ಮದುವೆ ಎ೦ಬುದು ನಮ್ಮ ಸಮಾಜದಲ್ಲಿರುವ ಸುಂದರವಾದ ಒಂದು ಸಂಸ್ಥೆ ಮತ್ತು ಎರಡು ಹೃದಯಗಳ
ನಡುವೆ ಬೆಸೆಯುವ ಬಂಧ. ಕೆಲವರು ಮದುವೆಯ ನಂತರ ಜೀವನ ಸ್ವರ್ಗ, ನನ್ನ ಬಾಳಸಂಗಾತಿಯಿಂದಾಗಿ
ನನ್ನ ಬದುಕು ಸುಂದರವಾಯಿತು ಅಂದರೆ ಮತ್ತೆ ಕೆಲವರು ಮದುವೆ ಎಂಬ ಪದ ಕೇಳಿದರೆ
ದುಃಸ್ವಪ್ನ ಕಂಡಂತೆ ಬೆಚ್ಚಿ ಬೀಳುವುವುದರ ಜೊತೆಗೆ ಮದುವೆಯ ಜೀವನ ನರಕ ಎಂಬ
ಸರ್ಟಿಫಿಕೆಟ್ ಕೊಟ್ಟು ಬಿಡುತ್ತಾರೆ.
ಮದುವೆಯನ್ನು ನರಕ, ಸ್ವರ್ಗ ಎಂದು ಹೇಳುವವರಿಬ್ಬರೂ ಮದುವೆಯಾಗುವಾಗ ನೂರಾರು ಸುಂದರ
ಕನಸ್ಸುಗಳಿಂದ ಹೊಸ ಬಾಳಿಗೆ ಕಾಲಿಟ್ಟಿರುತ್ತಾರೆ. ಆದರೆ ನಂತರ ಅವರು ರೂಪಿಸಿಕೊಂಡ
ಜೀವನದಿಂದಾಗಿ ಅವರ ಜೀವನ ವಿಚಿತ್ರ ತಿರುವುಗಳನ್ನು ಪಡೆದಿರುತ್ತದೆ.
ಅದರಲ್ಲೂ ಇತ್ತೀಚಿಗೆ ವಿಚ್ಛೇದನ ಪಡೆಯುವವರ ಸಂಖ್ಯೆ ಕೂಡ
ಹೆಚ್ಚಾಗುತ್ತದೆ. ಈ ರೀತಿ ವಿಚ್ಛೇದನಕ್ಕೆ ಕಾರಣಗಳೇನು ಎಂದು ನೋಡಿದಾಗ ಈ ಕೆಳಗಿನ
ಪ್ರಮುಖ ಅಂಶಗಳು ಕಂಡುಬರುತ್ತವೆ.
ಯೋಚನೆಯಲ್ಲಿ ಹೊಂದಾಣಿಕೆಯಿಲ್ಲದಿರುವುದು: ಗುಣದಲ್ಲಿ
ಒಬ್ಬರಿಗಿಂತ ಒಬ್ಬರು ಭಿನ್ನವಾಗಿರುವುದು ಸಹಜ. ಆದರೆ ಗುಣಗಳನ್ನು ಹೊಂದಾಣಿಕೆ
ಮಾಡಿಕೊಂಡು ಹೋಗಬೇಕು. ಒಳ್ಳೆಯ ವಿಷಯಗಳಿಗೆ ಹಠ ಇರಬೇಕು. ಆದರೆ ಹಠದಿಂದಾಗಿ ಜೀವನ
ಹಾಳಾಗಬಾರದು. ಮದುವೆಯ ನಂತರ ಸ್ವಭಾವವನ್ನು ಸ್ವಲ್ಪ ಬದಲಾಯಿಸಬೇಕಾಗುತ್ತದೆ. ಆದರೆ
ಹೆಚ್ಚಿನ ದಂಪತಿಗಳಲ್ಲಿ ಆ ಹೊಂದಾಣಿಕೆಯ ಗುಣ ಇಲ್ಲದಿರುವುದು ವಿಚ್ಛೇದನಕ್ಕೆ ಪ್ರಮುಖ
ಕಾರಣವಾಗಿದೆ.
ತಪ್ಪು ತಿಳಿಯುವುದು: ಒಬ್ಬರ ಬಗ್ಗೆ ಮತ್ತೊಬ್ಬರಲ್ಲಿ ತಪ್ಪು ಭಾವನೆ, ಅವರ ಬಗ್ಗೆ ಗೌರವ ಇಲ್ಲದಿರುವುದು ಈ ರೀತಿ ಇದ್ದರೆ ಸಂಸಾರ ನರಕನೇ ಆಗುವುದು!
ಮಾತುಕತೆ ಕಡಿಮೆ: ಎಷ್ಟೋ ಸಂಸಾರದಲ್ಲಿ ಗಂಡ-ಹೆಂಡತಿ ನಡುವೆ
ಸರಿಯಾಗಿ ಮಾತುಕತೆನೇ ಇರುವುದಿಲ್ಲ. ಒಬ್ಬರ ಭಾವನೆಗಳನ್ನು ಮತ್ತೊಬ್ಬರು
ಅರ್ಥೈಸಿಕೊಳ್ಳುವುದಿಲ್ಲ. ಈ ರೀತಿ ಇದ್ದರೆ ಇಬ್ಬರ ನಡುವೆ ಭಾಂದವ್ಯ ಗಟ್ಟಿಯಾಗಲು
ಸಾಧ್ಯವಿಲ್ಲ.
ನಂಬಿಕೆ ಇಲ್ಲದಿರುವುದು: ನಂಬಿಕೆ ಎಂಬುದು ಇಲ್ಲದ ಮೇಲೆ ಸಂಸಾರ ನಡೆಸುವುದು ಕಷ್ಟವಾಗುತ್ತದೆ. ನಂಬಿಕೆ ಇದ್ದರೆ ಎಂತಹ ಸಮಸ್ಯೆಯನ್ನೂ ಸುಲಭವಾಗಿ ನಿವಾರಿಸಬಹುದು.
ಅದೇ ದಾಂಪತ್ಯ ಜೀವನ ಸ್ವರ್ಗ ಅನ್ನುವವರು 3 ಗುಣಗಳನ್ನು ತಮ್ಮ ದಾಂಪತ್ಯದ ಬದುಕಿನಲ್ಲಿ ಅಳವಡಿಸಿಕೊಂಡಿರುತ್ತಾರೆ.
1. ಸ್ನೇಹ
2. ಸ್ವಾತಂತ್ರ್ಯ
3. ಕ್ಷಮಿಸುವ ಗುಣ
-ಸತೀಶ್ ಎಸ್ ಗೌಡ
ಅನಿಸಿಕೆಗಳು
ಸತೀಶ್ ಅವರೆ ನಿಮ್ಮ ಪ್ರಕಾರ ಮದುವೆ
ಸತೀಶ್ ಅವರೆ ನಿಮ್ಮ ಪ್ರಕಾರ ಮದುವೆ ಎನ್ನುವುದು ಎನು?
ಸತೀಶ್ ಅವರೆ ನಿಮ್ಮ ಪ್ರಕಾರ ಮದುವೆ ಎನ್ನುವುದು ಎನು?
ಮಾನ್ಯರೇ, ಒೞೆಯ ಅಭಿಪ್ರಾಯ. ಹಾಗೂ
ಮಾನ್ಯರೇ, ಒೞೆಯ ಅಭಿಪ್ರಾಯ. ಹಾಗೂ ಒೞೆಯ ಸಲಹೆ ಕೂಡ. ಇಂತಹ ಚಿಂತನ,ಮಂಥನ, ಲೇಖನಗಳು
ಹೆಚ್ಚಲಿ.
ಮಾನ್ಯರೇ, ಒೞೆಯ ಅಭಿಪ್ರಾಯ. ಹಾಗೂ ಒೞೆಯ ಸಲಹೆ ಕೂಡ. ಇಂತಹ ಚಿಂತನ,ಮಂಥನ, ಲೇಖನಗಳು
ಹೆಚ್ಚಲಿ.
- 937 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ