
ಸಾಧನೆಯ ಹಾದಿಯಲ್ಲಿ..!
ಪ್ರತಿಯೊಬ್ಬ ವ್ಯಕ್ತಿಯೂ ಹುಟ್ಟುತ್ತಲೇ ಒಂದಿಲ್ಲೊಂದು ಕರ್ತವ್ಯಗಳನ್ನು ನಿಭಾಯಿಸಿ ಜೀವನದಲ್ಲಿ ಯಶಸ್ಸು ಗಳಿಸಿ ತಾವು ಮಾಡುವ ಎಲ್ಲಾ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಸಾಧಿಸ ಬೇಕೆಂಬ ಛಲವನ್ನು ಮನದೊಳಗೆ ಬಿತ್ತಿಸಿಕೊಂಡೇ ಜನ್ಮ ಪಡೆದಿರುತ್ತಾರೆ. ಆದರೆ ಕೆಲವರಿಗೆ ಕೆಲವು ದೈಹಿಕ, ಮಾನಸಿಕ, ನ್ಯೂನತೆಗಳಿದ್ದು ಅವರ ಮನ ಬಯಸಿದಂತೆ ಏಳಿಗೆಯತ್ತ ಮುಂದುವರೆಯಲು ಸಾಧ್ಯವಾಗದೇ ಇರಲೂಬಹುದು.
ಕೆಲವರಿಗೆ ಎಲ್ಲಾ ಇದ್ದರೂ ಸಾಕಷ್ಟು ಆರ್ಥಿಕ ಮಾನಸಿಕ ಬೆಂಬಲ ವಿಲ್ಲದೇ ಅಂತಾ ಎಷ್ಟೊ ಕನಸುಗಳನ್ನು ನನಸಾಗಿಸಿಕೊಲ್ಲಲು ಸಾಧ್ಯವಾಗದೇ ಕಮರಿಹೋಗಬಹುದು. ಅಂತಹಾ ಒಂದು ಇಕ್ಕಟ್ಟಿನ ಪರಿಸ್ಥಿತಿಯಲ್ಲೂ ನಾನು ಮುನ್ನಡೆಯಬೇಕು, ಎಲ್ಲರಂತೆ ನಾನೂ ಏನಾದರೂ ಸಾಧಿಸಿ ತೋರಿಸಿ ಜೀವನದಲ್ಲಿ ಎದ್ದು ನಿಲ್ಲಬೇಕು ಎಂಬ ಛಲದೊಂದಿಗೆ ಬದುಕಿ ಮುನ್ನಡೆದು ಬಾಲ್ಯದಿಂದಲೂ ಸಾಕಷ್ಟು ಕಷ್ಟ ಕಾರ್ಪಣ್ಯಗಳು ತಿರಸ್ಕಾರ ಇತ್ಯಾದಿಗಳನ್ನು ಎದುರಿಸುತ್ತಾ ಬೆಳೆಯುತ್ತಿದ್ದಾನೆ ಒಬ್ಬ ವ್ಯಕ್ತಿ. ಹಿಂದೊಮ್ಮೆ ಅದೇ ತಿರಸ್ಕರಿಸುತ್ತಿದ್ದ ಜನರು ಈಗ ಆ ಒಬ್ಬ ವ್ಯಕ್ತಿಯನ್ನು ನೋಟ ಮಾತ್ರದಿಂದಲೇ ಆತನನ್ನು ಗುರುತಿಸುತ್ತಿದ್ದಾರೆ, ಹಾಡಿ ಹೊಗಳುತ್ತಿದ್ದಾರೆ. ಅಂತಾ ಒಬ್ಬ ವ್ಯಕ್ತಿಯ ಬಗ್ಗೆ ಈ ಲೇಖನದಲ್ಲಿ ಒಂದಿಷ್ಟು ಮಾಹಿತಿ ನೀಡುತ್ತಿರುವೆ.
ವಿಶಾಲ ಭಾರತದ ಮುಕುಟವಾದ ಜಮ್ಮು ಕಾಶ್ಮೀರ ರಾಜ್ಯದ ಉಧಮ್ ಪುರ ಜಿಲ್ಲೆ ಮಜೋರಿ ಗ್ರಾಮದ ಒಂದು ಸಾಮಾನ್ಯ ಬಡ ಕುಟುಂಬದಲ್ಲಿ 1979 ರಲ್ಲಿ ಜನಿಸಿದ್ದು ವಿಕಲಾಂಗನಾಗಿ. ಎರಡೂ ಕೈಗಳು ಮತ್ತು ಬಲಗಾಲು ಸ್ವಾದೀನವಿಲ್ಲದೇ ಒಂದು ರೀತಿಯಲ್ಲಿ ಸುತ್ತಮುತ್ತಲಿನವರಿಂದ ತಿರಸ್ಕಾರ ಮನೋಭಾವದಿಂದ ನೋಡಲ್ಪಟ್ಟರೂ ತಂದೆ ತಾಯಿಯರ ಪ್ರೀತಿಗೇನೂ ಕಡಿಮೆಯಾಗದಂತೆ ಲಾಲಿಸಿ ಪಾಲಿಸಿ ಬೆಳೆಸಿ ಅವರ ಕೈಗೆಟಕುವಷ್ಟು ವಿಧ್ಯಾಭ್ಯಾಸ ಮಾಡಿಸಿದರಂತೆ. ಇವನೊಬ್ಬ ಹುಟ್ಟು ವಿಕಲಾಂಗ ಇವನಿಗೇಕೆ ವಿಧ್ಯಾಭ್ಯಾಸ, ಕಲಿತು ಏನುತಾನೇ ಮಾಡಬಲ್ಲ ಎಂದೆಲ್ಲಾ ಹೇಳುತ್ತಾ ಹಂಗಿಸುತ್ತಿದ್ದ ಪರಿಸರದಲ್ಲಿ ಬೆಳೆದನಂತೆ. ಬೇರೆಯವರ ತಿರಸ್ಕಾರ ಮನೋಭಾವ ಹೆಚ್ಚಿದಂತೆಲ್ಲಾ ಅವನ ಮನದಲ್ಲಿ ನಾನೂ ಯಾಕೆ ಸ್ವಾವಲಂಭಿಯಾಗಿ ಯಾರಿಗೇನೂ ಕಡಿಮೆಯಿಲ್ಲ ಎಂದು ಬದುಕಿ ತೋರಿಸಬಾರದು ಎಂಬ ಛಲ ಮನದಲ್ಲಿ ದಿನೇ ದಿನೇ ಹೆಚ್ಚಾಗುತ್ತಿತ್ತಂತೆ. ಹಾಗಾಗಿ ಚಿಕ್ಕ ವಯಸ್ಸಿನಲ್ಲೇ ಎಡಗೈ ಮತ್ತು ಕಾಲಿನ ಆಧಾರದಮೇಲೆ ಪೆನ್ಸಿಲ್ ಪೆನ್ ಹಿಡಿದು ಬರೆಯುವುದು ಚಿತ್ರ ಬಿಡಿಸುವುದು ಕಲಿಯತೊಡಗಿದನಂತೆ ಅವನ ಪ್ರೈಮರಿ ಶಾಲೆಯಲ್ಲಿ ಮೂರಮನೇ ತರಗತಿ ಓದುವಾಗ ಒಬ್ಬ ಗುರುಗಳ ಪ್ರೋತ್ಸಾಹದಿಂದ. ಅದರಂತೆಯೇ ಬೆಳೆದು 12ನೇ ತರಗತಿ ಓದಿಮುಗಿಸುವ ಹೊತ್ತಿಗೆ ಚಿತ್ರಕಲೆ ಕರಗತ ಮಾಡಿಕೊಂಡು ಅದಾದ ನಂತರ ಕೆಲವು ಕಲಾ ಪ್ರದರ್ಶನಗಳಲ್ಲಿ ಪಾಲ್ಗೊಂಡು ಅವನೇ ರಚಿಸಿದ ವರ್ಣ ಚಿತ್ರಗಳನ್ನು ಪ್ರದರ್ಶಿಸಿ ಕೆಲವಾರು ಪದಕ ಪ್ರಸಶ್ತಿ ಗಳನ್ನೂ ಪಡೆದನಂತೆ. ಆಗ ಅವನ ಮನೋಭಲ ವೃದ್ಧಿಸಿ ಇನ್ನೂ ಹೆಚ್ಚುಹೆಚ್ಚು ಸಾಧಿಸಬೇಕೆಂಬ ಛಲ ಪ್ರಭಲವಾಗತೊಡಗಿತಂತೆ. ಕ್ರಮೇಣ ಜನರು ಅವನ ಪ್ರತಿಬೆಯನ್ನು ಗುರುತಿಸಿ ಸಹಕರಿಸತೊಡಗಿದರಂತೆ.
ಆ ಕಲಾವಿದನ ಪರಿಚಯ ಅಕಸ್ಮಾತ್ತಾಗಿ ನಾನು ದೆಹಲಿಯಲ್ಲಿದ್ದಾಗ ಕಾಶ್ಮೀರ ಪ್ರವಾಸ ಮಾಡುತ್ತಿದ್ದಾಗ ಆಯ್ತು. ಅವನ ಚಿತ್ರಕಲೆಯನ್ನು ನೋಡಿ ದಂಗಾಗಿಹೋದೆ..! ಎಲ್ಲಾ ಇದ್ದೂ ಇಲ್ಲದವರಂತೆ ಬೇರೆ ಜನರಿಗೆ ತೊಂದರೆ ಕೊಡುತ್ತಾ ಲೋಓಟಿ ಮಾಡುತ್ತಾ ಜೀವನ ಸಾಗಿಸುವ ಎಷ್ಟೋ ಮಂದಿ ತುಂಬಿ ತುಳುಕುತ್ತಿರುವ ಇಂತಾ ನಾಡಿನಲ್ಲಿ ತಾನು ತಂದೆ ತಾಯಿಗಳಿಗೂ ಸಮಾಜಕ್ಕೂ ಒಂದು ಹೊರೆಯಾಗದೇ ಸ್ವಾವಲಂಬಿಯಾಗೆ ಎದ್ದುನಿಂತು ಬೆಳೆದು "ನಾನೂ ಯಾರಿಗೇನೂ ಕಡಿಮೆಯಿಲ್ಲ" ಎಂದು ಸಾಧಿಸಿ ತೋರಿಸಬೇಕೆಂದು ಪಣತೊಟ್ಟು ಅದರಂತೆಯೇ ಸಾಧಿಸಿ ತೋರಿಸಿ ಕೈಲಾಗದು ಎಂದು ಕುಳಿತಲ್ಲೇ ನಿಂತಲ್ಲೇ ಮಲಗಿದಲ್ಲೇ ಚಿಂತಿಸುತ್ತಾ ಜೀವನವನ್ನು ವ್ಯರ್ಥ ಮಾಡಿಕೊೞುತ್ತಿರುವ ಅದೆಷ್ಟೋ ವಿಕಲಾಂಗರಿಗೆ ಸ್ಪೂರ್ತಿಯಾಗಿ ನಿಂತಿದ್ದಾನೆ.. ಕಲಾದೇವಿಯ ಸೇವೆ ಸಲ್ಲಿಸುತ್ತಿದ್ದಾನೆ. ಆದರೆ ವಿಧಿ ಎಷ್ಟು ಕ್ರೂರ ಎಂಬುದು ತಿಳಿದಾಗ ನನಗೆ ಹೃದಯ ಭಾರವಾಯ್ತು. ಅವನಿಗಿರುವ ಇಬ್ಬರು ಮಕ್ಕಳಲ್ಲಿ ಒಬ್ಬ ಮಗನಿಗೆ ಹೃದಯದ ಬೇನೆ ಇದ್ದು ಅದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಗೆ ಬಹಳಷ್ಟು ಹಣದ ಅವಶ್ಯಕತೆಯಿದೆಯೆಂಬುದೇ ಆ ವಿಚಾರ. ಹಾಗಾಗಿ ನನ್ನ ಕೈಲಾದಷ್ಟು ಸಹಾಯ ನಾನು ಮಾಡುವೆ.. ಸಾಧ್ಯವಾದಷ್ಟೂ ನಿನ್ನ ಕಲಾ ಪ್ರದರ್ಶನಕ್ಕೆ ಸಹಾಯ ಮಾಡಿ ಅದರಿಂದ ಮಾರಾಟ ಮೂಲಕ ಹಣ ಗಳಿಸುವಂತೆ ಅವಕಾಶ ಕಲ್ಪಿಸಿಕೊಡಬಲ್ಲೆ ಎಂದು ಆಶ್ವಾಸನೆಯಿತ್ತು ನಾನೂ ಅವನ ಎರಡು ಚಿತ್ರಗಳನ್ನು ಕೊಂಡುತಂದೆ.
ಅದರ ಫಲವೇ ಇಂದು ಇದೇ ಬೆಂಗಳೂರಿನ ಕರ್ನಾಟಕ ಚಿತ್ರ ಕಲಾ ಪರಿಷತ್ತಿನಲ್ಲಿ ಅವನೇ ರಚಿಸಿದ ಚಿತ್ರಗಳ ಪ್ರಧರ್ಶನವನ್ನು ಆಯೋಜಿಸಿಕೊಡಲು ಪ್ರಯತ್ನಮಾಡಿದ್ದೇನೆ. ಇದೇ ಜನವರಿ ಒಂದರಿಂದ ಮೂರರ ವರೆಗೆ ಬೆಳಿಗ್ಗೆ ೧೦-೩೦ ರಿಂದ ಸಂಜೆ ೭-೩೦ ವರೆಗೆ ಹಾಗೂ ೫ ರಂದು ಚಿತ್ರ ಸಂತೆಯಲ್ಲಿ ಪ್ರಧರ್ಶಿಸಲು ನಿಗದಿಪಡಿಸಿದ್ದೇನೆ. ತಮಗೆಲ್ಲರಿಗೂ ಈ ಮೂಲಕ ಸ್ವಾಗತಿಸುವೆ. ನಿಮ್ಮಗಳ ಮುಂದೆ ಇಂತಾ ಒಬ್ಬ ವಿಕಲಾಂಗ ಆದರೂ ಯಾರಿಗೇನೂ ಕಡಿಮೆಯಿಲ್ಲ ಎಂದು ಎದೆ ಸೆಟೆದು ನಿಂತು ಜೀವನ ಎದುರಿಸಿ ನಿಂತಿರುವ ಇಂತಾ ವ್ಯಕ್ತಿಯ ಪ್ರತಿಭಾ ಪ್ರದರ್ಶನದ ಅವಕಾಶ ದೊರೆತಿದ್ದು ಅವನ ಪ್ರಯತ್ನದ ಕಲಾ ಪುಷ್ಪಗಳನ್ನು ಪ್ರೇಕ್ಷಕರಾದ ತಾವುಗಳು ನೋಡಿ ಆನಂದಿಸಿ ಸಾಧ್ಯವಾದಷ್ಟೂ ಖರೀದಿಸಿ ಪೋಶಿಸುತ್ತೇರೆಂದು ಆಶಿಸುವೆ.
ಸಾಲುಗಳು
- Add new comment
- 3196 views
ಅನಿಸಿಕೆಗಳು
ತಮಗೆ ಹೃತ್ಪೂರ್ವಕ ಧನ್ಯವಾದಗಳು
ತಮಗೆ ಹೃತ್ಪೂರ್ವಕ ಧನ್ಯವಾದಗಳು ರಾಜೇಶ್ ಹೆಗಡೆಯವರೇ... ನನ್ನ ಮನವಿಯನ್ನು ಪರಿಗಣಿಸಿ ನಿಮ್ಮ ತಾಣದಲ್ಲಿ ಉಚಿತ ಪ್ರಚಾರ ಮಾಹಿತಿ ನೀಡಿ ಆ ಕಲಾವಿಧನಿಗೆ ಸಹಾಯ ವಾಗುವಂತೆ ಮಾಡಿದ್ದಕ್ಕೆ. -ತ್ರಿನೇತ್ರ.
ಪ್ರಿಯ ಓದುಗರೇ, ಈ ಲೇಖನದ ಮೂಲಕ
ಪ್ರಿಯ ಓದುಗರೇ, ಈ ಲೇಖನದ ಮೂಲಕ ಒಬ್ಬ ವಿಶಿಷ್ಠ ಕಲಾವಿದನ ಬಗ್ಗೆ ಸ್ವಲ್ಪ ತಿಳಿದಿದ್ದೀರಿ. ನಿಮಗನ್ನಿಸಿದ್ದನ್ನು ಅವರಿಗೆ ನೇರ ಬರೆದು ತಿಳಿಸಲು ಅವರ ಈ-ಮೈಲ್ ಮೂಲಕ ಸಂಪರ್ಕಿಸಬಹುದು. kumarbhardwaj.jmu@gmail.com -ತ್ರಿನೇತ್ರ
ಮಾನ್ಯ ರಾಜೇಶ್ ಅವರೇ,ನೆನ್ನೆಗೆ ಆ
ಮಾನ್ಯ ರಾಜೇಶ್ ಅವರೇ,
ನೆನ್ನೆಗೆ ಆ ಕಲಾವಿದನ ರಚಿತ ಚಿತ್ರ ಪ್ರದರ್ಶನವು ಮುಕ್ತಾಯಗೊಂಡಿರುತ್ತದೆ. ಒಟ್ಟಿನಲ್ಲಿ ಬಹಳಷ್ಟು ಕಲಾರಸಿಕರು ಚಿತ್ರ ಪ್ರೇಮಿಗಳು ಪ್ರದರ್ಶನ ದಿನಗಳಂದು ಬೇಟಿಕೊಟ್ಟು ವೀಕ್ಷಿಸಿ ಮೆಚ್ಚಿ ಅವರಿಗೆ ಸಹಬ್ಬಾಸ್ ಹೇಳಿದರು. ಆದರೆ ಅವರ ಚಿತ್ರಗಳು ದುಬಾರಿಯವು ಎಂದು ಯಾರೂ ಖರೀದಿಸಲಿಲ್ಲವಾಗಿ ಅವರಿಗೆ ಅಷ್ಟಾಗಿ ಆರ್ಥಿಕವಾಗೇನೂ ಪ್ರಯೋಜನಕಾರಿ ಆಗಲಿಲ್ಲ. ನೆನ್ನೆ ಚಿತ್ರಸಂತೆಯಲ್ಲೂ ಕೂಡಾ ಮೊದಲು ನಿಗದಿ ಮಾಡಿದ್ದ ಮೂಲ್ಯದ ಕಾಲು ಬಾಗದಷ್ಟು ಇಟ್ಟಿದ್ದರೂ ಕೊಂಡುಕೊಳ್ಳುವವರು ಕೇವಲ ೪ ಜನ ಮಾತ್ರ ಆಗಿದ್ದು ಆ ಕಲಾವಿದನಿಗೆ ಬಹಳ ನಿರಾಶೆಯಾಯ್ತು. ಆದರೂ ನಾನು ನನ್ನ ಕೆಲವು ಮಿತ್ರರು, ಈಗಿರುವ ಕಾರ್ಯಾಲಯದ ಬಾಸ್ ಇತ್ಯಾದಿಗಳು ಸೇರಿ ಒಟ್ಟು ೬-೮ ಚಿತ್ರಗಳನ್ನು ಖರೀದಿಸಿದೆವು. ಹಾಗಾಗಿ ಅವರ ಕಾಶ್ಮೀರದಿಂದ ಬಂದುಹೋಗುವ ಖರ್ಚು ವೆಚ್ಚಗಳಿಗಾದರೂ ಆಗುವಷ್ಟು ಮಾರಾಟವಾಯ್ತು.
ಇಷ್ಟೊಂದು ಕಲಾ ರಸಿಕಸಿಕರು ಇರುವ ಈ ಬೆಂಗಳೂರಿನಲ್ಲಿ ಅವರು ಅಂದಾಜು ಮಾಡಿದ್ದಷ್ಟು ಪ್ರತಿಕ್ರಿಯೆ ಇರದೇ ಮುಂದೆ ಇಂತಹಾ ಪ್ರದರ್ಶನಗಳಲ್ಲಿ ಬಾಗವಹಿಸುವಷ್ಟು ಉತ್ತೇಜಕವಾಗಿರಲಿಲ್ಲ. ಆದರೆ ಕೆಲವಾರು ಪೇಪರ್ ಮೀಡಿಯಾ ಮತ್ತು ಟೀವೀ ಗಳವರು ನನ್ನ ಕರೆಯೋಲೆ ಮತ್ತು ಈ-ಮೈಲ್ ಗಳಿಗೆ ಸ್ಪಂದಿಸಿ ತಾವಾಗೇ ಬಂದು ಲೈವ್ ಕವರೇಜ್ ಮಾಡಿ ಪ್ರಕಟಿಸಿದ್ದುದರಿಂದ ಬಹಳಷ್ಟು ಪ್ರಚಾರ ಸಿಕ್ಕು ಇಚ್ಛುಕ ಜನಗಳು ಅವರ ಕಲಾ ಚಾತುರ್ಯವನ್ನು ಪ್ರತ್ಯಕ್ಷ ನೋಡಿ ಅನುಭವಿಸಿದ್ದಂತೂ ಕಂಡಿತಾ. ಅದರಲ್ಲಿ ತಮ್ಮ ಪಾತ್ರ ಎಲ್ಲಕ್ಕಿಂತಲೂ ಪ್ರಮುಖವಾದದ್ದು. ಹಾಗಾಗಿ ತಮಗೆ ಈ ಮೂಲಕ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ. ಹಾಗೂ ನೀವು ನೀಡಿರುವ ವಿಶೇಷ ಜಾಹೀರಾತನ್ನು ಇಂದಿನಿಂದ ನಿಲ್ಲಿಸಬಹುದು ಎಂದು ಕೇಳಿಕೊಳ್ಳುತ್ತೇನೆ. ಸಹಕಾರ ಹೀಗೇ ಮುಂದೆಯೂ ಇರುತ್ತದೆಂದು ನಂಬಿರುವೆ. ಮತ್ತೊಮ್ಮೆ ಧನ್ಯವಾದಗಳು - ತ್ರಿನೇತ್ರ.
ನಮಸ್ಕಾರ ಶಿವ ಅವರೇ,
ನಮಸ್ಕಾರ ಶಿವ ಅವರೇ,
ಚಿತ್ರ ಪ್ರದರ್ಶನದಿಂದ ಆ ಕಲಾವಿದನಿಗೆ ಆರ್ಥಿಕವಾಗಿ ಸಹಾಯಕಾರಿ ಆಗಲಿಲ್ಲ ಎಂದು ತಿಳಿದು ನೋವಾಯ್ತು. ವ್ಯಾಪಾರ ಅನ್ನುವದು ಒಂದು ರೀತಿಯ ಕಗ್ಗಂಟು ಇದ್ದಂತೆ. ಅದರ ಮರ್ಮ ಅರಿತವರಾರು.
ಆನ್ ಲೈನ್ ಅಲ್ಲಿ ಕೆಲವು ಚಿತ್ರ ಮಾರುವ ತಾಣಗಳಿವೆ ಅಲ್ಲಿ ಟ್ರೈ ಮಾಡಿದರೆ ಹೇಗೆ?
ಈ ಮುಂದಿನ ಲೇಖನ ಈ ಬಗ್ಗೆ ವಿವರ ನೀಡುತ್ತೆ. ನೋಡಿ.
http://www.elise.com/blog/online_art_sales/
http://www.ugallery.com/
ಇನ್ನೊಂದು ವಿಚಾರ ಪುಟ್ಟಪರ್ತಿ ಆಸ್ಪತ್ರೆ ವೈಟ್ ಫೀಲ್ಡ್ ಅಲ್ಲಿ ಉಚಿತ ಹೃದಯ ಆಪರೇಶನ್ ಮಾಡುತ್ತಾರೆ ಎಂದು ಕೇಳಿದ ನೆನಪು. ಅಲ್ಲಿ ವಿಚಾರಿಸಿದರೆ ಹೇಗೆ?
http://en.wikipedia.org/wiki/Sri_Sathya_Sai_Super_Speciality_Hospital
ಈ ಮಾಹಿತಿ ಆ ಕಲಾವಿದನಿಗೆ ಸಹಾಯವಾದೀತೇನೋ ಅನ್ನುವ ಆಸೆ ನನ್ನದು.
ನಮಸ್ಕಾರ ರಾಜೇಶ್ ಹೆಗೆಡೆಯವರಿಗೆ..
ನಮಸ್ಕಾರ ರಾಜೇಶ್ ಹೆಗೆಡೆಯವರಿಗೆ...
ಕಂಡಿತಾ ತಾವು ತಿಳಿಸಿದ್ದು ಸಥ್ಯವಾದ ಮಾತು. ಯಾವುದೇ ವ್ಯಾಪಾರ ಆಗಲೀ ಅದು ಒಂದುರೀತಿಯ ಕಗ್ಗಂಟೇ ಸರಿ. ಒಲಿದರೆ ಅದೃಷ್ಟ ಒಲಿಯದಿರೆ ದುರಾದೃಷ್ಟ..! ಹಾಗೇ ಈ ಚಿತಕಲೆ ಯನ್ನೇ ವೃತ್ತಿಯಾಗಿ, ಜೀವನ ಮಾರ್ಗವಾಗಿ ಮಾಡಿಕೊಂಡು ಬದುಕಲು ಹೊರಟವರಿಗಂತೂ ಹೆಸರು ಮಾಡುವ ವರೆಗೂ (ಎಲ್ಲರೂ ರಾಜಾ ರವಿವರ್ಮ ಅಥವಾ ಎಂ ಎಫ್ ಹುಸೇನ್ ರಷ್ಟು ಹೆಸರು ಮಾಡಲು ಒಮ್ಮೆಲೇ ಸಾಧ್ಯವಿಲ್ಲ) ಅದು ಮುಳ್ಳಿನ ಹಾಸಿಗೆ ಮೇಲೆ ನಡೆದಂತೆಯೇ ಸರಿ. ಹಾಗಾಗಿ ನಾವು ಕೈಜೋಡಿಸಿ ಸಹಾಯ ಹಸ್ತ ನೀಡಿದ್ದು ಮುಖ್ಯ ಇನ್ನುಳಿದದ್ದು ಅವರವರ ಪ್ರಯತ್ನ ಗಳಿಗೆ ಸೇರಿದ್ದು. ನಾನೂ ಕೂಡಾ ಎಲ್ಲೆಲ್ಲಿ ಸಾಧ್ಯತೆ ಇರುತ್ತದೋ ಅಲ್ಲೆಲ್ಲಾ ಪ್ರಯತ್ನಿಸುತ್ತಿದ್ದೇನೆ ಅವರಿಗೆ ಸಾಧ್ಯವಾದಷ್ಟೂ ಆರ್ಥಿಕವಾಹಗಿ ಸಹಾಯಕಾರಿ ಆಗುವಂತೆ ಆನ್ಲೈನ್.. ಮತ್ತೆ ಕಾಸಗೀ ಗ್ಯಾಲರಿಗಳಲ್ಲಿ ಅವರ ಚಿತ್ರಗಳನ್ನು ಪ್ರದರ್ಶಿಸುವಂತೆ ಸಹಕಾರಿಯಾಗಲು ಪ್ರಯತ್ನಿಸುತ್ತಿದ್ದೇನೆ ಕೂಡಾ. ಈ ನಿಟ್ಟಿನಲ್ಲಿ ಇನ್ನಷ್ಟು ಮಾಹಿತಿ ಕೊಟ್ಟು ಸಹಕರಿಸುತ್ತಿರುವುದಕ್ಕೆ ಮತ್ತೊಮ್ಮೆ ಧನ್ಯವಾದಗಳು. ನೀವು ತಿಳಿಸಿರುವ ಲಿಂಕ್ ಗಳನ್ನೂ ಕೂಡಾ ಅವರಿಗೆ ತಿಳಿಸಿ ಅಲ್ಲಿ ಪ್ರಯತ್ನಿಸಲು ತಿಳಿಸುವೆ. ಇದಷ್ಟೇ ಅಲ್ಲದೇ ನೀವು ತಿಳಿಸಿರುವ ಪುಟ್ಟಪರ್ತಿಯಲ್ಲಿ ಉಚಿತ ಹೃದಯ ಸಂಭಂದೀ ಶಸ್ತ್ರಚಿಕಿತ್ಸೆ ಮಾಡುವ ವಿಚಾರ ನನಗೂ ಸ್ವಲ್ಪ ತಿಳಿಸದಿದ್ದು ಆ ಮಾಹಿತಿಯನ್ನು ಆ ಕಲಾವಿದನಿಗೆ ಕಂಡಿತಾ ತಿಳಿಸುವೆ.
ಈ ಚಿತ್ರಕಲೆಯೇ ಹಾಗೆ.. ಯಾವ ಚಿತ್ರಕ್ಕೆ ಎಷ್ಟು ಮೌಲ್ಯ ಎಂದು ಆಯಾ ಕಲಾವಿದರೇ ನಿರ್ಧರಿಸುತ್ತಾರೆ ಬಹುಷಃ ಅದನ್ನು ರಚಿಸಲು ತೆಗೆದುಕೊಂಡ ಸಮಯ ಊಹಾಶಕ್ತಿ ಮತ್ತು ಉಪಯೋಗಿಸಿದ ಕ್ಯಾನ್ವಾಸ್ ಬಣ್ಣ ಕುಂಚ ಇತ್ಯಾದಿ ಗಳ ಮೌಲ್ಯ ಎಲ್ಲಾ ಸೇರಿರುತ್ತದೆ ಎಂದು ತಿಳಿದಿರುವೆ. ಅದರಲ್ಲೂ ಕೈಕಾಲು ಅಂಗಾಗಗಳೆಲ್ಲವೂ ಸರಿಯಾಗಿರುವ ಕಲಾವಿದದು ರಚಿಸಿದ ಕಲಾಕೃತಿಗಳಿಗೆ ಹೋಲಿಸಿದಾಗ ಇಂತಹಾ ವಿಕಲಚೇತನ ಕಲಾವಿದರು ರಚಿಸಿದ ಕೃತಿಗಳಿಗೆ ಸಾಮಾನ್ಯವಾಗಿ ಇಂತಿಷ್ಟೇ ಎಂದು ಬೆಲೆಕಟ್ಟಲಾಗುವುದಿಲ್ಲ. ಹಾಗಾಗಿ ನಿಜವಾದ ಚಿತ್ರಕಲೆಗಳಲ್ಲಿ ಆಸಕ್ತಿ ಮತ್ತು ಅಭಿರುಚಿ ಇರುವವರಿಗೆ ಮಾತ್ರ ಅದರ ನಿಜವಾದ ಬೆಲೆ ತಿಳಿಯುತ್ತದೆ. ಇಂದಿನ ಅತ್ಯುನ್ನತ ಪ್ರಿಂಟ್ ಟೆಕ್ನಾಲಜಿ ಯಿಂದಾಗಿ ಯಾವುದೇ ಚಿತ್ರಕಲೆಗಳಾಗಲೀ ಯಾವುದೇ ಕಲಾವಿದರು ರಚಿಸಿರುವ ಯಾರೋ ಫೋಟಓ ತೆಗೆದುಕೊಂಡು ನೆಟ್ ನಲ್ಲಿ ಅಪ್ಲೋಡ್ ಮಾಡಿದ ಚಿತ್ರಗಳನ್ನು ಬಟ್ಟಿ ಇಳಿಸಿ ಯತಾವತ್ತಾಗಿ ಪೇಪರ್, ಫಿಲ್ಮ್, ಫ್ಲೆಕ್ಸ್ ಅಥವಾ ಕ್ಯಾನ್ವಾಸ್ ಮೇಲೆ ಸಾಮಾನ್ಯ ಜನರ ಕೈಗೆಟಕುವಷ್ಟು ಅತೀ ಕಡಿಮೆ ಬೆಲೆಯಲ್ಲಿ ಪ್ರಿಂಟ್ ಹಾಕಿ ಕೊಡಲು ಅವಕಾಶವಿದೆ. ಹಾಗಾಗಿ ದುಬಾರಿ ಬೆಲೆಯ ಒರಿಜಿನಲ್ ಚಿತ್ರಗಳನ್ನು ಕೇವಲ ಐಶಾರಮಿ ಜೀವನ ನಡೆಸುವ ಬಹಳ ಶ್ರೀಮಂತ ವರ್ಗದ ಜನರು ಅಥವಾ ಹೋಟೆಲ್ ಹಾಗೂ ಉಧ್ಯಮಿಗಳು ತಮ್ಮ ಭವ್ಯ ಬಂಗಲೆಗಳಲ್ಲಿ ಅಥವಾ ಕಾರ್ಯಾಲಯಗಳಲ್ಲಿ ಹಾಕಿಕೊಳ್ಳಲು ಮಾತ್ರ ಸಾಧ್ಯ ಎಂಬ ಜನಸಾಮಾನ್ಯರ ನಂಬಿಕೆ ಕೊಂಚಮಟ್ಟಿಗೆ ನಿಜ ಕೂಡಾ. ಇದರಿಂದ ಇಂತಹಾ ನೈಜ ಕಲಾವಿಧರಿಗೆ ಕೈಗೆಟುಕಿದ್ದು ಬಾಯಿಗೆಟಕದಲ್ಲಾ ಎನ್ನುವಂತಾಗಿ ಕೆಲವರ ಆರ್ಥಿಕ ಪರಿಸ್ಥಿತಿ ಅಧೋಗತಿಯದ್ದಾಗಿರುತ್ತದೆ. ಇಂತಹಾ ಕಲಾವಿದರನ್ನು ಹೀನಾಯ ಎನ್ನಿಸಿಕೊಳ್ಳುವಷ್ಟಲ್ಲದಿದ್ದರೂ ಅಲ್ಪಸ್ವಲ್ಪ ಸುಧಾರಿಸಿದ ಆರ್ಥಿಕ ಪರಿಸ್ಥಿತಿಯಲ್ಲಿರುವ ನಮ್ಮ ನಿಮ್ಮಂತಾವರು ಸಾಧ್ಯವಾದಷ್ಟೂ ಕೈಹಿಡಿದೆತ್ತಲು ಸಹಕರಿಸುವುದು ಒಂದುರೀತಿಯಲ್ಲಿ ಸಾಮಾಜಿಕ ಹಿತದೃಷ್ಟಿಯಿಂದ ಒಳ್ಳೆಯದೇ ಅಲ್ಲವೇ ಎನ್ನಿಸುತ್ತದೆ.
ಒಟ್ಟಿನಲ್ಲಿ ಇಂತಹಾ ಸಾಮಾಜಿಕ ಹಿತಾಸಕ್ತಿಯ ಕಳಕಳಿಯಿದ್ದು ಆ ನಿಟ್ಟಿನಲ್ಲಿ ಸಾಧ್ಯವಾದಷ್ಟೂ ಸೇವೆ ಸಲ್ಲಿಸುತ್ತಾ ಅಂತಹಾ ಕಾರ್ಯಗಳಲ್ಲಿ ಸಹಕರಿಸುತ್ತಿರುವ ನಿಮ್ಮ ಉದಾರ ಮನೋಭಾವ ಪ್ರತಿಯೊಬ್ಬ ಸತ್ಪ್ರಜೆಗೂ ಬರಬೇಕೆಂದು ಆಶಿಸುತ್ತೇನೆ. ತಮ್ಮ ವಿಶ್ವಾಸಿ - ತ್ರಿನೇತ್ರ.