಬನದ ತೆಣೆಯ ಕಂಡು
ನಗುವು ಬರುತಿದೆ ಎನಗೆ
ನಗುವು ಬರುತಿದೆ
ಸಾಲು ಸಾಲು ಕವಿತೆ ಬರೆದು
ಒಡಲ ನಂಜು ಹೊರಗೆ ಸುರಿದು
ಬರೆದ ಖುಷಿಗೆ ತಂಪಿಗೆಂದು
ಕ್ವಾಟ್ರು ನುಂಗೋರ ಕಂಡು
ನಗುವು ಬರುತಿದೆ ಎನಗೆ
ನಗುವು ಬರುತಿದೆ
ಬಟ್ಟೆ ಬಿಚ್ಚಿ ಕುಣಿವ ತರುಣಿ
ಕಣ್ಮನಗಳ ತುಂಬಿ ತುಳುಕೆ
ಪಟ್ಟದರಸಿ ಸೀರೆ ಸೆರಗು
ತುಸು ಜಾರಿದರು ಒದೆವರ ಕಂಡು
ನಗುವು ಬರುತಿದೆ ಎನಗೆ
ನಗುವು ಬರುತಿದೆ
ಸಾಲುಗಳು
- Add new comment
- 1630 views
ಅನಿಸಿಕೆಗಳು
ವಾಸ್ತವಕ್ಕೆ ಹತ್ತಿರವಾದ ಕವನ
ವಾಸ್ತವಕ್ಕೆ ಹತ್ತಿರವಾದ ಕವನ ತುಂಬಾ ಚೆನ್ನಾಗಿದೆ.
ತುಂಬಾ ಥ್ಯಾಂಕ್ಸ್ ಸರ್. ನಿಮ್ಮ
ತುಂಬಾ ಥ್ಯಾಂಕ್ಸ್ ಸರ್. ನಿಮ್ಮ ಪಿಸು ಮಾತೂ ಅಷ್ಟೇ, ತುಂಬಾ ಸೂಪರಾಗಿವೆ ಒಂದಕ್ಕಿಂತ ಒಂದು.
ನಾನು ಅಂಕ ಕೊಡುವ ಆಯ್ಕೆಯಲ್ಲಿ ಎಷ್ಟು ಸಲ ಪ್ರೆಸ್ ಮಾಡಿದರು ಓಟ್ ಬೀಳೋದಿಲ್ಲ. ಯಾಕೆಂತ ಗೊತ್ತಾಗುವುದಿಲ್ಲ.
ಜಯರಾಮ್ ಅವರೆ ಓಟು ಬೀಳದೆ
ಜಯರಾಮ್ ಅವರೆ ಓಟು ಬೀಳದೆ ಇರುವುದಕ್ಕೆ ಎನೋ ತಾಂತ್ರಿಕ ಲೋಪ ದೋಷ ಕಾರಣ ಅನ್ಸುತ್ತೆ..! ಆದ್ರೆ ನಂಗೆ ಓಟು ಬೀಳುವುದು ಮುಖ್ಯ ಅಲ್ಲ.. ನೀವು ನನ್ನ ಲೇಖನ ಓದಿ ನನ್ನ ಪ್ರೋತ್ಸಾಹಿಸುತ್ತೀರಲ್ಲ ಅದು ನಂಗೆ ತುಂಬಾನೆ ಖುಷಿ ಕೊಡುತ್ತೆ..! ನಿಮಗೂ ಒಳ್ಳೆಯ ಲೇಖನ ಬರೆಯುವ ಸಾಮಾರ್ಥ್ಯ ಇದೆ.ಖಂಡಿತ ಬರೆಯಿರಿ. ಧನ್ಯವಾದಗಳೊಂದಿಗೆ ಪ್ರವೀಣ್..!
ಈ ಲೆಖನ ತು೦ಬಾ ಚೆನ್ನಾಗಿದೆ
ಈ ಲೆಖನ ತು೦ಬಾ ಚೆನ್ನಾಗಿದೆ
ಪ್ರಿಯ ಗೆಳೆಯ ಶಾಂಬನಗೌಡರೇ, ನಿಮ್ಮ
ಪ್ರಿಯ ಗೆಳೆಯ ಶಾಂಬನಗೌಡರೇ, ನಿಮ್ಮ ಅನಿಸಿಕೆಗೆ ಧನ್ಯವಾದಗಳು.
ನಾನು ಇನ್ನೂ ಅನೇಕ ಕವನ ಕತೆ ಇತ್ಯಾದಿಗಳನ್ನು ಬರೆಯರುವೆನು. ಓದಿ ಪ್ರೀತಿಯಿಂದ ಅನಿಸಿಕೆ ಬರೆಯಿರಿ. ನಿಮ್ಮ ಮಿತ್ರ ಜಯರಾಮ್